ದೇವಾಂಗ ದೇವಲ ಮಹರ್ಷಿ- ದೇವಾಂಗ ಪುರಾಣದ ಸಂಕ್ಷಿಪ್ತ ವಿವರ
ದೇವಾಂಗ ಧರ್ಮವು ಜಗತ್ತಿನಲ್ಲೇ ಅತ್ಯಂತ ಪ್ರಾಚೀನ ಧರ್ಮಗಳಲ್ಲಿ ಒಂದು. ಈ ಧರ್ಮದ ಮೂಲ ಪುರುಷ ದೇವಾಂಗ ದೇವಲ ಮಹರ್ಷಿ ದೇವಾಂಗನೇ ಪರಬ್ರಹ್ಮ ಸ್ವರೂಪ, ತ್ರಿಮೂರ್ತಿ ಸ್ವರೂಪ, ಸೃಷ್ಟಿ, ಸ್ಥಿತಿ, ಲಯ ಮತ್ತು ಕರ್ತೃ. ಈ ಜಗತ್ತಿನ ಉದ್ಧಾರಕ್ಕಾಗಿ ತಾನು ಸೃಷ್ಟಿಸಿದ ತ್ರಿಮೂರ್ತಿಗಳಲ್ಲೊಬ್ಬನಾದ ಶಿವನಲ್ಲಿ ತಾನೇ ಅವಿರ್ಭವಿಸಿ ದೇವಾಂಗನೆಂದು ಹೆಸರು ಪಡೆದವನು. ಆತನು ನಾಶರಹಿತನು, ಅವನ್ನು ಸದಾಕಾಲ ಜಗಜ್ಯೋತಿಯಾಗಿ ಪ್ರಕಾಶಿಸುವವನೂ, ಸೂತ್ರಾತ್ಮನೂ, ಸ್ವತಃ ಜನ್ಮಸಿದ್ಧ ಬ್ರಾಹ್ಮಣನೂ ಹೌದು. ಕರ್ಮಜನ್ಯ ಬ್ರಾಹ್ಮಣನಲ್ಲ. ದೇವಲನು ಪುರಾಣ ಪುರುಷನಲ್ಲದೆ ವೇದಪುರುಷನೂ ಆಗಿದ್ದಾನೆ. ಅವತಾರದ ಉದ್ದೇಶ ವಸ್ತ್ರ ನಿರ್ಮಾಣಕ್ಕೆ ಸೀಮಿತವಲ್ಲ. ದುಷ್ಟ ಶಿಕ್ಷಕನೂ ಶಿಷ್ಟ ರಕ್ಷಕನೂ ಆಗಿದ್ದಲ್ಲದೆ ದೇಶ ಧರ್ಮಗಳ ಸೇವಾ ತತ್ಪರನಾಗಿದ್ದ.
ವಸ್ತ್ರ ಸೃಷ್ಟಿಗೆ ಮೊದಲು ಎಲ್ಲಾ ಲೋಕದ ಜನತೆಯ ಮಾನ ಸಂರಕ್ಷಣೆ ಮಾಡಿಕೊಳ್ಳಲು ಹಾಗೂ ದೇಹವನ್ನು ವಾತಾವರಣದ ವೈಪರೀತ್ಯಗಳಿಂದ ರಕ್ಷಿಸಿಕೊಳ್ಳಲು ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ದೇಹ ಸಂರಕ್ಷಣಾ ಸಾಧನವನ್ನು ತಯಾರಿಸಿಕೊಳ್ಳುತ್ತಿದ್ದರು. ಮರದ ತೊಗಟೆ, ನಾರು ಬೇರು ಎಲೆಗಳನ್ನು ಧರಿಸುತ್ತಿದ್ದರು. ಮೃಗಗಳನ್ನು ಬೇಟೆಯಾಡಿ ಅವುಗಳ. ಚರ್ಮವನ್ನು ಧರಿಸುತ್ತಿದ್ದರು. ಇನ್ನೂ ಮುಂದುವರಿದವರು ಮರದ ತೊಗಟೆ, ನಾರು ಬೇರು ಎಲೆಗಳನ್ನು ನೀರಿನಲ್ಲಿ ನೆನೆಹಾಕಿ ಬೇಯಿಸಿ ಅದನ್ನು ಭಟ್ಟಿ ಇಳಸಿ ತೆಳುವಾದ ಹಾಳೆಗಳನ್ನಾಗಿ ಪರಿವರ್ತಿಸಿ ಪ್ರಕೃತಿ ಜನ್ಯ ಉಪದ್ರವ ಗಳಿಂದ ಶರೀರ ರಕ್ಷಣೆ ಮಾಡಿಕೊಳ್ಳತ್ತಿದ್ದರು. ಆ ಹಾಳೆಗಳು ತುಂಬಾ ಒರಟಾಗಿ ಇರುತ್ತಿದ್ದು ಅದರ ಮೂಲಕ ಗಾಳಿ ಬೆಳಕು ಶರೀರಕ್ಕೆ ತಾಕದೆ ಚರ್ಮರೋಗ ಇತ್ಯಾದಿ ಉಪದ್ರವಗಳಿಗೀಡಾಗಿ ಅನಾರೋಗ್ಯ ದಿಂದ ನರಳುತ್ತಿದ್ದರು. ಇದರಿಂದ ಬೇಸತ್ತ ಜನರು ಇನ್ನೂ ಸುಧಾರಣೆ ಮಾರ್ಗ ಗಳಿಗೆ ಸೃಷ್ಟಿಯಾದವನೇ ದೇವಾಂಗ ದೇವಲ ಮಹರ್ಷಿಯ ಅವತಾರ.
ದೇವಾಂಗ ಪುರಾಣಗಳಲ್ಲಿ ಉಕ್ತವಾದ ಬ್ರಹ್ಮಾದಿ ದೇವತೆಗಳು ಮಾನಸಂರಕ್ಷಣ ಸಾಧನವಿಲ್ಲದೆ ಲಜ್ಜೆಪಟ್ಟು ಕೈಲಾಸಪತಿಯಾದ ಪರಮೇಶ್ವರನಲ್ಲಿ ಶರಣು ಬಂದು ತಮ್ಮ ಮಾನಸಂರಕ್ಷಣೆಗೆ ಸಾಧನವೊಂದನ್ನು ದಯಪಾಲಿಸಬೇಕೆಂದು ಪ್ರಾರ್ಥಿಸಿದರು. ಆಗ ಶಿವಶಂಕರನು ಧ್ಯಾನಸಕ್ತನಾಗಿ ತನ್ನ ಸಹಸ್ರಾರು ಕಮಲದಲ್ಲಿ ಪ್ರತಿಷ್ಠಿತನಾದ ದೇವಾಂಗ ದೇವಲ ಪರಬ್ರಹ್ಮನ ಸೃಷ್ಟಿಸಲು ಮುಂದಾಗಿ ದೇವಾಂಗ ದೇವಲ ಪರಬ್ರಹ್ಮನು ತನ್ನನ್ನು ಸೃಷ್ಟಿಸಿದ ಕಾರಣವೇನೆಂದು ಈಶ್ವರನನ್ನು ಕೇಳಲಾಗಿ ಈಶ್ವರನು ದೇವತೆಗಳ ಸಂಕಷ್ಟಗಳನ್ನು ನಿವೇದಿಸಿದನು .ಆಗ ದೇವಾಂಗ ದೇವಲ ಪರಬ್ರಹ್ಮನು ಬಹಿರ್ಗೋಚರನಾಗಬೇಕೆಂದು ಸಂಕಲ್ಪಿಸಿ, ಯಜ್ಞಸೂತ್ರ, ವಸ್ತ್ರಗಳನ್ನು, ಯೋಗದಂಡ ಕಮಂಡಲಗಳನ್ನು ಗಂಧ ರುದ್ರಾಕ್ಷಿ ಮಾಲೆಗಳನ್ನು ಧರಿಸಿದವನಾಗಿ ಶಿವನ ಫಾಲನೇತ್ರ ದಿಂದ ಹೊರ ಬಂದವನೆ ದೇವಾಂಗ ದೇವಲ ಮಹರ್ಷಿ ( ಪರಶಿವನ ಮೂರನೇ ಕಣ್ಣಿನಿಂದ ಹೊರ ಹೊಮ್ಮಿ ಪ್ರಕಟವಾದವನೆ ದೇವಾಂಗನು.) ಇಂತಹ ಪರಮ ಪುಣ್ಯ ದಿನವೇ ಕಾರ್ತಿಕ ಉತ್ನಾನ ದ್ವಾದಶಿ .
