ಶ್ರೀ ದೇವಲ ದೇವಾಂಗ ಮಹರ್ಷಿ ದಾಸಿಮಯ್ಯ
"ದೇವಾಂಗ: ಪ್ರಥಮ: ಸೃಷ್ಟಿ : ಶಂಕರಸ್ಯ ಮಹಾತ್ಮನ;
ವಿದ್ಯಾಧರೋ ದ್ವಾಪರದೌ; ಮದ್ಯೇ ಬೂತ್ ಪುಷ್ಪದಂತಕ;
ಅಂತ್ಯೆವತಾರೋ, ಬೇತಾಳ, ಕತಾವರರುಚಿ ಸ್ತತಾ;
ಚಿತ್ರಯೋಗೀ, ದೇವಶಾಲಿ, ದೇವದಾಸೋಭಾವಂ ಸ್ತುತಂ:"

ತ್ರೈಲೋಕ್ಯದವರ ಮಾನ ರಕ್ಷಣೆಗೆ ವಸ್ತ್ರವಿಲ್ಲದಿರಲು, ಮತ್ತು ಜ್ಞಾನ ದೀಕ್ಷೆಗೆ, ಸೂತ್ರವಿಲ್ಲದಿರಲು, ಸಕಲ ಅನನ್ಯ ಪ್ರಾರ್ಥನೆಯ ಮೇರೆಗೆ, ಶಿವನ ಚಿಚ್ಚಕ್ತಿಯಿಂದ ಅವತರಿಸಿ, ಪ್ರಪಥಮವಾಗಿ ವಸ್ತ್ರ ಸೂತ್ರ ನಿರ್ಮಿಸಿ ಕೊಟ್ಟು ಕರುಣಿಸಿದ ಶ್ರೀ ದೇವಲ (ದೇವಾಂಗ ) ಮಹರ್ಷಿಗಳ ವಂಶಜರೇ ದೇವಾಂಗರು.
ದೇವಾಂಗ ಪುರಾಣದ ಪ್ರಕಾರ:- ದೇವಾಂಗರು, ದೇವ ಬ್ರಾಹ್ಮಣ ರಾಗಿದ್ದಾರೆ. ದೇವಾಂಗ ದೇವಲ ಮಹರ್ಷಿ ಎಂಬ ಋಷಿ ತಮ್ಮ ನೇಯ್ಗೆ ಸಂಪ್ರದಾಯದ ಉಗಮಸ್ಥಾನವೆಂದು, ದೇವಲ ಮಹರ್ಷಿಯೇ ನೇಯ್ಗೆಯ ಮೊದಲ ವ್ಯಕ್ತಿಯಾಗಿದ್ದಾರೆ. ಪರಶಿವನ ಹಣೆಗಣ್ಣಿನಿಂದ ಮಹರ್ಷಿ ಅವತರಿಸಿದರೆಂಬ ಪ್ರತೀತಿಯೂ ಇದ್ದ ಕಾರಣ 'ದೇವಾಂಗ' (ದೇವರ ಒಂದು ಅಂಗ) ಎಂದು ಕರೆಯಲ್ಪಡುತ್ತಾರೆ.
ಕೈಲಾಸದ ಶಿವನ ಒಲಗದಲ್ಲಿ ನಂದಿಗೆ ಯಾವ ಸ್ತಾನ - ಮಾನ ಗಳಿವೇ. ದೇವಾಂಗನಿಗೂ ಅದೇ ಸ್ತಾನ - ಮಾನಗಳಿವೆ. ಇಬ್ಬರೂ ಶಿವಗಣಾಧೀಶ್ವರು. ನಂದಿ ಶಿವನ ವಾಹನವಾದರೆ, ದೇವಾಂಗ ದಿವ್ಯಾ೦ಬರನಾಗಿ ಭೂಷಣನಾಗಿದ್ದಾನೆ. ನಂದಿ ಜಗತ್ತಿಗೆ ಅನ್ನದಾತ, ದೇವಾಂಗ ವಸ್ತ್ರದಾತ, ಒಬ್ಬನು ಜನತೆಗೆ ಅಂಗ ವರ್ಧಕ, ಒಬ್ಬನು ಅಂಗ ಪೋಷಕ , ಒಬ್ಬನು ರಸಕಾರ, ಇನ್ನೊಬ್ಬ ಅಲಾ೦ಕಾರಕ, ಒಬ್ಬನು ಪ್ರಾಣ ಪೋಷಕ, ಇನ್ನೊಬ್ಬ ಮಾನರಕ್ಷಕ. ನಂದಿಯು ಶೀಲಾದಾ, ನೀಲ, ಲೋಹಿತ... ಮುಂತಾಗಿ ಏಳು ಅವತಾರ ತಾಳಿ ಭೂಲೋಕಕ್ಕೆ ಬರುತ್ತಾನೆ. ಹಾಗೆಯೇ ದೇವಾಂಗನು ಸಹ ವಿದ್ಯಾಧರ, ಪುಷ್ಪದಂತ, ಬೇತಾಳ, ವರರುಚಿ, ಚಿತ್ರಯೋಗಿ, ದೇವಶಾಲಿ, ಕೊನೆಯ ಅವತಾರವೇ ದೇವರ ದಾಸಿಮಯ್ಯ. ಏಳು ಅವತಾರ ಪುರುಷರಿಗೆ ಮೂಲ ಪುರುಷ "ದೇವಾಂಗ"ನಾದನು. ಅವನು ಸಾಕ್ಷತ್ ಜಗದೀಶ ಸ್ವರೂಪ, ಜಗದ್ರಕ್ಷಕ ನಾಗುತ್ತಾನೆ.

ದೇವಾಂಗನ ಸಪ್ತವತಾರದ ಬಗ್ಗೆ ಇನ್ನೊಂದು ಶ್ಲೋಕವು ಈ ರೀತಿ ಇದೆ.
ವಿದ್ಯಾದರಶ್ಚಿತ್ರಿ ಯೋಗಿ, ಸಾಧುಕೋ ಪುಷ್ಪದಂತಕಃ,
ಬೇತಾಳ ವರರುಚಿದಾಸೋ ದೇವಾಂಗ ಸಪ್ತನಾಮಕಃ

ದೇವಾಂಗ ಪುರಾಣ ಹಾಗು ಕೆಲವು ಸಂಗ್ರಹಗಳನ್ನಾಧರಿಸಿದ ದೇವಾಂಗ ಚರಿತ್ರೆಯ ಸಂಕ್ಷಿಪ್ತ ವಿವರ.
ನೈಮಿಷಾರಣ್ಯದಲ್ಲಿ ತಪೋಧನರಾದ ಶ್ಹೌನಕ ಮೊದಲಾದ ಮುನಿಪುಂಗವರು ಬಹುಕಾಲ ನಡೆವ ದೀರ್ಘಸತ್ರ ಯಾಗ ಮಾಡುತಿದ್ದರು. ಇವರನ್ನು ಕಾಣಾ ಬಯಸಿ ವ್ಯಾಸ ಶಿಷ್ಯ, ಮಹಾತಪಸ್ವಿ ಸೂತ ಪುರಾಣಿಕ ಅಲ್ಲಿಗೆ ಬಂದನು. ಋಷಿಗಳು ಸ್ವಾಗತಿಸಿ, ಸತ್ಕರಿಸಿ, ಸೂತ್ರ ವಸ್ತ್ರಗಳ ಕರ್ತೃ ಮುಂತಾದ ವಿಷಯಗಳನ್ನು ವಿವರವಾಗಿ ತಿಳಿಸಬೇಕೆಂದು ಕೇಳಿದರು. ಸೂತ ಪುರಾಣಿಕ ಸಂತೋಷದಿಂದ ಷಣ್ಮುಖನಿಗೆ ಈಶ್ವರನು ತಿಳಿಸಿದ, ದೇವಾಂಗನ ಪುಣ್ಯಕತೆಯನ್ನು ಹೇಳಿದನು.
