ದೇವಾಂಗ ಕುಲದೇವತೆ ಬಾದಾಮಿ ಶ್ರೀ ಬನಶಂಕರಿ
ಗೌರವಾನ್ವಿತ ದೇವಾಂಗ ಕುಲಬಾಂಧವರೇ, ಪ್ರಾಚೀನ ಕಾಲದಲ್ಲಿ ಹಂಪಿ ಹೇಮಕೂಟ ಗಾಯತ್ರಿ ಪೀಠ ದಿಂದ ತಾಯಿ ಬನಶಂಕರಿ ಮಾತೆಯ ಜಾತ್ರೆಯ ದಿನ ಸೀರೆ ದವಸ ಸಿರಿ ಧಾನ್ಯ ಅರಶಿಣ ಕುಂಕುಮ ಅರ್ಪಿಸುತ್ತಿದ್ದರೆಂದು ಹಾಗೂ ದೇವಿ ರಥೋತ್ಸವಕ್ಕೆ ರಥದ ಸುತ್ತಲೂ ದೇವಾಂಗರ ಲಾಂಛನ ಹಳದಿ ಬಣ್ಣದ ನಾಲ್ಕಾರು ನಂದಿ ಧ್ವಜ ಕಟ್ಟಲಾಗಿತ್ತಿದ್ದರೆಂಬ ಮಾಹಿತಿ ಇತ್ತೀಚೆಗೆ ಒಂದು ಸಂಶೋಧನಾ ಅಧ್ಯಯನ ಹಾಗೂ ಬೇರೆ ಭಾಷೆಯ ಪುರಾಣ ಉಲ್ಲೇಖದಿಂದ ಸ್ಪಷ್ಟವಾಗಿ ತಿಳಿದು ಬಂದಿರುವ ಕಾರಣ, ದೇವಾಂಗರ ಅಧಿದೇವತೆಗೆ ಸಮಾಜಸ್ಥರು ಹಾಗೂ ಗುರುಪೀಠ ದಿಂದ ಗೌರವ ಸರ್ಮಿಪಿಸಿದ ಬಳಿಕ ತಾಯಿ ಬನಶಂಕರಿಯ ಶುಭ ಕಾರ್ಯಕ್ರಮಗಳು ಜರುಗುತ್ತಿದ್ದವು ಎಂಬ ಐತಿಹಾಸಿಕ ಹಿನ್ನೆಲೆ ಯಿಂದಾಗಿ ಇಂದು ಪರಮ ಪೂಜ್ಯ ದೇವಾಂಗ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ದಯಾನಂದ ಪುರಿ ಮಹಾಸ್ವಾಮಿಗಳವರು ಹಾಗೂ ಸಮಾಜದ ರಾಜ್ಯ ಪ್ರಧಾನ ಕಾರ್ಯದರ್ಶಿ ರವೀಂದ್ರ ಕಲಬುರಗಿ ಅವರ ನೇತೃತ್ವದಲ್ಲಿ ಇಂದು ಬಾದಾಮಿಯ ಶ್ರೀ ಬನಶಂಕರಿ ದೇವಸ್ಥಾನ ಆಡಳಿತ ಮಂಡಳಿಯೊಂದಿಗೆ ನಡೆದ ಮಾತುಕತೆಯ ಫಲಪ್ರದ ವಾಗಿ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ದೇವಾಂಗ ಸಮಾಜದ ಅವಿನಾಭಾವ ಸಂಬಂಧ ವನ್ನು ಮುಂದುವರಿಸಲು ಸಮ್ಮತಿ ಸೂಚಿಸಿ ರಥೋತ್ಸವದ ದಿನದಂದು ಮಡಿ ಪಿತಾಂಬರ ಸೀರೆಯನ್ನು ದೇವಿಗೆ ಅರ್ಪಿಸಲಾಗುತ್ತದೆ.
ಬನಶಂಕರಿ ಜಾತ್ರೆಯ ಐದು ದಿನ ಮುಂಚೆ ಹಂಪಿ ಮಠದಿಂದ ಪಲ್ಲಕ್ಕಿ ಯಲ್ಲಿ, ಭಕ್ತರ ವಾದ್ಯ ಮೇಳದೊಂದಿಗೆ ದಿಂಡಿಮಾದರಿಯಂತೆ ಹೊರಟು ಗಂಗಾವತಿ ಯ ಮೂಲ ದೇವಾಂಗ ಮಠ ದಲ್ಲಿ ಶ್ರೀ ಚಕ್ರ ಮೂರ್ತಿ ಶ್ರೀ ಮಾತೆ ಗಾಯತ್ರಿ ಅಮ್ಮನವರ ರೊಂದಿಗೆ ಬೆರತ ಪಿತಾಂಬರ ಒಂದು ರಾತ್ರಿ ಅಲ್ಲಿಯೇ ಇರುವ ಮೂಲಕ ಪಿತಾಂಬರ ಸೀರೆ ಅಮ್ಮನವರಿಂದ ದೈವೀ ಸ್ವರೂಪ ಪಡೆಯಲಿದ್ದು ನಂತರ ದೇವಾಂಗರ ಹೆಗ್ಗುರುತು ಹೊತ್ತ ಹಳದಿ ಟವಲ್ ಬಿಳಿ ಲುಂಗಿ ಧರಿಸಿದ ಮಡಿಯುತ ಕಾರ್ಯಕರ್ತರ ಮಧ್ಯೆದಲ್ಲಿ ಪಲ್ಲಕ್ಕಿ ಉತ್ಸವದ ಮೂಲಕ ಪಿತಾಂಬರ ಭಕ್ತರ ಜೈಕಾರ ಮೆರವಣಿಗೆಯಲ್ಲಿ ಕನಕಗಿರಿ, ತಾವರಗೇರಾ,ದೋಟಿಹಾಳ ಮಾರ್ಗವಾಗಿ ಇಲಕಲ್ಲ ಗೆ ಬಂದು ಅಲ್ಲಿಂದ ಗುಡೂರ್ ಮಾರ್ಗವಾಗಿ ಕಾಟಾಪುರ ಪಟ್ಟದಕಲ್ಲು, ನಂದಿಕೇಶ್ವರ ಕೊನೆಗೆ ಜಾತ್ರೆಯ ಮುನ್ನಾದಿನ ರಾತ್ರಿ ದೇವಿ ಮಡಿಲಿಗೆ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ದಯಾನಂದ ಪುರಿ ಮಹಾಸ್ವಾಮಿಗಳು ದೇವಾಂಗರ ಪರ ಅರ್ಪಿಸಲಿದ್ದಾರೆ ಮುಂದೆ ಅದೇ ಸೀರೆಯನ್ನು ದೇವಿಗೆ ಅಲ್ಲಿನ ಅರ್ಚಕರು ಧರಿಸುತ್ತಾರೆ ತದನಂತರ ಜಾತ್ರೆಯ ಕಾರ್ಯಕ್ರಮ ಗಳು ಏತಾಪ್ರಕಾರ ಸಾಗುತ್ತವೆ ಸಂಜೆ ರಥೋತ್ಸವ ವೇಳೆಗೆ ಪೂಜ್ಯರು ತೇರಿನ ಗಾಲಿಗೆ ತೆಂಗು ಒಡೆಯುತ್ತಿದಂತೆ ರಥ ಮುಂದೆ ಸಾಗಲಿದ್ದು, ಈ ಎಲ್ಲ ಕಾರ್ಯಕ್ರಮಗಳಲ್ಲಿ ದೇವಾಂಗರು ತನು ಮನ ಧನ ಸರ್ಮಿಪಿಸಿ ಶಂಕರಿ ಕೃಪೆಗೆ ಪಾತ್ರರಾಗುವ ಮೂಲಕ ದೇವಾಂಗರು ಅಭಿವೃದ್ಧಿಯತ್ತ ಮುಖ ಮಾಡಲೀ ಎಂಬ ಪೂಜ್ಯರ ಆಶಯಕ್ಕೆ ನಾವು - ನೀವೆಲ್ಲರೂ ಕೈ ಜೋಡಿಸೋಣ .ಶರಣು ಶಂಕರೀ ಶ್ರೀ ಬನಶಂಕರಿ.

