Devanga Kula Jegath Guru Hampi Hemakoota Gayathri Peeta Sri Sri Sri Dayanandapuri Swamiji.25/10/2018 ವಸ್ತ್ರ ವಿನ್ಯಾಸವನ್ನು ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ದೇವಾಂಗ ಸಮಾಜಕ್ಕಿದೆ.ಬೆಳ್ತಂಗಡಿ,ಜೂ.26 : ಸಾಕ್ಷಾತ್ ಪರಶಿವನ ಅನುಗ್ರಹದಿಂದ ಜನ್ಮತಾಳಿದ ದೇವಾಂಗ ಮಹರ್ಷಿಯು ದೇವಾಂಗ ಸಮಾಜದ ಕುಲಗುರುವಾಗಿದ್ದಾರೆ. ಇಡೀ ವಿಶ್ವಕ್ಕೆ ವಸ್ತ್ರ ವಿನ್ಯಾಸವನ್ನು ಕಲಿಸಿದ ಈ ಸಮಾಜದ ಇತಿಹಾಸ ಮತ್ತು ಪರಂಪರೆಯನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು ಎಂದು ಶ್ರೀ ಗಾಯತ್ರಿಪೀಠ ಮಹಾಸಂಸ್ಥಾನ ಅಧ್ಯಕ್ಷರಾದ ದೇವಾಂಗ ಜಗದ್ಗುರು ಹೇಮಕೂಟ ಹಂಪಿಯ ಪುರಿ ಮಹಾಸ್ವಾಮಿ ಹೇಳಿದರು. ಅವರು ದೇವಾಂಗ ಸಮಾಜ ಉಜಿರೆ ವಲಯ ಇದರ ವತಿಯಿಂದ ಶ್ರೀ ಜನಾರ್ದನಸ್ವಾಮಿ ದೇವಸ್ಥಾನದ ಶ್ರೀ ರಾಮಕೃಷ್ಣ ಸಭಾಭವನದಲ್ಲಿ ನಡೆದ ಸಮಾಜ ಬಾಂಧವರ ಸಭೆಯಲ್ಲಿ ಭಾಗವಹಿಸಿ ಆಶಿರ್ವಚನ ನೀಡಿದರು. ನಮ್ಮದು ಐತಿಹಾಸಿಕ ಪರಂಪರೆಯುಳ್ಳ ಸಮಾಜವಾಗಿದೆ. ದೇವರ ದಾಸಿಮಯ್ಯ 7ನೇ ಅವತಾರವಾಗಿದೆ. ಕನ್ನಡದಲ್ಲಿ ವಚನ ಸಾಹಿತ್ಯವನ್ನು ಬರೆದ ಮಹಾನ್ ಸಂತ ಅವರು. ನಮ್ಮ ಸಮಾಜ ಆರ್ಥಿಕವಾಗಿ ಹಿಂದುಳಿದಿದ್ದರೂ, ನಮ್ಮ ಪರಂಪರೆ, ಸಂಸ್ಕೃತಿ ದೊಡ್ಡದು, ಶ್ರೀ ಕೃಷ್ಣದೇವರಾಯರಿಂದ ಬಳವಳಿಯಾಗಿ ಬಂದ ನಮ್ಮ ಮಠದ ಪರಂಪರೆ ಉನ್ನತವಾದುದು, ಮಠದ ಸಂಪರ್ಕ, ಗುರುಗಳ ಸಂಪರ್ಕವನ್ನು ಇಟ್ಟುಕೊಂಡಾಗ ಸಮಾಜ ಬೆಳೆಯುತ್ತದೆ. ಸಮಾಜವನ್ನು ಉತ್ತುಂಗ ಸ್ಥಿತಿಗೆ ಕೊಂಡೊಯ್ಯುವುದು ನಮ್ಮ ಕರ್ತವ್ಯವಾಗಿದೆ ಎಂದರು. ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳ್ತೆ ಮೊಕ್ತೇಸರ ವಿಜಯ ರಾಘವ ಪಡ್ವೆಟ್ನಾಯ ಮಾತನಾಡಿ, ಪ್ರತಿಯೊಂದು ಸಮಾಜ ಸಂಸ್ಕøತಿಯ ಪ್ರತೀಕ ಗುರುಗಳು. ನಾವು ಗುರುಗಳಿಗೆ ವಂದಿಸಿದ ಬಳಿಕ ನಮ್ಮ ಆರಾಧ್ಯ ದೇವರನ್ನು ಪೂಜಿಸಬೇಕು. ಇದರಿಂದ ಜೀವನದಲ್ಲಿ ಉನ್ನತಿಯನ್ನು ಸಾಸಬಹುದು. ದೇವಾಂಗ ಸಮಾಜ ಆರ್ಥಿಕವಾಗಿ ಸದೃಢವಲ್ಲದಿದ್ದರೂ ಸಾಂಸ್ಕೃತಿಕವಾಗಿ ಉನ್ನತ ಸ್ಥಾನದಲ್ಲಿದೆ ಎಂದ ಅವರು, ಸುಮಾರು 70 ವರ್ಷಗಳ ಹಿಂದೆ ದೇವಾಂಗ ಸ್ವಾಮೀಜಿ ಪಡುವೆಟ್ಟು ಮನೆಗೆ ಬಂದುದನ್ನು ಈ ಸಂದರ್ಭ ನೆನೆಸಿಕೊಂಡರು. ಸಮಾಜ ಬಂಧುಗಳ ಪರವಾಗಿ ಹಿರಿಯರಾದ ಬಿಎಸ್ ಗಿರಿಯಪ್ಪ, ರಾಜ್ಯಾಧ್ಯಕ್ಷ ರಮೆಶ್ ಜಿ. ಮಾತನಾಡಿ ಮಾರ್ಗದರ್ಶನ ನೀಡಿದರು. ಈ ಸಂದರ್ಭ ಸ್ವಾಮೀಜಿಯವರನ್ನು ಸಮಾಜದ ಬಂಧುಗಳ ಪರವಾಗಿ ಗೌರವಿಸಲಾಯಿತು. ಪಡ್ವೆಟ್ನಾಯರನ್ನು ಸಮಾಜದ ಪರವಾಗಿ ಸ್ವಾಮೀಜಿಯವರು ಅಭಿನಂದಿಸಿದರು. ಉಜಿರೆ ವಲಯದ ಅಧ್ಯಕ್ಷ ಎಂ.ಡಿ. ಭಾಸ್ಕರ್ ಸ್ವಾಗತಿಸಿ, ಕಾಯದರ್ಶಿ ಪರಮೇಶ್ವರ ಪ್ರಸ್ತಾವಿಕವಾಗಿ ಮಾತನಾಡಿದರು. ಸಿರಿ ಯೋಜನಾಕಾರಿ ರೋಹಿತ್ ಕಾರ್ಯಕ್ರಮ ನಿರೂಪಿಸಿ, ಎಸ್.ಕೆ.ಡಿ.ಆರ್.ಡಿ.ಪಿ ಮೈಸೂರು ಯೋಜನಾಕಾರಿ ಕೇಶವ ದೇವಾಂಗ ವಂದಿಸಿದರು. |