ದೇವಾಂಗ ಪರಬ್ರಹ್ಮ ಪ್ರಪಂಚವನ್ನು ಸೃಷ್ಟಿಸಬೇಕೆಂದು ಆಶಿಸಿ ಪರಶಿವೆ ಆದಿಶಕ್ತಿಯನ್ನು ಹುಟ್ಟಿಸಿದನು. ಆದಿಶಕ್ತಿಯ ರಜೋಗುಣದಿಂದ ಬ್ರಹ್ಮ, ಸತ್ವಗುಣದಿಂದ ವಿಷ್ಣು, ತಮೋಗುಣದಿಂದ ರುದ್ರ ಜನಿಸಿದರು. ಬ್ರಹ್ಮನಿಂದ ಸೃಷ್ಟಿಯಾದ ದೇವ ಮಾನವರೆಲ್ಲರೂ ಬೆತ್ತಲೆಯಲ್ಲಿದ್ದರು. ಈ ದುರವಸ್ಥೆಯನ್ನು ನೋಡಿದ ನಾರದ ಬ್ರಹ್ಮನನ್ನು ಕೇಳಿಕೊಂಡು ದೇವತೆಗಳ ಸಮೇತ ಕೈಲಾಸಪತಿ ಬಳಿಗೆ ಬಂದರು. ನೀಲಕಂಠ ಇವರು ಬಂದ ವಿಷಯವನ್ನರಿತು ಉಗ್ರ ದಾನ್ಯದಲ್ಲಿ ತನ್ಮಯನಾದಾಗ, ಶಿವನ ಪಾಲನೇತ್ರದಿಂದ ಜ್ಯೋತಿ ಹುಟ್ಟಿ ಪುರುಷ ರೂಪ ತಾಳಿತು. ಜಟಾಧಾರಿ, ದಂಡಾಜಿನ ಕಮಂಡಲು ಧರಿಸಿ, ಮಹಾ ತೇಜಸ್ವಿ, ದರ್ಭಪಾಣಿ, ನಿರ್ಮಲ ಮೇಧಾವಿ, ಜಿತೇದ್ರಿಯ, ಯಾಜ್ನೋಪವೀತಧಾರಿ, ಸತ್ಯವಾದಿ, ಕುಶಲಿ ಕೀರ್ತಿ ಭೂಷಣನಾದ ಇವನಿಗೆ ಪರಮೇಶ್ವರ ದೇವಲನೆಂದು ಹೆಸರಿಟ್ಟನು.
ಶಿವನನ್ನು ದೇವಲ ಪರಿಪರಿಯಾಗಿ ಸ್ತುತಿಸಿ" ನನ್ನನ್ನೇಕೆ ನಿರ್ಮಿಸಿದೆ, ನನ್ನ ಜನ್ಮದಿಂದ ಲಾಭವೇನು? ನನ್ನ ಕಾರ್ಯವೇನು?" ಎಂಧು ಬಿನ್ನವಿಸಿದನು. ಲೋಕೋಪಕಾರಕ್ಕಾಗಿ ನಿನ್ನನ್ನು ನಿರ್ಮಿಸಿರುವೆ, ೬ ಜನ್ಮ ತಾಳಿ ಕೀರ್ತಿ ಗಳಿಸಿ ೭ನೆಯ ಜನ್ಮದಲಿ ನನ್ನಲ್ಲಿ ಮೋಕ್ಷ ಪಡೆಯುವೆ ಎಂದು ಹೇಳಿ. ನನ್ನಿಂದ ವೇದಗಳು ಹುಟ್ಟುವಾಗಲೆ ಒಡಹುಟ್ಟಿದ ತಂತುಗಳು ವಿಷ್ಣುವಿನ ಹೊಕ್ಕುಳಲ್ಲಿವೆ. ನೀನು ವಿಷ್ಣುವಿನಿಂದ ಅವನ್ನು ಪಡೆದು ಕುಶಲತೆಯಿಂದ ನೇಯ್ದು ಸಕಲರಿಗೂ ಕೊಟ್ಟು ಅವರ ಮಾನ, ಮರ್ಯಾದೆಗಳನ್ನೂ ಕಾಪಾಡು, ವಸ್ತ್ರಗಳನ್ನು ದೇವತೆಗಳಿಗೆ ಕೊಟ್ಟು ಅವರ ಅಂಗಗಳನ್ನು ಅಲಂಕರಿಸಿ ದೇವಾಂಗನೆಂಬ ಹೆಸರು ಪಡೆ. ಭರತ ಖ೦ಡದ ಸಗರ ದೇಶ ರಾಜಧಾನಿಯಾದ ಆಮೋದ ಪಟ್ಟಣದಲ್ಲಿ ರಾಜನಾಗಿ ನಿಂತು ರಾಜ್ಯಪರಿಪಾಲಿಸಿ ಪ್ರಪಂಚದಲ್ಲಿ ಯಶ್ಸಿವಿಯಾಗು. ನಿನ್ನ ವಂಶದವರು, ದಾನಿಗಳು, ಸತ್ಯ ಸಂಪನ್ನರು, ಪರೋಪಕಾರಿ, ಸದಾಚಾರಿ ದಿವ್ಯ ಬ್ರಾಹ್ಮಣರಾಗಿರುವರು" ಎಂದನು.ಏಳು ಅವತಾರ ಪುರುಷರಿಗೆ ಮೂಲ ಪುರುಷ"ದೇವಾಂಗ"ನಾದನು. ದೇವಲ ಪಾರ್ವತಿಯನ್ನು ಪ್ರಾರ್ಥಿಸಿದಾಗ, ಸಮಯ ಬಂದಾಗ ಸ್ಮರಿಸಿದ ಕೂಡಲೆ ಸಹಾಯಕ್ಕೆ ಬರುವೆನೆಂದು ವಚನವಿತ್ತಳು.

ಚೌಡೇಶ್ವರಿ ದೇವಿ ವರ ಪ್ರಸಾದ
ಮಹಾ ತೇಜಸ್ವಿ ದೇವಲನು ಕ್ಷೀರ ಸಾಗರಕ್ಕೆ ಹೋಗಿ ಸುವರ್ಣಾಶ್ರಮಕ್ಕೆ ಬಂದು, ವಿಷ್ಣುವನ್ನು ಸ್ತುತಿಸಿ ನೇಮದಿಂದ ಮಾರಿದ ತಪಸ್ಸಿಗೆ ಮೆಚ್ಚಿದ ನಾರಾಯಣ ಕಾಣಿಸಿಕೊಂಡು, ಏನಾಗಬೇಕೆಂದು ಕೇಳಿದನು. ಆಗ ವಸ್ತ್ರಗಳನ್ನು ನಿರ್ಮಿಸಲು ನಿನ್ನ ನಾಭೀ ಕಮಲದಲ್ಲಿರುವ ತಂತುಗಳು ಬೇಕೆಂದನು. ಪುರುಷೋತ್ತಮ ತಂತುಗಳನ್ನು ಕೊಟ್ಟು."ನಿನ್ನ ಕೆಲಸದಲ್ಲಿ ಮಾಯಾವಿ ದೈತರು ವಂಚಿಸುವರು. ಜಾಗುರೂಕನಾಗಿದ್ದು ಜಯಿಸು" ಎಂದು ತನ್ನಲ್ಲಿದ್ದ ಒಂದು ಚಕ್ರವನ್ನೂ ಕೊಟ್ಟನು.
ದೇವಲ ಜಂಬು ದ್ವೀಪಕ್ಕೆ ಬಂದು ಉಪ್ಪು ಸಮುದ್ರ ದಲ್ಲಿ ಮನೋಹರವಾದ ಕ್ರತಿಮಾಶ್ರಮವನ್ನು ಕಂಡು ಒಳ ಹೊಕ್ಕನು. ಅಲ್ಲಿದ್ದ ಕಪಿಲಾತ ಋಷಿ ದೇವಲ ಯಾರು? ಏಕೆ ಬಂದಿರುವೆ ಎಂದು ವಿಚಾರಿಸೆಕೊಂಡನು. ತಾನು ಶಿವನ ಮಾನಸ ಪುತ್ರ, ಹೆಸರು ದೇವಲ, ವಿಷ್ಣುವಿಂದ ತಂತುಗಳನ್ನು ತಂದಿರುವೆ ಎಂದನು. ಆಶ್ರಮದಲ್ಲಿ ರಾತ್ರಿ ತಂಗಿದ್ದು ಬೆಳಗ್ಗೆ ಹೋಗಬಹುದು ಎಂದಾಗ ದೇವಲ ಅಲ್ಲಿಯೇ ಉಳಿದನು. ನಡುರಾತ್ರಿಯಲ್ಲಿ ಕಪಟ ಮುನಿಯ ಶಿಷ್ಯರು ದೇವಲನನ್ನು ಕೊಲ್ಲಲು ಹವಣಿಸಿದಾಗ ದೇವಲ ವಿಷ್ಣು ಕೊಟ್ಟಿದ ಚಕ್ರವನ್ನು ಅವರ ಮೇಲೆ ಬಿಟ್ಟನು. ಅ ಚಕ್ರ ದೈತ್ಯ ಸೇನೆ ಯನ್ನು ನಾಶ ಮಾಡತೊಡಗಿದನು. ದೈತ್ಯರು ದಿಕ್ಕಾಪಾಲಾದರು.
ಆದರೆ ದೈತ್ಯರಲ್ಲಿ ಬಲಶಾಲಿಗಳಾದ ವಜ್ರ ಮುಷ್ಟಿ, ಧೂಮವಕ್ರ , ದೂಮ್ರಾಸ್ಯ, ಚಿತ್ರಸೇನ, ಪಂಚಸೇನರೆಂಬ ಐವರು ಬಾಣಗಳ ಮಳೆ ಸುರಿಸಿದಾಗ ಈ ಪಂಚ ದೈತ್ಯರು ಹಿಂದೆಂದೋ ವಿಷ್ಣುವಿಂದ ಪಡೆದಿದ್ದ ವರದ ಫಲವಾಗಿ ಈ ಚಕ್ರ ಅಸಮರ್ಥವಾದಾಗ ತಡೆಯಲಾರದೆ ಲೋಕ ಮಾತೆ ಪಾರ್ವತಿದೇವಿಯನ್ನು ಕಾಪಾಡೆಂದು ಸುತ್ತಿಸಿದಾಗ ಪ್ರಸನ್ನಳಾಗಿ ತಾನು ಕೊಟ್ಟಿದ್ದ ವರದಂತೆ, ಚಂಡಿಕಾಂಬೆ, ಮಹಾಬಲೆ, ಚೌಡೇಶ್ವರಿ ರೂಪ ತಾಳಿ ರಾಕ್ಷಸರನ್ನು ಶೂಲಾಯುಧದಿಂದ ಕೊಂದಳು. ಐವರು ರಾಕ್ಷಸರು ಐದು ಬಣ್ಣಗಳ ರಕ್ತಗಳಲ್ಲಿ ತಾನು ತಂದಿದ್ದ ತಂತುಗಳನ್ನು ಅದ್ದಿ ದಿವಾಲಾ ಪಂಚವರ್ಣಗಳನ್ನು ತಯಾರಿಸಿದನು. ಜನರು ತಮ್ಮ ರಕ್ತವನ್ನು ಮೈ ಮೇಲೆ ಧರಿಸುವಂತೆ ಶಿವನಿಂದ ಈ ಐವರು ವರ ಪಡೆದಿದ್ದುದು ಕೈಗೊಂಡಿತು. ಚೂಡಾ ಸಂಬಂಧದ ಪ್ರಭಾಜಾಲಗಳಿಂದ ದೈತ್ಯರನ್ನು ದಮನಗೊಳಿಸಿದ್ದರಿಂದ ತ್ರಿಭುವನೇಶ್ವರಿ, ಚಂಡಿಕಾಂಬೆಗೆ, ಚೌಡೇಶ್ವರಿ ಎಂದು ಹೆಸರಾಯಿತು.

ವಸ್ರ ನಿರ್ಮಾಣ
ಅರಸನಾದ ದೇವಲನು ಬಟ್ಟೆಗಳನ್ನು ನೇಯಲು ಸಂಕಲ್ಪಿಸಿದನು. ಅದಕೋಸ್ಕರ ಮೇರುಗಿರಿಯಿಂದ ನೇಯ್ಗೆ ಸಾಮಗ್ರಿಗಳನ್ನು ತಂದನು.ಬರುವಾಗ ದಾರಿಯಲ್ಲಿ ವಾಮದೇವ ಮುನಿಯು ಕೋರಿಕೆಯಂತೆ ಕುಂಡಿಕನೆಂಬ ರಾಕ್ಷಸನನ್ನು ಕೊಂದನು. ವಿಶ್ವಕರ್ಮನ ಮಗ, ಕುಶಲಿ ಯಾದಮಯ ವಜ್ರದ ಕುಂಟೆ, ರತ್ನ ಖಚಿತ ಹಲಗೆ, ಮರಕತ, ಲಾಳಿ, ಗಣಿಕೆ, ವಿಚಿತ್ರ ರಾಟೆ, ಉಕ್ಕಿನ ಚೂರಿ ಮುಂತಾದ ಸಾಮಗ್ರಿಗಳನ್ನು ತಯಾರಿಸಿಕೊಟ್ಟನು. ದಾರಿಯಲ್ಲಿ ದೇವಲನ ಬಳಿಯಿದ್ದ ಹತ್ತಿ ಬೀಜಗಳನ್ನು ಕೆಳಗೆ ಬೀಳಲು ಅವನ್ನು ಒಂದು ಹುಂಜ ನುಂಗಿತು. ಬೀಜಗಳನ್ನು ಹಿಂದಿರುಗಿಸಿದರೆ ನೇಯ್ಗೆಯ ಅಗಲಕ್ಕೆ ಹುಂಜವೆಂದು ಹೆಸರಿಡುವೆನೆಂದನು. ದೇವಾಂಗ, ಹತ್ತಿ ಬೀಜಗಳನ್ನು ಬಿತ್ತಿದಾಗ ಶಿವನ ಕೃಪೆಯಿಂದ ಬೆಳೆದ ಗಿಡಗಳಲ್ಲಿ ಬಿಟ್ಟ ಹತ್ತಿ ಕಾಯಿಗಳಿಂದ ಹತ್ತಿಯನ್ನು ಬಿಡಿಸಿ ವಿಂಗಡಿಸಿ, ನೂಲನ್ನು ತಯಾರಿಸಿ, ನೇಯ್ದ ಬಟ್ಟೆ ಅಕ್ಷಯ ವಾಗುವಂತಹ ಕಂಕಣವನ್ನು ಚೌಡೇಶ್ವರಿಯಿಂದ ವರವಾಗಿ ಪಡೆದು ಶುಭ ಮುಹೂರ್ತದಲ್ಲಿ ವಸ್ತ್ರಗಳನ್ನು ನೇಯಲು ಆರಂಭಿಸಿದನು.
ವಸ್ತ್ರ ಪ್ರದಾನ
ಚಿತ್ರ ವಿಚಿತ್ರವಾದ ಬಣ್ಣ ಬಣ್ಣಗಳ ವಸ್ತ್ರಗಳನ್ನು ದೇವಾಂಗ ನೇಯ್ದು, ವಿಷ್ಣುವಿಗೆ, ರಮ್ಯ ಪೀತಾಂಬರ, ಲಕ್ಷ್ಮಿಗೆ ಶುಬ್ರಾಂಬರ, ಭೂದೇವಿಗೆ, ರಕ್ತಾತಾಂಬರ, ಅಲ್ಲಿದ್ದ ಸಮಸ್ತರಿಗೂ ಅವರಿಗೆ ಬೇಕಾದ ವಸ್ತ್ರಗಳನ್ನು ಕೊಟ್ಟು ಸಂತಸಗೊಳಿಸಿದನು. ಆಮೇಲೆ ದೇವಾಂಗ ಸತ್ಯಲೋಕಕ್ಕೆ ಹೋಗಿ ಬ್ರಹ್ಮ್ಮನಿಗೆ, ಕೆಂಪುದುಕೂಲ ಸರಸ್ವತಿಗೆ ಧವಳಾಬರ, ಸಾವಿತ್ರಿಗೆ ಹಳದಿ ವಸ್ತ್ರ ಗಾಯತ್ರಿಗೆ ರಕ್ತ ವಸ್ತ್ರಗಳನ್ನು ಕೊಟ್ಟನು. ವಿಷ್ಣುವಿನ ಹೊಕ್ಕುಳಲ್ಲಿರುವ ಮಾನಿ ಅಭಿಮಾನಿ ಎಂಬೀರ್ವರು ಸ್ತ್ರೀಯರು ಭೂಲೋಕದಲ್ಲಿ ಹತ್ತಿಯ ಗಿಡಗಳಾಗಿ ಹುಟ್ಟಿ ಅಧಿಕ ಹತ್ತಿ ಬೆಲೆ ನೀಡುವರೆಂದು ಅರಿತನು. ಆಮೇಲೆ ಮೇರು, ಸಯ್ಯಾದ್ರಿ, ವಿಂದ್ಯ, ಪರ್ವತಗಳಲ್ಲು. ಸ್ವರ್ಗದಲ್ಲೂ ಸಕಲರಿಗೂ, ಮಯನಿಗೂ ನವಗ್ರಹ ದೇವತೆಗಳಿಗೂ ಉಚಿತ ವಸ್ತ್ರಗಳನ್ನು ಕೊಟ್ಟನು. ಪಾತಾಳ ಲೋಕಕ್ಕೆ ತೆರಳಿ, ವಾಸುಕಿ ತಕ್ಷಕ, ಚಿತ್ರ, ಸೇನರಿಗೂ ಆದಿಶೇಷನಿಗೂ ನಾಗಗಳಿಗೂ ವಸ್ತ್ರಗಳನಿತ್ತನು.