ಈಶ್ವರನ ಮತ್ತು ದೇವತೆಗಳ ಮೊರೆಯನ್ನು ಆಲಿಸಿ ತನ್ನ ಇಚ್ಛಾಮಾತ್ರದಿಂದಲೇ ಸೂತ್ರ, ವಸ್ತ್ರಗಳನ್ನು ಸೃಷ್ಟಿಸಿ ವಿಶ್ವಕ್ಕೇಲ್ಲಾ ಯಜ್ಞಸೂತ್ರ , ವಸ್ತ್ರಗಳನ್ನು ದಯಾಪಾಲಿಸಿ, ಚತುರ್ದಶಭುವನ ಮಾನಸಂರಕ್ಷಕನೆಂದೂ , ದೇವಾಂಗ ದೇವಲ ನೆಂದೂ, ಬ್ರಾಹ್ಮಣ್ಯ ಪ್ರದಾಯಕನೆಂದೂ ಪ್ರಸಿದ್ಧನಾದನು. ದೇವಾಂಗನು ಈಶ್ವರನ ಆಜ್ಞೆಯಂತೆ ಆಮೋದಪುರ ಪಟ್ಟಣವನ್ನು ಪಾಲಿಸಲು ತೊಡಗಿದನು. ಅವನ ಆಳ್ವಿಕೆಯಲ್ಲಿ ರಾಜ್ಯವು ಸುಭಿಕ್ಷವಾಗಿತು. ಅವನು ಚತುರ್ದಶ ಭುವನಗಳಲ್ಲೂ ಸಂಚರಿಸಿ ದುಷ್ಟರನ್ನು ನಿಗ್ರಹಿಸಿ ದೇವಾನುದೇವತೆಗಳು ದೇವಾಂಗನ ಸಹಾಯ ಪಡೆಯುತ್ತಿದ್ದರು. ದೇವಾಂಗನು ವಸ್ತ್ರದ ನಿರ್ಮಾಣ ಕಾರ್ಯದಲ್ಲಿ ಮುಂದುವರಿದು ಸರ್ವಲೋಕಗಳಿಗೆ ಸಹಕಾರಿ ಆಗಲೀ ಎಂದು ವಸ್ತ್ರ ನಿರ್ಮಾಣ ಉಪಕರಣಗಳನ್ನು ಮಯನಿಂದ ಮಾಡಿಸಿ ವಸ್ತ್ರ ನಿರ್ಮಾಣ ಕಾರ್ಯ ಹಾಗೂ ಅವುಗಳ ಹಂಚಿಕೆಗಳನ್ನು ಯಥಾರ್ಥ ರೀತಿಯಾಗಿ ಮಾಡುತ್ತಾ ತ್ರಿಲೋಕಗಳಲ್ಲಿ ಸಂಚರಿಸುತ್ತಾ ಎಲ್ಲರಿಗೂ ವಸ್ತ್ರಗಳನ್ನು ಪ್ರಧಾನ ಮಾಡುತ್ತಿದ್ದನು.
