ಲೇಖಕಿ - ಶೈಲಜಾ ಸುರೇಶ್.
ಶೈಲಜಾ ಸುರೇಶ್. ಕಥೆಗಾರ್ತಿ , ಕಾದಂಬರಿ ಗಾರ್ತಿ, ಆಕಾಶವಾಣಿ, ದೂರದರ್ಶನ ಲೇಖಕಿ, ಹವ್ಯಾಸಿ ಪತ್ರಕರ್ತೆ ಅವರ ಒಂದು ಕಿರು ಪರಿಚಯ
ಶೈಲಜಾ ಸುರೇಶ್ (ದಾಕ್ಷಾಯಿಣಿ ಎಚ್.), ಬಿ.ಎ. ಪದವೀಧರರು. 1964ರ ಅಕ್ಟೋಬರ್ 2 ರಂದು ಹಾಸನದಲ್ಲಿ ಜನನ. ತಂದೆ - ಹೆಚ್. ಹನುಮಂತಪ್ಪ, ತಾಯಿ - ಸಾವಿತ್ರಮ್ಮನವರ ಕಿರಿಯ ಮಗಳು. ಆರ್.ಟಿ. ಸುರೇಶ್ ರುದ್ರ ಪಟ್ಟಣ ಇವರ ಪತಿ. ಶಿಲ್ಪ ಹೆಚ್ .ಎಸ್ .ಬಿ.ಇ. ಮತ್ತು ಪ್ರವೀಣ್. ಮಗಳು ಅಳಿಯ, ರಿತಿಷಾ ಮತ್ತು ವಿಖ್ಯಾತ್ ಕೃಷ್ಣ ಮೊಮ್ಮಕ್ಕಳು. ಡಾ//ಸ್ವರೂಪ್ ,ಎಂ.ಡಿ .ಮತ್ತು ಡಾ// ಅರ್ಪಿತಾ, ಎಂ.ಡಿ. ಮಗ , ಸೊಸೆ ಇದು ಅವರ ಕುಟುಂಬ . ಇವರು ಕಥೆಗಾರ್ತಿ ಕಾದಂಬರಿ ಗಾರ್ತಿ, ಆಕಾಶವಾಣಿ, ದೂರದರ್ಶನ ಲೇಖಕಿ, ಹವ್ಯಾಸಿ ಪತ್ರಕರ್ತೆ.
ಸಾಹಿತ್ಯ : ೨೫೦ ಕ್ಕೂ ಹೆಚ್ಚು ಸಣ್ಣಕಥೆಗಳು ಸುಧಾ, ಮಯೂರ,ತರಂಗ,ತುಷಾರ, ಕರ್ಮ ವೀರ, ಕಸ್ತೂರಿ, ಪ್ರಿಯಾಂಕಾ, ಸಂಯುಕ್ತ ಕರ್ನಾಟಕ, ಪ್ರಜಾವಾಣಿ, ಕನ್ನಡ ಪ್ರಭ,ವಿಜಯ ಕರ್ನಾಟಕ, ಬಹುತೇಕ ಎಲ್ಲಾ ಕನ್ನಡ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ನಾಲ್ಕು ಕಾದಂಬರಿಗಳು ಧಾರಾವಾಹಿಯಾಗಿ ತರಂಗ, ಮಂಗಳ, ಕರ್ಮವೀರಗಳಲ್ಲಿ ಪ್ರಕಟವಾಗಿವೆ. ಸುಮಾರು ೨೪ ಪುಸ್ತಕಗಳು ಹೊರ ಬಂದಿವೆ.
ವೇದಿಕೆ: ಆಕಾಶವಾಣಿ, ದೂರದರ್ಶನಗಳಲ್ಲಿ ಹಲವಾರು ಕಾರ್ಯಕ್ರಮ ಪ್ರಸಾರ ವಾಗಿದೆ. ಉದಯ ಟಿವಿ ಯಲ್ಲಿ ಧಾರವಾಹಿ ಕಥಾವಿಸ್ತರಣೆಯಲ್ಲಿ ಭಾಗಿಯಾಗಿ. ರೋಟರಿ, ಲಯನ್ಸ್, ಕ.ಸಾ.ಪ.,ಕ.ಲೇ.ಸಂ. ಮುಂತಾದ ಸಂಘಸಂಸ್ಥೆಗಳ ಪ್ರಶಸ್ತಿ ಪುರಸ್ಕಾರ ಪಡೆದಿರುವರು . ಸುಮಾರು ೨೦೦೦ ದಿಂದ ಲೇಖಿಕಾ ಸಾಹಿತ್ಯ ವೇದಿಕೆ ಸಂಚಾಲಕರಾಗಿ ಕಾರ್ಯ ನಿರ್ವಹಿಸುತ್ತಿರುವರು. ಲೇಖಿಕಾ ಸಾಹಿತ್ಯ ವೇದಿಕೆಯ ಅಕ್ಟೋಬರ್ " ಹೊಸ ಓದು ಮತ್ತು ಸಂವಾದ "ದಲ್ಲಿ ಮಯೂರ ದಲ್ಲಿ ಪ್ರಕಟವಾಗಿದ್ದ"" ಮಾಧವಿ ""ಕಥೆಯ ವಾಚನ ಮತ್ತು ಸಂವಾದದಲ್ಲಿ ಭಾಗವಹಿಸಿರುವರು.