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನಲ್ಲಿರುವ ಪವಿತ್ರ ಪುಣ್ಯಕ್ಷೇತ್ರವೇ ಬನಶಂಕರಿ. ಇಲ್ಲಿ ಸಿಂಹವಾಹಿನಿಯಾಗಿ ನೆಲೆಸಿರುವ ಪಾರ್ವತಿ ದೇವಿಗೆ ಬನಶಂಕರಿ, ಬಾಳವ್ವ, ಬನದವ್ವ, ಸುಂಕವ್ವ, ಶಾಕಾಂಬರಿ, ಶಿರಿವಂತಿ, ಚೌಡಮ್ಮ, ವನದುರ್ಗೆ ಹೀಗೆ ನಾನಾ ಹೆಸರುಗಳಿಂದ ಕರೆಯಲಾಗುತ್ತದೆ. ಈ ಬನಶಂಕರಿ ದೇವಿಯು ನವದುರ್ಗೆಯರಲ್ಲಿ 6ನೇ ಅವತಾರವೆಂದು ಹೇಳಲಾಗುತ್ತದೆ. ಹಿಂದೆ ಈ ಪ್ರದೇಶವು ಭಯಂಕರದಿಂದ ತತ್ತರಿಸುತ್ತಿದ್ದಾಗ ಎಲ್ಲ ದೇವತೆಗಳು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರಲ್ಲಿ ತಮ್ಮ ಕಷ್ಟವನ್ನು ನೀಗಿಸುವಂತೆ ಕೇಳಿಕೊಂಡರು, ಇದಕ್ಕೆ ಪರಿಹಾರವೆಂದರೆ ಬನಶಂಕರಿಯನ್ನು ಬೇಡಿಕೊಳ್ಳೋಣ ಎಂದು ಎಲ್ಲರೂ ಕೂಡಿ ತಿಲಕಾರಣ್ಯ ಪ್ರದೇಶಕ್ಕೆ ಬಂದು ತಾಯಿ ಬನಶಂಕರಿಯನ್ನು ಕುರಿತು, ಈ ಕ್ಷೇತ್ರದಲ್ಲಿ ಮಳೆಯಿಲ್ಲದೇ ಯಜ್ಞಯಾಗಾದಿಗಳು ನಿಂತು ಹೋಗಿ ಬದುಕಲು ಕಷ್ಟವಾಗುತ್ತಿದೆ. ಜಗತ್ತಿಗೆ ಜಲ ನೀಡಿ ಕಾಪಾಡು ನಮ್ಮನ್ನು ರಕ್ಷಿಸು ಎಂದು ದೇವಿಯನ್ನು ಪ್ರಾರ್ಥಿಸಿದರು.
ಇದರಿಂದ ಪ್ರಸನ್ನಳಾದ ತಾಯಿ ಪ್ರತ್ಯಕ್ಷಳಾಗಿ ಭೂಮಿತಾಯಿಯ ನೀರಿನ ದಾಹವನ್ನು ತೀರಿಸಿ ಎಲ್ಲರನ್ನೂ ಕಾಪಾಡಿದಳು. ಅಲ್ಲದೇ ತನ್ನ ತನುವಿನ ಶಾಖದಿಂದ ಕಾಯಿಪಲ್ಲೆ ಸೃಷ್ಟಿಸಿ ಜನರ ಸಂಕಷ್ಟಗಳನ್ನು ನೀಗಿಸಿದಳಂತೆ. ಹೀಗಾಗಿ ಈ ದೇವಿಗೆ ಶಾಕಾಂಬರಿ ಎನ್ನುವ ಹೆಸರು ಬಂತೆಂದು ಹೇಳಲಾಗುತ್ತಿದೆ. ಇವಿಷ್ಟೇ ಅಲ್ಲದೇ ಈ ಪ್ರದೇಶದಲ್ಲಿ ಹರಿದ್ರಾತೀರ್ಥ, ತೈಲತೀರ್ಥ, ಪದ್ಮತೀರ್ಥ, ಕ್ಷಮಾತೀರ್ಥ ಹೀಗೆ ಸಾಕಷ್ಟು ತೀರ್ಥಕೊಳಗಳನ್ನು ಸೃಷ್ಟಿ ಮಾಡಿದಳಂತೆ. ಅಂದಿನಿಂದ ಈ ಪ್ರದೇಶ ನಂದನವನವಾಗಿ ಹಸಿರಿನಿಂದ ಕಂಗೊಳಿಸುತ್ತಿದೆ. ಈ ಊರಿನ ಸುತ್ತ ದಟ್ಟವಾದ ಅರಣ್ಯಪ್ರದೇಶವಿದ್ದು ತೆಂಗು, ಬಾಳೆ ಮತ್ತು ವಿಲ್ಯೇದೆಲೆಯ ತೋಟಗಳಿವೆ ಹಾಗೂ ಹತ್ತಿರದಲ್ಲಿಯೇ ಸರಸ್ವತಿ ಹೊಳೆಯೂ ಹರಿಯುತ್ತಿದೆ. ಈ ಕಾರಣದಿಂದಲೂ ಈ ದೇವಿಗೆ ಬನಶಂಕರಿ, ವನಶಂಕರಿ (ಬನದ ದೇವತೆ) ಎಂಬ ಹೆಸರು ಬಂದಿದೆ ಎನ್ನಲಾಗುತ್ತಿದೆ.
ಸುಂದರವಾದ ಕೋಟೆಯಂತೆ ಕಾಣಿಸುವ ಪ್ರವೇಶ ದ್ವಾರ, ಎದುರುಗಡೆ ಸುಮಾರು 360 ಅಡಿಗಳ ಚೌಕಾಕಾರದ ಕಲ್ಯಾಣಿ ನಮಗೆ ಕಾಣಸಿಗುತ್ತದೆ. ಮಳೆಗಾಲದಲ್ಲಿ ಮಾತ್ರ ತುಂಬಿ ಹರಿಯುವ ಈ ಕಲ್ಯಾಣಿಯನ್ನು ನೋಡಲು ಎರಡು ಕಣ್ಣೂ ಸಾಲದು. ಇನ್ನು ಈ ಕಲ್ಯಾಣಿಯ ಸೊಬಗನ್ನು ನೋಡುತ್ತಾ ಮುಂದೆ ಸಾಗಿದರೆ ನಮಗೆ ಸಿಗುವುದು 7 ನೇ ಶತಮಾನದಲ್ಲಿ ಕಲ್ಯಾಣಿ ಚಾಲುಕ್ಯರ ಅರಸನಾದ 1 ನೇ ಜಗದೇಕಮಲ್ಲನ ಕಾಲದಲ್ಲಿ ನಿರ್ಮಾಣವಾದ ಸುಂದರವಾದ ಬನಶಂಕರಿ ದೇವಾಲಯ. ಕ್ರಿ.ಶ. 603ರಲ್ಲಿ ಬನಶಂಕರಿ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ ಎಂಬುದನ್ನು ಇಲ್ಲಿ ಕೆಲವು ಶಾಸನಗಳು ಸಾರುತ್ತವೆ. ದೇವಾಲಯದ ಆವರಣದಲ್ಲಿರುವ ಸ್ತಂಭಗಳ ಮೇಲೆ ಮಾಡಿದ ಕುಸುರಿ ಕೆಲಸ ಚಾಲುಕ್ಯರ ವಾಸ್ತುಶಿಲ್ಪಕ್ಕೆ ಕೈಗನ್ನಡಿಯಾಗಿದೆ. ಈ ದೇವಸ್ಥಾನವನ್ನು 18ನೇ ಶತಮಾನದಲ್ಲಿ ಮರಾಠರ ದಳವಾಯಿಗಳು ಪುನರ್ ನಿರ್ಮಾಣ ಮಾಡಿದರೆಂಬ ಉಲ್ಲೇಖವೂ ಇದೆ.