ಇಷ್ಟೇ ಅಲ್ಲದೆ ಯಜ್ಞೋಪವೀತವನ್ನು ದೇವಾಂಗನು ನಿರ್ಮಿಸಿ ವಿಶೇಷ ಗೌರವಾದರ ಮನ್ನಣೆಗಳನ್ನು ಪಡೆದನು. ಯಜ್ಞೋಪವೀತವು ಮೂರು ತಂತುಗಳಿಂದ ಕೂಡಿರುವುದು. ಗಾಯತ್ರೀ ಛಂದಸ್ಸಿನ ಮೂರು ಪಾದಗಳುಳ್ಳದ್ದಾಗಿದೆ. ಅದರ ಸೂಚ್ಯಾರ್ಥವಾಗಿ ಧರಿಸುವ ಮೂರು ತಂತುಗಳ ಯಜ್ಞೋಪವೀತವು ಭಕ್ತಿ, ಜ್ಞಾನ, ಕರ್ಮಯೋಗಗಳ ಸಂಕೇತವಾಗಿದೆ. ಹೀಗೆ ಸೃಷ್ಟಿಕರ್ತ ದೇವಾಂಗನಾಗಿ ಪ್ರಥಮ ಬ್ರಾಹ್ಮಣನಾಗಿ ಬ್ರಾಹ್ಮಣರಿಗೂ ಬ್ರಾಹ್ಮಣನೆನಸಿ ಪ್ರಖ್ಯಾತಿ ಹೊಂದಿರುವನ್ನು ಹಾಗೆ ವಿಶ್ವಕರ್ಮನಿಗೆ ಜಗತ್ತಿನ ಅಳತೆಯನ್ನು ಮಾಡಲು ಈಶ್ವರನು ದೇವಾಂಗನಿಂದ ಸೂತ್ರವನ್ನು ಕೊಡಿಸಿದನೆಂದು ಪುರಾಣೋಕ್ತವಾಗಿದೆ.

ವಸ್ತ್ರ ನಿರ್ಮಾಣದ ಸಂಕ್ಷಿಪ್ತ ವಿವರ
ಶಿವ ಶಂಕರ ಪರಮೇಶ್ವರನ ಅನುಗ್ರಹದಿಂದ ಪ್ರಪಂಚದ ಸೃಷ್ಟಿಗಾಗಿ ಸ್ವಶಕ್ತಿಯನ್ನು ಸೃಷ್ಟಿಸಲಾಗಿ ಆ ಶಕ್ತಿಯ ರಜೋ ಅಂಶದಿಂದ ಬ್ರಹ್ಮಾ, ಸತ್ವಾಂಶದಿಂದ ಶ್ರೀ ವಿಷ್ಣು, ತಮೋ ಅಂಶದಿಂದ ರುದ್ರರು ಜನಿಸಿದರು ತ್ತಿಮೂರ್ತಿಗಳ ಪ್ರತೀತಿಗೆ ಮೂಲಕಾರಣಳಾದ ಜಗದಂಬೆಯ ಆಜ್ಞೆಯಂತೆ ಬ್ರಹ್ಮ ಸೃಷ್ಟಿಯಲ್ಲಿ ದೇವ, ಮಾನವ ಮತ್ತು ಎಲ್ಲರೂ ಸೂಕ್ತ ವಸ್ತ್ರಾದಿಗಳಿಲ್ಲದೆ ನಿರ್ವಾಣಾವಸ್ಥಯಲ್ಲಿದ್ದರು.ಈ ಕೊರತೆ ನೀಗಿಸಲು ಸೃಷ್ಟಿ ಕರ್ತನು ಪರಶಿವನನ್ನು ಪ್ರಾರ್ಥಿಸಿದನು , ಸೃಷ್ಟಿ ಕರ್ತನ ಪ್ರಾರ್ಥನೆಯಂತೆ
ಶಿವ ದೇಹ ಸ್ಥಿತ ಜ್ಯೋತಿಃ ಸೃಷ್ಠಿ ಸ್ಥಿತ್ಯಂತ ಹೇತುಕಂ!
ಪ್ರಾಪ್ಯ ದೇವಲ ರೂಪತ್ವಂ ಕರ್ತಾಭೂತ್ ಸೂತ್ರ ವಸ್ತ್ರಯೋಃ !!

