ದೀಪಾವಳಿ ಹಬ್ಬ ಹಾಗೂ ಅದರ ಮಹತ್ವ - ದೀಪಾವಳಿ ಹಬ್ಬ ಏಕೆ ಆಚರಿಸುತ್ತೆವೆ ?
ಹಿಂದು ಧರ್ಮ;
ಶ್ರೀ ರಾಮ ರಾವಣನನ್ನು ಗೆದ್ದು ಸೀತೆ ಮತ್ತು ಲಕ್ಷ್ಮಣರೊಂದಿಗೆ ಅಯೋಧ್ಯೆಗೆ ಮರಳಿದ ಸಮಯವೆಂದು ದೀಪಾವಳಿಯನ್ನು ಕೆಲವರು ಆಚರಿಸುತ್ತಾರೆ, ಅಮಾವಾಸ್ಯೆಯ ಹಿಂದಿನ ದಿನ (ನರಕ ಚತುರ್ದಶಿ) ಶ್ರೀಕೃಷ್ಣ ನರಕಾಸುರನನ್ನು ಸಂಹರಿಸಿದ ದಿನ ಎಂದು ಹೇಳಲಾಗುತ್ತದೆ. ಒಟ್ಟಿನಲ್ಲಿ ದೀಪಾವಳಿಯಲ್ಲಿ ಕೇಡಿನ ಮೇಲೆ ಶುಭದ ವಿಜಯವನ್ನು ಆಚರಿಸಲಾಗುತ್ತದೆ.
ಬಲಿ-ವಾಮನರ ಕಥೆ ಮತ್ತು ಬಲಿಯ ತ್ಯಾಗವನ್ನು ಅಮಾವಾಸ್ಯೆಯ ಮರುದಿನ ಬಲಿಪಾಡ್ಯಮಿ ದೀಪಾವಳಿಯೊಂದಿಗೆ ಇನ್ನಿತರ ಪುರಾಣಗಳೂ ಸಂಬಂಧಿತವಾಗಿದೆ. ಉದಾಹರಣೆಗೆ, ಬಲಿ-ವಾಮನರ ಕಥೆ ಮತ್ತು ಬಲಿಯ ತ್ಯಾಗವನ್ನು ಅಮಾವಾಸ್ಯೆಯ ಮರುದಿನ ಬಲಿಪಾಡ್ಯಮಿಯಾಗಿ ಆಚರಿಸಲಾಗುತ್ತದೆ.
ಹಿಂದೂ ಧರ್ಮದಜನರು ಪ್ರತಿ ವರ್ಷವೂ ಪ್ರಪಂಚದ ಎಲ್ಲೆಡೆ ದೀಪಾವಳಿಯನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಹೊಸ ಬಟ್ಟೆಗಳು, ಸಿಹಿ ತಿಂಡಿಗಳು ಎಲ್ಲಕ್ಕೂ ಹೆಚ್ಚಾಗಿ ಪಟಾಕಿಗಳಿಗೆ ದೀಪಾವಳಿ ಪ್ರಸಿದ್ಧ. ಉತ್ತರ ಭಾರತದಲ್ಲಿ ದೀಪಾವಳಿಯ ಸಮಯವೇ ಹೊಸ ಆರ್ಥಿಕ ವರ್ಷದ ಪ್ರಾರಂಭ ಸಹ; ಹೊಸ ಲೆಕ್ಕದ ಪುಸ್ತಕಗಳನ್ನು ಈ ಸಮಯದಲ್ಲೇ ತೆರೆಯಲಾಗುತ್ತದೆ.
ದೀಪಾವಳಿಯ ಅಂಗವಾಗಿ ನಡೆಯುವ ಇತರ ಸಮಾರಂಭಗಳಲ್ಲಿ ಆಯುಧಪೂಜೆ ಮತ್ತು ಗೋಪೂಜೆಗಳನ್ನು ಹೆಸರಿಸಬಹುದು.
ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಮೂರು ದಿನಗಳ ಆಚರಣೆ ನಡೆಯುತ್ತದೆ. ದಕ್ಷಿಣ ಭಾರತದಲ್ಲಿ ನರಕ ಚತುರ್ದಶಿ ಪ್ರಮುಖವಾದರೆ, ಉತ್ತರ ಭಾರತದಲ್ಲಿ ಅಮಾವಾಸ್ಯೆಯಂದು ಆಚರಿಸಲಾಗುವ ಲಕ್ಷ್ಮಿ ಪೂಜೆ ಮುಖ್ಯವಾದದ್ದು.
ಸಿಖ್ ಧರ್ಮ;
ಸಿಕ್ಖ್ ಧರ್ಮದಲ್ಲಿಯೂ ದೀಪಾವಳಿ ಮುಖ್ಯ ಹಬ್ಬ. ೧೬೨೦ ರಲ್ಲಿ ಸಿಕ್ಖರ ಆರನೆಯ ಗುರು ಹರಗೋಬಿಂದ್ ಸಿಂಗ್ ಗ್ವಾಲಿಯರ್ನ ಕೋಟೆಯಲ್ಲಿ ಬಂಧಿತರಾಗಿದ್ದ ೫೨ ರಾಜರನ್ನು ಬಿಡಿಸಿ ತಂದ ದಿನವೆಂದು ಈ ಕಾಲವನ್ನು ಆಚರಿಸಲಾಗುತ್ತದೆ.
ಜೈನ ಧರ್ಮ;
ಜೈನ ಧರ್ಮದಲ್ಲಿ ದೀಪಾವಳಿಯನ್ನು ಕಾರ್ತಿಕ ಮಾಸದ ೩ ದಿನ ಆಚರಿಸುತ್ತಾರೆ. ದೀಪಾವಳಿಯು ಜೈನ ಧರ್ಮದಲ್ಲಿ ಕಡೆಯ ತೀರ್ಥಂಕರ ಮಹಾವೀರರು ಕಾರ್ತಿಕ ಚತಿರ್ದಶಿಯಂದು (ಕ್ರಿ.ಪೂ ೫೨೭ ಅಕ್ಟೋಬರ್ ೧೫) ಪಾವಾಪುರಿಯಲ್ಲಿ ಮೋಕ್ಷ ಹೊಂದಿದ ದಿನವಾಗಿ ಆಚರಿಸುತ್ತಾರೆ. ಕ್ರಿ.ಪೂ ೩ನೇ ಶತಮಾನದಲ್ಲಿ ಆಚಾರ್ಯ ಭದ್ರಬಾಹುವಿನಿಂದ ರಚಿತವಾದ ಕಲ್ಪಶ್ರುತ ಗ್ರಂಥದಲ್ಲಿರುವಂತೆ ಮಹಾವೀರರ ನಿರ್ವಾಣ ಕಾಲದಲ್ಲಿದ್ದ ದೇವತೆಗಳಿಂದ ಅಂಧಕಾರವು ಮರೆಯಾಗಿದ್ದಿತು. ಆದರೆ ಮುಂದಿನ ರಾತ್ರಿ ಗಾಡಾಂಧಕಾರವು ಆವರಿಸಿತು.
ತಮ್ಮ ಗುರುವಿನ ಜ್ಜಾನಜ್ಯೋತಿಯ ಸಂಕೇತವಾಗಿ ೧೬ ಗಣ-ಚಕ್ರವರ್ತಿ, ೯ ಮಲ್ಲ ಮತ್ತು ೯ಗಣರಾಜ್ಯದಲ್ಲಿ ದ್ವಾರವನ್ನು ಬೆಳಗಿದರು. ಜೈನರಿಗೆ ಇದು ವರ್ಷದ ಪ್ರಾರಂಭ. ಮನೆಯ ದ್ವಾರವನ್ನು ದೀಪದಿಂದ ಬೆಳಗುವುದರ ಜೊತೆಗೆ ಈ ಸಮಯದಲ್ಲಿ ಮಹಾವೀರರ ಉಪದೇಶಗಳನ್ನೊಳಗೊಂಡ ಉತ್ತಾರಾಧ್ಯಾಯನ ಸ್ತೋತ್ರದ ಪಠಣೆ ಮಾಡುತ್ತಾರೆ. ಕೆಲವರು ಮಹಾವೀರರ ನಿರ್ವಾಣ ಸ್ಠಳವಾದ ಬಿಹಾರ ರಾಜ್ಯದ ಪಾವಾಪುರಿಗೆ ಯಾತ್ರೆ ಕೈಗೊಳ್ಳುತ್ತಾರೆ. ವ್ಯಾಪಾರಿಗಳು ಹೊಸ ಲೆಕ್ಕದ ಪುಸ್ತಕಗಳನ್ನು ಪ್ರಾರಂಭಿಸುತ್ತಾರೆ.

ದೀಪಾವಳಿಯ ನೀರು ತುಂಬುವ ಹಬ್ಬ.
ನೀರು ತುಂಬುವ ಹಬ್ಬ ಭಾಗ್ಯ ತರುವ ಹಬ್ಬ ದೀಪಾವಳಿ. ದೀಪ ಪ್ರಕಾಶದ, ಜ್ಞಾನದ ಸಂಕೇತ. ಅಜ್ಞಾನವೆಂಬ ಕತ್ತಲನ್ನು ಹೊಡೆದೋಡಿಸಲು ಜ್ಞಾನವೆಂಬ ದೀಪ (ಪ್ರಕಾಶ) ಅವಶ್ಯಕ. ಆದ್ದರಿಂದಲೇ 'ನಹಿ ಜ್ಞಾನೇನ ಸದೃಶಂ' (ಜ್ಞಾನಕ್ಕೆ ಸಮನಾದುದು ಯಾವುದೂ ಇಲ್ಲ) 'ಜ್ಞಾನ ವಿನಃ ಪಶು' (ಜ್ಞಾನವಿಲ್ಲದವನು ಪಶು) ಎನ್ನಲಾಗುತ್ತದೆ.ಅಜ್ಞಾನದ ಕತ್ತಲನ್ನು ದೂರ ಮಾಡಿ ಜ್ಞಾನದ ಬೆಳಕನ್ನು ಬೀರುವುದೇ ದೀಪಾವಳಿಯ ಸತ್ಯಾರ್ಥ. ಆದ್ದರಿಂದ, ಪ್ರತಿ ಮನೆ-ಮನೆಯಲ್ಲೂ ಪ್ರತಿಯೊಬ್ಬನ ಮನ-ಮನದಲ್ಲೂ ಜ್ಞಾನವೆಂಬ ದೀಪವು ನಿರಂತರವಾಗಿ ಬೆಳೆಯುತ್ತಿರಲಿ ಎಂಬುದೇ ದೀಪಾವಳಿ ಹಬ್ಬದ ಮೂಲ ಸಂದೇಶವಾಗಿದೆ.
