ಕೊನೆಯ ಹಾಗು ಏಳನೇ ಅವತಾರ ದೇವರ ದಾಸಿಮಯ್ಯ ನವರ ಹಿರಿಮೆ
ಕೈಲಾಸದ ಶಿವನ ಒಲಗದಲ್ಲಿ ನಂದಿಗೆ ಯಾವ ಸ್ತಾನ - ಮಾನ ಗಳಿವೇ . ದೇವಾಂಗನಿಗೂ ಅದೇ ಸ್ತಾನ - ಮಾನ ಗಳಿವೆ. ಇಬ್ಬರೂ ಶಿವಗಣಾಧೀಶ್ವರು. ನಂದಿ ಶಿವನ ವಾಹನವಾದರೆ, ದೇವಾಂಗ ದಿವ್ಯಾ೦ಬರನಾಗಿ ಭೂಷಣನಾಗಿದ್ದಾನೆ. ನಂದಿ ಜಗತ್ತಿಗೆ ಅನ್ನದಾತ, ದೇವಾಂಗ ವಸ್ತ್ರದಾತ, ಒಬ್ಬನು ಜನತೆಗೆ ಅಂಗ ವರ್ಧಕ, ಒಬ್ಬನು ಅಂಗ ಪೋಷಕ , ಒಬ್ಬನು ರಸಕಾರ, ಇನ್ನೊಬ್ಬ ಅಲಾ೦ಕಾರಕ, ಒಬ್ಬನು ಪ್ರಾಣ ಪೋಷಕ,ಇನ್ನೊಬ್ಬ ಮಾನರಕ್ಷಕ. ನಂದಿ ಶೀಲಾದಾ,ನೀಲ,ಲೋಹಿತ... ಮುಂತಾಗಿ ಏಳು ಅವತಾರ ತಾಳಿ ಭೂಲೋಕಕ್ಕೆ ಬರುತ್ತಾನೆ. ದೇವಾಂಗನು ಸಹ ವಿದ್ಯಾಧರ, ಪುಷ್ಪದಂತ, ಬೇತಾಳ, ವರರುಚಿ ಚಿತ್ರಯೋಗಿ, ದೇವಶಾಲಿ, ಕೊನೆಯ ಅವತಾರವೇ ದೇವರ ದಾಸಿಮಯ್ಯ. ಏಳು ಅವತಾರ ಪುರುಷರಿಗೆ ಮೂಲ ಪುರುಷ "ದೇವಾಂಗ"ನಾದನು. ಅವನು ಸಾಕ್ಷತ್ ಜಗದೀಶ ಸ್ವರೂಪ, ಜಗದ್ರಕ್ಷಕನಾಗುತ್ತಾನೆ.
ಕನ್ನಡ ನಾಡಿನ ಶಿವ ಶರಣರರಲ್ಲಿ ದೇವರ ದಾಸಿಮಯ್ಯನವರು 11 ನೇ ಶತಮಾನದಲ್ಲಿ ಆಗಿ ಹೋದ ಶರಣರು. ಮಹಾಶಿವಶರಣರಲ್ಲಿ ಇವರೊಬ್ಬರು ಮತ್ತು ಶರಣ ಸಂಪ್ರದಾಯ ದಲ್ಲಿ ಮೊದಲಿಗರು ಹಾಗು ಆದ್ಯ ವಚನಕಾರ ಪಿತಾಮಹ, ಜನಪದ ಜಗದ್ಗುರು ಎಂಬ ಬಿರುದು ಸಹ ಇವರಿಗೆ ಇದೆ. ದೇವರ ದಾಸಿಮಯ್ಯನು ಒಬ್ಬ ಐತಿಹಾಸಿಕ ಪುರುಷ ನೆಂಬುದಕ್ಕೆ ಶಿಲಾ ಶಾಸನ ಗಳು ಬಲವಾದ ಪ್ರಮಾಣ ಗಳಾಗಿವೆ. ಅವನ ನಂತರ ಸ್ವಲ್ಪ ಕಾಲದಲ್ಲಿಯೇ ಅವತರಿಸಿದ ಬಸವಣ್ಣನವರು ಈ ಶರಣ ದಂಪತಿಗಳ ಮಹಿಮೆಯನ್ನು ಅವರ ಚರಿತ್ರೆಯಲ್ಲಿ ಘಟನೆಗಳನ್ನು, ವಚನಗಳನ್ನು ತನ್ನ ವಚನ ವಾಜ್ಞ ಯದಲ್ಲಿ ನಿರರ್ಗಳವಾಗಿ ಉಲ್ಲೇಖಿಸಿದ್ದಾರೆ.

