ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾದ ಹಂಪಿ ಹೇಮಕೂಟ ಪುಣ್ಯ ಸ್ಥಾನದಲ್ಲಿರುವ ಶ್ರೀ ಗಾಯತ್ರೀ ಪೀಠವು ಅಖಿಲ ಭಾರತ (ಕನ್ನಾಕುಮಾರಿಯಿಂದ ಹಿಮಾಲಯ ದವರೆಗೆ (ಈಗ ಪ್ರಪಂಚದ ಎಲ್ಲ ಭಾಗಗಳಲ್ಲಿ) ನೆಲೆಸಿರುವ ಸಮಸ್ತ ದೇವಾಂಗ ಸಮಾಜದ ವಿವಿಧ ಪಂಗಡಗಳಿಗೆಲ್ಲ ಗುರು ಪೀಠ ಹಾಗೂ ಧಾರ್ಮಿಕ ಶಕ್ತಿ ಕೇಂದ್ರ ವಾಗಿದೆ. ಈ ವಿಶ್ವದಲ್ಲಿ ಅನೇಕ ಸಮಾಜದ ಜನಾಂಗದವರು ಗಾಯತ್ರೀ ಮಂತ್ರದ ಉಪಾಸನೆ ಮಾಡುತ್ತಿದ್ದು ಅನೇಕ ಜಗದ್ಗುರು ಪೀಠಗಳು ವಿವಿಧ ಹೆಸರಿನಲ್ಲಿ ಸ್ಥಾಪಿತ ರಾಗಿದ್ದರು.
" ಶ್ರೀ ಗಾಯತ್ರೀ ಪೀಠ "ವೆಂಬ ಹೆಸರಿನಲ್ಲಿ ಸ್ಥಾಪನೆಯಾಗಿರುವುದು ವಿಶ್ವದ ದೇವಾಂಗ ಸಮಾಜದ ಜನಾಂಗಕ್ಕೆ ಇದು ಹೆಮ್ಮೆಯ ಸಂಗತಿ. ಏಕೆಂದರೆ ಗಾಯತ್ರೀಯ (ಯಜ್ನೋಪವೀತ) ಸೃಷ್ಟಿಯ ಮೂಲ ಕಾರಣ ಗಾಯತ್ರೀಗೆ ತ್ರಿಪಾದಗಳನ್ನು (ಯಜ್ನೋಪವೀತದ ಮೂರು ಎಳೆಗಳು) ತಂತು ಸೂತ್ರಗಳನ್ನು ನೀಡಿ ವಿಶ್ವದಲ್ಲಿ ಸಂಸ್ಕೃತಿ ಸಂಸ್ಕಾರದ ವಿಧಿ ವಿಧಾನಗಳನ್ನು ಉದ್ಧರಿಸಿದವನು ದೇವಾಂಗನು. ದೇವಾಂಗ ಸಮಾಜದ ಹಂಪಿ ಹೇಮಕೂಟ ಶ್ರೀ ಗಾಯತ್ರಿ ಪೀಠ ಮಹಾ ಸಂಸ್ಥಾನದ ಇತಿಹಾಸ ಪ್ರಸಿದ್ಧ ದೇವಿಯಾಗಿ ಪೂಜಿಸಿ, ಶ್ರೀ ಗಾಯತ್ರೀ ಮಂತ್ರವನ್ನು ಜಪಿಸಿ ಕೊಂಡು ಬಂದಿರುವ ಜಗತ್ತಿನ ಮಹಾನ್ ಪೀಠ ವಾಗಿದೆ.
