ಹಂಪಿ ಹೇಮಕೂಟ ಶ್ರೀ ಗಾಯತ್ರಿ ಪೀಠ ಮಹಾಸಂಸ್ಥಾನದ
ಪರಮಪೂಜ್ಯ ಶ್ರೀ ಶ್ರೀ ಶ್ರೀ ದಯಾನಂದಪುರಿ ಮಹಾಸ್ವಾಮೀಜಿಯವರು

ಓಂ ಭೂರ್ಭುವಸ್ವಃ ತತ್ಸವಿತುರ್ವರೇಣ್ಯಂ ಭರ್ಗೋದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್||
ಗಾಯತ್ರೀ ಮಂತ್ರ ಹಿಂದೂ ಧರ್ಮದ ಅತಿ ಶ್ರೇಷ್ಠ ಮಂತ್ರಗಳಲ್ಲೊಂದು. ಬ್ರಹ್ಮ ಪವಿತ್ರವಾದ ಸೂರ್ಯ ನಾರಾಯಣನಿಂದ ಉದ್ಭವಿಸಲ್ಪಟ್ಟ ಗಾಯತ್ರಿ ಮಂತ್ರ ಅತ್ಯಂತ ಪ್ರಭಾವಶಾಲಿಯಾದುದು. ಸೂರ್ಯ ದೇವರಿಗೆ ಸಂಬಂಧಿಸಿದ ಈ ಮಂತ್ರ ನಮ್ಮ ಋಷಿಮುನಿಗಳು ನಮಗೆ ಬಿಟ್ಟು ಹೋಗಿರುವ ನಮ್ಮ ಜನ್ಮವನ್ನು ನಾವೇ ಉದ್ಧಾರ ಮಾಡಿಕೊಳ್ಳಬಹುದಾದ ದಿವ್ಯಮಂತ್ರವಾಗಿದೆ ಎಂದರೆ ತಪ್ಪಾಗಲಾರದು.
ಬೆಳಕಿನ ಪ್ರತೀಕವಾದ ಸೂರ್ಯದೇವನಿಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತಾ “ನಮ್ಮ ಬುದ್ಧಿ ಮತ್ತು ಕರ್ಮಗಳು ಸದಾ ಉತ್ತಮ ಮಾರ್ಗದಲ್ಲಿ ನೆಲೆಗೊಳ್ಳುವಂತೆ ಪ್ರಚೋದಿಸು’ ಎಂದು ಪ್ರಾರ್ಥಿಸುವ ಮಹಾಮಂತ್ರವೇ ಗಾಯತ್ರಿಮಂತ್ರ. ಒಟ್ಟು 24 ಅಕ್ಷರಗಳನ್ನು ಒಳಗೊಂಡಿರುವ ಗಾಯತ್ರೀ ಮಂತ್ರವನ್ನು ನಿತ್ಯ ಜಪಿಸುವುದರಿಂದ ದೇಹದಲ್ಲಿರಿಸಿದ 24 ಗ್ರಂಥಿಗಳನ್ನು ಬಲಗೊಳಿಸುತ್ತದೆ.
ಪವಿತ್ರ ಗಾಯತ್ರಿ ಉಚ್ಚಾರದ ಮೊದಲಿಗೆ ಭೂಃ ಭುವಃ ಸ್ವಃ ಎಂಬ ವ್ಯಾಹೃತಿಗಳು ಚೈತನ್ಯರೂಪಿ ಆನಂದದ ಪ್ರತೀಕಗಳು.ಭೂಃ ಎಂದರೆ ಅಗ್ನಿ,ಭುವಃ ಎಂದರೆ ವಾಯು,ಸ್ವಃ ಎಂದರೆ ಆದಿತ್ಯ.ಈ ಮೂವರೂ ಕೂಡಿಕೊಂಡ ರೂಪ ಭಗವಾನ್ ಸೂರ್ಯನದು. ಸರ್ವಶಕ್ತಿರೂಪನ ಭಕ್ತಿಯುತ ಪೂಜೆಗೆ ಇದು ನಾಂದಿ.