ಭಾರತೀಯ ಹಬ್ಬಗಳೆಲ್ಲವೂ ಹರ್ಷದಾಯಕವಾಗಿವೆ. ಹಬ್ಬಗಳ ಹೆಸರೇ ಮನುಷ್ಯನ್ನು ಶ್ರೇಷ್ಠ ಜೀವನ ರೂಪಿಸಿಕೊಳ್ಳಲು ಪ್ರೇರಣೆ ನೀಡುತ್ತದೆ. ಹಬ್ಬಗಳ ಹಿನ್ನೆಲೆಯಲ್ಲಿ ಬಹಳ ಉನ್ನತವಾದ ಆಧ್ಯಾತ್ಮಿಕ ರಹಸ್ಯಗಳು ಅಡಗಿವೆ. ನಮ್ಮ ಹಿರಿಯರು ಪ್ರತಿ ಹಬ್ಬಕ್ಕೂ ಅದಕ್ಕೆ ಸರಿಹೊಂದುವಂತೆ ಒಂದು ಪುರಾಣ, ಪುಣ್ಯ ಕಥೆಯನ್ನು ಬೆಸೆದು ಹಬ್ಬದ ಮೆರಗು ಹೆಚ್ಚಿಸಿದ್ದಾರೆ. ಆದರೆ ಅದು ಕ್ರಮೇಣವಾಗಿ ಆಧ್ಯಾತ್ಮಿಕತೆಯ ಅರ್ಥ ಕಳೆದುಕೊಂಡು ತನ್ನ ಸೊಬಗನ್ನು ಕಳೆದುಕೊಳ್ಳುತ್ತಿದೆ.ದೀಪಾವಳಿಗೆ ಹಲವು ಮುಖಗಳು; ಬೆಳಕಿಗೋ ಅನಂತ ನಂಟು ಹೊಂದಿದೆ .
ದೀಪಾವಳಿಯೊಂದಿಗೆ ತಳಕು ಹಾಕಿಕೊಂಡಿರುವ ಕೆಲವು ಮುಖಗಳನ್ನು ನೋಡಿ: ಇದು ಲಕ್ಷ್ಮಿಯನ್ನು ಪೂಜಿಸುವ ಹಬ್ಬ. ನರಕ ಮತ್ತು ಬಲಿಯೆಂಬ ಅಸುರರನ್ನು ನೆನಪಿಸಿಕೊಳ್ಳುವ ಹಬ್ಬ. ವಾಮನರೂಪಿ ದೇವನನ್ನು ಸ್ಮರಿಸುವ ಹಬ್ಬ. ಈ ದೀಪಾವಳಿಗೆ ರೈತರ ಹಬ್ಬವೂ ಹೌದು. ರೈತಪಿ ವರ್ಗವು ಸಾಧಾರಣವಾಗಿ ತಮ್ಮ ಕೃಷಿ ಕೆಲಸದ ಕೊಯ್ಲು ಮುಗಿಸಿದ್ದು ನಂತರ ಈ ಹಬ್ಬ ಆಚರಣೆ ಇರುತ್ತದೆ. ಬತ್ತದ ಕೃಷಿ ಮಾಡುವ ಪ್ರತೀ ಕೆಲಸಗಾರರಿಗೂ ಗೊತ್ತು ಪೈರಿನ ಒಂದು ರೀತಿಯ ಜುಂಗು ಕೃಷಿ ಕಾರ್ಮಿಕರ ಮೈಗಂಟಿಕೊಂಡು ಒಂದು ರೀತಿಯಲ್ಲಿ ಚರ್ಮಕ್ಕೆ ನಾನಾ ರೀತಿಯ ತುರಿಕೆ, ನವೆ, ಕಜ್ಜಿ ಆಗಿರುತ್ತದೆ. ಅವು ದಿನಾ ನಿವಾರಿಸಿಕೊಳ್ಳಲು ಸಾಧ್ಯವಿಲ್ಲದ ಪೈರಿನ ಸೂಕ್ಷ್ಮ ಜುಂಗುಗಳು.
ಕೊಯ್ಲಾದ ನಂತರ ಅದನ್ನು ನಿವಾರಿಸಿಕೊಳ್ಳುವ ಒಂದು ಚಿಕಿತ್ಸಾ ಪದ್ಧತಿಯೇ ಈ ನೀರು ತುಂಬುವ ಹಬ್ಬ. (ಅದು ನದಿ, ಕೆರೆ, ತಟಾಕಗಳು) ಆ ನೀರಿನಲ್ಲಿ ಸೊರಕೆ, ಯಗಚಿ, ಅಳಲೆ, ಕಂದಿಲೆ, ಸೊರೆ, ಲೋಳೆರಸವನ್ನು ಬೆರೆಸಿ ಚೆನ್ನಾಗಿ ಕಾಯಿಸಿ ಬೆಳಗ್ಗಿನ ಜಾವ ಮೈತುಂಬ “ತೈಲ” ಹಚ್ಚಿ (ಎಣ್ಣೆಯಲ್ಲ) ಸ್ನಾನ ಮಾಡಿದಾಗ ಆ ಬತ್ತದ ಜುಂಗುಗಳು; ಮೈಯಲಿ ನೆಟ್ಟವುಗಳು ಜಾರಿ ಹೋಗುತ್ತವೆ. ಮೈತುರಿಕೆ ಕಡಿಮೆಯಾಗುತ್ತದೆ. ತೈಲವೆಂದರೆ ಕಾಳು ಮೆಣಸು, ಚಂದ್ರ, ರಕ್ತಬೋಳ, ಚಂದನ, ಲಿಂಬೆ ಹಣ್ಣು ಹಾಕಿ ಕುದಿಸಿದ ಎಣ್ಣೆ. ಸ್ನಾಯುಗಳ ಸೆಳೆತವನ್ನೂ ನಿವಾರಿಸುವ ತೈಲ. ಅದನ್ನೇ “ತೈಲಾಭ್ಯಂಜನ” ಎನ್ನುತ್ತಾರೆ.ಕೆಲವೆಡೆ ಜಾನುವಾರುಗಳನ್ನು ಪೂಜಿಸಲಾಗುತ್ತದೆ. ಹಾಗಾಗಿ ಇದು ರೈತರ ಹಬ್ಬವೂ ಹೌದು. ನವ ವಧುವರರಿಗೆ ವಿಶೇಷ ಹೊಸ ಮದುವೆಯಾದ ನಂತರ ಬಾಗಿಣ ನೀಡುವುದು ಒಂದು ಸಂಪ್ರದಾಯ ಎನ್ನಿಸುವ ಮೂಲಕ ದೀಪಾವಳಿಗೆ ಆದಿ ಹರೆಯರಲ್ಲಿ ಹುಮ್ಮಸ್ಸೂ ಇದೆ. ಹೀಗೆ, ದೀಪದ ಕುಡಿಗಳಂತೆ ಹಬ್ಬಕ್ಕೆ ಹಲವು ಮುಖಗಳು!
ನೀರು ತುಂಬುವ ಆಚರಣೆ ದೀಪಾವಳಿಯ ಮತ್ತೊಂದು ವಿಶೇಷ. ‘ನರಕ ಚತುರ್ದಶಿ’ಯ ಮುನ್ನಾದಿನ ಈ ನೀರು ತುಂಬುವ ಹಬ್ಬ. ಅಂದು ಬಚ್ಚಲಿಗೆ ಅಪರೂಪದ ಕಳೆ. ಇಡೀ ವರ್ಷ ನಮ್ಮ ಮೈ-ಮನಗಳನ್ನು ತೊಳೆದುಕೊಳ್ಳಲು ವೇದಿಕೆಯಾದ ಬಚ್ಚಲು, ‘ನೀರು ತುಂಬುವ ಹಬ್ಬ’ದಂದು ತಾನೂ ಮಿಂದು, ಹೊಸ ಸಂಭ್ರಮದೊಂದಿಗೆ ಕಂಗೊಳಿಸುತ್ತದೆ.ಬಚ್ಚಲಿನಲ್ಲಿನ ಹಂಡೆ-ತೊಟ್ಟಿಗಳು ಕೊಳೆ-ಕಿಲುಬು ಕಳೆದುಕೊಂಡು ಕಂಗೊಳಿಸುತ್ತವೆ. ಲಕಲಕಿಸುವ ಹಂಡೆ-ತೊಟ್ಟಿಗಳಿಗೆ ಹೊಸ ನೀರನ್ನು ತುಂಬಲಾಗುತ್ತದೆ. ಅಡುಗೆ ಮನೆಯಲ್ಲೂ ತೊಳೆದು ಬಳಿಯುವ ಸಂಭ್ರಮ.
‘ನೀರು ತುಂಬುವ ಹಬ್ಬ’ಕ್ಕೊಂದು ಪುರಾಣಕಥನದ ಹಿನ್ನೆಲೆಯೂ ಇದೆ. ತ್ರಿವಿಕ್ರಮನ ಪಾದದಲ್ಲಿ ಗಂಗೆ ಜನಿಸಿದ ದಿನ ಇದೆನ್ನುತ್ತಾರೆ. ನೀರನ್ನು ತುಂಬಿಕೊಳ್ಳುವ ಮೂಲಕ ಗಂಗೆಯನ್ನು ಬರಮಾಡಿಕೊಳ್ಳುವುದು, ಪೂಜಿಸುವುದು ಹಬ್ಬದ ಆಚರಣೆಯಾಗಿದೆ. ಬೆಳಕಿನ ಹಬ್ಬದೊಂದಿಗೆ ನೀರನ್ನು ತಳಕು ಹಾಕಿದರೂ, ಆ ನೀರಿನಲ್ಲಿ ಕೂಡ ಬೆಳಕಿರುವುದನ್ನು ಗಮನಿಸಬೇಕು. ಇದರರ್ಥ ಇಷ್ಟೇ – ಹಬ್ಬಕ್ಕೆ ಏನು ಅರ್ಥ ಹಚ್ಚಿದರೂ ಅದು ಕೊನೆಗೊಳ್ಳುವುದು ಬೆಳಕಿನೊಂದಿಗೆ,‘ಗಂಗಾಪೂಜೆ’ ನಿಜ ಅರ್ಥದಲ್ಲಿ ಸಾಧ್ಯವಾಗುತ್ತದೆ.