ಶ್ರೀ ಗಾಯತ್ರಿ ಪೀಠದ ಐತಿಹಾಸಿಕ ಹಿನ್ನೆಲೆ
ದೇವಾಂಗರ ಅಸ್ತಿತ್ವವು ನಶಿಸುವ ಸಮಯ ಸುಮಾರು ಏಳು-ಎಂಟು ನೂರು ವರ್ಷಗಳ ಹಿಂದೆಯೇ ಬಂದೊದಗಿತ್ತು. ಅನ್ಯಮತಸ್ಥರು ಕೆಲವರು ದೇವಾಂಗ ಸಮಾಜದವರನ್ನು ಮತಾಂತರ ಗೊಳಿಸುವ ಕಾರ್ಯ ಕೈಗೊಂಡಾಗ ಗಂಗಾವತಿ ಗ್ರಾಮದ ಪೂಜ್ಯ ಶ್ರೀ ಫಣೆಗೌಡರೆಂಬ ದೇವಾಂಗ ಮಹಾಪುರುಷನು ನಿಜ ಧರ್ಮ ಪ್ರತಿಪಾದನೆಗಾಗಿ ವಿಜಯನಗರ ಸಾಮ್ರಾಟರ ಸನ್ನಿಧಿಯಲ್ಲಿ ದೇವಾಂಗರ ಆಚಾರ, ವಿಚಾರ, ವೈದಿಕ ಧರ್ಮದ ಶಾಸ್ತ್ರಸಮ್ಮತ ವೈದಿಕ ಧರ್ಮ ಪರಂಪರೆ ಯಿಂದ ನಡೆಯುತ್ತ ಬಂದಿದ್ದನ್ನು ,ಅನ್ಯಮತ ಸೇರುವುದು ಅನುಚಿತ ವೆಂದೂ ಪ್ರತಿಪಾದಿಸಲಾಗಿ ಸಾಮ್ರಾಟರು ದೇವಾಂಗ ಧರ್ಮದ ಸನಾತನ ತತ್ವವನ್ನು ಶಾಸ್ತ್ರ ಸಮ್ಮತವಾಗಿ ವಿಶದೀಕರಿಸಬೇಕೆಂದು ರಾಜಾಜ್ಞೆ ಮಾಡಿದ ಮೇರೆಗೆ ಶ್ರೀ ಫಣೆ ಗೌಡರು ಅನೇಕ ಕಡೆಗೆ ಸಂಚರಿಸಿ ನಿದ್ರಾಹಾರ ತ್ಯಜಿಸಿ ಧ್ಯಾನ ಯೋಗದಲ್ಲಿರಲು ಗಂಗಾವತಿ ಗುಹೆಯಲ್ಲಿ ಶ್ರೀ ಮುದ್ದುಸಂಗ ಮಹಾಮುನಿವರ್ಯರು ಇರುವರೆಂದು ತಿಳಿದು ಅಲ್ಲಿಗೆ ತೆರಳಿದರು.
ಯತಿಗಳು ಯೋಗ ತ್ಯಜಿಸಿ ಶಕೆ 1293 ನೇ ಪರಿಧಾವಿ ನಾಮ ಸಂವತ್ಸರದ ಮಾರ್ಗ ಶಿರ ಶುದ್ಧ ಪಂಚಮಿ ಗುರುವಾರ ಶಿಷ್ಯ ಸಮೇತರಾಗಿ ಮಹಾನ್ ಪಂಡಿತರ ಮತ್ತು ವಿಖ್ಯಾತ ಶಾಸ್ತ್ರಜ್ಞರ ಸಮ್ಮುಖದಲ್ಲಿ ಸಾಮ್ರಾಟರ ಆಸ್ಥಾನದಲ್ಲಿ ಅನ್ಯಮತ ಪ್ರತಿಪಾದಕರನ್ನು , ತಮ್ಮ ಅಮೋಘ ವಾಣಿ ಯಿಂದ ದೇವಾಂಗರ ಆಚಾರ - ವಿಚಾರ ವೈದಿಕ ಧರ್ಮದ ಪರಂಪರೆಗಳನ್ನು ಧರ್ಮದ ಸನಾತನ ತತ್ವವನ್ನು ಮಾರ್ಮಿಕವಾಗಿ ಪ್ರತಿಪಾದಿಸಿ ಜಯಸಿದ್ದರಿಂದ ಆನೆಗೊಂದಿ ಸಾಮ್ರಾಟರಾದ ವೀರ ಪ್ರತಾಪ ಸಿಂಹರು ಸುಪ್ರೀತರಾಗಿ ಶ್ರೀ ಹಂಪಿ ಕ್ಷೇತ್ರದಲ್ಲಿ ಹೇಮಕೂಟ ಶ್ರೀ ಗಾಯತ್ರಿ ಪೀಠಕ್ಕೆ ದೇವಾಂಗ ಮಠವನ್ನು ಕಟ್ಟಡ ನಿರ್ಮಾಣ ಮಾಡಿಸಿಕೊಟ್ಟರು.