ಇನ್ನು ಗರ್ಭಗುಡಿಯಲ್ಲಿ ಗರ್ಜಿಸುತ್ತಿರುವ ಸಿಂಹದ ಮೇಲೆ ವಿರಾಜಮಾನಳಾಗಿರುವ ಪಾರ್ವತಿಯ ಸುಂದರ ಮೂರ್ತಿಯಿದೆ. ಈ ದೇವಿಗೆ ಶರಣು ಹೋದರೆ ತಮ್ಮೆಲ್ಲ ಅಭಿಷ್ಟೆಗಳೂ ಈಡೇರುತ್ತವೆ ಎಂಬುದೇ ಭಕ್ತರ ನಂಬಿಕೆ. ಪ್ರತಿವರ್ಷ ಪುಷ್ಯ ಮಾಸದಲ್ಲಿ ನಡೆಯುವ ಬನಶಂಕರಿ ಜಾತ್ರೆ ಜಗದ್ವಿಖ್ಯಾತವಾಗಿದೆ. ಬನಶಂಕರಿ ಜಾತ್ರೆಯು ಹುಣ್ಣಿಮೆಯ ಹತ್ತು ದಿನಗಳ ಮುಂಚಿತವಾಗಿ ಪ್ರಾರಂಭವಾಗುತ್ತದೆ. ಈ ಜಾತ್ರೆ ಅನೇಕ ವಿಶೇಷತೆಗಳನ್ನೊಳಗೊಂಡಿದೆ. ಈ ಬನಶಂಕರಿ ಜಾತ್ರೆಗೆ ಸುಮಾರು 200 ವರ್ಷಗಳ ಇತಿಹಾಸವೇ ಇದೆ. ಬರೀ ಕರ್ನಾಟಕ ಮಾತ್ರವಲ್ಲ ನೆರೆಯ ಮಹಾರಾಷ್ಟ್ರದಿಂದಲೂ ಸಾವಿರಾರು ಭಕ್ತ ಸಾಗರವೇ ಈ ದೇವಿಯ ದರ್ಶನಕ್ಕೆ ಹರಿದು ಬರುತ್ತದೆ.
ಈ ಜಾತ್ರೆಯ ಸಂದರ್ಭದಲ್ಲಿ ದೇವಾಲಯವನ್ನು ಮತ್ತು ಪಟ್ಟಣವನ್ನು ಸಾವಿರಾರು ವಿದದ ಎಲೆಗಳು ಮತ್ತು ಹೂವುಗಳಿಂದ ಅಲಂಕರಿಸಲಾಗುತ್ತದೆ. ಈ ಪ್ರದೇಶದ ಜನರು ಪ್ರತಿವರ್ಷ ಮಾಗಿ ಕಾಲದಲ್ಲಿ ನಡೆಯುವ ರಥೋತ್ಸವದ ಮುನ್ನಾ ದಿನ ಪಲ್ಯದ ಹಬ್ಬ (ತರಕಾರಿ ಉತ್ಸವ) ಎಂದು ಆಚರಿಸುತ್ತಾರೆ. ಈ ತರಕಾರಿ ಉತ್ಸವದಲ್ಲಿ ಬನಶಂಕರಿ ದೇವಿಗೆ 108 ವಿಧಧ ತರಕಾರಿಗಳಿಂದ ತಯಾರಿಸಿದ ಖಾದ್ಯಗಳನ್ನು ಸಮರ್ಪಿಸುವ ಮೂಲಕ ತಮ್ಮ ಕೃತಜ್ಞತೆ ಅರ್ಪಿಸುತ್ತಾರೆ. ಈ ಋಣ ಸಂದಾಯದ ಹಬ್ಬವನ್ನು ಪಲ್ಯದ ಹಬ್ಬವೆಂದೇ ಹೇಳಲಾಗುತ್ತದೆ. ಈ ದೇವಿ ಶಾಖಾಂಬರಿ ಆದ ಬಗ್ಗೆ ಸ್ಕಂದ ಪುರಾಣ, ಪದ್ಮಪುರಾಣಗಳಲ್ಲಿಯೂ ಕೂಡ ಉಲ್ಲೇಖವಿದೆ. ಈ ಜಾತ್ರೆಯ ಇನ್ನೊಂದು ವಿಶೇಷತೆಯೆಂದರೆ ದೇವಸ್ಥಾನದ ಕಲ್ಯಾಣಿಯಲ್ಲಿ ನಡೆಯುವ ತೆಪ್ಪೋತ್ಸವ. ಇಲ್ಲಿರುವ ಕಲ್ಯಾಣಿಯಲ್ಲಿ ನವಜಾತ ಶಿಶುಗಳಿಗೆ ದೇವಿಯ ಆಶೀರ್ವಾದ ಸಿಗಲೆಂದು ಪಾಲಕರು ಬಾಳೇ ದಿಂಡಿನಲ್ಲಿ ತಯಾರಿಸಲಾದ ತೆಪ್ಪದಲ್ಲಿ ಮಗುವನ್ನು ಮಲಗಿಸಿ ಕಲ್ಯಾಣಿಯ ಸುತ್ತ ಮುತ್ತಲೂ ಪ್ರದಕ್ಷಿಣೆ ಮಾಡಿಸುತ್ತಾರೆ.
ಹುಣ್ಣಿಮೆಯ ದಿನವನ್ನು ವಿಶೇಷವಾಗಿ ಆಚರಿಸುವ ಭಕ್ತರು ಸುಮಾರು 16 ಅಡಿ ಎತ್ತರದ ಕಟ್ಟಿಗೆಯ ರಥವನ್ನು ತಣಿರು ತೋರಣ, ಹೂವು, ಹಣ್ಣುಗಳಿಂದ ಅಲಂಕರಿಸಿ ತಾಯಿ ಬನಶಂಕರಿ ದೇವಿಯ ವಿಗ್ರಹ ಅದರ ಜೊತೆಗೆ ಇನ್ನು ಹಲವಾರು ದೇವ, ದೇವತೆಗಳ ಉತ್ಸವ ಮೂರ್ತಿಗಳನ್ನು ಕುಳ್ಳಿರಿಸಿ ಊರ ತುಂಬಾ ಮೆರವಣಿಗೆ ಮಾಡುತ್ತಾರೆ. ಈ ಹಬ್ಬವು ಉತ್ತರ ಕರ್ನಾಟಕದವರಿಗೆ ಅತ್ಯಂತ ವಿಶೇಷವಾದ ಹಬ್ಬವಾಗಿದೆ.