‘ನನ್ನ ತಲೆಯೊಳಗೆ / ನನ್ನ ಬೆಂಬಳಿಗೆ / ನನ್ನ ಒಳಕೆಳೆಗೆ / ನುಗ್ಗಿ ಬಾ’ ಎಂದು ಕವಿ ದ.ರಾ. ಬೇಂದ್ರೆ ತಮ್ಮ ‘ಗಂಗಾವತರಣ’ ಕವಿತೆಯಲ್ಲಿ ಗಂಗೆಯನ್ನು ಆಹ್ವಾನಿಸುತ್ತಾರೆ. ಮತ್ತೂ ಮುಂದುವರಿದು – ‘ಕಣ್ಣ ಕಣ ತೊಳಿಸಿ / ಉಸಿರ ಎಳೆ ಎಳಸಿ / ನುಡಿಯ ಸಸಿ ಮೊಳೆಸಿ / ಹಿಗ್ಗಿ ಬಾ’ ಎಂದು ಮನದುಂಬಿ ನೀರದೇವಿಯನ್ನು ಆಹ್ವಾನಿಸುತ್ತಾರೆ. ಈ ಹೊತ್ತು ಅದ್ಯಾರ ಆಹ್ವಾನಕ್ಕೆ ಓಗೊಟ್ಟೋ ಮಳೆತಾಯಿ ತುಂಬು ಸಂಭ್ರಮದಿಂದ ನಾಡಿಗೆ ಆಗಮಿಸಿದ್ದಾಳೆ. ಅವಳನ್ನು ಮನೆದುಂಬಿಸಿಕೊಳ್ಳಬೇಕಾದ, ಮನದುಂಬಿಸಿಕೊಳ್ಳಬೇಕಾದ ವಿವೇಕವನ್ನು ನಾವು ತೋರಬೇಕಿದೆ. ಆ ವಿವೇಕವೇ ದೀಪಾವಳಿ, ಅಲ್ಲವೇ?
ಸರ್ವರಿಗೂ ದೀಪಾವಳಿಯ ನೀರು ತುಂಬುವ ಹಬ್ಬದ ಶುಭಾಶಯಗಳು.

ದೀಪಾವಳಿಯ ಐದು ಹಬ್ಬಗಳು ಹಾಗೂ ಅದರ ಮಹತ್ವಗಳು;
ಕತ್ತಲೆಯನ್ನು ಹೋಗಲಾಡಿಸಿ ಮನೆ ಹಾಗೂ ಮನದ ಕತ್ತಲೆಯನ್ನು ನಿವಾರಿಸಿ ಬೆಳಕನ್ನು ಉಂಟು ಮಾಡುವ ಹಬ್ಬವೇ ದೀಪಾವಳಿ. ಮುಂಗಾರು ಬೆಳೆ ಕೊಯ್ಲಿಗೆ ಬರುವ ಸಮಯದಲ್ಲಿ ಈ ಹಬ್ಬ ಬರುವುದು ವಿಶೇಷ. ಕೆಲ ಕಡೆ ಆಶ್ವಯುಜ ಮಾಸದ ಕೊನೆಯ ಎರಡು ದಿನಗಳು ಹಾಗೂ ಕಾರ್ತಿಕ ಮಾಸದ ಮೊದಲನೆಯ ದಿನ ಈ ಹಬ್ಬವನ್ನು ಆಚರಿಸಿದರೆ ಇನ್ನು ಕೆಲ ಕಡೆ ಮುಂದಿನ ಎರಡು ದಿನಗಳನ್ನು ಸೇರಿಸಿ 5 ದಿನ ವಿಜೃಂಭಣೆಯಿಂದ ಈ ಹಬ್ಬವನ್ನು ಆಚರಿಸಲಾಗುತ್ತದೆ.ಹಿಂದೂ ಕ್ಯಾಲೆಂಡರ್ ಪ್ರಕಾರ ಈ ಹಬ್ಬ ಕಾರ್ತಿಕ ಮಾಸದಲ್ಲಿ ದೀಪಾವಳಿ ಹಬ್ಬ ಸಮೀಪಿಸುತ್ತಿದ್ದಂತೆ ಕೆಲವರು ಮನೆಗೆ ಹೊಸ ವಸ್ತುಗಳನ್ನು ತರುತ್ತಾರೆ.
ದೀಪಾವಳಿ ಹಬ್ಬದ ಮಹತ್ವ:
ದೀಪಾವಳಿ ‘ದೀಪಾ’ ಎಂದರೆ ಮಣ್ಣಿನ ದೀಪ ಹಾಗೂ ‘ವಲಿ’ ಎಂದು ಯಾವುದಾದರು ವಸ್ತು ಸರಣಿಯಾಗಿಯಿಡುವುದು. ದೀಪಾವಳಿಯ ಅಮವಾಸ್ಯೆಯನ್ನು ದೀವಾಳಿ ಅಮಾವಾಸ್ಯೆಯೆಂದು ಕರೆಯುತ್ತಾರೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಆ ದಿನ ಕತ್ತಲೆಯಿಂದ ಕೂಡಿರುತ್ತದೆ. ದೀಪಾವಳಿ ಹಬ್ಬವನ್ನು ಹಿಂದೂಗಳ ಹಬ್ಬ ಮಾತ್ರ ಆಗಿರದೇ ಈ ಹಬ್ಬವನ್ನು ಜೈನ್, ಸಿಖ್ಗಳು ಹಾಗೂ ಬೌದ್ಧರು ಕೂಡ ಈ ಹಬ್ಬವನ್ನು ಆಚರಿಸುತ್ತಾರೆ.ಭಾರತದ ಬೇರೆ ಬೇರೆ ಪ್ರದೇಶಗಳಲ್ಲಿ ದೀಪಾವಳಿಗೆ ಅದರದ್ದೇ ಆದ ಮಹತ್ವವಿದೆ ಹಾಗೂ ಅವರದ್ದೆ ಆದ ಕೆಲವು ಸಂಪ್ರದಾಯಗಳು ಇರುತ್ತದೆ. ಕೆಲವರು ತಮ್ಮ ಸಂಪ್ರದಾಯಕ್ಕೆ ತಕ್ಕಂತೆ ತಮ್ಮ ಹಬ್ಬವನ್ನು ಆಚರಿಸುತ್ತಾರೆ. ಆದರೆ ಎಲ್ಲರ ಪ್ರಕಾರ ದೀಪಾವಳಿ ಹಬ್ಬ ರಾಮಾಯಣದ ಕಥೆಗೆ ಹೊಂದಿಕೊಂಡಿದೆ.ರಾವಣನನ್ನು ಸಂಹಾರ ಮಾಡಿ ರಾಮ, ಸೀತಾ, ಲಕ್ಷ್ಮಣ ಹಾಗೂ ಹನುಮಂತ ಲಂಕೆಯಿಂದ ಆಯೋಧ್ಯೆಗೆ ಹಿಂದಿರುಗಿದ ದಿನ. ಅಲ್ಲದೇ ರಾಮ ಪಟ್ಟಾಭಿಷೇಕಗೊಂಡ ದಿನ. ಹಾಗಾಗಿ ಜನರು ಆ ದಿನ ಆನಂದದಿಂದ ದೀಪಗಳನ್ನು ಬೆಳಗಿಸಿ ರಾಮನನ್ನು ಸ್ವಾಗತಿಸಿದ್ದರು. ಅಲ್ಲದೇ ಪಾಂಡವರು ಕೂಡ ಅದೇ ದಿನ ತಮ್ಮ ಅಜ್ಞಾತವಾಸವನ್ನು ಮುಗಿಸಿದ ದಿನ ಎನ್ನುವ ಕಥೆಯು ಇದೆ.
ದೀಪಾವಳಿಯ ಐದು ಹಬ್ಬಗಳು ಹಾಗೂ ಅದರ ಮಹತ್ವಗಳು;
1. ದನ್ತೇರಸ್: ದನ್ತೇರಸ್ ಹಬ್ಬವನ್ನು ನವೆಂಬರ್ 5ರಂದು ಆಚರಿಸುತ್ತಾರೆ. ಈ ದಿನ ಜನರು ತಮ್ಮ ಮನೆಗೆ ಅಡುಗೆ ಪಾತ್ರೆಗಳು, ಚಿನ್ನದ ನಾಣ್ಯ ಹಾಗೂ ಆಭರಣಗಳನ್ನು ಖರೀದಿಸಲು ಹೋಗುತ್ತಾರೆ. ಅಲ್ಲದೇ ತಮ್ಮ ಮನೆ ಹಾಗೂ ಕಚೇರಿಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಮಣ್ಣಿನ ದೀಪವನ್ನು ಹಚ್ಚಿ ಅಲಂಕರಿಸುತ್ತಾರೆ.
2. ನರಕ ಚತುರ್ದಶಿ: ನರಕ ಚತುರ್ದಶಿಯನ್ನು ಚೋಟಾ ದೀಪಾವಳಿ ಎಂದು ಕರೆಯುತ್ತಾರೆ. ನವೆಂಬರ್ 6 ರಂದು ಈ ಹಬ್ಬವನ್ನು ಆಚರಿಸುತ್ತಾರೆ. ಶ್ರೀಕೃಷ್ಣನು ನರಕಾಸುರನನ್ನು ಕೊಂದ ನೆನಪನ್ನು ಈ ಹಬ್ಬ ತರುತ್ತದೆ. ನರಕಾಸುರನನ್ನು ಆಶ್ವಯುಜ ಕೃಷ್ಣ ಚತುರ್ದಶಿಯ ಕತ್ತಲೆಯಲ್ಲಿ ಕೃಷ್ಣ ಸಂಹಾರ ಮಾಡುತ್ತಾನೆ. ಈ ಹಬ್ಬದಂದು ಸಿಹಿ ತಿನುಸುಗಳನ್ನು ಖರೀದಿಸಿ ಕುಟುಂಬದವರಿಗೆ, ಸ್ನೇಹಿತರಿಗೆ ಹಾಗೂ ಸಂಬಂಧಿಕರಿಗೆ ಹಂಚುತ್ತಾರೆ. ಸಿಹಿ ತಯಾರಿಸುವವರು ನರಕ ಚತುರ್ದಶಿದಂದು ಹೆಚ್ಚು ಸಮಯ ಕೆಲಸ ಮಾಡುತ್ತಾರೆ
3. ದೀಪಾವಳಿ: ದೀಪಾವಳಿಯಂದು ಲಕ್ಷ್ಮಿ ಪೂಜೆ ಮಾಡುತ್ತಾರೆ. ಲಕ್ಷ್ಮೀ ಎಂದರೆ ಕೇವಲ ಧನಾಧಿದೇವತೆ ಎಂಬ ಪ್ರತೀತಿಯಿದೆ. ಲಕ್ಷ್ಮೀ ಕೇವಲ ಧನಲಕ್ಷ್ಮೀ ಮಾತ್ರವಲ್ಲ. ಸಕಲ ಶ್ರೇಯಸ್ಸುಗಳಿಗೆ ಲಕ್ಷ್ಮೀ ಕಾರಣ ಎಂದು ಹೇಳುತ್ತಾರೆ. ಈ ಹಬ್ಬದಂದು ಎಲ್ಲರೂ ತಮ್ಮ ಕುಟುಂಬದವರೊಂದಿಗೆ ಸೇರಿ ಒಬ್ಬರಿಗೊಬ್ಬರು ಸಿಹಿ ಹಂಚಿ ಉಡುಗೊರೆ ನೀಡುತ್ತಾರೆ
4. ಗೋಪೂಜೆ: ದೀಪಾವಳಿಯ ನಾಲ್ಕನೇ ದಿನ ಗೋ ಪೂಜೆ ಮಾಡುತ್ತಾರೆ. ಈ ದಿನದಂದು ಗೋವುಗಳನ್ನು ಅಲಂಕರಿಸಿ, ಹಾಲು ಹಿಡಿಯುವ ಪಾತ್ರೆ, ಕುಡಗೋಲುಗಳನ್ನು ಪೂಜಿಸಿ, ಗೋಶಾಲೆಯನ್ನು ದೀಪದಿಂದ ಬೆಳಗಿ, ಹಸುಗಳಿಗೆ ಅಕ್ಕಿ, ಬೆಲ್ಲ, ತಿಂಡಿ ತಿನಿಸುಗಳನ್ನು ನೀಡುತ್ತಾರೆ. ಉತ್ತರ ಭಾರತದಲ್ಲಿ ಅಥವಾ ಕೆಲವರ ಸಂಪ್ರದಾಯದಲ್ಲಿ ಈ ದಿನದಂದು ಪತಿ ತಮ್ಮ ಪತ್ನಿಯರಿಗೆ ಉಡುಗೊರೆ ನೀಡುತ್ತಾರೆ. ಅಲ್ಲದೇ ಹೊಸದಾಗಿ ಮದುವೆಯಾದ ಜೋಡಿಯನ್ನು ಮನೆಗೆ ಔತಣಕ್ಕೆ ಕರೆದು ಉಡುಗೊರೆ ನೀಡಲಾಗುತ್ತದೆ.