ಓಂಕಾರ ಸ್ವರೂಪನಾದ , ಸೂತ್ರಾತ್ಮಕ ನೇಕಾರ ದೇವಾಂಗನು ಸಕಲ ಪ್ರಪಂಚದ ದೇವಾ, ಮಾನವರ , ಎಲ್ಲರ ಬ್ರಹ್ಮತ್ವ ಮತ್ತು ಮರ್ಯಾದೆಯನ್ನು ಕಾಪಾಡಲು ಕಾರ್ತಿಕ ಉತ್ನಾನ ದ್ವಾದಶಿಯ ಪುಣ್ಯ ದಿನದಲ್ಲಿ ಪರಶಿವನ ಮೂರನೇ ಕಣ್ಣಿನಿಂದ ಹೊರ ಹೊಮ್ಮಿ ಪ್ರಕಟವಾದವನೆ ದೇವಾಂಗನು. ಪರಶಿವನು ದೇವಲನನ್ನು ಕುರಿತು ಹೇ ದೇವಲನೇ ವೇದ ಪ್ರಾದುರ್ಭುವ ಕಾಲದಲ್ಲಿ ಉತ್ಪತ್ತಿಯಾದ ತಂತು ( ಹತ್ತಿಯ ) ಬೀಜಗಳು ಶ್ರೀ ವಿಷ್ಣುವಿನ ನಾಭಿಯಲ್ಲಿ ಅಡಕವಾಗಿವೆ. ಅವುಗಳನ್ನು ನೀನು ಪಡೆದು ತಂತು ನಿರ್ಮಾಣ-ವಸ್ತ್ರ ನಿರ್ಮಾಣ ಮಾಡಿ , ಎಲ್ಲರಿಗೂ ವಸ್ತ್ರಗಳನ್ನು ನೀಡಿ ಮಾನಮರ್ಯಾದೆಯನ್ನು ಕಾಪಾಡು ಎಂದು ಆಜ್ಞಾಪಿಸಿದನು.ಪರಶಿವನ ಹೇಳಿಕೆಯಂತೆ ಶ್ರೀ ವಿಷ್ಣುವಿನ ಬಳಿ ತೆರಳಿ ಶ್ರೀ ವಿಷ್ಣುವಿನ ನಾಭಿಕಮಲದ ತಂತುಗಳನ್ನೂ ಪಡೆದು ಬರುವ ಸಮಯದಲ್ಲಿ ಶ್ರೀಮನ್ನಾರಾಯಣನ ನಾಭಿಕಮಲೋತ್ಪತ್ತಿ ತಂತುಗಳನ್ನೂ ಆಸುರರು ( ರಾಕ್ಷಸರು ) ಅಪಹರಿಸಿದಾಗ ದೇವಲ ದೇವಾಂಗನು ಅಮ್ಮ ಎಂದು ತಾಯಿಯನ್ನು ಸ್ಮರಿಸಿದನು.
ಅಂದು ಜಗದಂಬೆಯದ ಪಾರ್ವತಿ ತಾಯಿಯು ಚಂದ್ರ ಚೌಡೇಶ್ವರಿ ದೇವಿಯ ಸ್ವರೂಪಳಾಗಿ ಬಂದು ರಾಕ್ಷಸರ ಸಂಹಾರ ಮಾಡಿ ಅ ರಾಕ್ಷಸರಿಂದದಾ ಸಪ್ತ ಬಣ್ಣಗಳನ್ನು ಬಳಸಿ ಬಣ್ಣ ಬಣ್ಣದ ವಸ್ತ್ರ ವಿನ್ಯಾಸ ಮಾಡಲು ಅನುಗ್ರಹ ಮಾಡಿದ ಶ್ರೇಷ್ಠ ದಿನವೇ ಆಷಾಢ ಮಾಸದ ಅಮಾವಾಸ್ಯೆಯ ದಿನ ಶ್ರೀ ದೇವಲ ದೇವಾಂಗನಿಗೆ ರಕ್ಷಣೆ ನೀಡಿ ಶ್ರೀ ವಿಷ್ಣುವಿನ ನಾಭಿಕಮಲದ ತಂತುಗಳನ್ನೂ ಪಡೆದು ದೇವಾಂಗನಿಗೆ ನೀಡಿ ಸದಾ ನೇಕಾರಿಕೆಯ ಪರವಾಗಿ ಇರುತ್ತೇನೆ ಎಂದು ಅಭಯ ನೀಡಿದ ಪುಣ್ಯ ದಿನ. ಶ್ರೀ ಉಗ್ರಸ್ವರೂಪಿ ಚಂದ್ರ ಚೌಡೇಶ್ವರಿ ದೇವಿಯ ಆಶೀರ್ವಾದ ಬಲದಿಂದ ವಸ್ತ್ರ ವಿನ್ಯಾಸ ನಿರ್ಮಾಣ ಪರಿಪಾಲನಾ ಕಾರ್ಯದಲ್ಲಿ ತೊಡಗಿ ಲೋಕಕ್ಕೆ ಕಲ್ಯಾಣಾರ್ಥ ಸಪ್ತ ಶಕ್ತಿಯುತ ಪೂರ್ಣ ಸ್ವರೂಪ ಶ್ರೀ ಚಂದ್ರ ಚೌಡೇಶ್ವರಿ ಅಮ್ಮನವರ ವರ ಪ್ರಸಾದದಿಂದ ವಿಶ್ವೋದ್ಧಾರ ಧರ್ಮ ಮಾರ್ಗವನ್ನು ಪ್ರಪಂಚಕ್ಕೆ ತೋರಿಸಿದನು. ಸರ್ವ ಲೋಕದ ಮರ್ಯಾದೆಯನ್ನು ಕಾಪಾಡುವ ವಸ್ತ್ರಗಳ ನಿರ್ಮಾಣ ಸತ್ಕಲೆಯ ನೈಪುಣ್ಯತೆಯನ್ನು ನೀಡಿದನು. ಚಂದ್ರ ಚೌಡೇಶ್ವರಿ ದೇವಿಯ ಅನುಗ್ರಹದಿಂದ ವಿಶ್ವ ಕರ್ಮಕ್ಕಾಗಿ ಬ್ರಹ್ಮತ್ವ ಪ್ರಾಪ್ತಿಗಾಗಿ ಬೇಕಾಗುವ ಸೂತ್ರಗಳನ್ನಿತ್ತು ಜಗದ್ಗುಗುರುವಾದನು.ಅದರಂತೆಯೇ ಶ್ರೀ ರಾಮಲಿಂಗ.

" ಶ್ರೀರಾಮಲಿಂಗಸ್ಯ ದೇವಸ್ಯ ಚೌಡೇಶ್ವರಾಶ್ಚ ಪೂಜನಾತ್ "
" ಸರ್ವಾನ್ ಕಾಮಾನ್ ಪಾಪ್ನುವಂತಿತ್ವ ದ್ವಂಶ್ಯಾ ನಾತ್ರಸಂಶಯಃ "

ಎಂಬ ವಾಕ್ಯದಂತೆ ಮೇಲೆ ಹೇಳಿದ ಚಂದ್ರ ಚೌಡೇಶ್ವರಿ ದೇವಿಯು ನೇಕಾರ ದೇವಾಂಗ ಕುಲಸ್ಥರಿಗೆ ಕುಲದೇವತೆಯಾಗಿ ಸರ್ವದುಃಖಗಳನ್ನು ನಿವಾರಣೆ ಗೊಳಿಸುತ್ತಿದ್ದರೂ , ಆ ಶಕ್ತಿಗೆ ಆಧಾರ ಅಧಿಷ್ಠಾನವಾದ ಪರಶಿವ ಚೈತನ್ಯವು ದೇವಾಂಗನ ( ದೇವಾಂಗ ದೇವಲ ಮಹಾಋರ್ಷಿ ) ಉದ್ಭವಕ್ಕೆ ಮೂಲವಾದ ಪ್ರಯುಕ್ತ ಅದರ ದ್ಯೋತಕವಾಗಿ ಶ್ರೀರಾಮಲಿಂಗೇಶ್ವರನೂ ಈ ಕುಲಕ್ಕೆ ಅಧಿದೇವತೆಯಾಗಿರುವದು ತಿಳಿಯುತ್ತದೆ.