ಈ ರೀತಿ ಮೂರು ಲೋಕಗಳಲ್ಲೂ ಎಲ್ಲರಿಗೂ ವಸ್ತ್ರಗಳನ್ನು ಕೊಟ್ಟು ಹೆಸರಾದನು. ಶಿವನನ್ನು ಕಾಣಲು ಕೈಲಾಸವನ್ನು ಹೊಕ್ಕು ಮಹಾದೇವನನ್ನು ಸ್ತುತಿಸಿ, ಬಟ್ಟೆ ನೇಯ್ಧು ಉಳಿದ ದಾರಗಳನ್ನು ಏನು ಮಾಡಬೇಕೆಂದು ಕೇಳಿದಾಗ ವೇದಮಾತೆಯಾದ ಗಾಯತ್ರಿಯನ್ನು ಪ್ರಣವನಿಂದ ಸಮಗೊಳಿಸಿ ಉಪವೀತವನ್ನು ಮಂಗಳಸೂತ್ರವನ್ನು ತಯಾರಿಸಲು ಪರಮಾತ್ಮ ಹೇಳಿದನು.ಅದರಂತೆ ಯಗ್ನೋಪವೀತ ತಯಾರಿಸಿ, ಒಂದು ಸೂತ್ರಗಳನ್ನು ಬ್ರಹ್ಮಚಾರಿಗೆ, ಎರಡು ಸೂತ್ರ ಮದುವೆಯಾದವನಿಗೆ ಕೊಟ್ಟನು. ಸುಮಂಗಲಿಯರಿಗೆ ಮಂಗಳಸೂತ್ರಗಳನ್ನು ಕೊಟ್ಟನು. ಬ್ರಹ್ಮ, ವಿಷ್ಣು, ಶಿವ ಋಷಿಗಳೇ ಮುಂತಾದವರೆಲ್ಲರಿಗೂ ಗಾಯತ್ರಿ ರೂಪದ ಯಗ್ನೋಪವೀತವನ್ನು ಕೊಟ್ಟು, ಬ್ರಾಹ್ಮಣ ಶ್ರೇಷ್ಠರಿಗಿಂತಲೂ ದೇವಾಂಗ ಎಂದಿಗೂ ಉತ್ತಮ ಎನಿಸಿಕೊಂಡನು. ಶಿವ ಪಾರ್ವತಿ, ನಿಜ ಪ್ರತಿ ವೀಕ್ಷಿಸಿ ವಸ್ತ್ರಗಳನ್ನು ಕೊಟ್ಟನು.
ಲೋಕದಲ್ಲಿ ಎಲ್ಲರಿಗೂ ಬಟ್ಟೆಗಳನ್ನು ದೇವಾಂಗ ಕೊಟ್ಟರೂ ತಮಗಿಲ್ಲವೆಂಧು ಅಸೂಯೆಯಿಂದ ದೇವತೆಗಳನ್ನು ಕೊಲ್ಲಬೇಕೆಂದು ವ್ಯಾಘ್ರವಕ್ತ್ರ ದೈತ್ಯರೊಂದಿಗೆ ಮೇಲೆ ಬಿದ್ದನು. ದೇವತೆಗಳು ನಿಸ್ಸಹಾಯರಾಗಿ ಶಿವನನ್ನು ಪ್ರಾರ್ಥಸಿದ್ದರಿಂದ ದೇವಾಂಗನನ್ನು ಯುದ್ಧಕ್ಕೆ ನೇಮಿಸಿದನು. ವ್ಯಾಘ್ರವಕ್ತ್ರನನ್ನು ಕೊಂದನು. ಆಗ ದೇವಾಂಗ ರಾಜನ ಮೇಲೆ ಯುದ್ಧ ಮಾಡುತ್ತ ಹೇಮಕೂಟ ಶೃಂಗವನ್ನು ಮೇಲೆಸೆದರೂ ಏನೂ ಆಗಲಿಲ್ಲ. ಮಾಯೆಯಿಂದ ಎಲ್ಲರನ್ನು ಪೀಡಿಸಿದನು. ನಂದಿ ದ್ವಜವನ್ನು ದೈತ್ಯರಲ್ಲಿ ಹಾಕಿದಾಗ ಗೂಳಿಗಳು ದೈತ್ಯರನ್ನು ಸದೆ ಬಡಿದವು. ವಜ್ರ ದಂಷ್ಟ್ಯನ ಪ್ರೇರಣೆಯಂತೆ ವಿದ್ಯು ವಿದ್ಯುತ್ಕ್ಷೇಶ ತಾನು ಇಂದ್ರನ ದೂತನೆಂದು ಹೇಳಿ ಮೋಸಮಾಡಿ ನಂದಿ ದ್ವಜವನ್ನು ಅಪಹರಿಸಿ ತಂದನು. ಇದನ್ನು ಪ್ರಯೋಗಿಸಿ ದೇವಾಂಗಣ ವೀರ ಮಾಹೇಂದ್ರ ಪಟ್ಟಣಕ್ಕೆ ಕರೆತಂದು ತನ್ನ ಮಗಳು ಪದ್ಮಿನಿಯನ್ನು ಕೊಟ್ಟು ಮದುವೆ ಮಾಡಿದನು. ಅವಳಿಂದ ಶಾಲಾ, ಹಲ, ಬಲ, ಮಕ್ಕಳಾದರು. ಇವರಿಗೆ ನೇಯ್ಗೆ ಕಲಿಸಿ ರಾಕ್ಷಸರಿಗೆ ಬಟ್ಟೆಗಳನ್ನು ಕೊಡಿಸಿದನು. ನಂದಿ ದ್ವಜವನ್ನು ತೆಗೆದುಕೊಂಡು ದೇವಾಂಗ ಹಿಂದಿರುಗಿದನು.