ತಲುಪುವ ಮಾರ್ಗ
ಬೆಂಗಳೂರಿನಿಂದ 425 ಕಿ.ಮೀ ಅಂತರದಲ್ಲಿರುವ ಬಾದಾಮಿ ತಲುಪಲು ರೈಲು, ಬಸ್ಸುಗಳ ವ್ಯವಸ್ಥೆಯೂ ಇದೆ. ಬಾದಾಮಿಗೆ ಬೆಂಗಳೂರು, ಬಿಜಾಪುರ, ಬಾಗಲಕೋಟೆ, ಹುಬ್ಬಳ್ಳಿ - ಧಾರವಾಡ, ಗದಗ ಮುಂತಾದ ಕಡೆಗಳಿಂದ ಬಸ್ ವ್ಯವಸ್ಥೆ ಇದೆ. ಅಲ್ಲದೇ ಗದಗ - ಸೊಲ್ಲಾಪುರ ರೈಲು ಮಾರ್ಗವೂ ಬಾದಾಮಿಯನ್ನು ಹಾಯ್ದು ಹೋಗುತ್ತದೆ. ಬಾದಾಮಿ ರೈಲು ನಿಲ್ದಾಣದಿಂದ ಕೇವಲ 10 ನಿಮಿಷಗಳಲ್ಲಿ ಬನಶಂಕರಿ ದೇವಸ್ಥಾನವನ್ನು ನಾವು ತಲುಪಬಹುದು. ಇನ್ನು ಇಡೀ ಭಾರತದ ಸಂಸ್ಕೃತಿಗಳ ಮೇಲೆ ತಮ್ಮ ಅಚ್ಚೊತ್ತಿದ್ದ ಚಾಲುಕ್ಯರ ರಾಜಧಾನಿ ಬಾದಾಮಿ ಸರ್ವಥಾ ಪ್ರೇಕ್ಷಣೀಯ ಮತ್ತು ಸರ್ವಥಾ ಆದರಣೀಯ ಕ್ಷೇತ್ರವಾಗಿದೆ.

ಬಾದಮಿ ಶ್ರೀ ದೇವಿ ಬನಶಂಕರಿ ಪುಣ್ಯಕ್ಷೇತ್ರ;
ಹಿಂದೂ ಧರ್ಮ, ಹಿಂದೂ ದೇಶದ ನಾಗರೀಕತೆಗಳು ನದಿ ತಟದಲ್ಲಿ ಬೆಳೆದು ಬಂದವುಗಳು. ನದಿ ತಟದಲ್ಲಿಯೇ ನಮ್ಮ ಧಾರ್ಮಿಕ, ವೈಜ್ಞಾನಿಕ ತಿಳುವಳಿಕೆಗಳು ಕಣ್ಣು ತೆರೆದು ಪಕ್ವವಾದವು. ಹೀಗಾಗಿ ನಮ್ಮದು ಜೀವನ ಸಂಸ್ಕೃತಿ. ಅದು ಎಂದೂ ನಿಂತು ಕೊಳಕಾಗುವ ಕೊಳವಾಗಿಲ್ಲ. ಪ್ರತಿ ಕ್ಷಣ-ಕ್ಷಣಕ್ಕೂ ಹರಿಯುತ್ತಾ, ಹೊಸ-ಹೊಸತನವನ್ನು ತುಂಬಿಕೊಳ್ಳುತ್ತಾ ನವನವೋನ್ಮೇಷ ಶಾಲಿಯಾಯಿತು. ಆದುದರಿಂದಲೇ ನಮ್ಮ ನೆಚ್ಚಿನ ಪುಣ್ಯಕ್ಷೇತ್ರಗಳು ನದಿ ತಟದಲ್ಲಿ ನಿರ್ಮಾಣಗೊಂಡವು.
ಹಿಮಾಲಯದ ಪಾವನ ಪ್ರವಾಹಗಳ ತಡಿಯ ನೂರಾರು ಪುಣ್ಯಕ್ಷೇತ್ರಗಳನ್ನು ಬಿಟ್ಟರೂ, ಉಳಿದ ಈ ದೇಶದಲ್ಲಿ ಮೊದಲ ಸ್ಥಾನದಲ್ಲಿ ಬರಬಲ್ಲ ಕಾಶಿ ಗಂಗೆ ಯಮುನೆಯರ ಸಂಗಮದಲ್ಲಿ, ಕತ್ತಲೆಯ ಕಾಳಿ ಮಂದಿರ ಹೂಗ್ಲಿ ನದಿ ತೀರದಲ್ಲಿ, ಅಯೋಧ್ಯ ಸರಯೂ ನದಿ ತೀರದಲ್ಲಿ, ಶೃಂಗೇರಿ ತುಂಗಾ ತೀರದಲ್ಲಿ - ಹೀಗೆ ಬೆಳೆಯುತ್ತಾ ಹೋಗುವ ಯಾದಿಯು ಹೊರಗಿನವುಗಳನ್ನು ಬಿಟ್ಟರೂ, ನಮ್ಮ ಕರ್ನಾಟಕದ ಕೊಲ್ಲೂರು ಸೌಪರ್ಣಿಕಾ ತಟದಲ್ಲಿ, ಧರ್ಮಸ್ಥಳ ನೇತ್ರಾವತಿ ಸಮೀಪದಲ್ಲಿ, ಕಟೀಲು ನಂದಿನಿ ಪ್ರವಾಹದ ನಡುವೆ, ಸುಬ್ರಮಣ್ಯ ಕುಮಾರಧಾರೆಯ ತಟದಲ್ಲಿ, ಇನ್ನೂ ಉತ್ತರ ಕರ್ನಾಟಕದ ಅನೇಕ ಶಕ್ತಿ ದೇವತೆಗಳ ಕ್ಷೇತ್ರಗಳು ನದಿ ತಟದಲ್ಲಿಯೇ ಇರುವುದನ್ನು ನೋಡಬಹುದು.
ಬಾಗಲಕೋಟೆ ಜಿಲ್ಲೆ, ಬಾದಾಮಿಯಲ್ಲಿರುವ ಐತಿಹಾಸಿಕ, ಪೌರಾಣಿಕ ಕೇಂದ್ರವಾಗಿರುವ ಚಾಲುಕ್ಯರ ಆದಿಶಕ್ತಿಯಾದ ಶ್ರೀ ಬನಶಂಕರಿ ಕ್ಷೇತ್ರದಲ್ಲಿ ಪವಿತ್ರ ತೀರ್ಥಗಳ ಸಮೂಹವನ್ನೇ ನೋಡಬಹುದು. ಶ್ರೀ ದೇವಿ ಬನಶಂಕರಿ ಅನುಗ್ರಹದಿಂದ, ಬನಶಂಕರಿ ಕ್ಷೇತ್ರದಲ್ಲಿ ಉದ್ಭುವಿಸಿದ ಅನೇಕ ಪವಿತ್ರ ತಿರ್ಥಗಳ ಸ್ನಾನ-ಪಾನದಿಂದ ದೊರೆಯುವ ಫಲ ವಿಷಯವನ್ನು ವರ್ಣಿಸುವುದು ಅಸದಳವಾದುದ್ದು.
ತೀರ್ಥಗಳು ದೇಹ ಶುದ್ಧಿಗೂ, ಮನಃಶುದ್ಧಿಗೂ, ಪ್ರಸಿದ್ಧವಾದವು. ತೀರ್ಥಸ್ನಾನ ಮಾಡುವುದರಿಂದ, ಮಾನವನು ಸಕಲ ದುರಿತಗಳಿಂದ ದೂರವಾಗಿ ಇಹಪರಗಳಲ್ಲಿ ಸುಖವನ್ನು ಪಡೆಯುತ್ತಾನೆಂದು ಶಂಖ ಸ್ಮೃತಿಯಲ್ಲಿ ಹೇಳಿದೆ. ಮಾನವನನ್ನು ಉದ್ಧರಿಸುವ ಇಂತಹ ಪವಿತ್ರಮಯ ತೀರ್ಥಗಳು ಬನಶಂಕರಿ ಕ್ಷೇತ್ರದಲ್ಲಿ ಇವೆ.