ಶ್ರೀ ಮುದ್ದುಸಂಗ ಮಹಾ ಮುನಿಗಳು ಅಲ್ಲಿ ಶ್ರೀ ಗಾಯತ್ರೀ ಪೀಠ ಪ್ರತಿಷ್ಠಾಪಿಸಿ ಶ್ರೀ ಫಣೆಗೌಡ ವಂಶದ ನಾಗಾಭರಣ ಪ್ರಥಮ ಗೋತ್ರ ಮನುರ್ದೇವ ಮಹರ್ಷಿ ಋಕ್ ಶಾಖಾಧ್ಯಾಯಿ ಅಶ್ವಲಾಯನ ಸೂತ್ರ ಸದ್ಯೋಜಾತ ಪ್ರವರಗಳ ಬಾಲಕನಿಗೆ ದೀಕ್ಷೆ ಪ್ರಧಾನ ಮಾಡಿ " ಶ್ರೀ ಮುದ್ದುಸಂಗ ಮಹಾಮುನಿ " ಎಂಬ ತಮ್ಮ ಹೆಸರನ್ನು ಅಭಿದಾನ ಮಾಡಿ ಬ್ರಹ್ಮೋಪದೇಶ ಮಾಡಿ ಹಂಪಿ ಹೇಮಕೂಟ ಶ್ರೀ ಗಾಯತ್ರಿ ಪೀಠಾಧೀಶ್ವರರಾಗಿ ಮಾಡಿ ಆಶೀರ್ವದಿಸಿ, ಭೂಪತಿಯಿಂದ ತಕ್ಕ ವೃತ್ತಿ ಸ್ವಾಸ್ಥ್ಯದ ಶಾಸನ ಮಾಡಿಸಿ ಪುನಃ ತಪಸ್ಸಿಗೆ ಹೋದರು.
ಶ್ರೀ ಗಾಯತ್ರಿ ಪೀಠದ ಮೂಲ ಪರಂಪರೆ
1, ಮೊದಲನೇ ಮುದ್ದುಸಂಗ ಮಹಾ ಮುನಿಗಳು, ಪಟ್ಟ 1371 , ಶಿವೈಕ್ಯ 1464 , ಸ್ಥಳ ಕನಕಗಿರಿ.
2, ಎರಡನೇ ಮುದ್ದುಸಂಗ ಮಹಾ ಮುನಿಗಳು ಪಟ್ಟ 1464 , ಶಿವೈಕ್ಯ 1550 , ಸ್ಥಳ ಕೊಪ್ಪಳ.
3, ಮೂರನೇ ಮುದ್ದುಸಂಗ ಮಹಾ ಮುನಿಗಳು ಪಟ್ಟ 1550 , ಶಿವೈಕ್ಯ 1646 , ಸ್ಥಳ ಕನಕಗಿರಿ.
4, ದುರ್ವಾಸ ಮುನಿ ಸ್ವಾಮೀಜಿ ಪಟ್ಟ 1646, ಶಿವೈಕ್ಯ 1694, ಸ್ಥಳ ಕನಕಗಿರಿ.
5, ಇವರಲ್ಲಿ ಮುದ್ದುಸಂಗ ಸ್ವಾಮಿಗಳು ಶಕೆ 1694-1779 ಕಂಪ್ಲಿ ಇವರು ಅಜಮಾಸು 1730 ರಿಂದ 1748ರ ವರೆಗೆ ಪೀಠ ದಲ್ಲಿದ್ದು ,ವಾನಪ್ರಸ್ತಾಶ್ರಮಕ್ಕೆ ಕಂಪ್ಲಿಗೆ ಹೋಗಿ ಶಕೆ 1779 ರಲ್ಲಿ ದೇಹ ತ್ಯಜಿಸಿದರೆಂದು ದಾಖಲೆಗಳಿವೆ.