ದೇವಾಂಗ ರಾಜ ಒಂದು ದಿನ ಶಿವನ ದರ್ಶನ ಪಡೆದಾಗ, ನಂದಿ ದ್ವಜವನ್ನು ಅಸುರರ ಪಾಲು ಮಾಡಿ ದೇವತೆಗಳನ್ನು ಭಾದೆ ಪಡಿಸಿದ್ದರಿಂದ, ನೀನು ವಿದ್ಯಾಧರ, ಪುಷ್ಪದಂತ, ಬೇತಾಳ, ವರರುಚಿ, ಚಿತ್ರಯೋಗಿ, ದೇವಶಾಲಿ, ದೇವದಾಸ ಎಂಬ ಏಳು ಅವತಾರಗಳಲ್ಲಿ ಭೂಲೋಕದಲ್ಲಿ ಹುಟ್ಟೆಂದು ದೇವಾಂಗನಿಗೆ ಶಂಕರ ಶಪಿಸಿದನು. ಶಾಪಗ್ರಸ್ತನಾದ ದೇವಾಂಗನ ಕೊನೆಯ ಅವತಾರವೇ ದೇವರ ದಾಸಿಮಯ್ಯ ಇಂದಿನ ದೇವಾಂಗ ಜನಾಂಗದ ಕುಲಗುರು ದೇವರ ದಾಸಿಮಯ್ಯ. ಚೌಡೇಶ್ವರಿ ತಾಯಿ ಈ ಸಮೂಹದ ಕುಲ ದೇವತೆ. ಈ ಮಹಾತ್ಮರು ಗಾಯತ್ರೀ ಮಂತ್ರದ ಉಪಾಸಕರಾಗಿ, ಅದರ ಮಹಿಮೆಯನ್ನು ಸಾರಿದರು. ಪ್ರತಿಯೊಬ್ಬ ಮಾನವನು, ಉತ್ತಮ ಸಂಸ್ಕೃತಿ, ಧರ್ಮ, ಆಚಾರ ನಡೆಸಬೇಕೆಂಬ ಸಂದೇಶವನ್ನು ತಮ್ಮ ವಚನಗಳ ಮೂಲಕ ಪ್ರಪಂಚಕ್ಕೆ ತಿಳಿಸಿದವರು ದೇವರ ದಾಸಿಮಯ್ಯನವರು. ಮುಂದೆ ದಾಸಿಮಯ್ಯ ನವರ ಕಿರು ಪರಿಚಯವನ್ನು ಮಾಡಿಕೊಳ್ಳೋಣ.

ಆದ್ಯ ವಚನಕಾರ ವಚನ ಬ್ರಹ್ಮ ದೇವರ ದಾಸಿಮಯ್ಯ
ಆದ್ಯ ವಚನಕಾರ ವಚನ ಬ್ರಹ್ಮ ದೇವರ ದಾಸಿಮಯ್ಯನವರ ಬದುಕು - ಬರಹ
ನಮ್ಮದು ಭರತ ಭೂಮಿ. ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ರಾಷ್ಟ್ರ! ಪ್ರಪಂಚದಲ್ಲಿ ಮಿಕ್ಕ ದೇಶಗಳು ಭೌತಿಕವಾಗಿ ಸಮೃದ್ಧವಾಗಿರಬಹುದು, ಆದರೆ ಭೌತಿಕವಾಗಿ ಮಾತ್ರವಲ್ಲದೆ ಆಧ್ಯಾತ್ಮಕವಾಗಿಯೂ ಅತ್ಯಂತ ಸಮೃದ್ದ ವಾದ ದೇಶ 'ಭಾರತ'. ಆದಿ ಕಾಲದಿಂದಲೂ ಅನೇಕ ಋಷಿ-ಮುನಿಗಳು ತಮ್ಮ ಅಮೋಘ ತಪಸ್ಸಿನಿಂದ ಸಿದ್ಧಿಯನ್ನು ಪಡೆದು ಆಧ್ಯಾತ್ಮಿಕತೆಯ ಮಹತ್ವವನ್ನು ಇಡೀ ವಿಶ್ವಕ್ಕೆ ಸಾರಿದ ಪುಣ್ಯ ಭೂಮಿಯಿದು.ಅಂತಹ ಸಾಧುಗಳಲ್ಲೊಬ್ಬರು 'ಶ್ರೀ ದೇವರ ದಾಸಿಮಯ್ಯ'.ಈ ಪುಣ್ಯಪುರುಷನ ಬಗ್ಗೆ ಹಲವರಿಗೆ ಪರಿಚಯವಿಲ್ಲ. ಇವರು ಕೇವಲ ಒಬ್ಬ ಮುನಿ ಮಾತ್ರವಲ್ಲದೆ,10ನೇ ಶತಮಾನದಲ್ಲಿದ್ದ ಮೊಟ್ಟಮೊದಲ ವಚನಕಾರರೂ ಆದ, ಈ ಮಹರ್ಷಿಯ ಒಂದು ಕಿರುಪರಿಚಯ.
ಗುಲ್ಬರ್ಗಾ ಜಿಲ್ಲೆಯಲ್ಲಿರುವ ಸುರಪುರ ತಾಲ್ಲೂಕಿನ ಮುದನೂರು ಎಂಬ ಊರಿನಲ್ಲಿ ದೇವರ ದಾಸಿಮಯ್ಯನವರು ಜನಿಸಿದರು. ಈ ಊರಿನಲ್ಲಿ ಸುಮಾರು ದೇವಾಲಯಗಳು ಇದೆ. ಎಲ್ಲಾ ಪಂಥಗಳ ದೇವ ಸ್ಥಾನಗಳನ್ನು ಹೊಂದಿದ ಕ್ಷೇತ್ರವಿದು. ಎಲ್ಲಕ್ಕಿಂತ ರಾಮನಾಥ ಎನ್ನುವ ದೇವರ ಮೇಲೆ ಹೆಚ್ಚಿನ ಪ್ರೀತಿ ದೇವರ ದಾಸಿಮಯ್ಯನವರಿಗೆ. ಈಗಾಗಿ ತಮ್ಮ ವಚನಗಳಿಗೆ "ರಾಮನಾಥ" ಎನ್ನುವ ನಾಮಾಂಕಿತ ವನ್ನು ನೀಡಿದ್ದಾರೆ. ಇವರು ನೇಯ್ಗೆ ವೃತ್ತಿಯಿಂದ ತಮ್ಮ ಜೀವನವನ್ನು ಸಾಗಿಸುತ್ತಿದ್ದರು. ಅವರ ತಂದೆಯ ಹೆಸರು ರಾಮಯ್ಯ ತಾಯಿ ಶಂಕರಿ ಅವರ ಮನೆತನದ ಉದ್ಯೋಗ ನೇಕಾರಿಕೆ, ನೇಯ್ಗೆ ಕಾಯಕದಲ್ಲಿದ್ದರೂ ದಾಸಿಮಯ್ಯನಿಗೆ ಆತ್ಮಜ್ಞಾನದ ಹಸಿವು ಬಹಳವಾಗಿತ್ತು. ಅದಕ್ಕಾಗಿ ಶ್ರೀಶೈಲಕ್ಕೆ ಹೋಗಿ ಪಂಡಿತಾರಾಧ್ಯ ಶಿವಾಚಾರ್ಯರಿಂದ ಶಿವದೀಕ್ಷೆ ಪಡೆದು ಸಾಧನೆ ಮಾಡಿ ಶಿವಜ್ಞಾನ ಸಂಪನ್ನನಾಗುತ್ತಾರೆ.
ಶಿವಜ್ಞಾನ ಸಂಪನ್ನನಾದ ದಾಸಿಮಯ್ಯನು ಲೋಕ ಕಲ್ಯಾಣದ ಕೈಂಕರ್ಯ ತೊಟ್ಟು ಚಾಲುಕ್ಯ ರಾಜ್ಯದ ಪೊಟ್ಟಲ ಕೆರೆಯತ್ತ ಸಾಗುತ್ತಾರೆ. ದಾರಿಯಲ್ಲಿ ಶಿವಾನುಭವ ಗೋಷ್ಠಿಗಳನ್ನು ಮಾಡುತ್ತ ಸಾವಿರಾರು ಜನರಿಗೆ ಶಿವದೀಕ್ಷೆ ನೀಡುತ್ತಾನೆ. ಹಿಂಸಾವೃತ್ತಿಯಲ್ಲಿ ತೊಡಗಿದ್ದ ಬೇಡ ಜನಾಂಗಕ್ಕೆ ಬುದ್ದಿ ಹೇಳಿ ಅವರ ಮನ ಪರಿವರ್ತಿಸಿ ದೀಕ್ಷೆ ನೀಡಿ ಸನ್ಮಾರ್ಗಕ್ಕೆ ಹಚ್ಚುತ್ತಾನೆ. ನಂದಿ ಗ್ರಾಮದಲ್ಲಿ ಎದುರಾದ ವೈದಿಕರೊಡನೇ ವಾದ ವಿವಾದ ಮಾಡಿ ಜಯಸಿ ಗೌಡಗೆರೆಗೆ ಬಂದು ಅಲ್ಲಿ ಅಸಂಖ್ಯಾತ ರೈತ ಜನಕ್ಕೆ ಜ್ಞಾನ ಬೋಧನೆ ಮಾಡುತ್ತಾರೆ .
