ಹಂಪಿ ಹೇಮಕೂಟ ಶ್ರೀ ಗಾಯತ್ರಿ ಪೀಠದ ಐತಿಹಾಸಿಕ ಹಿನ್ನೆಲೆ
ದೇವಾಂಗರ ಅಸ್ತಿತ್ವವು ನಶಿಸುವ ಸಮಯ ಸುಮಾರು ಏಳು-ಎಂಟು ನೂರು ವರ್ಷಗಳ ಹಿಂದೆಯೇ ಬಂದೊದಗಿತ್ತು. ಅನ್ಯಮತಸ್ಥರು ಕೆಲವರು ದೇವಾಂಗ ಸಮಾಜದವರನ್ನು ಮತಾಂತರ ಗೊಳಿಸುವ ಕಾರ್ಯ ಕೈಗೊಂಡಾಗ ಗಂಗಾವತಿ ಗ್ರಾಮದ ಪೂಜ್ಯ ಶ್ರೀ ಫಣೆಗೌಡರೆಂಬ ದೇವಾಂಗ ಮಹಾಪುರುಷನು ನಿಜ ಧರ್ಮ ಪ್ರತಿಪಾದನೆಗಾಗಿ ವಿಜಯನಗರ ಸಾಮ್ರಾಟರ ಸನ್ನಿಧಿಯಲ್ಲಿ ದೇವಾಂಗರ ಆಚಾರ, ವಿಚಾರ, ವೈದಿಕ ಧರ್ಮದ ಶಾಸ್ತ್ರಸಮ್ಮತ ವೈದಿಕ ಧರ್ಮ ಪರಂಪರೆ ಯಿಂದ ನಡೆಯುತ್ತ ಬಂದಿದ್ದನ್ನು, ಅನ್ಯಮತ ಸೇರುವುದು ಅನುಚಿತ ವೆಂದೂ ಪ್ರತಿಪಾದಿಸಲಾಗಿ ಸಾಮ್ರಾಟರು ದೇವಾಂಗ ಧರ್ಮದ ಸನಾತನ ತತ್ವವನ್ನು ಶಾಸ್ತ್ರ ಸಮ್ಮತವಾಗಿ ವಿಶದೀಕರಿಸಬೇಕೆಂದು ರಾಜಾಜ್ಞೆ ಮಾಡಿದ ಮೇರೆಗೆ ಶ್ರೀ ಫಣೆ ಗೌಡರು ಅನೇಕ ಕಡೆಗೆ ಸಂಚರಿಸಿ ನಿದ್ರಾಹಾರ ತ್ಯಜಿಸಿ ಧ್ಯಾನ ಯೋಗದಲ್ಲಿರಲು ಗಂಗಾವತಿ ಗುಹೆಯಲ್ಲಿ ಶ್ರೀ ಮುದ್ದುಸಂಗ ಮಹಾಮುನಿವರ್ಯರು ಇರುವರೆಂದು ತಿಳಿದು ಅಲ್ಲಿಗೆ ತೆರಳಿದರು.