5. ಬಾಯ್ ದೂಜ್: ಬಾಯ್ ದೂಜ್ ಅನ್ನು ಬಯ್ಯಾ ದೂಜ್ ಎಂದು ಕರೆಯುತ್ತಾರೆ. ದೀಪಾವಳಿಯ ಐದನೇ ದಿನದಂದು ಈ ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬ ಅಣ್ಣ-ತಂಗಿಯರ ಹಬ್ಬವಾಗಿದ್ದು, ಅಣ್ಣಂದಿರು ತಮ್ಮ ತಂಗಿಯ ಮನೆಗೆ ಊಟಕ್ಕೆ ಹೋಗುತ್ತಾರೆ. ಅಲ್ಲದೇ ತಿಲಕ ಶಾಸ್ತ್ರ ಮಾಡುತ್ತಾರೆ. ಸಹೋದರಿಯರು ತಮ್ಮ ಸಹೋದರನಿಗೆ ತಿಲಕ ಶಾಸ್ತ್ರ ಮಾಡುತ್ತಾರೆ. ಇದನ್ನು ಮತ್ತೊಂದು ರಕ್ಷಾ ಬಂಧನ ಎಂದೂ ಕರೆಯಲಾಗುತ್ತದೆ.

ದೀಪಾವಳಿ ಬಲಿಪಾಡ್ಯದ ಮಹತ್ವ
೧. ತಿಥಿ : ಕಾರ್ತಿಕ ಶುಕ್ಲ ಪ್ರತಿಪದಾ
೨. ಇತಿಹಾಸ : ಬಲಿರಾಜನು ಅತ್ಯಂತ ದಾನಶೂರನಾಗಿದ್ದನು. ಬಾಗಿಲಿಗೆ ಬಂದ ಅತಿಥಿಯು ಏನೇ ಬೇಡಿದರೂ ಅದನ್ನು ಅವನಿಗೆ ದಾನವೆಂದು ಕೊಡುತ್ತಿದ್ದನು. ‘ದಾನ ಕೊಡುವುದು’ ಒಂದು ಒಳ್ಳೆಯ ಗುಣವಾಗಿದ್ದರೂ ಗುಣದ ಅತಿರೇಕವು ದೋಷವೇ ಆಗಿದೆ. ಯಾರಿಗೆ ಏನು, ಯಾವಾಗ ಮತ್ತು ಎಲ್ಲಿ ದಾನ ಕೊಡಬೇಕು ಎನ್ನುವುದನ್ನು ಶಾಸ್ತ್ರ ಮತ್ತು ಭಗವದ್ಗೀತೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಸತ್ಪಾತ್ರರಿಗೆ ದಾನ ಕೊಡಬೇಕು, ಅಪಾತ್ರರಿಗೆ ಕೊಡಬಾರದು. ಅಪಾತ್ರರಿಗೆ ಸಂಪತ್ತನ್ನು ದಾನ ಮಾಡಿದರೆ ಅವರು ಮದೋನ್ಮತ್ತರಾಗಿ ಮನಬಂದಂತೆ ವರ್ತಿಸುತ್ತಾರೆ. ಬಲಿರಾಜನು ಯಾರಿಗಾದರೂ, ಯಾವಾಗ ಬಂದರೂ ಮತ್ತು ಅವರು ಏನು ಕೇಳಿದರೂ ದಾನವೆಂದು ಕೊಡುತ್ತಿದ್ದನು. ಆಗ ಭಗವಾನ ಶ್ರೀವಿಷ್ಣುವು ವಟುವಿನ ಅವತಾರ (ವಾಮನಾವತಾರ) ತಾಳಿದನು. (ವಟುವು ಚಿಕ್ಕವನಾಗಿರುತ್ತಾನೆ ಮತ್ತು ‘ಓಂ ಭವತಿ ಭಿಕ್ಷಾಂ ದೇಹಿ|’ ಅಂದರೆ ‘ಭಿಕ್ಷೆ ಕೊಡಿ’ ಎಂದು ಕೇಳುತ್ತಾನೆ.) ವಾಮನನು ಬಲಿರಾಜನ ಬಳಿ ಹೋಗಿ ಭಿಕ್ಷೆಯನ್ನು ಕೇಳಿದಾಗ, ಬಲಿರಾಜನು ‘ಏನು ಬೇಕು’ ಎಂದು ಕೇಳಿದನು.
ಆಗ ವಾಮನನು ತ್ರಿಪಾದ (ಮೂರು ಹೆಜ್ಜೆ) ಭೂಮಿಯನ್ನು ದಾನವಾಗಿ ಕೇಳಿದನು. ‘ವಾಮನನು ಯಾರು ಮತ್ತು ಆ ದಾನದಿಂದ ಏನಾಗಲಿದೆ’ ಎನ್ನುವುದರ ಜ್ಞಾನವಿಲ್ಲದ ಬಲಿರಾಜನು ದಾನಕೊಡಲು ಒಪ್ಪಿಕೊಂಡನು. ವಾಮನನು ವಿರಾಟರೂಪವನ್ನು ತಾಳಿ ಒಂದು ಕಾಲಿನಿಂದ ಸಂಪೂರ್ಣ ಭೂಮಿಯನ್ನು ವ್ಯಾಪಿಸಿದನು. ಎರಡನೆಯ ಕಾಲಿನಿಂದ ಇಡಿ ಅಂತರಿಕ್ಷವನ್ನು ವ್ಯಾಪಿಸಿಕೊಂಡನು ಹಾಗೂ ಅವನು ‘ಮೂರನೆಯ ಕಾಲನ್ನು ಎಲ್ಲಿಡಲಿ?’ ಎಂದು ಬಲಿರಾಜನನ್ನು ಕೇಳಿದನು. ಆಗ ಬಲಿರಾಜನು, ‘ಮೂರನೆಯ ಕಾಲನ್ನು ನನ್ನ ತಲೆಯ ಮೇಲೆ ಇಡಿ’ ಎಂದು ಹೇಳಿದನು. ಆಗ ಮೂರನೆಯ ಪಾದವನ್ನು ಆತನ ತಲೆಯ ಮೇಲಿಟ್ಟು ಆತನನ್ನು ಪಾತಾಳಕ್ಕೆ ತಳ್ಳುವುದೆಂದು ನಿರ್ಧರಿಸಿ ವಾಮನನು, ‘ನಿನಗೆ ಏನಾದರೂ ವರ ಕೇಳುವುದಿದ್ದರೆ ಕೇಳು (ವರಂ ಬ್ರೂಹಿ)’ ಎಂದನು. ಆಗ ಬಲಿರಾಜನು ‘ಪೃಥ್ವಿಯ ಮೇಲಿನ ನನ್ನ ಎಲ್ಲ ರಾಜ್ಯವು ಮುಕ್ತಾಯವಾಗಲಿದೆ ಮತ್ತು ನೀವು ನನ್ನನ್ನು ಪಾತಾಳಕ್ಕೆ ತಳ್ಳುವವರಿದ್ದೀರಿ. ಆದುದರಿಂದ ಈ ಮೂರು ಪಾದ ಭೂಮಿದಾನದಿಂದ ಘಟಿಸಿದಂತಹ ಪೃಥ್ವಿಯ ರಾಜ್ಯವು ಪ್ರತಿವರ್ಷವೂ ಮೂರು ದಿನಗಳ ಕಾಲವಾದರೂ ನನ್ನ ರಾಜ್ಯವೆಂದು ಗುರುತಿಸಲ್ಪಡಲಿ. ಪ್ರಭೂ, ಯಮನ ಪ್ರೀತ್ಯರ್ಥವಾಗಿ ದೀಪದಾನವನ್ನು ಮಾಡುವವರಿಗೆ ಯಮಯಾತನೆಯಾಗದಿರಲಿ, ಅವರಿಗೆ ಅಪಮೃತ್ಯು ಬರದಿರಲಿ ಮತ್ತು ಅವರ ಮನೆಯಲ್ಲಿ ಲಕ್ಷಿ ಯು ನಿರಂತರವಾಗಿ ವಾಸಿಸಲಿ’ ಎಂದು ವರವನ್ನು ಬೇಡಿದನು. ಆ ಮೂರು ದಿನಗಳೆಂದರೆ ಆಶ್ವಯುಜ ಕೃಷ್ಣ ಚತುರ್ದಶಿ, ಅಮಾವಾಸ್ಯೆ ಮತ್ತು ಕಾರ್ತಿಕ ಶುಕ್ಲ ಪ್ರತಿಪದಾ. ಇದಕ್ಕೆ ಬಲಿರಾಜ್ಯವೆನ್ನುತ್ತಾರೆ.