ಕನ್ನಡ ನಾಡಿನ ಶಿವ ಶರಣರರಲ್ಲಿ ದೇವರ ದಾಸಿಮಯ್ಯನವರು 11 ನೇ ಶತಮಾನದಲ್ಲಿ ಆಗಿ ಹೋದ ಶರಣರು. ಮಹಾಶಿವ ಶರಣರಲ್ಲಿ ಇವರೊಬ್ಬರು ಮತ್ತು ಶರಣ ಸಂಪ್ರದಾಯ ದಲ್ಲಿ ಮೊದಲಿಗರು ಹಾಗು ಆದ್ಯ ವಚನಕಾರ ಪಿತಾಮಹ, ಜನಪದ ಜಗದ್ಗುರು ಎಂಬ ಬಿರುದು ಸಹ ಇವರಿಗೆ ಇದೆ. ದೇವರ ದಾಸಿಮಯ್ಯನು ಒಬ್ಬ ಐತಿಹಾಸಿಕ ಪುರುಷ ನೆಂಬುದಕ್ಕೆ ಶಿಲಾ ಶಾಸನ ಗಳು ಬಲವಾದ ಪ್ರಮಾಣ ಗಳಾಗಿವೆ. ಅವನ ನಂತರ ಸ್ವಲ್ಪ ಕಾಲದಲ್ಲಿಯೇ ಅವತರಿಸಿದ ಬಸವಣ್ಣನವರು ಈ ಶರಣ ದಂಪತಿಗಳ ಮಹಿಮೆಯನ್ನು ಅವರ ಚರಿತ್ರೆಯಲ್ಲಿ ಘಟನೆಗಳನ್ನು, ವಚನಗಳನ್ನು ತನ್ನ ವಚನ ವಾಜ್ಞ ಯದಲ್ಲಿ ನಿರರ್ಗಳವಾಗಿ ಉಲ್ಲೇಖಿಸಿದ್ದಾರೆ.
ಇವರ ಪತ್ನಿ ದುಗ್ಗಳೆ. ಇಬ್ಬರದೂ ಅನ್ಯೋನ್ಯವಾದ ದಾಂಪತ್ಯ ಜೀವನ. ದೇವರನ್ನು ಒಲಿಸಲು ಮತ್ತು ಮುಕ್ತಿಯನ್ನು ಪಡೆಯಲು ಸನ್ಯಾಸಿಯ ಜೀವನ ಮಾಡಬೇಕಿಲ್ಲ, ವಿವಾಹ ಜೀವನದಲ್ಲಿಯೂ ಮೋಕ್ಷವನ್ನು ಪಡೆಯಬಹುದು ಮತ್ತು ಶಿವನ ಸಾಕ್ಷಾತ್ಕಾರವನ್ನು ಪಡೆಯಬಹುದೆಂದು ನಿರೂಪಿಸಿದವರು ದೇವರ ದಾಸಿಮಯ್ಯನವರು. ಮುದನೂರು ಹಲವಾರು ದೇವಾಲಯಗಳಿಂದ ಕೂಡಿದ್ದು, ಅಲ್ಲಿನ ರಾಮನಾಥ ದೇವಸ್ಥಾನ ದೇವಲ ಮಹರ್ಷಿಯರ ಅಚ್ಚುಮೆಚ್ಚು. ರಾಮನಾಥ ಸ್ವಾಮಿಯ ಆರಾಧಕರು. ರಾಮನಾಥ ಎಂದರೆ ಶಿವ (ರಾಮನು ಪೂಜಿಸುತ್ತಿದ್ದಂತಹ ದೇವರು).ದೇವಲ ಮಹರ್ಷಿಯು ಶಿವನ ಅಪಾರ ಭಕ್ತರಾಗಿದ್ದು 'ರಾಮನಾಥ' ಇವರ ಅಂಕಿತನಾಮವಾಗಿತ್ತು.10ನೇ ಶತಮಾನದಲ್ಲಿ ಬರುವ ಇವರು ಮೊಟ್ಟ ಮೊದಲ ವಚನಕಾರರಾಗಿದ್ದಾರೆ.
ದೇವರ ದಾಸಿಮಯ್ಯ ತಮ್ಮ ಯೌವನಾವಸ್ಥೆಯಲ್ಲಿ ಹೆತ್ತವರ ಇಚ್ಛೆಯಂತೆ, ಶಿವಪುರದ ದುಗ್ಗಳೆಯನ್ನು ವರಿಸುತ್ತಾರೆ, ಆಕೆ ಮಹಾನ್ ಸಾಧ್ವಿಮಣಿ. ದಂಪತಿಗಳಿಬ್ಬರೂ ಸಜ್ಜನರು, ದೈವಭಕ್ತರು, ಧಾರಾಳತನವುಳ್ಳವರೂ ಆಗಿದ್ದು, ಯಾರೇ ಕಷ್ಟದಲ್ಲಿದ್ದರೂ ತಮ್ಮ ಶಕ್ತಿ ಮೀರಿ ಸಹಾಯ ಮಾಡುತ್ತಿದ್ದರು. ಸುವರ್ಚಲೆ ಇವರ ಸುಪುತ್ರಿ, ಮಹಾನ್ ಜ್ಞಾನಿ. ಹೀಗಿದ್ದರೂ ದಾಸಿಮಯ್ಯರಿಗೆ ಬದುಕಿನಲ್ಲಿ ಎನೋ ಶೂನ್ಯತೆ ಕಾಡುತ್ತಿತ್ತು. ಹೀಗೊಂದು ದಿನ ಆಲೋಚಿಸುತ್ತಿರುವಾಗ ದೇವರನ್ನು ಒಲಿಸಿಕೊಳ್ಳಲು ಸಂನ್ಯಾಸತ್ವವೇ ಸರಿಯಾದ ಮಾರ್ಗವೆಂದು ಅರಿತು, ಅದನ್ನು ಸಿದ್ಧಿಸಿಕೊಳ್ಳುವ ಸಲುವಾಗಿ ದಟ್ಟ ಕಾಡಿನೆಡೆಗೆ ಹೊರಟುಹೋಗುತ್ತಾರೆ.
ಹಲವಾರು ವರ್ಷ ಸುಧೀರ್ಘ ತಪಸ್ಸನ್ನಾಚರಿಸಿ ಕಡೆಗೂ ಶಿವನ ಕೃಪೆಗೆ ಪಾತ್ರರಾಗುತ್ತಾರೆ. ತಪಸ್ಸಿಗೆ ಮೆಚ್ಚಿದ ಈಶ್ವರ ಪ್ರತ್ಯಕ್ಷನಾಗುತ್ತಾನೆ. ಸದಾಶಿವನು ದಾಸಿಮಯ್ಯರನ್ನು ಕುರಿತು ಹೀಗೆ ಸಂಬೋಧಿಸುತ್ತಾನೆ 'ದಾಸಿಮಯ್ಯ! ನಿನ್ನ ತಪಸ್ಸಿಗೆ ಮೆಚ್ಚಿದ್ದೇನೆ... ನಿನ್ನ ಕೋರಿಕೆ ಯನ್ನು ತಿಳಿಸು..'ಮಹದಾನಂದದಿಂದ ಋಷಿವರ್ಯರು ಹೀಗೆ ತಮ್ಮ ಕೋರಿಕೆ ಸಲ್ಲಿಸುತ್ತಾರೆ: 'ಭಗವನ್! ನಿನ್ನ ದರ್ಶನದಿಂದ ನನ್ನ ಜನ್ಮ ಇಂದಿಗೆ ಸಾರ್ಥಕವಾಯಿತು.. ಕೃಪೆತೋರಿ ನನಗೆ ಮೋಕ್ಷವನ್ನು ದಯಪಾಲಿಸು ಮಹದೇವ...'ಶಿವನು: 'ದಾಸಿಮಯ್ಯ ..ಋಷಿಯಾಗಿ ಮೋಕ್ಷವನ್ನು ಪಡೆಯುವುದಷ್ಟೇ ಅಲ್ಲಾ... ನೀನು ಮಾಡಬೇಕಾದ ಮಹತ್ಕಾರ್ಯ ಬಹಳಷ್ಟಿದೆ!