ವೈಶಾಖ ಮಾಸದಲ್ಲಿ ಬರುವ 'ಆಗಿ ಹುಣ್ಣಿಮೆ' (ಬೌಧ ಪೌರ್ಣಿಮೆ) ದಿನದಂದು ಇಲ್ಲಿರುವ ತೀರ್ಥಗಳಲ್ಲಿ ಸ್ನಾನ ಮಾಡಿದರೆ ಪಂಚಪಾತಕಗಳು, ಮಾತಾ-ಪಿತೃ ದ್ರೋಹವು, ವೇದನಿಂದ ಪಾತಕವೂ, ಪರಕನ್ಯಾಯಾಪಹರಣ ದೋಷ, ಕನ್ಯಾ ಶುಲ್ಕ ಗ್ರಹಣ ಪಾತಕ, ಇವೆಲ್ಲವೂ ನಾಶವಾಗಿ ಅಕ್ಷಯವಾದ, ಅಜರಾಮರವಾದ ಸ್ಥಾನವು ಪ್ರಾಪ್ತವಾಗುವುದು ಎಂಬ ನಂಬಿಕೆ ಈ ಧಾರ್ಮಿಕ ಕ್ಷೇತ್ರದಲ್ಲಿ ಬಂದಿದೆ.
ಈ ಕ್ಷೇತ್ರದ ಪ್ರಸಿದ್ಧ ತಿರ್ಥಗಳು:
ಮಾಲಿನಿ (ಮಲಪ್ರಭಾ ನದಿ) ತೀರ್ಥ,ಸರಸ್ವತಿ (ಹಳ್ಳ) ತೀರ್ಥ,ಹರಿದ್ರಾ (ದೊಡ್ಡ ಹೊಂಡ) ತೀರ್ಥ, ಪದ್ಮ ತೀರ್ಥ,ತೈಲ ತೀರ್ಥ,ರಂಗ ತೀರ್ಥ, ಅಗಸ್ತ್ಯ ತೀರ್ಥ
ಅಶ್ವತ್ಥಾಮ ತೀರ್ಥ,ಭಾಸ್ಕರ ತೀರ್ಥ,ಕೋಟಿ ತೀರ್ಥ,ವಿಷ್ಣು ಪುಷ್ಕರಣಿ,ನಾಗೇಶ ತೀರ್ಥ.
ಇವು ಅತೀ ಮುಖ್ಯವಾದವುಗಳು. ಇವಲ್ಲದೆ ವಶಿಷ್ಟ, ಕಶ್ಯಪ, ಅತ್ರಿ, ಭಾರದ್ವಾಜ, ವಿಶ್ವಾಮಿತ್ರ, ಗೌತಮ, ಜಮದಗ್ನಿ ತೀರ್ಥಗಳಿವೆ. ಈ ತಿಲಕ ವನದಲ್ಲಿ ಬಿಲ್ವ ವೃಕ್ಷಗಳು ದೊಡ್ಡವಿದ್ದು, ಅವು ಶಿವಪಾರ್ವತಿಯರ ವಿಶ್ರಾಂತಿಧಾಮ ಆಗಿರುತ್ತದೆ. ಇಲ್ಲಿರುವ ತಿರ್ಥಗಳಲ್ಲಿ ಶುದ್ಧ ಮನದಿಂದ ಸ್ನಾನ ಮಾಡಿ, ಭಕ್ತಿಯಿಂದ ಪೂಜೆ ಮಾಡಿದರೆ ನಮ್ಮ ಎಲ್ಲಾ ಪಾಪಗಳು ದೂರವಾಗಿ ಮುಕ್ತಿ ದೊರಕುವುದು.
ಬಾದಾಮಿ ಬನಶಂಕರಿ ಕ್ಷೇತ್ರವು 'ದಕ್ಷಿಣ ಕಾಶಿ' ಎಂದೂ ಕರೆಯಲ್ಪಡುತ್ತದೆ. ಇಂತಹ ಕ್ಷೇತ್ರದ ಮಹಿಮೆಯನ್ನು ರಾಮಲಿಂಗ ದೇವಸ್ಥಾನವೆಂದು ಕರೆಯಲ್ಪಡುವ ಹಾಸನ ಜಿಲ್ಲೆಯ 'ರಾಮದೇವರಹಳ್ಳಿ' ಎಂಬ ಪ್ರದೇಶದಲ್ಲಿ ಬೇಸಿಗೆ ಕಾಲದಲ್ಲಿಯೂ ಸಹ ನೀರು ಉದ್ಭವವಾಗುವಂತಹದ್ದನ್ನು ನೋಡಬಹುದು. ಅದೇ ರೀತಿ ತುಮಕೂರು ಜಿಲ್ಲೆಯ 'ಶಿವಗಂಗೆ' ಪುಣ್ಯಕ್ಷೇತ್ರದಲ್ಲಿ 'ರಾಮ ಚುಲುಮೆ' ಎಂಬ ಪ್ರದೇಶವಿದ್ದು, ಇಲ್ಲಿ ಸದಾ ನೀರನ್ನು ನೋಡಬಹುದು. ಇಂಥಹ ಕ್ಷೇತ್ರಗಳಿಗೆ ಪೌರಾಣಿಕ ವಸ್ತುವನ್ನು ಸೇರಿಸಿ, ಆರಾಧಿಸುವುದು ನಮ್ಮ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ.
'ಗಂಗಾಸ್ನಾನ - ತುಂಗಾಪಾನ' ಎಂಬುದು ಗಾದೆ ಮಾತು. ಈ ಪವಿತ್ರ ಕ್ಷೇತ್ರಗಳಿಗೆ ಒಂದೊಂದು ನಂಬಿಕೆ, ಆಚರಣೆ ಇರುವುದನ್ನು ನಾವು ಕಾಣಬಹುದು.

ಬನಶಂಕರಿ ಯಾರು..? ಜಗನ್ಮಾತೆ ಪರಿ ಎಂತಹದು?
ತಿಲಕಾರಣ್ಯದಲ್ಲಿ `ದುರ್ಗದತ್ತ’ ಹಾಗೂ `ಧೂಮಾಕ್ಷ’ ರೆಂಬ ಕ್ರೂರ ರಾಕ್ಷಸರು ಋಷಿ, ಮುನಿಗಳ ತಪಸ್ಸಿಗೆ, ಜನರಿಗೆ ತೊಂದರೆ ಕೊಡುತ್ತಾ, ಹಿಂಸೆಯಲ್ಲಿ ತೊಡಗಿ ಜನಜೀವನವನ್ನು ನರಕ ಬಯ ಸದೃಶ್ಯಗೊಳಿಸಿರುತ್ತಾರೆ. ಕೊನೆಗೆ ದೇವಲೋಕಕ್ಕೂ ದಾಳಿ ಇಟ್ಟು ದೇವರಿಗೂ ಪೀಡಕರಾಗುತ್ತಾರೆ. ಆಗ ಎಲ್ಲರೂ ದೇವರಲ್ಲಿ ಮೊರೆ ಹೋಗುತ್ತಾರೆ. ದೇವಿ ಉಗ್ರ ರೂಪ ತಾಳಿ ತಿಲಕಾರಣ್ಯಕ್ಕೆ ಬಂದು ಆ ಇಬ್ಬರೂ ರಾಕ್ಷಸರನ್ನು ಸಂಹರಿಸುತ್ತಾಳೆ. ಉಗ್ರಳಾಗಿ ಅಲ್ಲಿಯೇ ನೆಲೆಯೂರಿಬಿಡುತ್ತಾಳೆ.