೩. ಮಹತ್ವ : ಇದು ಮೂರೂವರೆ ಮುಹೂರ್ತಗಳಲ್ಲಿನ ಅರ್ಧ ಮುಹೂರ್ತವಾಗಿದೆ. ಇದನ್ನು ‘ವಿಕ್ರಮ ಸಂವತ್ಸರ’ ಕಾಲಗಣನೆಯ ವರ್ಷಾರಂಭದ ದಿನವೆಂದು ಆಚರಿಸಲಾಗುತ್ತದೆ.
೪. ಹಬ್ಬವನ್ನು ಆಚರಿಸುವ ಪದ್ಧತಿ
ಅ. ಬಲಿಪಾಡ್ಯದಂದು ನೆಲದ ಮೇಲೆ ೫ ಬಣ್ಣಗಳ ರಂಗೋಲಿಯಿಂದ ಬಲಿ ಮತ್ತು ಅವನ ಪತ್ನಿ ವಿಂಧ್ಯಾವಲಿಯ ಚಿತ್ರಗಳನ್ನು ಬಿಡಿಸಿ ಅವರ ಪೂಜೆಯನ್ನು ಮಾಡುತ್ತಾರೆ. ನಂತರ ಬಲಿಪ್ರೀತ್ಯರ್ಥ ದೀಪ ಮತ್ತು ವಸ್ತ್ರಗಳ ದಾನವನ್ನು ಮಾಡುತ್ತಾರೆ. ಈ ದಿನ ಪ್ರಾತಃಕಾಲ ಅಭ್ಯಂಗಸ್ನಾನ ಮಾಡಿದ ನಂತರ ಸ್ತ್ರೀಯರು ತಮ್ಮ ಪತಿಗೆ ಆರತಿಯನ್ನು ಬೆಳಗುತ್ತಾರೆ. ಮಧ್ಯಾಹ್ನ ಬ್ರಾಹ್ಮಣರಿಗೆ ಭೋಜನವನ್ನು ನೀಡುತ್ತಾರೆ. ಈ ದಿನ ಪಕ್ವಾನ್ನದ ಭೋಜನ ಮಾಡುತ್ತಾರೆ.
ಆ. ‘ಬಲಿರಾಜ್ಯದಲ್ಲಿ ಶಾಸ್ತ್ರದಲ್ಲಿ ಹೇಳಿದ ನಿಷಿದ್ಧ ಕರ್ಮಗಳನ್ನು ಬಿಟ್ಟು ಜನರು ತಮ್ಮ ಮನಸ್ಸಿಗೆ ಬಂದಂತೆ ವರ್ತಿಸಬೇಕೆಂದು’ ಧರ್ಮಶಾಸ್ತ್ರವು ಹೇಳುತ್ತದೆ. ಅಭಕ್ಷ್ಯಭಕ್ಷಣ, ಅಪೇಯಪಾನ ಮತ್ತು ಅಗಮ್ಯಾಗಮನ ಇವು ನಿಷಿದ್ಧ ಕರ್ಮಗಳಾಗಿವೆ; ಶಾಸ್ತ್ರದ ಸಮ್ಮತಿ ಇರುವುದರಿಂದ ಜನರು ಪರಂಪರೆಯಂತೆ ವಿನೋದವಿಲಾಸ ಮಾಡುತ್ತಾರೆ.
ಇ. ಈ ದಿನ ಜನರು ಹೊಸ ಬಟ್ಟೆಬರೆಗಳನ್ನು ಧರಿಸಿ ಇಡಿ ದಿನವನ್ನು ಆನಂದದಲ್ಲಿ ಕಳೆಯುತ್ತಾರೆ. ಈ ದಿನ ಗೋವರ್ಧನ ಪೂಜೆಯನ್ನು ಮಾಡುವ ಪದ್ಧತಿಯಿದೆ. ಇದಕ್ಕಾಗಿ ಸೆಗಣಿಯ ಪರ್ವತವನ್ನು ಮಾಡಿ ಅದರ ಮೇಲೆ ಗರಿಕೆ ಮತ್ತು ಹೂವುಗಳನ್ನು ಚುಚ್ಚುತ್ತಾರೆ. ಕೃಷ್ಣ, ಇಂದ್ರ, ಹಸು ಮತ್ತು ಕರುಗಳ ಚಿತ್ರ ಅಥವಾ ಮೂರ್ತಿಗಳನ್ನು ಜೊತೆಗಿಟ್ಟು, ಅವುಗಳನ್ನು ಪೂಜಿಸಿ ಮೆರವಣಿಗೆ ಮಾಡುತ್ತಾರೆ.
೫. ಭಾವಾರ್ಥ – ಈಶ್ವರೀ ಕಾರ್ಯವೆಂದು ಜನತೆಯ ಸೇವೆಯನ್ನು ಮಾಡುತ್ತಾ ದೇವತ್ವಕ್ಕೆ ತಲುಪಿದ ಬಲಿಯನ್ನು ನೆನಪಿಸಿಕೊಳ್ಳುವುದು! : ಬಲಿಪಾಡ್ಯದಂದು ಬಲಿಯ ಪೂಜೆಯನ್ನು ಮಾಡುತ್ತಾರೆ. ಬಲಿಯು ರಾಕ್ಷಸ ಕುಲದಲ್ಲಿ ಜನ್ಮತಾಳಿದ್ದರೂ ಅವನ ಪುಣ್ಯದಿಂದಾಗಿ ಅವನ ಮೇಲೆ ವಾಮನದೇವರ ಕೃಪೆಯಾಯಿತು. ಅವನು ಈಶ್ವರೀ ಕಾರ್ಯವೆಂದು ಜನರ ಸೇವೆಯನ್ನು ಮಾಡಿದನು. ಅವನು ಸಾತ್ತ್ವಿಕ ವೃತ್ತಿಯ ಮತ್ತು ದಾನಿರಾಜನಾಗಿದ್ದನು. ಪ್ರತಿಯೊಬ್ಬ ಮನುಷ್ಯನು ಪ್ರಾರಂಭದಲ್ಲಿ ಅಜ್ಞಾನಿಯಾಗಿರುವುದರಿಂದ ಅವನಿಂದ ಅಯೋಗ್ಯ ಕೃತಿಗಳು ಘಟಿಸುತ್ತಿರುತ್ತವೆ. ಆದರೆ ಜ್ಞಾನ ಮತ್ತು ಈಶ್ವರೀಕೃಪೆಯಿಂದ ಅವನು ದೇವತ್ವವನ್ನು ಪ್ರಾಪ್ತಮಾಡಿ ಕೊಳ್ಳಬಹುದು ಎಂಬುದು ಈ ಉದಾಹರಣೆಯಿಂದ ಸ್ಪಷ್ಟವಾಗುತ್ತದೆ. ಇಂತಹ ನಿರ್ಭಯತೆಯಿಂದ ಸತ್ಯಕರ್ಮವನ್ನು ಮಾಡಿದರೆ ಅವನಿಗೆ ಮೃತ್ಯುವಿನ ಭಯವೇ ಇರುವುದಿಲ್ಲ. ಯಮನೂ ಕೂಡಾ ಅವನ ಮಿತ್ರ ಅಥವಾ ಬಂಧುವಾಗುತ್ತಾನೆ.
ಭಗವಂತನು ವಾಮನ ಅವತಾರದಲ್ಲಿ ‘ಭಗವಂತನು ಸರ್ವಸ್ವವನ್ನು ಅರ್ಪಿಸುವವನ ದಾಸನಾಗುವ ತಯಾರಿಯನ್ನೂ ಇಟ್ಟುಕೊಂಡಿರುತ್ತಾನೆ’ ಎಂಬುದನ್ನು ತೋರಿಸಿಕೊಟ್ಟಿದ್ದಾನೆ. ಬಲಿಯು ವಾಸ್ತವದಲ್ಲಿ ಅಸುರರ ಕುಲದವನಾಗಿದ್ದರೂ ಅವನ ಉದಾರ ತತ್ತ್ವದಿಂದಾಗಿ ಮತ್ತು ಅವನು ಭಗವಂತನಿಗೆ ಶರಣಾಗಿ ತನ್ನ ಸರ್ವಸ್ವವನ್ನು ಅರ್ಪಿಸಿದ್ದರಿಂದ ಭಗವಂತನು ಅವನಿಗೆ ಯೋಗ್ಯ ಮಾರ್ಗದರ್ಶನ ಮಾಡಿ ಅವನ ಜೀವನಕ್ಕೆ ಹೊಸ ಸ್ವರೂಪವನ್ನು ನೀಡಿದನು ಮತ್ತು ಅವನ ಉದ್ಧಾರವನ್ನು ಮಾಡಿದನು. ಅವನ ರಾಜ್ಯದಲ್ಲಿದ್ದ ಅಸುರವೃತ್ತಿಗೆ ಪೋಷಕವಾಗಿರುವ ಭೋಗಮಯ ವಿಚಾರಗಳನ್ನು ತೆಗೆದುಹಾಕಿ, ಅಲ್ಲಿ ತ್ಯಾಗಭಾವನೆಯನ್ನು ಅಂಕುರಿಸಿ, ಜನತೆಗೆ ದೈವೀವಿಚಾರಗಳನ್ನು ನೀಡಿ ಸುಖ ಮತ್ತು ಸಮೃದ್ಧಿಯ ಜೀವನವನ್ನು ಪ್ರದಾನಿಸಿದನು.’

ದೀಪಗಳ ಹಬ್ಬ ದೀಪಾವಳಿಯ ಬಗ್ಗೆ ಒಂದು ಕಿರು ಮಾಹಿತಿ.
ದೀಪಾವಳಿ - ಹೆಸರೇ ಹೇಳುವಂತೆ ದೀಪಗಳ ಸಮೂಹ.
ಮನೆಯ ತುಂಬ ಪ್ರಣತಿಗಳನ್ನು ಹಚ್ಚಿ ಅದರ ನಗುವಿನಲ್ಲಿನಾವು ನಗುತ್ತಾ ಸಂಭ್ರಮಿಸುವುದು."ದೀಪಯತಿ ಸ್ವಂ ಪರಚ ಇತಿ ದೀಪ:" - ತಾನು ಬೆಳಗಿ ಬೇರೆಯವರನ್ನು ಬೆಳಗಿಸುವ ಶಕ್ತಿದೀಪಕ್ಕಿದೆ.ತಮಸೋಮಾ ಜ್ಯೋತಿರ್ಗಮಯ ಎಂಬಮಾತಿನ ಅರ್ಥದಂತೆ ಅಜ್ಞಾನದ ಕತ್ತಲೆಯಿಂದ ಜ್ಞಾನದದಿಕ್ಕಿಗೆ ನಮ್ಮನ್ನು ಕೊಂಡೊಯ್ಯುವುದೇ ದೀಪ.ಅಂತರಂಗದಲ್ಲಿರುವ ಕತ್ತಲೆಯನ್ನೋಡಿಸಿ, ಬೆಳಕಿನಪ್ರಣತಿಯ ಹಚ್ಚಿ ದೀಪ ಬೆಳಗಿಸುವ ಮೂಲಕ ಮನೆ ಮನಬೆಳಗುವ ದಿವ್ಯ ಜ್ಯೋತಿಯ ಹಬ್ಬ ದೀಪಾವಳಿ... ಎಲ್ಲೆಲ್ಲೂಜ್ಞಾನ, ನಿರ್ಮಲ ಆನಂದ, ಶುದ್ಧ ಮನಸ್ಸಿನ ಪ್ರೀತಿಯಬೆಳಗಿಸುವ ಸಂಕೇತವಾಗಿ ಆಚರಿಸಲ್ಪಡುವ ಹಬ್ಬದೀಪಾವಳಿ.