ದೇವ-ದೇವತೆಯರು ಹಾಗೂ ಮಾನವರಿಗೆ, ತಮ್ಮ ಮಾನ-ಶರೀರ ಸಂರಕ್ಷಣೆಯನ್ನು ಕಾಪಾಡಲು ವಸ್ತ್ರವನ್ನು ತಯಾರಿಸುವ ಕಾರ್ಯ ನಿನ್ನಿಂದ ಆಗಬೇಕಿದೆ. ಪರಮಾತ್ಮನನ್ನು ಕಾಣಲು ಸಂನ್ಯಾಸಿಯಾಗಿ ತಪಸನ್ನಾಚರಿಸುವ ಅಗತ್ಯವಿಲ್ಲ... ಸಂಸಾರಿಯಾಗಿದ್ದೂ ಆಧ್ಯಾತ್ಮಿಕತೆಯನ್ನು ಆಚರಿಸುವವನು ಅದಕ್ಕಿಂತ ಶ್ರೇಷ್ಠನು. ಜನರು ತಮ್ಮ ಕಾಯಕದಲ್ಲಿ ದೇವರನ್ನು ಕಾಣಬೇಕು. ಶ್ರದ್ಧಾಭಕ್ತಿಯಿಂದ ತಮ್ಮ ದೈನಂದಿನ ಕಾರ್ಯಾಚರಣೆಯಲ್ಲಿ ತೊಡಗಬೇಕು. ಆದೇ ನಿಜವಾದ ಮನುಕುಲದ ಉದ್ದೇಶ. ಈ ಸಂದೇಶವನ್ನು ಮಾನವರಿಗೆ ಅರ್ಥವಾಗುವ ರೀತಿಯಲ್ಲಿ ಮನದಟ್ಟು ಮಾಡು. ಇದೇ ನಿನ್ನ ಜನ್ಮದುದ್ದೇಶ.
ಶಿವನ ಕೃಪೆಗೆ ಪಾತ್ರನಾದ ದಾಸಿಮಯ್ಯನವರು ರಾಮನಾಥನ ಇಚ್ಚೆಯಂತೆ ತನ್ನ ಹುಟ್ಟೂರಿಗೆ ಹಿಂದಿರುಗುತ್ತಾರೆ. ವಸ್ತ್ರವು ಜನರ ಮಾನವನ್ನು ಕಾಪಾಡುವ ಮತ್ತು ದೇಹಕ್ಕೆ ರಕ್ಷಣೆಕೊಡುವ ಭಗವಂತನ ಒಂದು ವರಪ್ರದಾನವೆಂದು ತಿಳಿದ ದಾಸಿಮಯ್ಯ ವಸ್ತ್ರ ನಿರ್ಮಿಸುವ ಕಲೆಯನ್ನು ಪಾರಂಗತಗೊಳಿಸಿಕೊಂಡು ಲೋಕಕ್ಕೆ ಬಟ್ಟೆಯನ್ನು ಅರ್ಪಿಸಿದರು. ದಂಪತಿಗಳಿಬ್ಬರೂ, ಸೀರೆ ನೇಯ್ಗೆ ಉದ್ಯೋಗದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರು, ನೇಯ್ಗೆಯನ್ನು ದೇವರ ಕಾರ್ಯದಂತೆ ಆಚರಿಸುತ್ತಾ ಇತರರಿಗೆ ಮಾದರಿಯಾಗಿ ಇನ್ನೂ ಅನೇಕ ಮಂದಿಗೆ ಉದ್ಯೋಗ ಕಲಿಸಿ ಜೀವನೋಪಾಯಕ್ಕೆ ದಾರಿತೋರಿಸುತ್ತಾರೆ. ಹೀಗಾಗಿ ಇವರು 'ಜೇಡರ ದಾಸಿಮಯ್ಯ'ರೆಂದೂ ಪ್ರಸಿದ್ಧರಾದರು.ಚೌಡೇಶ್ವರಿ ತಾಯಿ ಈ ಸಮೂಹದ ಕುಲ ದೇವತೆ. ಈ ಮಹಾತ್ಮರು ಗಾಯತ್ರೀ ಮಂತ್ರದ ಉಪಾಸಕರಾಗಿ, ಅದರ ಮಹಿಮೆಯನ್ನು ಸಾರಿದರು.
ದಾಸಿಮಯ್ಯರ ಕೃತಿ ಪರಿಚಯಕ್ಕೆ ಬಂದರೆ ಇವರ ಬಗ್ಗೆ ಹೆಚ್ಚಿಗೆ ಪ್ರಚಾರಗಳಾಗಲಿಲ್ಲ. ತಡವಾಗಿಯಾದರೂ ಈಗೀಗ ಕೆಲವು ವಚನಗಳನ್ನು ಹೊರ ಬರುತ್ತಿವೆ. ದೇವರ ದಾಸಿಮಯ್ಯನವರ ವಚನಗಳನ್ನು ರಚಿಸಿರುವವರಲ್ಲಿ ಮೊದಲಿಗರಾದರೂ ಸಹ ಅವರ ವಚನಗಳು ಯಾರಿಗೂ ತಿಳಿದಿಲ್ಲ. ನಂತರ ಬಂದ ಎಲ್ಲಾ ಶರಣರೂ, ಸಾಧು ಸಂತರೂ ರಚಿಸಿದ ವಚನಗಳು ಬಳಕೆಗೆ ಮತ್ತು ಬೆಳಕಿಗೂ ಬ೦ದವು. ತುಂಬಾ ಉಪಯುಕ್ತ ಮತ್ತು ತಮ್ಮ ದಿನನಿತ್ಯದ ಜೀವನಕ್ಕೆ ಸಂಭಂದಿಸಿದ ವಿಷಯಗಳ ಬಗ್ಗೆಯೆ ರಚಿಸಿದ ದೇವರ ದಾಸಿಮಯ್ಯ ಅವರ ವಚನಗಳು ತುಂಬಾ ಸರಳವಾಗಿ ಮನೆಸೂರೆಗೊಳ್ಳುತ್ತವೆ.
ಮನುಷ್ಯನ ಜೀವನದಲ್ಲಿ ದೇವರ ಸ್ಮರಣೆಯೂ ಹಾಗೂ ಜೀವನದಲ್ಲಿ ಸಾಧನೆಯೂ ಅಷ್ಟೇ ಪ್ರಮುಖವೆಂದು ನಂಬಿ ಭಕ್ತಿ ಸಾಧನೆಯಲ್ಲಿಯೇ ಬಹಳ ಹೆಸರನ್ನು ಪಡೆದವರು. ಒಂದು ರೀತಿಯಲ್ಲಿ ಎಲ್ಲರಿಗೂ ಶಿಕ್ಷಕರಾಗಿದ್ದರು. ಅನೇಕ ಮಹಾನ್ ವ್ಯಕ್ತಿಗಳನ್ನು ತಮ್ಮ ಭಕ್ತಿಯ ವಾದದಿಂದ ಸೋಲಿಸಿ, ಆಗಿನ ಕಾಲದಲ್ಲಿಯೇ ಪ್ರಸಿದ್ಧಿ ಪಡೆದು ಹೆಸರಾದವರು. ಶಿವನ ದರ್ಶನದಿಂದ ವರವನ್ನು ಪಡೆದ ಇವರು ಸರಳ, ಸಜ್ಜನಿಕೆಯ ಸ್ವಭಾವದವರಾಗಿದ್ದು, ಎಲ್ಲರಲ್ಲಿಯೂ ಭಕ್ತಿಯ ಸಿಂಚನವನ್ನು ಸಿಂಪಡಿಸಿದರು.