ಅವಳ ಉಗ್ರ ರೂಪದಿಂದ ಆತಂಕಕ್ಕೊಳಗಾದ ದೇವತೆಗಳು ಆಕೆಯನ್ನು ಶಾಂತಗೊಳಿಸುವಂತೆ ತ್ರಿದಂಡ ಮುನಿಗೆ ಶರಣು ಹೋದರು. ಆ ಮುನಿಯ ಭಕ್ತಿಗೆ ಒಲಿದ ದೇವಿ ಅದೇ ಬನದಲ್ಲಿ ಶಾಂತಳಾಗಿ ಭಕ್ತರ ಬೇಕು ಬೇಡಗಳನ್ನು ಈಡೇರಿಸಲಾರಂಭಿಸಿದಳು. ಬನದಲ್ಲಿ ನಿಂತ `ಬನಶಂಕರಿ’, `ಶಾಖಾಂಬರಿ’ ಎಂದೂ ಜನಪ್ರಿಯಳಾದಳು. ಬರ ಬಂದಾಗ ತನ್ನ ದೇಹದಿಂದ ಶಾಖ ಉತ್ಪನ್ನ ಮಾಡಿ ಮಳೆ ತರಿಸಿ ಆ ಪ್ರದೇಶವನ್ನು ಸದಾ ಹಸಿರು ಬನವನ್ನಾಗಿ ಮಾಡಿದಳೆಂಬ ಪ್ರತೀತಿ ಇದೆ.
ತನ್ನ ವಾಸಸ್ಥಾನವನ್ನು ನಯನ ಮನೋಹರಗೊಳಿಸಿಕೊಂಡಳು. ಇಂತಹ ಪಾವನ ಸ್ಥಳದಲ್ಲಿ ಸ್ಥಾಪನೆಗೊಂಡ ದೇವಿ ಜನರ ತೊಂದರೆ ನಿವಾರಿಸಿದಳು. ಶಾಂತಿ, ನೆಮ್ಮದಿ ಕೊಟ್ಟಳು. ಭಕ್ತರಿಗೆ ವರಗಳನ್ನು ಕರುಣಿಸಲಾರಂಭಿಸಿದಳು. ಉಳಿದೆಲ್ಲ ಜಾತ್ರೆಗಳಂತೆ ದೇವಿಯ ಜಾತ್ರೆ ಒಂದೆರಡು ದಿನ ನಡೆಯದೇ ತಿಂಗಳುದ್ದಕ್ಕೂ ನಡೆಯುತ್ತದೆ. ಅಸಂಖ್ಯಾತ, ಲಕ್ಷಾಂತರ ಭಕ್ತರಿಗೆ ದರ್ಶನ ನೀಡಲೆಂದೇ ಜಾತ್ರೆ ಸುದೀರ್ಘ ಅವಧಿಗೆ ನಡೆಯುತ್ತದೆ. ಹೀಗಾಗಿ ಬನಶಂಕರಿ ಜಾತ್ರೆ ಉತ್ತರ ಕರ್ನಾಟಕದ `ಮಹಾಜಾತ್ರೆ’ ಎಂದೇ ಜನಪ್ರೀಯ, ಸುಪ್ರಸಿದ್ಧ.
ಕರ್ನಾಟಕ ರಾಜ್ಯವಲ್ಲದೇ ಬೇರೆ ರಾಜ್ಯಗಳಿಂದಲೂ ಭಕ್ತಾಧಿಗಳು ಈ ಜಾತ್ರೆಗೆ ಆಗಮಿಸುತ್ತಾರೆ. ಇನ್ನು ತಿಳಿಯದವರು ಈ ಜಾತ್ರೆಗೆ ಬಂದವರು, ಬಾದಾಮಿ ಹಾಗೂ ಬನಶಂಕರಿ ಯಾತ್ರಾ ನಿವಾಸಗಳಲ್ಲಿ ವಾಸ್ತವ್ಯ ಹೂಡಬಹುದಾಗಿದೆ. ಇಷ್ಟೇ ಅಲ್ಲ. ಜೊತೆಗೆ ಪ್ರವಾಸಿ ತಾಣವಾದ ಬಾದಾಮಿಯ ಮೇಘನ ಬಸದಿ, ಗುಹಾಂತರ ದೇಗುಲಗಳು, ಮ್ಯೂಸಿಯಂ, ಪಟ್ಟದಕಲ್ಲು, ಐಹೊಳೆ, ಮಹಾಕೂಟ, ನಾಗನಾಥನ ಕೊಳ್ಳ, ಹುಲಿಗೆಮ್ಮನ ಕೊಳ್ಳ, ಶಿವಯೋಗ ಮಂದಿರ, ಕೂಡಲಸಂಗಮ, ಆಲಮಟ್ಟಿ ಉದ್ಯಾನವನ, ಬೀಳಗಿಯ ಚಿಕ್ಕಸಂಗಮ, ವಿಜಯಪೂರ, ಗೋಲಗುಂಬಜ್ ಸೇರಿದಂತೆ ಇನ್ನೂ ಐತಿಹಾಸಿಕ, ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಬಹುದಾಗಿದೆ. ಇದಕ್ಕಾಗಿ ಹರಸಾಹಸ ಪಡಬೇಕಾಗಿಲ್ಲ. ಎಲ್ಲದಕ್ಕೂ ಬಸ್, ಉಗಿಬಂಡೆ (ಟ್ರೈನ್) ವ್ಯವಸ್ಥೆ ಉಂಟು. ಜಾತ್ರೆಯ ದೇವಿ ದರ್ಶನಕ್ಕೆ ಬಂದು ನಂತರದಲ್ಲಿ ಜಾತ್ರೆಯ ಸಡಗರವನ್ನು ಮೈದುಂಬಿಕೊಂಡು ಕುಟುಂಬ ಸಹಿತವಾಗಿ ಎಲ್ಲ ಸ್ಥಳಗಳನ್ನು ವೀಕ್ಷಿಸಿಕೊಂಡು ತಮ್ಮ ಸ್ವಂತ ಊರಿಗೆ ತೆರಳಬಹುದಾಗಿದೆ.
ಆರಾಧ್ಯ ದೇವತೆ ಬನಶಂಕರಿಯ `ಮಹಾಜಾತ್ರೆ.’