ಸಪ್ತ ತೀರ್ಥಗಳ ನಿಸರ್ಗ ಸೌಂದರ್ಯದ ನಡುವಿರುವ ಮುದನೂರು ಕಲಬುರ್ಗಿ ಜಿಲ್ಲೆಯ ಒಂದು ಹಳ್ಳಿ ಅದು ದಾಸಿಮಯ್ಯನ ಜನ್ಮಸ್ಥಳವು. ಆ ಊರಲ್ಲಿ ರಾಮನಾಥ ದೇವಾಲಯವಿದ್ದು ರಾಮನಾಥನೇ ದಾಸಿಮಯ್ಯನ ಆರಾಧ್ಯ ದೈವವು ಅವನ ವಚನಾಂಕಿತ ರಾಮನಾಥ ಎಂದಿದೆ. ಅವನ ತಂದೆಯ ಹೆಸರು ರಾಮಯ್ಯ ತಾಯಿ ಶಂಕರಿ ಅವರ ಮನೆತನದ ಉದ್ಯೋಗ ನೇಕಾರಿಕೆ ನೇಯ್ಕೆ ಕಾಯಕದಲ್ಲಿದ್ದರೂ ದಾಸಿಮಯ್ಯನಿಗೆ ಆತ್ಮಜ್ಞಾನದ ಹಸಿವು ಬಹಳವಾಗಿತ್ತು ಅದಕ್ಕಾಗಿ ಶ್ರೀಶೈಲಕ್ಕೆ ಹೋಗುತ್ತಾನೆ. ಪಂಡಿತಾರಾಧ್ಯ ಶಿವಾಚಾರ್ಯರಿಂದ ಶಿವದೀಕ್ಷೆ ಪಡೆದು ಸಾಧನೆ ಮಾಡಿ ಶಿವಜ್ಞಾನ ಸಂಪನ್ನನಾಗುತ್ತಾನೆ.
ಮನುಷ್ಯ ಜನ್ಮ, ಮುಕ್ತಿ ಹೊಂದುವುದು ಮತ್ತು ಮಹಾಜನರ ಸತ್ಸಂಗ ಈ ಮೂರು ಸಿಗುವುದು ದೇವರ ಅನುಗ್ರಹ ಮಾತ್ರ ಸಾಧ್ಯ ಆದ್ದರಿಂದ ದಾಸವರೇಣ್ಯರು ಹಾಡಿರುವ "ಮಾನವ ಜನ್ಮ ದೊಡ್ಡದು, ಇದನ್ನು ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ" ಎಂದಿರುವಂತೆ ನಾವುಗಳು, ಯಾರು? ನಮ್ಮ ಕುಲಕಸುಬು ಏನು? ನಮ್ಮ ದೇವರು ಯಾರು? ನಮ್ಮಲ್ಲಿ ಆಗಿಹೋಗಿರುವ ಮಹಾತ್ಮರು ಯಾರು ? ಮೊದಲಾದ ವಿಷಯಗಳನ್ನು ತಿಳಿದುಕೊಳ್ಳುವುದು ತುಂಬಾ ಅವಶ್ಯಕ. ದೇವರ ದಾಸಿಮಯ್ಯನವರು ತಮ್ಮ ಆದ್ಯಾತ್ಮ ಸಿರಿವಂತಿಕೆಯಿಂದ ಮೆರೆದು, ಶಿವನ ಹೆಜ್ಜೆಯಲ್ಲಿ ಹೆಜ್ಜೆಯನಿಟ್ಟು, ತಮ್ಮ ಹೆಜ್ಜೆ ಪಾಡುಗಳನ್ನು ನಮಗಾಗಿ ಉಳಿಸಿ ಹೋಗಿದ್ದಾರೆ. ಇವುಗಳನ್ನು ಅನುಸರಿಸಿ ನಡೆದರೆ ಸಾಕು ನಮ್ಮ ಬಾಳು ಬೆಳಕಾಗುವುದು ಇಂತಹ ಮಹಾಪುರುಷನನನ್ನು ಪಡೆದ ದೇವಾಂಗ ಸಮಾಜವೇ ದನ್ಯ.

ದಾಸಿಮಯ್ಯನವರ ಬಾಲ್ಯ ಹಾಗು ಶಿಕ್ಷಣ ಗೃಹಸ್ಥ ಹಾಗು ವಚನಕಾರರಾಗಿ