ಓಂ ಶ್ರೀ ದೇವಾಂಗ ಪರಬ್ರಹ್ಮನೇ ನಮಃ
ದೇವಾಂಗ ಲೋಕಕ್ಕೆ ಸುಸ್ವಾಗತ.
ದೇವಾಂಗ ಲೋಕಕ್ಕೆ ಸುಸ್ವಾಗತ.
"ದೇವಾಂಗ: ಪ್ರಥಮ: ಸೃಷ್ಟಿ : ಶಂಕರಸ್ಯ ಮಹಾತ್ಮನ;ವಿದ್ಯಾಧರೋ ದ್ವಾಪರದೌ; ಮದ್ಯೇ ಬೂತ್ ಪುಷ್ಪದಂತಕ;
ಅಂತ್ಯೆವತಾರೋ, ಬೇತಾಳ, ಕತಾವರರುಚಿ ಸ್ತತಾ;ಚಿತ್ರಯೋಗೀ, ದೇವಶಾಲಿ, ದೇವದಾಸೋಭಾವಂ ಸ್ತುತಂ:"
ಅಂತ್ಯೆವತಾರೋ, ಬೇತಾಳ, ಕತಾವರರುಚಿ ಸ್ತತಾ;ಚಿತ್ರಯೋಗೀ, ದೇವಶಾಲಿ, ದೇವದಾಸೋಭಾವಂ ಸ್ತುತಂ:"
ದೇವಾಂಗ ಲೋಕಕ್ಕೆ ಮಾಹಿತಿ ನೀಡಿದ ಶ್ರೀ ಗಾಯತ್ರಿ ಪೀಠ ಹೇಮಕೂಟ ಹಂಪಿ ಶ್ರೀ ಶ್ರೀ ಶ್ರೀ ದಯಾನಂದಪುರಿ ಸ್ವಾಮೀಜಿಯವರು
ಮತ್ತು ಮುದನೂರು ಸಂಸ್ಥಾಪಕರಾದ ಡಾ.ಈಶ್ವರಾನಂದ ಸ್ವಾಮೀಜಿಯವರಿಗೂ ಧನ್ಯವಾದಗಳು.
ಮತ್ತು ಮುದನೂರು ಸಂಸ್ಥಾಪಕರಾದ ಡಾ.ಈಶ್ವರಾನಂದ ಸ್ವಾಮೀಜಿಯವರಿಗೂ ಧನ್ಯವಾದಗಳು.
ದೇವಾಂಗ ಲೋಕ ಮೊಟ್ಟ ಮೊದಲ ಭಾರಿ ಕನ್ನಡದಲ್ಲಿ
ಎಲ್ಲರ ಮನೆ ಮತ್ತು ಮನ ತಲುಪಲಿ
ಎಲ್ಲರ ಮನೆ ಮತ್ತು ಮನ ತಲುಪಲಿ
|
ತ್ರೈಲೋಕ್ಯದವರ ಮಾನ ರಕ್ಷಣೆಗೆ ವಸ್ತ್ರವಿಲ್ಲದಿರಲು, ಮತ್ತು ಜ್ಞಾನ ದೀಕ್ಷೆಗೆ, ಸೂತ್ರವಿಲ್ಲದಿರಲು, ಸಕಲ ಅನನ್ಯ ಪ್ರಾರ್ಥನೆಯ ಮೇರೆಗೆ, ಶಿವನಚಿಚ್ಚಕ್ತಿಯಿಂದ ಅವತರಿಸಿ, ಪ್ರಪಥಮವಾಗಿ ವಸ್ತ್ರ - ಸೂತ್ರ ನಿರ್ಮಿಸಿ ಕೊಟ್ಟು ಕರುಣಿಸಿದ
ಶ್ರೀ ದೇವಲ ( ದೇವಾಂಗ ) ಮಹರ್ಷಿಗಳ ವಂಶಜರೇ ದೇವಾಂಗರು
ಶ್ರೀ ದೇವಲ ( ದೇವಾಂಗ ) ಮಹರ್ಷಿಗಳ ವಂಶಜರೇ ದೇವಾಂಗರು
ದೇವಾಂಗ ಅಂದರೆ ದೇವರ ಒಂದು ಅಂಗ ಎಂದು ಅರ್ಥ. ದೇವರ ಅಂಗದಿಂದ ಬಂದವರು ದೇವಾಂಗರು. ಅದು ಹೆಮ್ಮೆ ಪಡುವ ವಿಷಯ. ದೇವಾಂಗರು, ದೇವ ಬ್ರಾಹ್ಮಣರಾಗಿದ್ದಾರೆ. ಹಾಗಾದರೆ ನಾವು ಯಾರು?ನಮ್ಮ ದೇವಾಂಗದ ಮೂಲ ಗುರು ಯಾರು? ಅವರ ಮಹತ್ವ ಏನು? ನಮ್ಮ ಪೀಠ ಯಾವುದು? ನಮ್ಮ ಸಂಸ್ಕೃತಿ, ಆಚಾರ, ವಿಚಾರ, ಸಂಪ್ರದಾಯ, ಇತಿಹಾಸ ಏನು ? ಎಂದು ತಿಳಿದುಕೊಳ್ಳುವುದು ನಮ್ಮ ಆದ್ಯ ಕರ್ತವ್ಯ.