ಯತಿಗಳು ಯೋಗ ತ್ಯಜಿಸಿ ಶಕೆ 1293 ನೇ ಪರಿಧಾವಿ ನಾಮ ಸಂವತ್ಸರದ ಮಾರ್ಗ ಶಿರ ಶುದ್ಧ ಪಂಚಮಿ ಗುರುವಾರ ಶಿಷ್ಯ ಸಮೇತರಾಗಿ ಮಹಾನ್ ಪಂಡಿತರ ಮತ್ತು ವಿಖ್ಯಾತ ಶಾಸ್ತ್ರಜ್ಞರ ಸಮ್ಮುಖದಲ್ಲಿ ಸಾಮ್ರಾಟರ ಆಸ್ಥಾನದಲ್ಲಿ ಅನ್ಯಮತ ಪ್ರತಿಪಾದಕರನ್ನು , ತಮ್ಮ ಅಮೋಘವಾಣಿಯಿಂದ ದೇವಾಂಗರ ಆಚಾರ - ವಿಚಾರ ವೈದಿಕ ಧರ್ಮದ ಪರಂಪರೆಗಳನ್ನು ಧರ್ಮದ ಸನಾತನ ತತ್ವವನ್ನು ಮಾರ್ಮಿಕವಾಗಿ ಪ್ರತಿಪಾದಿಸಿ ಜಯಸಿದ್ದರಿಂದ ಆನೆಗೊಂದಿ ಸಾಮ್ರಾಟರಾದ ವೀರ ಪ್ರತಾಪ ಸಿಂಹರು ಸುಪ್ರೀತರಾಗಿ ಶ್ರೀ ಹಂಪಿ ಕ್ಷೇತ್ರದಲ್ಲಿ ಹೇಮಕೂಟ ಶ್ರೀ ಗಾಯತ್ರಿ ಪೀಠಕ್ಕೆ ದೇವಾಂಗ ಮಠವನ್ನು ಕಟ್ಟಡ ನಿರ್ಮಾಣ ಮಾಡಿಸಿಕೊಟ್ಟರು. ಶ್ರೀ ಮುದ್ದುಸಂಗ ಮಹಾ ಮುನಿಗಳು ಅಲ್ಲಿ ಶ್ರೀ ಗಾಯತ್ರೀ ಪೀಠ ಪ್ರತಿಷ್ಠಾಪಿಸಿ ಶ್ರೀ ಫಣೆಗೌಡ ವಂಶದ ನಾಗಾಭರಣ ಪ್ರಥಮ ಗೋತ್ರ ಮನುರ್ದೇವ ಮಹರ್ಷಿ ಋಕ್ ಶಾಖಾಧ್ಯಾಯಿ ಅಶ್ವಲಾಯನ ಸೂತ್ರ ಸದ್ಯೋಜಾತ ಪ್ರವರಗಳ ಬಾಲಕನಿಗೆ ದೀಕ್ಷೆ ಪ್ರಧಾನ ಮಾಡಿ " ಶ್ರೀ ಮುದ್ದುಸಂಗ ಮಹಾಮುನಿ " ಎಂಬ ತಮ್ಮ ಹೆಸರನ್ನು ಅಭಿದಾನ ಮಾಡಿ ಬ್ರಹ್ಮೋಪದೇಶ ಮಾಡಿ ಹಂಪಿ ಹೇಮಕೂಟ ಶ್ರೀ ಗಾಯತ್ರಿ ಪೀಠಾಧೀಶ್ವರರಾಗಿ ಮಾಡಿ ಆಶೀರ್ವದಿಸಿ, ಭೂಪತಿಯಿಂದ ತಕ್ಕ ವೃತ್ತಿ ಸ್ವಾಸ್ಥ್ಯದ ಶಾಸನ ಮಾಡಿಸಿ ಪುನಃ ತಪಸ್ಸಿಗೆ ಹೋದರು.
ಶ್ರೀ ಫಣಿಗೌಡ ವಂಶಸ್ಥರ ಗುರು ಪರಂಪರೆಯ ವಿವರಗಳನ್ನು ನಿಖರವಾಗಿ ಗುರುತಿಸಲು ಮಾಹಿತಿ ಸಂಗ್ರಹಿಸಬೇಕಾಗಿದೆ.ಲಭ್ಯ ಲೇಖನಗಳನ್ನು ಕ್ರೂಡೀಕರಿಸಿ ಪರಂಪರೆಯ ಪಟ್ಟಿ ಮಾಡಲಾಗಿದೆ. ಎಲ್ಲರೂ ಮುದ್ದುಸಂಗ ಮಹಾಮುನಿ ಎಂದೇ ಹೆಸರು ಹೊತ್ತು ಐದು ತಲೆಮಾರಿನವರಿಗೆ ಪರಂಪರೆ ಮುಂದುವರೆದಿದ್ದು, ಗಾಯತ್ರಿ ಪೀಠ ತೆರವಾಗಿತ್ತು ಎಂದು ಹೇಳಬಹುದಾಗಿದೆ. ೨ನೇ ಮುದ್ದುಸಂಗ ಮಹಾ ಮುನಿಗಳು ಕೊಪ್ಪಳ, ಮುದಕವಿ, ಹಲಗತ್ತಿ ಮತ್ತು ಹರಿಹರ ಶಾಖಾಮಠಗಳಿಗೆ ಶಾಸನ ಹೊರಡಿಸಿ, ಈ ಮಠಗಳವರು ಮೂಲ ಮಠದಿಂದ ಮಾತ್ರ ದೀಕ್ಷೆ ಪಡೆಯಲು ಸೂಚಿಸರುವುದು ಕಂಡುಬರುತ್ತದೆ. ೩ನೇ ಮುದ್ದುಸಂಗ ಮಹಾಮುನಿಗಳ ಕಾಲದಲ್ಲಿ ಕ್ರಿಶ. ೧೫೬೪ -೬೫ ರಲ್ಲಿ ವಿಜಯನಗರವು ಪತನವಾಯಿತು. ಇವರು ದೇಶ ಸಂಚಾರಕ್ಕೆ ಹೊರಟರೆಂದು ಪ್ರಸ್ತಾಪವಿದೆ. ಯಾವ ಕಾರಣಕ್ಕೆ ಸಂಚಾರ ಹೊರಟರು ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ.