ಕೋಟ್ಯವಧಿ ಆರಾಧ್ಯ ದೇವತೆ ಬನಶಂಕರಿ ದೇವಿಯ ಜಾತ್ರೆಯ ಸಡಗರ ಸಂಭ್ರಮ ಹೊಸ ವರ್ಷದ ಜನವರಿಯಲ್ಲಿ ದಿನಾಂಕ. 21. 01.2019ರಂದು ದೇವಿಯ ಮಹಾ ರಥೋತ್ಸವ ಜರುಗಲಿದೆ. ಬಾಗಲಕೋಟ ಜಿಲ್ಲೆಯ ಬಾದಾಮಿಯ ಬಗಲಲ್ಲೇ ಇರುವ ಬನಶಂಕರಿ ದೇವಿ ಉತ್ತರ ಕರ್ನಾಟಕದ ಸಮಸ್ತ ಜನರ ಅಧಿದೇವತೆ. ಪ್ರತಿ ವರ್ಷ ಸಂಕ್ರಮಣದಿಂದ ಆರಂಭವಾಗುವ ಬನಶಂಕರಿ ಜಾತ್ರೆ ಆಸ್ತಿಕರಿಗೆ, ಭಕ್ತರಿಗೆ, ಆಸಕ್ತರಿಗೆ ಹಬ್ಬವೋ ಹಬ್ಬ. ವಿಶೇಷವಾಗಿ ಗ್ರಾಮೀಣ ಜನರಂತೂ ಈ ಜಾತ್ರೆಗಾಗಿ ವರ್ಷವಿಡೀ ಜಾತಕ ಪಕ್ಷಿಯಂತೆ ಕಾಯುತ್ತಿರುತ್ತಾರೆ. ಮನೆಮಂದಿಯೆಲ್ಲಾ ಎಲ್ಲಾರೂ ಚಕ್ಕಡಿ ಕಟ್ಟಿಕೊಂಡು (ಮೇಲ್ಛಾವಣೆಯ ಎತ್ತಿನ ಬಂಡಿ) ಬಗೆ ಬಗೆಯ ಅಡುಗೆ ಮಾಡಿಕೊಂಡು ಬುಟ್ಟಿಗಳಲ್ಲಿ ತುಂಬಿಕೊಂಡು ಸಡಗರ ಸಂಭ್ರಮದಿಂದ ಜಾತ್ರೆಗೆ ಹೊರಡುತ್ತಾರೆ. ಎತ್ತುಗಳ ಶೃಂಗಾರ, ಕೋಡುಗಳಿಗೆ ಬಣ್ಣ, ಬಣ್ಣದ ರಿಬ್ಬನ್, ಫುಗ್ಗೆ (ಬಲೂನು), ಕೊರಳಲ್ಲಿ ಗೆಜ್ಜೆ, ಎತ್ತುಗಳ ಬೆನ್ನಿಗೆ ಅಂದ ಚಂದದ ಕಸೂತಿಯ ಝೂಲಾ ಹಾಕಿದ ಚಕ್ಕಡಿಗಳು ಬನಶಂಕರಿ ಕಡೆಗೆ ಹೊರಟವೆಂದರೆ ದಾರಿಯುದ್ದಕ್ಕೂ ಹಾಡು, ಕೋಲಾಟಗಳ ಮಜವೋ ಮಜ.
ಬನಶಂಕರಿ ಪೂಜಾರ ಮನೆತನದವರ ಮತ್ತು ಚೊಳಚಗುಡ್ಡ ಗ್ರಾಮ ಪಂಚಾಯತಿ ಸರಹದ್ದಿನಲ್ಲಿ ಜಂಟಿ ನೇತೃತ್ವದಲ್ಲಿ ಜಾತ್ರೆಯಲ್ಲಿ ಭಕ್ತಾಧಿಗಳಿಗಾಗಿ ಸಕಲ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ. ಈ ಕುರಿತಾಗಿ ಜಿಲ್ಲಾಧಿಕಾರಿಗಳು ಅಧಿಕಾರಿಗಳ ಸಭೆಯನ್ನು ಜರುಗಿಸಿ ಸೂಚನೆಯನ್ನು ನೀಡಿರುತ್ತಾರೆ.
ದೂರದ ಊರಿನವರು ಚಕ್ಕಡಿ ಪ್ರಯಾಣದಲ್ಲಿ ನಾಲ್ಕೈದು ದಿನಗಳನ್ನು ಕಳೆಯುವ ಜಮಾನಾ ಒಂದಿತ್ತು. ಈಗ ಟ್ರ್ಯಾಕ್ಸಿ, ಟೆಂಪೋ, ಅಟೋ, ಟಂಟಂಗಳು ಬಂದ ಮೇಲೆ ಚಕ್ಕಡಿಗಳ ಭರಾಟೆ ಕಡಿಮೆಯಾಗಿದೆ. ಆಗ ಕೆರೆ ಹಾಗೂ ಬಯಲು ಕಂಡಲ್ಲಿ ಎತ್ತುಗಳನ್ನು ನೆರಳಿಗೆ ಕಟ್ಟಿ, ಮೇವು ಹಾಕಿ, ತಾವೂ ಕೈ ಕಾಲು ತೊಳೆದುಕೊಂಡು ತಂದ ಬುತ್ತಿ ಗಂಟು ಬಿಚ್ಚಿ ಗಡದ್ದಾಗಿ ಊಟಾ ಮಾಡಿ ವಿಶ್ರಾಂತಿ ತೆಗೆದುಕೊಂಡು ಮತ್ತೆ ಮುಂದೆ ಸಾಗುತ್ತಿದ್ದರು. ಆ ಕಾಲದ ನೆನಪೇ ಅಂದಿನ ಊಟಕ್ಕಿಂತ ಸವಿ-ಸವಿ.
ಜಾತ್ರೆಯಲ್ಲಿ ಸೇರುವ ಲಕ್ಷಾಂತರ ಜನರನ್ನು ಬಗೆ ಬಗೆಯ ಸಾವಿರಾರು ಅಂಗಡಿಗಳು ಅಕರ್ಷಿಸುತ್ತವೆ. ಮನರಂಜನೆಯ ಮಹಾಪೂರ ಜನಸಾಗರವನ್ನು ಒಂದು ಹೊಸ ಅಲೆಯಲ್ಲಿ ತೇಲಿಸುತ್ತದೆ. ಉಳಿದೆಲ್ಲ ಜಾತ್ರೆಗಳಲ್ಲಿ ದೇವರಿಗೆ ಹಣ್ಣು, ಕಾಯಿ, ಕರ್ಪೂರಾರತಿ ಮಾಡಿ ದರ್ಶನ ಪಡೆದು ಪ್ರಸಾದ ಸ್ವೀಕರಿಸುವುದು, ರಥೋತ್ಸವದಲ್ಲಿ ರಥ ಎಳೆದು, ಉತ್ತತ್ತಿ, ಬಾಳೆ ಹಣ್ಣು ಎಸೆದು ಭಯ ಭಕ್ತಿಯಿಂದ ನಮಸ್ಕರಿಸುವುದು ವಾಡಿಕೆ. ಬನಶಂಕರಿಯಲ್ಲಿ ಮಹತ್ವದ ದಿನ ಮಾತ್ರ ಈ ರಿವಾಜು ನಡೆಯುತ್ತದೆ. ಉಳಿದೆಲ್ಲ ಚಟುವಟಿಕೆಗಳು ತಿಂಗಳುಗಟ್ಟಲೇ ನಡೆದೇ ಇರುತ್ತವೆ. ತಿಂಗಳುದ್ದಕ್ಕೂ ಜನ ಬಂದೇ ಬರುತ್ತಿರುತ್ತಾರೆ. ಜಾತ್ರೆ ನಿರಂತರವಾಗಿ ನಡೆದೇ ಇರುತ್ತದೆ. ಕೇವಲ ಮಕ್ಕಳ ಆಟಿಗೆ, ಮಹಿಳೆಯರ ಶೃಂಗಾರ ಸಾಧನಗಳು ಮಾರಾಟವಾಗುವುದಿಲ್ಲ. ಇದರ ಜೊತೆಗೆ ಮನೆಗೆ, ಮನೆ ಕಟ್ಟಲು ಅಗತ್ಯವಿರುವ ಎಲ್ಲ ಸಾಮಗ್ರಿಗಳು ಈ ಜಾತ್ರೆಯಲ್ಲಿ ದೊರೆಯುವುದು ವಿಶೇಷ.