ದೀಪಾವಳಿಯನ್ನು ಐದು ದಿನಗಳ ಹಬ್ಬವನ್ನಾಗಿ,ಸಾಂಪ್ರದಾಯಿಕವಾಗಿ ಆಚರಿಸುತ್ತೇವೆ.ಆಶ್ವಯುಜದಕೊನೆ ಮತ್ತು ಕಾರ್ತೀಕ ಮಾಸದ ಆರಂಭದ ದಿನಗಳಲ್ಲಿಅದ್ಧೂರಿಯ ಆಚರಣೆ... ತ್ರಯೋದಶಿ ಹಬ್ಬದ ಮೊದಲದಿನ.ದೀಪಾವಳಿ ಹಬ್ಬವನ್ನು ಶ್ರೀ ರಾಮಚಂದ್ರನುರಾವಣನನ್ನು ಸಂಹರಿಸಿ ಅಯೋಧ್ಯೆಗೆ ಬಂದದಿನವೆಂದೂ... ಶ್ರೀ ಕೃಷ್ಣನು ನರಕಾಸುರನನ್ನು ಕೊಂದದಿನವೆಂದೂ ಆಚರಿಸುತ್ತಾರೆ.
ದೀಪೇನ ಲೋಕಾನ್ ಜಯತಿ ದೀಪಸ್ತೇಜೋಮಯ:ಸ್ಮೃತ: |
ಚರುರ್ವರ್ಗಪ್ರದೋ ದೀಪಸ್ತಸ್ಮಾದ್ ದೀಪೈರ್ಯಜೇತ್ಪ್ರಿಯೇ ||
ತೇಜೋಮಯವಾದ ದೀಪವು ಧರ್ಮ, ಅರ್ಥ, ಕಾಮ,ಮೋಕ್ಷ ರೂಪವಾದ ಚರುರ್ವರ್ಗಪ್ರದವಾಗಿದೆ ಹಾಗೂದೀಪವನ್ನು ಬೆಳಗಿಸು ಎಂದು ಈ ಶ್ಲೋಕವು ಸಾರುತ್ತದೆ.
ನರಕ ಚತುರ್ದಶಿಯು ದೀಪಾವಳಿಯ ಪ್ರಮುಖ ದಿನ.ಅಂದು ವಿಶೇಷವಾಗಿ ಅಭ್ಯಂಜನ ಮಾಡುವುದನ್ನುಶಾಸ್ತ್ರವು ಹೇಳಿರುತ್ತದೆ.
ತೈಲೇ ಲಕ್ಷ್ಮೀರ್ಜಲೇ ಗಂಗಾ ದೀಪಾವಲ್ಯಾಂ ಚತುರ್ದಶಿ |
ಪ್ರಾತ: ಸ್ನಾನಂ ತು ಯ: ಕುರ್ಯಾದ್ಯಮಲೋಕಂ ನ ಪಶ್ಯತಿ||
ತೈಲದಲ್ಲಿ ಲಕ್ಷ್ಮೀದೇವಿಯೂ, ನೀರಿನಲ್ಲಿ ಗಂಗೆಯೂದೀಪಾವಳಿಯ ಚತುರ್ದಶಿಯಂದು ವಿಶೇಷವಾಗಿಸನ್ನಿಹಿತರಾಗಿರುತ್ತಾರೆ ಎಂದು ಶಾಸ್ತ್ರ ತಿಳಿಸುತ್ತದೆ. ಅಂದುಬೆಳಿಗ್ಗೆ ಸುಮಂಗಲೆಯರಿಂದ ತೈಲವನ್ನು ಹಚ್ಚಿಸಿಕೊಂಡುಆರತಿ ಮಾಡಿಸಿಕೊಳ್ಳುವುದು ನಂತರ ಅಭ್ಯಂಜನವನ್ನುಮಾಡುವುದು ಈ ಹಬ್ಬದ ಪ್ರಮುಖ ಅಂಗ. ಅಭ್ಯಂಗನಸ್ನಾನದ ನಂತರ ಹೊಸ ಬಟ್ಟೆ ಧರಿಸಿ, ಮನೆಯ ಹಿರಿಯರಿಗೆನಮಸ್ಕರಿಸಿ, ಸಿಹಿ ತಿಂದು ಪಟಾಕೆ ಹಚ್ಚುತ್ತಾರೆ ಮಕ್ಕಳು.....ಅಷ್ಟೇ ಅಲ್ಲದೆ ಅಂದು ನರಕಾಸುರನ ಸಂಹಾರ ಮಾಡಿಬಂದ ಕೃಷ್ಣನಿಗೆ ಸುಮಂಗಲೆಯರು ಆರತಿ ಬೆಳಗುತ್ತಾರೆ.ಆಪದ್ಧತಿಯಂತೆ ಇಂದಿಗೂ ಆರತಿಮಾಡುವುದು ಸಂಪ್ರದಾಯದಂತೆ ಬೆಳೆದು ಬಂದಿದೆ.
ಮೂರನೆಯ ದಿನ ಸಾಯಂಕಾಲ ಅಮಾವಾಸ್ಯೆಯಂದುರಾತ್ರಿ ಮನೆಯಲ್ಲಿನ ಅಲಕ್ಷ್ಮಿಯನ್ನು ಹೊರಹಾಕುವಉದ್ದೇಶದಿಂದ ಲಕ್ಷ್ಮೀ ಪೂಜೆಯನ್ನುಮಾಡಿ,
ಮನೆಯತುಂಬಾ ದೀಪವನ್ನು ಬೆಳಗಬೇಕೆಂದು ಕೂಡ ಶಾಸ್ತ್ರ ತಿಳಿಸುತ್ತದೆ. ಈ ದಿನ ತುಂಬಾ ಪ್ರಶಸ್ತವಾದ ದಿನಲಕ್ಷ್ಮೀ ಪೂಜೆಗೆ. ಇದು ಶ್ರೀ ಕೃಷ್ಣನು ದೇಹತ್ಯಾಗ ಮಾಡಿದದಿನವೆಂದೂ , ನಚೀಕೇತನಿಗೆ ಆತ್ಮ ಸಾಕ್ಷಾತ್ಕಾರವಾದದಿನವೆಂದೂ ಹೇಳುತ್ತಾರೆ.
ನಾಲ್ಕನೆಯ ದಿನವನ್ನು ಬಲಿ ಪಾಡ್ಯಮಿ ಎಂದುಕರೆಯುತ್ತಾರೆ. ವಿಷ್ಣು ಪುರಾಣದ ಪ್ರಕಾರ ಶ್ರೀ ಕೃಷ್ಣನುಗೋವರ್ಧನಗಿರಿಯನ್ನು ಎತ್ತಿದ್ದು ಇದೇ ದಿನವಂತೆ.ಆದ್ದರಿಂದ ಈ ದಿನ ಗೋಪೂಜೆ ಹಾಗೂ ಗೋವರ್ಧನನಪೂಜೆಗೆ ಮಹತ್ವ. ಮನೆಯಲ್ಲಿನ ಎತ್ತುಗಳಿಗೂ ಪೂಜೆ.ಸ್ನಾನ ಮಾಡಿಸಿ, ಅರಿಸಿನ ಕುಂಕುಮ ಹಚ್ಚಿ, ಕೊಂಬಿಗೆಸೇವಂತಿಗೆ, ಚಂಡು ಹೂಗಳನ್ನು ಸುತ್ತಿ ಪೂಜಿಸುತ್ತಾರೆ.ಎತ್ತುಗಳಮೆರವಣಿಗೆ ಕೂಡ ಮಾಡುತ್ತಾರೆ ಗದ್ದೆಗಳಲ್ಲಿ, ಹೊಲಗಳಲ್ಲಿ ಧಾನ್ಯಲಕ್ಷ್ಮಿಯ ಪೂಜೆಯನ್ನೂ ಮಾಡುತ್ತಾರೆ. ಹಾಗೇ ಈದಿನ ಮಹಾಬಲಿ ಭೂಮಿಗೆ ಬರುತ್ತಾನೆಂಬುದೂ ಒಂದುನಂಬಿಕೆ. ಹೊಲ, ಗದ್ದೆಗಳಲ್ಲಿ ಬಲೀಂದ್ರನ ಸ್ಮರಣಾರ್ಥದೀಪಗಳನ್ನು ಕೂಡ ಹಚ್ಚಿಡುತ್ತಾರೆ.
ಐದನೆಯ ದಿನವನ್ನು ಯಮ ದ್ವಿತೀಯ ಅಥವಾ ಭ್ರಾತೃದ್ವಿತೀಯಾ ಎಂದು ಆಚರಿಸುತ್ತಾರೆ.ಈ ದಿನ ಯಮ ತನ್ನತಂಗಿ ಯಮಿಯ ಮನೆಗೆ ಭೇಟಿ ಕೊಡುತ್ತಾನೆಂಬ ನಂಬಿಕೆ.ತಂಗಿ ಅಣ್ಣನಿಗೆ ತಿಲಕವಿಟ್ಟು, ಸಿಹಿ ತಿನ್ನಿಸಿ, ಆರತಿಎತ್ತುತ್ತಾಳೆಂಬ ಪ್ರತೀತಿ.
ಈ ರೀತಿ ನಮ್ಮ ಸಂಸ್ಕೃತಿಯ ಸೊಬಗನ್ನು ನಾವು ಅರಿತುಶ್ರದ್ಧೆಯಿಂದ ಆಚರಿಸಿದರೆ ಈ ಸಡಗರದ-ಸಂಭ್ರಮದಹಬ್ಬಗಳು ಅರ್ಥಪೂರ್ಣವೆನಿಸುತ್ತವೆ ಮತ್ತು ಸಂಭ್ರಮದ,ಸಡಗರದ ವಾತಾವರಣ ಮನೆಯಲ್ಲಿ ಧನಾತ್ಮಕತರಂಗಗಳನ್ನು ಆಹ್ವಾನಿಸುತ್ತದೆ.