ದಾಸಿಮಯ್ಯನು ವೃತ್ತಿ, ನೇಯ್ಗೆಯ ವೃತ್ತಿ. ನೇಯ್ಗೆಯ ಕಾಯಕವನ್ನು ಮಾಡಿ ಅನೇಕ ಪವಾಡ ಗಳನ್ನು ಮಾಡಿದ್ದಾನೆ. ಅಲ್ಲದೆ ಸಾಕ್ಷತ್ ಪರಶಿವನಿಂದ ತವನಿಧಿಯನ್ನು ಪಡೆದ ಶರಣ. ಈ ಶರಣನು ಜ್ಞಾನಿಯೂ ಬೋಧೆಯಲ್ಲಿ ಬಲ್ಲಿದನೂ ಆದಂತೆ, ವಚನ ಸಾಹಿತ್ಯ ರಚನೆಯಲ್ಲಿಯೂ ಪ್ರಬಲನಾಗಿದ್ದನು. ಅಲಂಕಾರಿಕವಾದ ಸ್ವಲ್ಪ ಶಬ್ದಗಳ ನುಡಿಯಲ್ಲಿ ದಿವ್ಯವಾದ, ವಿಶಾಲವಾದ ಅರ್ಥ, ಯಾರೂ ತೆಗೆದು ಹಾಕದಂತಹ ಅಭಿಪ್ರಾಯ ಇಂತಹ ಅಮೃತ ಬಿಂದು ಮನೋಜ್ಞವಾಣಿ ಆತನ ವಚನಗಳಾಗಿವೆ.

"ಕಡೆಗೀಲಿಲ್ಲದ ಬಂಡಿ ಹೊಡೆಗೆಡೆಯದೆ ಮಾಣ್ಬುದೆ?
ಕಡೆಗೀಲು ಬಂಡಿಗಾಧಾರ. ಈ ಕಡುದರ್ಪವೇರಿದ
ಒಡಲೆಂಬ ಬಂಡಿಗೆಮೃಢಭಕ್ತರ ನುಡಿಗಡಣವೆ
ಕಡೆಗೀಲು ಕಾಣಾ! ರಾಮನಾಥ."
"ಅನುಭಾವವಿಲ್ಲದ ಭಕ್ತಿ ತಲೆಕೆಳಗಾದುದಯ್ಯಾ.
ಅನುಭಾವ ಭಕ್ತಿಗಾಧಾರ;ಅನುಭಾವ ಭಕ್ತಿಗೆ ನೆಲೆವನೆ.
ಅನುಭಾವ ಉಳ್ಳವರ ಕಂಡು ತುರ್ಯ ಸಂಭಾಷಣೆಯ
ಬೆಸಗೊಳ್ಳದಿದ್ದಡೆ ನರಕದಲ್ಲಿಕ್ಕಯ್ಯಾ! ರಾಮನಾಥ."

ಈ ರೀತಿ ನೂರಾರು ವಚನಗಳನ್ನು ವಚನಕೋಶದಲ್ಲಿ ಕಾಣುತ್ತೇವೆ. ದೇವರ ದಾಸಿಮಯ್ಯನವರ ವಚನಗಳನ್ನು ರಚಿಸಿರುವವರಲ್ಲಿ ಮೊದಲಿಗರಾದರೂ ಸಹ ಅವರ ವಚನಗಳು ಯಾರಿಗೂ ತಿಳಿದಿಲ್ಲ. ನಂತರ ಬಂದ ಎಲ್ಲಾ ಶರಣರೂ, ಸಾಧು ಸಂತರೂ ರಚಿಸಿದ ವಚನಗಳು ಬಳಕೆಗೆ ಮತ್ತು ಬೆಳಕಿಗೂ ಬ೦ದವು. ದಾಸಿಮಯ್ಯನವರನ್ನು, ದೇವರ ದಾಸಿಮಯ್ಯ, ದೇವಲ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಎಂಬ ಹೆಸರಿನಿಂದ ಕರೆಯಲ್ಪಡುತ್ತಾರೆ. ಅವರು ರಾಮನಾಥ ಎಂಬ ದೇವರಲ್ಲಿ ಅಪಾರವಾದ ಭಕ್ತಿಯನ್ನು ಇಟ್ಟು ಕೊಂಡಿದ್ದರು. ಕೊನೆಯಲ್ಲಿ ಇವರ ಆರಾಧ್ಯ ದೈವವಾದ "ರಾಮನಾಥ" ಎಂಬ ಅಂಕಿತವನ್ನು ಕಾಣಬಹುದು.
ದೇವರ ದಾಸಿಮಯ್ಯನವರ ಉಪಲಬ್ಧ ವಚನಗಳಲ್ಲಿ ಉತ್ಕಟವಾದ ವೀರಶೈವ ನಿಷ್ಠೆ, ನಿಷ್ಠುರವಾದ ಸ್ಪಷ್ಟ ವಾಕ್ಯತೆ, ಮಾರ್ಮಿಕವಾದ ಸಂಕ್ಷಿಪ್ತ ಶೈಲಿ, ಔಚಿತ್ಯಪೂರ್ಣವಾದ ದೃಷ್ಟಾಂತಗಳ ಸಂಪತ್ತಿಯ ಗುಣಗಳು ಎದ್ದು ಕಾಣುತ್ತವೆ. ದೇವರ ದಾಸಿಮಯ್ಯ ವಿಶ್ವದ ಪ್ರಥಮ ವಚನಕಾರ. ಅವರು ರಾಮನಾಥ ಎಂಬ ಹೆಸರಲ್ಲಿಯೇ 176 ವಚನಗಳನ್ನು ರಚಿಸಿದ್ದಾರೆ. ದಾಸಿಮಯ್ಯನವರ ವಚನಗಳು ಅರ್ಥೈಸಿಕೊಳ್ಳಲು ಬಹಳ ಸರಳವಾಗಿದ್ದು, ಸಮಾಜಕ್ಕೆ ವಿಶೇಷವಾದ ಧಾರ್ಮಿಕ ಪ್ರಜ್ಞೆಯ ಸ್ಪೂರ್ತಿಯ ಚಿಲುಮೆಯಾಗಿವೆ. ಪ್ರತಿಯೊಬ್ಬ ಮಾನವನು, ಉತ್ತಮ ಸಂಸ್ಕೃತಿ, ಧರ್ಮ, ಆಚಾರವಾಗಿ ನಡೆಸಬೇಕೆಂಬ ಸಂದೇಶವನ್ನು ತಮ್ಮ ವಚನಗಳ ಮೂಲಕ ದಾಸಿಮಯ್ಯ ಪ್ರಪಂಚಕ್ಕೆ ತಿಳಿಸಿ ಹೇಳಿದ್ದಾರೆ.
ಮನುಷ್ಯ ಜನ್ಮ, ಮುಕ್ತಿ ಹೊಂದುವುದು ಮತ್ತು ಮಹಾಜನರ ಸತ್ಸಂಗ ಈ ಮೂರು ಸಿಗುವುದು ದೇವರ ಅನುಗ್ರಹ ಮಾತ್ರ ಸಾಧ್ಯ ಆದ್ದರಿಂದ ದಾಸವರೇಣ್ಯರು ಹಾಡಿರುವ "ಮಾನವ ಜನ್ಮ ದೊಡ್ಡದು, ಇದನ್ನು ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ" ಎಂದಿರುವಂತೆ ನಾವುಗಳು, ಯಾರು? ನಮ್ಮ ಕುಲಕಸುಬು ಏನು? ನಮ್ಮ ದೇವರು ಯಾರು? ನಮ್ಮಲ್ಲಿ ಆಗಿಹೋಗಿರುವ ಮಹಾತ್ಮರು ಯಾರು? ಮೊದಲಾದ ವಿಷಯಗಳನ್ನು ತಿಳಿದುಕೊಳ್ಳುವುದು ತುಂಬಾ ಅವಶ್ಯಕ.
ದೇವರ ದಾಸಿಮಯ್ಯನವರು ತಮ್ಮ ಆದ್ಯಾತ್ಮ ಸಿರಿವಂತಿಕೆಯಿಂದ ಮೆರೆದು, ಶಿವನ ಹೆಜ್ಜೆಯಲ್ಲಿ ಹೆಜ್ಜೆಯನಿಟ್ಟು, ತಮ್ಮ ಹೆಜ್ಜೆ ಪಾಡುಗಳನ್ನು ನಮಗಾಗಿ ಉಳಿಸಿಹೋಗಿದ್ದಾರೆ. ಇವುಗಳನ್ನು ಅನುಸರಿಸಿ ನಡೆದರೆ ಸಾಕು ನಮ್ಮ ಬಾಳು ಬೆಳಕಾಗುವುದು ಇಂತಹ ಮಹಾಪುರುಷನನನ್ನು ಪಡೆದ ದೇವಾಂಗ ಸಮಾಜವೇ ದನ್ಯ.
- ಗುರುಕುಲ.