ಸಾಗವಾನಿ, ಮತ್ತಿ, ತೇಗು ಮುಂತಾದ ಉತ್ಕೃಷ್ಠ ದರ್ಜೆಯ ಕಟ್ಟಿಗೆಯಿಂದ ಕುಶಲ ಕರ್ಮಿಗಳಿಂದ ನಾಜೂಕು ಕೆತ್ತನೆ ಮಾಡಿದ ಬಾಗಿಲು, ಚೌಕಟ್ಟು, ಕಿಟಕಿಯ ಕಟಾಂಜಿನ, ತೊಲೆಗಳು, ಮಂಚ, ಕುರ್ಚಿ, ಮೇಜುಗಳು ಮಾರಲ್ಪಡುತ್ತವೆ. ಖಾನದಾನಿ ಬಡಿಗರಿಂದ ನಿರ್ಮಿಸಿದ ಈ ಸಲಕರಣಿಗಳಿಗೆ ಭಾರೀ ಬೇಡಿಕೆ ಇದೆ. ಹೀಗಾಗಿ ತಿಂಗಳುಗಟ್ಟಲೇ ಜನ ಬರುತ್ತಲೇ ಇರುತ್ತಾರೆ. ಕೆತ್ತನೆಯ ಕಲೆ ಕುಶಲ ಕಲೆ ಕಲಾಪ್ರಿಯರನ್ನು ಕೈ ಬೀಸಿ ಕರೆಯುತ್ತಲೇ ಇರುತ್ತವೆ.
ತಿಂಡಿ, ತಿನುಸುಗಳ ಮಾರಾಟ ವೈವಿಧ್ಯಮಯವಾಗಿರುತ್ತವೆ. ಚುರುಮರಿ (ಮಂಡಕ್ಕಿ), ಖಾರಾ, ಸೇವು, ಮಿರ್ಚಿ, ಮೆಣಸಿನಕಾಯಿ, ಉಳ್ಳಾಗಡ್ಡಿ (ಈರುಳ್ಳಿ) ಭಜಿ, ಉಪ್ಪಿಟ್ಟು, ಪುರಿಭಾಜಿ, ಒಗ್ಗರಣಿ, ಗಿರಮಿಟ್ಟು ಹೀಗೆ ಒಂದೆಡೆಯಾದರೆ ಅಮ್ಮೀನಗಡ, ಗೋಕಾಕ ಕರದಂಟು, ಧಾರವಾಡ ಐನಾಪೂರ ಫೇಡೆ, ಬೆಳಗಾವಿ ಖೋವ-ಕುಂದಾಗಳ ಮಾರಾಟವೂ ಭರ್ಜರಿಯಾಗಿರುತ್ತದೆ.ರೊಟ್ಟಿ ಊಟದ ಗಮ್ಮತ್ತುಬನಶಂಕರಿ ಜಾತ್ರೆಯಲ್ಲಿ ಮತ್ತೊಂದು ವಿಶೇಷವೆಂದರೆ ಎಲ್ಲಿ ನೋಡಿದಲ್ಲಿ ಬುಟ್ಟಿಯಲ್ಲಿ ಇಟ್ಟಿರುವ ಜೋಳದ ರೊಟ್ಟಿ (ಭಕ್ರಿ), ಅದರೊಂದಿಗೆ ಬದನೆಕಾಯಿ ಎಣೆಗಾಯಿ, ಅವರೆಕಾಯಿ, ತೊಗರಿಬೇಳೆ, ಡೊಣ್ಣಗಾಯಿ, ಎಣಗಾಯಿ ಪಲ್ಲೆಗಳ ಝುಣಕದ ಒಡಿ (ಹಿಟ್ಟಿನ ಪಲ್ಲೆ)ಗಳ ರುಚಿ, ಅದರ ಸವಿಯ ಗಮ್ಮತ್ತೇ ಬೇರೆ. ಉತ್ತರ ಕರ್ನಾಟಕದ ಹೆಸರಾಂತ ಅಡುಗೆ ಅಲ್ಲದೇ, ಪುಟಾಣಿ ಚಟ್ನಿ ಪುಡಿ, ಸೇಂಗಾ ಚಟ್ನಿ ಪುಡಿ, ಅಗಸಿ ಹಿಂಡಿ, ಗುರೆಳ್ಳು ಹಿಂಡಿ, ಕೆಂಪ ಚಟ್ನಿ (ರಂಜಕ), ಮಾವಿನಕಾಯಿ, ಲಿಂಬಿಕಾಯಿ ಉಪ್ಪಿನಕಾಯಿಗಳು ಇವುಗಳೊಂದಿಗೆ ಕೆನೆ ಮೊಸರಿನ ಕುಡಕಿ, ಬೆಣ್ಣೆ ರೊಟ್ಟಿ ಊಟವನ್ನು ಸಮೃದ್ಧಗೊಳಿಸುತ್ತವೆ. ಇನ್ನು ಬಾಯಲ್ಲಿ ಕಡಿದುಕೊಳ್ಳಲು ಉಳ್ಳಾಗಡ್ಡಿ, ಮೂಲಂಗಿ, ಗಜ್ಜರಿ, ಮೆಂಥೆ, ಕಿರ್ಕಸಾಲಿ ಮುಂತಾದ ಬಗೆ ಬಗೆಯ ಸೊಪ್ಪುಗಳು ಇಡೀ ವರ್ಷದ ಬಾಯಿ ಚಪಲಕ್ಕೆ ಒಂದು ಗತಿ ಕಾಣಿಸುವುದೇ ಇಲ್ಲಿಯ ಸ್ವಾರಸ್ಯ.
ಬನಶಂಕರಿ ಜಾತ್ರೆ ಬಂದರೆ ಉತ್ತರ ಕರ್ನಾಟಕದ ನಾಟಕ ಕಂಪೆನಿಗಳೆಲ್ಲ ಲಗ್ಗೆ ಹಾಕುತ್ತವೆ. ಇಲ್ಲಿ ಮೊಕ್ಕಾಂ ಹೂಡಿದರೆ ಮುಗಿಯಿತು. ಬಣ್ಣ ಬಣ್ಣದ ಸೀನರಿ, ಥಳಕು, ಬಳುಕಿನ ನಟಿಯರ ವೈಯ್ಯಾರ, ಹುಚ್ಚೆಬ್ಬಿಸುವ ಹಾಡುಗಳು, ಸಂಗೀತ ರಸಿಕ ಜನರು ಥೇಟರುಗಳಿಗೆ ನುಗ್ಗಿ ಬಿಡುತ್ತಾರೆ. ಸತತ 24 ತಾಸು ನಾಟಕ, ಸಿನೇಮಾಗಳು ತೆರಪಿಲ್ಲದೇ ಓಡುತ್ತಲೇ ಇರುತ್ತವೆ. ಹೌಸ್ ಫುಲ್ ಗೆ ಮಾತ್ರ ಕೊರತೆಯೇ ಇಲ್ಲ. ವರ್ಷವಿಡೀ ಬೇರೆ ಕಡೆ ಆಗಿರುವ ಮತ್ತು ಸಾಲವನ್ನು ತೀರಿಸಲು ನಾಟಕ ಕಂಪನಿಗಳ ಮಾಲೀಕರಿಗೆ ಈ ಜಾತ್ರೆಯ ಹಂಗಾಮು ಚಿಂತೆ ದೂರ ಮಾಡುವ ಫಲವತ್ತಾದ ಭೂಮಿಯಾಗಿರುತ್ತದೆ. ಕಂಪನಿ ನಾಟಕಗಳಲ್ಲದೇ ಜಾನಪದ ದೊಡ್ಡಾಟ, ಸಣ್ಣಾಟ, ಬಯಲಾಟಗಳಾದ ನಾಟಕ ಪಾರಿಜಾತಗಳು ಸಹ ಗ್ರಾಮೀಣ ರಸಿಕರಿಗೆ ಮುದ ನೀಡುತ್ತವೆ.🙏