ದೇವಾಂಗ ಮೂಲ ಪುರುಷ ಶ್ರೀ ದೇವಲ ಮಹರ್ಷಿ - ಆದ್ಯ ವಚನಕಾರ ದೇವರ ದಾಸಿಮಯ್ಯ
ದೇವಾಂಗ ಪುರಾಣ: ದೇವಾಂಗ, ಬ್ರಾಹ್ಮಣರ ಮೂಲವನ್ನು ಹೊಂದಿವೆ. ದೇವಾಂಗ ದೇವಲ ಮಹರ್ಷಿ ಎಂಬ ಋಷಿ ತಮ್ಮ ನೇಯ್ಗೆ ಸಂಪ್ರದಾಯದ ಉಗಮಸ್ಥಾನವಾಗಿದ್ದರಿಂದ, ದೇವಲ ಮಹರ್ಷಿಯೇ ನೇಯ್ಗೆಯ ಮೊದಲ ವ್ಯಕ್ತಿಯಾಗಿದ್ದಾರೆ. ಪರಶಿವನ ಹಣೆಗಣ್ಣಿನಿಂದ ಮಹರ್ಷಿ ಅವತರಿಸಿದರೆಂಬ ಪ್ರತೀತಿಯೂ ಇದ್ದ ಕಾರಣ 'ದೇವಾಂಗ' (ದೇವರ ಒಂದು ಅಂಗ) ಎಂದು ಕರೆಯಲ್ಪಡುತ್ತಾರೆ.ದೇವಾಂಗನು ವಿದ್ಯಾಧರ ,ಪುಷ್ಪದಂತ ಬೇತಾಳ, ವರರುಚಿ ,ಚಿತ್ರಯೋಗಿ, ದೇವಶಾಲಿಯಾಗಿ, ಕೊನೆಯ ಅವತಾರವೇ ದೇವರ ದಾಸಿಮಯ್ಯ. ಏಳು ಅವತಾರ ಪುರುಷರಿಗೆ ಮೂಲ ಪುರುಷ "ದೇವಾಂಗ"ನಾದನು. ಇಂದಿನ ದೇವಾಂಗ ಜನಾಂಗದ ಕುಲ ಗುರುವಾದವರು, ದೇವರ ದಾಸಿಮಯ್ಯ. ಚೌಡೇಶ್ವರಿ ತಾಯಿ ಈ ಸಮೂಹದ ಕುಲ ದೇವತೆ. ಈ ಮಹಾತ್ಮರು ಗಾಯತ್ರೀ ಮಂತ್ರದ ಉಪಾಸಕರಾಗಿ, ಅದರ ಮಹಿಮೆಯನ್ನು ಸಾರಿದರು. ಪ್ರತಿಯೊಬ್ಬ ಮಾನವನು, ಉತ್ತಮ ಸಂಸ್ಕೃತಿ, ಧರ್ಮ, ಆಚಾರವಾಗಿ ನಡೆಸಬೇಕೆಂಬ ಸಂದೇಶವನ್ನು ತಮ್ಮ ವಚನಗಳ ಮೂಲಕ ದಾಸಿಮಯ್ಯನವರು ಪ್ರಪಂಚಕ್ಕೆ ತಿಳಿಸಿ ಹೇಳಿದರು.
ಶ್ರೀ ಗಾಯತ್ರಿ ಪೀಠ :- ಸಮಸ್ತ ದೇವಾಂಗ ಸಮಾಜದ ವಿವಿಧ ಪಂಗಡಗಳಿಗೆಲ್ಲ " ಶ್ರೀ ಗಾಯತ್ರೀ ಪೀಠ "ವೆಂಬ ಹೆಸರಿನಲ್ಲಿ ಸ್ಥಾಪನೆಯಾಗಿರುವುದು ವಿಶ್ವದ ದೇವಾಂಗ ಸಮಾಜದ ಜನಾಂಗಕ್ಕೆ ಇದು ಹೆಮ್ಮೆಯ ಸಂಗತಿ. ಗಾಯತ್ರೀಯ (ಯಜ್ನೋಪವೀತ) ಸೃಷ್ಟಿಯ ಮೂಲ ಕಾರಣ ಗಾಯತ್ರೀಗೆ ತ್ರಿಪಾದಗಳನ್ನು (ಯಜ್ನೋಪವೀತದ ಮೂರು ಎಳೆಗಳು) ತಂತು ಸೂತ್ರಗಳನ್ನು ನೀಡಿ ವಿಶ್ವದಲ್ಲಿ ಸಂಸ್ಕೃತಿ ಸಂಸ್ಕಾರದ ವಿಧಿ ವಿಧಾನಗಳನ್ನು ಉದ್ಧರಿಸಿದವನು ದೇವಾಂಗನು. ದೇವಾಂಗ ಸಮಾಜದ ಹಂಪಿ ಹೇಮಕೂಟ ಶ್ರೀ ಗಾಯತ್ರಿ ಪೀಠ ಮಹಾ ಸಂಸ್ಥಾನ ಇತಿಹಾಸದ ಪ್ರಸಿದ್ಧ ದೇವಿಯಾಗಿ ಪೂಜಿಸಿ, ಶ್ರೀ ಗಾಯತ್ರೀ ಮಂತ್ರವನ್ನು ಜಪಿಸಿ ಕೊಂಡು ಬಂದಿರುವ ಜಗತ್ತಿನ ಮಹಾನ್ ಪೀಠ ಹಾಗೂ ಧಾರ್ಮಿಕ ಶಕ್ತಿ ಕೇಂದ್ರ, ಶ್ರೀ ಗಾಯತ್ರಿ ಪೀಠ ವಾಗಿದೆ.