ಸರ್ವಜನ ಸುಖಿನೋಭವಂತು. 🙏

ತುಳಸಿ ಹಬ್ಬ (ವೃಂದಾವನ ಹಬ್ಬ) ಕಿರು ದೀಪಾವಳಿಯಉತ್ಥಾನ ದ್ವಾದಶೀ.
ದೀಪಾವಳಿ ಹಬ್ಬ ಮುಗಿದು ಆಚರಿಸುವ ಹಬ್ಬವೇ ತುಳಸಿ ಹಬ್ಬ ಅಥವಾ ಕಿರು ದೀಪಾವಳಿಯ ಹಬ್ಬ.
ಪೌರಾಣಿಕ ಕಥೆ:
ತುಳಸಿ ವಿವಾಹದ ಹಿಂದೆ ದೀರ್ಘವಾದ ಪುರಾಣ ಕಥೆಯಿದೆ. ಹಿಂದೂ ಪುರಾಣದ ಪ್ರಕಾರ ವೃಂದಾ ಎಂಬ ಹೆಸರಿನ ಯುವತಿಯೇ ತುಳಸಿಯಾಗಿ ಗಿಡದ ರೂಪ ಪಡೆದಿರುವುದು. ಈಕೆ ಜಲಂಧರನೆಂಬ ದುಷ್ಟ ರಾಜನನ್ನು ಮದುವೆಯಾಗಿರುತ್ತಾಳೆ. ಅವಳಿಗೆ ಮಹಾವಿಷ್ಣುವಿನ ಮೇಲೆ ವಿಶೇಷ ಭಕ್ತಿ. ಇದು ಜಲಂಧರನಿಗೆ ಇಷ್ಟವಿರುವುದಿಲ್ಲ. ಆತ ದೇವತೆಗಳಿಗೆ ಉಪಟಳ ನೀಡುತ್ತಿರುತ್ತಾನೆ. ಶವನು ಏನು ಮಾಡುವುದೆಂದು ವಿಷ್ಣುವಿನ ಮೊರೆ ಹೋಗುತ್ತಾನೆ.
ಆಗ ವಿಷ್ಣುವು ಜಲಂಧರನ ರೂಪ ತಾಳಿ ವೃಂದಾಳ ಬಳಿಗೆ ಬಂದು ಮೋಹಿಸಿ ಆಕೆಯ ಪಾವಿತ್ರ್ಯತೆಗೆ ಧಕ್ಕೆ ತರುತ್ತಾನೆ. ಈ ಸಂದರ್ಭದಲ್ಲಿ ಶಿವನು ಜಲಂಧರ ರಾಜನನ್ನು ಸಂಹರಿಸುತ್ತಾನೆ. ಇತ್ತ ತನ್ನ ಚಾರಿತ್ರ್ಯಕ್ಕೆ ಧಕ್ಕೆ ತರುವ ವಿಷ್ಣುವಿಗೆ ವೃಂದಾ ಕಪ್ಪು ಕಲ್ಲಾಗಿ ಹೋಗು ಎಂದು ಶಾಪ ನೀಡುವಳಲ್ಲದೆ ನಿನಗೆ ಪತ್ನಿಯ ವಿರಹವುಂಟಾಗಲಿ ಎಂದು ಆಶಿಸುತ್ತಾಳೆ.
ಇದರಿಂದ ರಾಮಾಯಣದಲ್ಲಿ ವಿಷ್ಣುವಿನ ಅವತಾರ ರಾಮನಿಗೆ ಸೀತೆಯು ಕಾಡಿನಲ್ಲಿ ಕೆಲವು ವರ್ಷಗಳ ಕಾಲ ದೂರವಾಗುತ್ತಾಳೆ. ತನ್ನ ಚಾರಿತ್ರ್ಯಕ್ಕೆ ಧಕ್ಕೆಯುಂಟಾದುದರಿಂದ ವೃಂದಾ ಪತಿಯ ಚಿತೆಗೆ ಹಾರಿ ಸಾವಿಗೀಡಾಗುತ್ತಾಳೆ. ವಿಷ್ಣುವು ಆಕೆಯ ಆತ್ಮವನ್ನು ತುಳಸಿ ಗಿಡವಾಗಿ ಪರಿವರ್ತಿಸಿ ಮುಂದಿನ ಜನ್ಮದಲ್ಲಿ ಸಾಲಿಗ್ರಾಮವಾಗಿ ಪ್ರಭೋದಿನಿ ಏಕಾದಶಿಯ ದಿನ ತುಳಸಿಯನ್ನು ಮದುವೆಯಾಗುತ್ತಾನೆ ಎಂಬ ಕಥೆಯಿದೆ.
ಇದರ ಸಂಕೇತವೇ ವಿಷ್ಣು-ತುಳಸಿ ವಿವಾಹವಾದರು ಎಂದು ಪುರಾಣ ಕಥೆ ಇದೆ.
ಇನ್ನೊಂದು ಪುರಾಣದ ಪ್ರಕಾರ ದೇವತೆಗಳೂ, ದಾನವರೂ ಕ್ಷೀರಸಾಗರವನ್ನು ಕಡೆದಾಗ ಕೊನೆಯಲ್ಲಿ ಅಮೃತ ಬಂತು. ಅದನ್ನು ಕೈಗೆ ತೆಗೆದುಕೊಂಡ ವಿಷ್ಣುವಿನ ಕಣ್ಣುಗಳಿಂದ ಬಂದ ಆನಂದಬಾಷ್ಪಗಳು ಕಲಶದಲ್ಲಿ ಬಿದ್ದು ಅದರಿಂದ ಒಂದು ಸಣ್ಣ ಗಿಡ ಹುಟ್ಟಿತು. ತುಳಸಿ ಎಂದು ಹೆಸರಿಟ್ಟು ಲಕ್ಷ್ಮಿಯೊಂದಿಗೆ ತುಳಸಿಯನ್ನು ವಿಷ್ಣುವು ಮದುವೆಯಾದನು ಎಂದು ಹಿಂದೂ ಧರ್ಮದ ಒಂದು ನಂಬಿಕೆ ಇದೆ ರೀತಿಯಲ್ಲಿ ಕೆಲವು ಧಾರ್ಮಿಕ ಕಥೆಗಳ ಪ್ರಕಾರ,'ಉತ್ಥಾನ' ಎಂದರೆ 'ಏಳುವುದು-ಜಾಗೃತಿ.
ಶ್ರೀಮನ್ನಾರಾಯಣನು ತನ್ನ ನಿದ್ರಾಮುದ್ರೆಯನ್ನು ಬಿಟ್ಟು ಎಚ್ಚರಿಕೆ ಹೊಂದುವ ಮುದ್ರೆಯನ್ನು ಭಕ್ತರಿಗೆ ತೋರಿಸುವ ದ್ವಾದಶಿ ತಿಥಿಯ ದಿನವಾದ್ದರಿಂದ ಇದನ್ನು ಉತ್ಥಾನ ದ್ವಾದಶಿ ಎನ್ನುವರು.ಉತ್ಥಾನ ದ್ವಾದಶಿಯ ದಿನ ವಿಷ್ಣುವಿನ ಪೂಜೆ ಹಾಗೂ ವಿಷ್ಣುವಿನೊಡನೆ ಧಾತ್ರೀ (ನೆಲ್ಲಿ ಗಿಡ) ಸಹಿತವಾದ ತುಳಸಿ ಗಿಡ ನೆಟ್ಟು ಪೂಜಿಸುತ್ತಾರೆ.ದೀಪಗಳಿಂದ ಬೃಂದಾವನವನ್ನು ಅಲಂಕರಿಸುತ್ತಾರೆ.ಸಂಜೆ ನೆರೆಕೆರೆಯ ಸ್ತ್ರೀಯರಿಗೆ ಅರಿಶಿನ ಕುಂಕುಮವನ್ನು ಪ್ರಸಾದವಾಗಿ ಹಂಚುತ್ತಾರೆ.ಹಾಗೂ ಹೊಸದಾಗಿ ಮದುವೆ ಆದ ಹೆಣ್ಣು ಮಕ್ಕಳಿಗೆ ಬಾಗಿನ ಕೊಡಿಸುವ ಪವಿತ್ರ ದಿನವೂ ಎಂದು ನಂಬಿಕೆ.ಸಾಮಾನ್ಯವಾಗಿ ಪ್ರತಿ ಹಿಂದು ಧರ್ಮೀಯರ ಮನೆಯ ಅಂಗಳದಲ್ಲಿಯೂ ಕಾಣಸಿಗುವ ತುಳಸಿ ಪವಿತ್ರ ಗಿಡ. ತುಳಸಿಯನ್ನು ಸಾವಿರಾರು ವರ್ಷಗಳಿಂದ ಪೂಜಿಸುತ್ತಾ ಬಂದಿದ್ದೇವೆ.
ಈ ಹಬ್ಬದಂದು ನೆಲ್ಲಿಕಾಯಿಯ ಗೆಲ್ಲನ್ನು ತುಳಸಿ ಬೃಂದಾವನದಲ್ಲಿ ನೆಟ್ಟು, ನೆಲ್ಲಿಕಾಯಿಯಿಂದಲೇ ಸಂಜೆ ಆರತಿ ಬೆಳಗುವುದು ವಿಶೇಷ. ನೆಲ್ಲಿಕಾಯಿಗೆ ಧಾತ್ರಿ ಎನ್ನುತ್ತಾರೆ. ತುಳಸಿ ಎಲ್ಲಿದೆಯೋ ಅಲ್ಲಿ ಹರಿ ಸಾನಿಧ್ಯವಿದೆ.ಹೀಗಾಗಿ ಶ್ರೀಹರಿಯ ಜತೆ ಲಕ್ಮ್ಷೀಯನ್ನು ಪೂಜಿಸುವ ಉದ್ದೇಶದಿಂದ ನೆಲ್ಲಿಯ ಜಲ್ಲನ್ನು ತುಳಸಿಯ ಜತೆ ನೆಡುತ್ತಾರೆ.