ದೇವಾಂಗ ಸಮಾಜದ ಹಿತದೃಷ್ಟಿಯಿಂದ ಹಾಗು ಎಲ್ಲರ ಮನೆ ಮತ್ತು ಮನದಲ್ಲಿ ಮೂಲ ಪುರುಷನ ಮಹತ್ಕಾರ್ಯ ಹಾಗು ಅವರ ಮಾರ್ಗದರ್ಶನ ಅಳವಡಿಸಿ ಕೊಂಡರೆ ನಮ್ಮ ಜೀವನ ಸಾರ್ಥಕ. ದೇವಾಂಗ ಲೋಕದಲ್ಲಿ, ದೇವಾಂಗರ ಮೂಲ ಗುರು, ದೇವಾಂಗ ಪುರಾಣ, ಗಾಯತ್ರಿ ಪೀಠದ ಗುರು ಪರಂಪರೆ. ಮೂಲ ಪುರುಷನ ಏಳು ಅವತಾರಗಳು, ಕುಲಗುರು, ಆದ್ಯ ವಚನಕಾರ, ಸಂಸ್ಕೃತಿ, ಆಚಾರ, ವಿಚಾರ,ಇತಿಹಾಸ,ಸಂಪ್ರದಾಯ, ಜವಾಬ್ದಾರಿ ಎಲ್ಲವನ್ನು ಈ ಲೋಕದಲ್ಲಿ ಕಾಣಬಹುದು.
ಹಾಗೇ ನಮ್ಮಜವಾಬ್ದಾರಿ ಏನು? ನಮ್ಮ ಕರ್ತವ್ಯ ಏನು? ಸಮಾಜಕ್ಕೆ ನಾವು ಏನು ಮಾಡಬೇಕು? ಅವರು ದಾರಿ ತೋರಿಸಿದ ಜೀವನ ಮತ್ತು ಮಾರ್ಗದರ್ಶನ ವನ್ನು ಕಾಪಾಡಿಕೊಳ್ಳುವುದು ಹೇಗೆ? ಅದನ್ನು ಬೆಳೆಸಿ ಉಳಿಸಿ ಕೊಂಡು ಹೋಗುವುದು ಹೇಗೆ? ಎಂದು ಚಿಂತನೆ ಮಾಡಿ ಅದನ್ನು ಕಾರ್ಯರೂಪಕ್ಕೆ ತರುವ ಹೊಣೆ ದೇವಾಂಗರದ್ದಾಗಿದೆ.
ದೇವಾಂಗ ಬಂಧುಗಳೇ, ದೇವಾಂಗರ ಮಾಹಿತಿ , ಲೇಖನ, ವಚನ, ಕಥೆ, ಕವನ, ಪತ್ರಿಕೆ, ಸಂಗೀತ, ನಾಟಕರಂಗ, ಗಾಯಕ, ಗಾಯಕಿ ಪ್ರಸಿದ್ಧ
ದೇವಾಂಗ ಕಲಾವಿದರು ನಿಮಗೆ ಗೊತ್ತಿದ್ದರೆ ಹಾಗು ನಿಮ್ಮ ಲೇಖನಗಳನ್ನು - Contact Us ಗೆ ಕಳಿಸಿ.
ದೇವಾಂಗ ಕಲಾವಿದರು ನಿಮಗೆ ಗೊತ್ತಿದ್ದರೆ ಹಾಗು ನಿಮ್ಮ ಲೇಖನಗಳನ್ನು - Contact Us ಗೆ ಕಳಿಸಿ.