ಕಾದಂಬರಿ : ಇಂದಿರಾ 2004, ಹೃದಯರಾಗ 2006, ಬಾಳಿನ ಹೊಂಬೆಳಕು 2008, ಕಥಾಸಂಕಲನ : ಹೊಂಗನಸು 2012ರಲ್ಲಿ ಪ್ರಕಟವಾಗಿವೆ. ಸಣ್ಣಕತೆ ಹಾಗೂ ನಾಟಕಗಳನ್ನು ರಚಿಸಿದ್ದು ಹವ್ಯಾಸಿ ಪತ್ರಕರ್ತೆ ಕೂಡ. ಆಕಾಶವಾಣಿ, ದೂರದರ್ಶನಕ್ಕಾಗಿ ಹಲವು ಬರೆಹಗಳನ್ನು ನೀಡಿದ್ದಾರೆ. ಅವರು ಲೇಖಕಿಯರ ಸಾಹಿತ್ಯ ವೇದಿಕೆಯ ಅಧ್ಯಕ್ಷರು.
ಪ್ರಶಸ್ತಿ: ಇವರಿಗೆ ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ, ದೇವರ ದಾಸಿಮಯ್ಯ ಪ್ರಶಸ್ತಿ, ಸಾಹಿತ್ಯ ಸೇತು ಪ್ರಶಸ್ತಿ, ಗೌರವಹುದ್ದೆ : ಹಾಸನ ಜಿಲ್ಲಾ ಕನ್ನಡ ಲೇಖಕಿಯರ ಪರಿಷತ್ತು ಅಧ್ಯಕ್ಷೆ (ಸಂಸ್ಥಾಪಕ 1999-2001),ಕಿಶೋರವೃಂದ-ನಿರ್ದೇಶಕಿ, ಲೇಖಿಕಾ ಬಹುಮಾನ : ಕರ್ಮವೀರ ದೀಪಾವಳಿ ವಿಶೇಷಾಂಕ : ಪ್ರಥಮ ಬಹುಮಾನ 1997, ತುಷಾರ ಎಚ್.ಎಂ.ಟಿ. ಕಥಾಪ್ರಶಸ್ತಿ 2000, ಸಂಕ್ರಮಣ ಹನಿಗವನ ಪ್ರಶಸ್ತಿ 2000, ಕಲೇಸಂ ಪ್ರೇಮಾಭಟ್ ದತ್ತಿನಿಧಿ ಬಹುಮಾನ, ಅನುಪಮಾ ನಿರಂಜನ ಕಥಾಪ್ರಶಸ್ತಿ ಬಂದಿದೆ ಹಾಗು ಕ.ಸಾ.ಪ."ಸೇವಾರತ್ನ" ಪ್ರಶಸ್ತಿ ಗೆ ಶೈಲಜಾ ಸುರೇಶ್ ಭಾಜನರಾಗಿರುವರು.

ಶೈಲಜಾ ಸುರೇಶ್ ರವರು ಬರೆದಿರುವ ಪುಸ್ತಕ ಮತ್ತು ಲೇಖನಗಳು
ಈ ವರ್ಷದ ಹೊಸ ಕಾದಂಬರಿ "ಬರೆದೆ ನೀನು ನಿನ್ನ ಹೆಸರು" ಆಸಕ್ತರು ೯೯೧೬೩೭೮೯೫೫ ನಂಬರ್ ಗೆ ವಾಟ್ಸಾಪ್ ಮೆಸೇಜ್ ಮಾಡಿದರೆ ಪುಸ್ತಕ ಕಳಿಸಲಾಗುತ್ತದೆ. ಬೆಲೆ ೧೫೦ ರೂ.