ದಿನದ ಪೂಜೆಗಳಲ್ಲೂ ಶ್ರೇಷ್ಠವಾದದ್ದು ತುಳಸಿ ಪೂಜೆ. ಸಂಸ್ಕೃತದಲ್ಲಿ 'ತುಳಸಿ ಸುಲಭಾ, ಸುರನಾ, ಬಹುಮಂಜರಿ, ಶೂಲಕ್ಮ್ಷೀ, ದೇವ ದುಂದುಬಿ, ಪಾವನೀ ವಿಷ್ಣು ಪ್ರಿಯಾ, ದಿವ್ಯ, ಭಾರತೀ'-ಹೀಗೆ ಮುಂತಾದ ಹೆಸರುಗಳಿಂದ ಕರೆಸಿಕೊಳ್ಳುವ ತುಳಸಿ ಸರ್ವರೋಗ ನಿವಾರಕ.ಎಲೆ, ಬೇರು, ಬೀಜ ಹಾಗೂ ಸಂಪೂರ್ಣ ಗಿಡವೇ ಉಪಯುಕ್ತ. ತುಳಸಿಯ ಸುತ್ತಮುತ್ತಲಿನ ಗಾಳಿಯನ್ನು ಪರಿಶುದ್ಧಗೊಳಿಸುವ ಶಕ್ತಿ ಹೊಂದಿದೆ.ತುಳಸಿಯ ವಿಶಿಷ್ಟ ಸುವಾಸನೆಯು ಕ್ರಿಮಿ, ಕೀಟ, ರೋಗಾಣುಗಳನ್ನು ದೂರವಿಡುತ್ತದೆ. ಆದ್ದರಿಂದ ತುಳಸಿ ಗಿಡಗಳು ಮನೆಯ ಸುತ್ತಮುತ್ತಲೂ ಇದ್ದರೆ ಸೊಲ್ಳೆ ಕಾಟ ಕಡಿಮೆಯಾಗುತ್ತದೆ.
ತುಳಸಿ ಎಲೆಗಳನ್ನು ನೀರಿನಲ್ಲಿ ಹಾಕಿಟ್ಟರೆ ಸೂಕ್ಷ್ಮ ರೋಗಾಣುಗಳು ನಾಶವಾಗುತ್ತದೆ.ಸುರ್ಯೋದಯಕ್ಕೆ ಮುನ್ನ ಅಂದರೆ ಬ್ರಾಹ್ಮಿ ಮೂಹರ್ತದಲ್ಲಿ ಇದರ ಸೇವನೆ ಹೆಚ್ಚು ಫಲಕಾರಿಯಾಗಿರುತ್ತದೆ. ತುಳಸಿಯು ಭಾರತೀಯರ ಪಾಲಿಗೆ ಸಂಜೀವಿನಿ.ಯಾವುದೇ ಪೂಜಾ ಸಮಯದಲ್ಲಿ ನೈವೇದ್ಯಕ್ಕೆ ತುಳಸಿ ದಳಗಳನ್ನು ಸೇರಿಸುವುದು ಇದರ ಪಾವಿತ್ರ್ಯಕ್ಕೆ ಸಾಕ್ಷಿ.ಕಾರ್ತಿಕ ಮಾಸದಲ್ಲಿ ಪ್ರತಿದಿನ ತುಳಸಿಯನ್ನು ಪೂಜಿಸಿ ನಮಸ್ಕರಿಸಿದರೆ ಒಂದು ಯುಗದಲ್ಲಿ ಮಾಡಿದ ಪಾಪದಿಂದ ಮುಕ್ತಿ ದೊರೆಯುತ್ತದೆ ಎಂಬ ನಂಬಿಕೆಯಿದೆ. ಇಂಥ ಪವಿತ್ರ ಹಾಗೂ ಔಷಧೀಯ ಗುಣಗಳನ್ನು ಹೊಂದಿದ ತುಳಸಿಯನ್ನು ಉತ್ಥಾನ ದ್ವಾದಶಿಯಂದು ವಿಶೇಷವಾಗಿ ಪೂಜೆ ಸಲ್ಲಿಸಿ ಧನ್ಯರಾಗಲು ಇದೊಂದು ಅವಕಾಶ.
ಏಳು ವಿಧ
ಸುಗಂಧ ದ್ರವ್ಯ ಸಸ್ಯ ತುಳಸಿಯಲ್ಲಿ ಏಳು ವಿಧಗಳಿವೆ.
ಅದರಲ್ಲಿ ಮುಖ್ಯವಾದುದು
ಶ್ರೀ ತುಳಸಿ,
ಕೃಷ್ಣ ತುಳಸಿ,
ರಾಮ ತುಳಸಿ.
ತುಳಸಿ ಗಿಡವನ್ನು ಮನೆಯಲ್ಲಿ ನೆಡುವಾಗ ಗಮನ ವಹಿಸಬೇಕಾದ ಪ್ರಮುಖ ಅಂಶಗಳು & ತುಳಸಿ ಗಿಡದ ಪ್ರಯೋಜನ
ಹಿಂದೂ ಧರ್ಮದಲ್ಲಿ ತುಳಸಿ ಪವಿತ್ರ ಸಸ್ಯ ಎಂಬ ನಂಬಿಕೆ ಇದೆ. ವಿಷ್ಣುವಿಗೆ ಪ್ರಿಯಾವಾದ ತುಳಸಿ ಗಿಡವನ್ನು ಭಾರತದಲ್ಲಿ ಬಹುತೇಕ ಪ್ರತಿ ಮನೆಗಳಲ್ಲೂ ಸಹ ಬೆಳೆಸಿ ಪೂಜೆ ಮಾಡುವ ಪದ್ಧತಿ ನಡೆದುಬಂದಿದೆ. ತುಳಸಿಯಲ್ಲಿರುವ ಅನೇಕ ಔಷಧೀಯ ಗುಣಗಳಿರುವುದೂ ಸಹ ಅದನ್ನು ಪೂಜನೀಯವಾಗಿ ಗುರುತಿಸಲು ಕಾರಣವಾಗಿದೆ. ಧಾರ್ಮಿಕ ಹಾಗೂ ಆರೋಗ್ಯದ ದೃಷ್ಟಿಯಿಂದ ಹಲವು ಮಹತ್ವಗಳನ್ನು ಹೊಂದಿರುವ ತುಳಸಿ ಗಿಡವನ್ನು ಮನೆಯಲ್ಲಿ ನೆಡುವಾಗ ಪ್ರಮುಖವಾಗಿ ಗಮನ ಹರಿಸಬೇಕಿರುವ ಕೆಲವೊಂದು ಸಂಗತಿಗಳ ಬಗ್ಗೆ ಮಾಹಿತಿ ಹೀಗಿವೆ. ಏಕಾದಶಿ ಹಾಗೂ ರವಿವಾರಗಳಂದು ತುಳಸಿ ಎಲೆಗಳನ್ನು ಕೀಳಬಾರದು ಎಂಬ ನಂಬಿಕೆ ಇದೆ. ಆದ್ದರಿಂದ ಆ ದಿನಗಳಲ್ಲಿ ತುಳಸಿಯ ಎಲೆಗಳನ್ನು ಕೀಳಬಾರದು ಎಂಬ ಅಂಶಗಳು ಗಮನದಲ್ಲಿರುವುದು ಉತ್ತಮ. ಒಣಗಿದ ತುಳಸಿ ಗಿಡಗಳನ್ನು ಇಟ್ಟುಕೊಳ್ಳುವುದು, ಸಾಮಾನ್ಯಗಿಡಗಳಂತೆ ಎಸೆಯುವುದು ಸೂಕ್ತವಲ್ಲ. ಅದನ್ನು ನೀರಿನಲ್ಲಿ ವಿಸರ್ಜಿಸುವುದು ಸೂಕ್ತ, ಅವಕಾಶ ಇದ್ದರೆ ನದಿಯಲ್ಲಿ ವಿಸರ್ಜಿಸಿದರೆ ಉತ್ತಮ ಎಂಬ ನಂಬಿಕೆ ಇದೆ.
ಒಣಗಿದ ತುಳಸಿ ಗಿಡವನ್ನು ವಿಸರ್ಜಿಸಿದ ನಂತರ ತಕ್ಷಣವೇ ಹೊಸ ಗಿಡವನ್ನು ನೆಡಬೇಕು. ತುಳಸಿ ಗಿಡದ ನಡುವೆ ಮುಳ್ಳಿನ ಗಿಡಗಳನ್ನು ಬೆಳೆಸುವುದನ್ನು ನಿಲ್ಲಿಸಿ, ಅದರ ಬದಲು ತುಳಸಿ ಗಿಡದ ನಡುವೆ ಹೂವಿನ ಗಿಡಗಳನ್ನು ಬೆಳೆಸಬಹುದು. ಇನ್ನು ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲಿಯೂ ಬೆಳಿಗ್ಗೆ ವೇಳೆ ತುಳಸಿ ಪೂಜೆ ನಡೆಯುತ್ತದೆ. ಬೆಳಿಗ್ಗೆ ಈ ರೀತಿಯಲ್ಲಿ ತುಳಸಿ ಪೂಜೆ ನಡೆಸುವುದರ ಹಿಂದೆ ವೈದ್ಯಕೀಯ ಕಾರಣವಿರಬಹುದು ಎಂದು ಊಹಿಸಲಾಗುತ್ತದೆ. ಅದೇನೆಂದರೆ ತುಳಸಿ ಗಿಡಕ್ಕೆ ಆಮ್ಲಜನಕ ಬಿಡುಗಡೆ ಮಾಡುವ ರೋಗ ನಿರೋಧಕ ಶಕ್ತಿ ಮತ್ತು ಔಷಧಿ ಗುಣಗಳಿವೆ. ಈ ಹಿನ್ನೆಲೆಯಲ್ಲಿ ತುಳಸಿಯ ಗಿಡಕ್ಕೆ ಬೆಳಿಗ್ಗೆ ಎದ್ದು ಪೂಜೆ ಸಲ್ಲಿಸುವುದರಿಂದ ಉಸಿರಾಟಕ್ಕೆ ಶುದ್ಧ ಗಾಳಿ ಸಿಗುತ್ತದೆ. ವಾಸ್ತು ಪ್ರಕಾರವೂ ತುಳಸಿ ಮಹತ್ವ ಪಡೆದುಕೊಂಡಿದ್ದು, ಉತ್ತರ ಹಾಗೂ ಈಶಾನ್ಯ ದಿಕ್ಕಿನಲ್ಲಿ ತುಳಸಿ ಗಿಡವನ್ನು ನೆಡುವುದರಿಂದ ಉತ್ತಮ ಫಲಗಳು ದೊರೆಯುತ್ತದೆ, ಋಣಾತ್ಮಕ ಶಕ್ತಿಗಳಿಂದ ರಕ್ಷಣೆ ಸಿಗುತ್ತದೆ ಎಂಬ ನಂಬಿಕೆ ಇದೆ. ಕೊನೆಯದಾಗಿ ಎಲ್ಲರಿಗೂ ತಿಳಿದಿರುವಂತೆ ದಿನ ಬೆಳಿಗ್ಗೆ 2-3 ತುಳಸಿ ಎಲೆಗಳನ್ನು ತಿನ್ನುವುದರಿಂದ ದೇಹದಲ್ಲಿನ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ.

ಮುಂದೆ - ಪ್ರಮುಖ ಸಾಹಿತಿಗಳು