೪ನೇ ಮುದ್ದುಸಂಗ ಮಹಾಮುನಿಗಳು ಶಾಖಾಮಠಧಿಕಾರಿಗಳ ಮಕ್ಕಳಿಗೆ ಉಪನಯನ ಮಾಡಿ ಸಂಸ್ಕಾರ ನೀಡುತಿದ್ದರು. ಮದುವೆ ಮುಂತಾದ ಶುಭಕಾರ್ಯಗಳಿಗೆ ಮಠಕ್ಕೆ ರುಸುಂ ಕೊಡಬೇಕೆಂದು ಶಾಸನ ಮಾಡಿದಂತೆ ಉಲ್ಲೇಖವಿದೆ. ಯಾವ ಯಾವ ಜಗದ್ಗುರುಗಳು ಯಾವ ಯಾವ ಇಸವಿಯಲ್ಲಿ ಪೀಠಾಧೀಶರಾದರು ಎಂಬುದರ ಬಗ್ಗೆ ನಿಖರವಾದ ಮಾಹಿತಿ ಸಿಕ್ಕಬೇಕಾಗಿದೆ. ವಿಜಯನಗರ ಸಾಮ್ರಾಜ್ಯ ಪತನದ ನಂತರ ದಾಳಿಗೊಳಗಾದ ಶ್ರೀ ಗಾಯತ್ರಿ ಪೀಠವನ್ನು ತೆರವು ಮಾಡಿ ಗುರುಪೀಠಸ್ಥರು ಬೇರೆಡೆಗೆ ಹೋದರು ಎಂಬ ಉಲ್ಲೆಖ ಕಂಡರೂ ಯಾವ ಇಸವಿಯಲ್ಲಿ ತೆರವಾಯಿತು ಎಂಬ ಚಾರಿತ್ರಿಕ ಅಂಶವು ಸಹಾ ಖಚಿತವಾಗಬೇಕಾಗಿದೆ. ತೆರವಾದ ಶ್ರೀ ಗಾಯತ್ರಿ ಪೀಠಕ್ಕೆ ಅಖಿಲ ಭಾರತ ಮಟ್ಟದಲ್ಲಿ ಸಮಾಜದವರು ಒಂದೇ ಸಮನೆ ನೇಮಕ ಪ್ರಯತ್ನ ನಡೆಸುತ್ತಾ ಹೋದರು.ವಿಫಲರಾಗುವದು, ಪ್ರಯತ್ನ ಮುಂದುವರಿಸುವುದು, ಹೀಗೆ ಮಡುತ್ತಾ ಅಂತಿಮವಾಗಿ ೧೯೯೦ ನೇ ಇಸವಿಯಲ್ಲಿ ಸಫಲರಾಗಿ ಶ್ರೀ ಶ್ರೀ ಶ್ರೀ ದಯಾನಂದಪುರಿ ಮಹಾಸ್ವಾಮಿಗಳವರನ್ನು ಪೀಠಾಧ್ಯಕ್ಷರನ್ನಾಗಿ ಮಾಡಿದರು. ಈ ಪರಂಪರೆಯನ್ನು ಮುಂದೆ ಕೊಡಲಾಗಿದೆ.