ಹಂಪಿ ಹೇಮಕೂಟ ಶ್ರೀ ಗಾಯತ್ರಿ ಪೀಠ ಮಹಾಸಂಸ್ಥಾನ
ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾದ ಹಂಪಿ ಹೇಮಕೂಟ ಪುಣ್ಯ ಸ್ಥಾನದಲ್ಲಿರುವ ಶ್ರೀ ಗಾಯತ್ರೀ ಪೀಠವು ಅಖಿಲ ಭಾರತ (ಕನ್ನಾಕುಮಾರಿಯಿಂದ ಹಿಮಾಲಯ ದವರೆಗೆ (ಈಗ ಪ್ರಪಂಚದ ಎಲ್ಲ ಭಾಗಗಳಲ್ಲಿ) ನೆಲೆಸಿರುವ ಸಮಸ್ತ ದೇವಾಂಗ ಸಮಾಜದ ವಿವಿಧ ಪಂಗಡಗಳಿಗೆಲ್ಲ ಗುರು ಪೀಠ ಹಾಗೂ ಧಾರ್ಮಿಕ ಶಕ್ತಿ ಕೇಂದ್ರವಾಗಿದೆ. ಈ ವಿಶ್ವದಲ್ಲಿ ಅನೇಕ ಸಮಾಜದ ಜನಾಂಗದವರು ಗಾಯತ್ರೀ ಮಂತ್ರದ ಉಪಾಸನೆ ಮಾಡುತ್ತಿದ್ದು ಅನೇಕ ಜಗದ್ಗುರು ಪೀಠಗಳು ವಿವಿಧ ಹೆಸರಿನಲ್ಲಿ ಸ್ಥಾಪಿತರಾಗಿದ್ದರು.
" ಶ್ರೀ ಗಾಯತ್ರೀ ಪೀಠ "ವೆಂಬ ಹೆಸರಿನಲ್ಲಿ ಸ್ಥಾಪನೆಯಾಗಿರುವುದು ವಿಶ್ವದ ದೇವಾಂಗ ಸಮಾಜದ ಜನಾಂಗಕ್ಕೆ ಇದು ಹೆಮ್ಮೆಯ ಸಂಗತಿ. ಏಕೆಂದರೆ ಗಾಯತ್ರೀಯ (ಯಜ್ನೋಪವೀತ) ಸೃಷ್ಟಿಯ ಮೂಲ ಕಾರಣ ಗಾಯತ್ರೀಗೆ ತ್ರಿಪಾದಗಳನ್ನು (ಯಜ್ನೋಪವೀತದ ಮೂರು ಎಳೆಗಳು) ತಂತು ಸೂತ್ರಗಳನ್ನು ನೀಡಿ ವಿಶ್ವದಲ್ಲಿ ಸಂಸ್ಕೃತಿ ಸಂಸ್ಕಾರದ ವಿಧಿ ವಿಧಾನಗಳನ್ನು ಉದ್ಧರಿಸಿದವನು ದೇವಾಂಗನು. ದೇವಾಂಗ ಸಮಾಜದ ಹಂಪಿ ಹೇಮಕೂಟ ಶ್ರೀ ಗಾಯತ್ರಿ ಪೀಠ ಮಹಾ ಸಂಸ್ಥಾನದ ಇತಿಹಾಸ ಪ್ರಸಿದ್ಧ ದೇವಿಯಾಗಿ ಪೂಜಿಸಿ, ಶ್ರೀ ಗಾಯತ್ರೀ ಮಂತ್ರವನ್ನು ಜಪಿಸಿ ಕೊಂಡು ಬಂದಿರುವ ಜಗತ್ತಿನ ಮಹಾನ್ ಪೀಠವಾಗಿದೆ.

ಶ್ರೀ ಗಾಯತ್ರೀ ಪೀಠಕ್ಕೆ ದೇವಾಂಗ ಜನಾಂಗದವರ ಶ್ರೀ ಮುದ್ದುಸಂಗ ಮಹಾಮುನಿಗಳ ವಂಶಸ್ಥರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ದಯಾನಂದಪುರಿ ಮಹಾಸ್ವಾಮಿಗಳು ಪೀಠಾರೋಹಣರಾಗಿ ಭರತ ಖಂಡದ ಸಮಸ್ತ ದೇವಾಂಗ ಜನಾಂಗದವರ ಸರ್ವತೋಮುಖ ಏಳಿಗೆಗಾಗಿ ಶ್ರಮಿಸಿ ಪಕ್ಷ, ಪಂಗಡ, ಒಳಭೇದ ಮುಂತಾದವುಗಳನ್ನು ಮರೆತು ದೇವಾಂಗ ಸಮಾಜದ ಜನಾಂಗಕ್ಕೆ ದೊಡ್ಡ ಕನಸಿನ ದೂರ ದೃಷ್ಟಿ ಹಾಗೂ ಸಮಾಜದ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಮಸ್ತ ದೇವಾಂಗ ಸಮಾಜದ ಜನಾಂಗದವರು ಪಕ್ಷ, ಪಂಗಡ, ಒಳಭೇದ ಮುಂತಾದವುಗಳನ್ನು ಮರೆತು ಒಂದೇ ದೇವಾಂಗ ಜನಾಂಗದವರೆಂದು ಒಗ್ಗಟ್ಟಿನಿಂದ ಶ್ರೀ ಗಾಯತ್ರೀ ಪೀಠದ ಕೃಪೆಗೆ ಪಾತ್ರರಾಗಬೇಕೆಂದು ಪ್ರಾರ್ಥನೆ.