ಈ ಪ್ರಕಾರ ಎಷ್ಟೋ ಸಂವತ್ಸರಗಳ ಕಾಲ ಆ ಪೀಠದ ಅಧಿಕಾರವು ನಡೆದು ಉತ್ತುಂಗ ಶಿಖರಕ್ಕೇರಿದ ಮಹಾನ್ ಪೀಠವಾಗಿದೆ. ಅನಂತರ ಸಂವತ್ಸರಗಳು ಉರುಳಿ ಹೋದರೂ ಪೀಠವು ಶೂನ್ಯ ವಾಗಿಯೇ ಉಳಿಯಿತು.
ಬೆಳಗಾವಿ ಪಂಚ ಗ್ರಾಮಗಳ ದೇವಾಂಗ ಸಮಾಜದ ಪ್ರಮುಖರು ಸುಸಂಘಟಿತರಾಗಿ ಸನ್ 1904ನೇ ಡಿಸೆಂಬರ್ 28ನೇ ದಿನ " ದೇವಾಂಗ ಧರ್ಮ ಪ್ರಸಾರಕ ಸಮಾಜವೆಂಬ " ಅಭಿದಾನ ದಿಂದ ಒಂದು ಸಂಸ್ಥೆಯನ್ನು ಸಂಸ್ಥಾಪಿಸಿ ಹಂಪಿ ಹೇಮಕೂಟ ಶ್ರೀ ಗಾಯತ್ರಿ ಪೀಠಕ್ಕೆ ಜಗದ್ಗುರುಗಳನ್ನೂ ಪೀಠಾರೋಹಣ ಮಾಡುವ ಕಾರ್ಯ ಅಂದು ಸಮಾಜದ ಭಾಂಧವರಿಂದ ಚಲನೆಯಾಯಿತು. ಇಳಕಲ್ನ ಕುಲಭೂಪಣ ಶ್ರೀ ಸಕ್ರಿ ಶಂಕರಪ್ಪನವರ ನೇತ್ರತ್ವದಲ್ಲಿ ಶ್ರೀ ಶ್ರೀ ಕಂಠಸ್ವಾಮಿ ಎಂಬ ಬಾಲಕನನ್ನು ಗುರು ಪೀಠಕ್ಕೆ ಆಯ್ಕೆ ಮಾಡಲಾಯಿತು ನಂತರ ಶ್ರೀಗಳ ಪಟ್ಟಾಭಿಷೇಕದ ಪೂರ್ವಭಾವಿ ಯಾಗಿ ಶ್ರೀ ಶ್ರೀ ಕಂಠಸ್ವಾಮಿಗಳ ಉಪನಯನವನ್ನು ಹಂಪಿ ಹೇಮಕೂಟ ಶ್ರೀ ಗಾಯತ್ರಿ ಪೀಠ ದೇವಾಂಗ ಮಠದಲ್ಲಿ ಸನ್ 1910ನೇ ಮೇ ತಿಂಗಳ 20ನೇ ದಿನಾಂಕ ವಿಧ್ಯುಕ್ತವಾಗಿ ನೆರವೇರಿಸಲಾಯಿತು. ಅದೇ ಸಂದರ್ಭದಲ್ಲಿ ಶ್ರೀ ಚಂದ್ರ ಚೌಡೇಶ್ವರಿ ವಿಗ್ರಹ ಪ್ರಾಣ ಪ್ರತಿಷ್ಠಾಪಿಸಲಾಗಿದೆ, ಆದರೆ ನಮ್ಮ ದೇವಾಂಗ ಸಮಾಜದ ದುರ್ದೈವ ದಿಂದಾಗಿ ಶ್ರೀ ಶ್ರೀಕಂಠಸ್ವಾಮಿಯವರು ಪೀಠಾರೋಹಣ ಮುಂಚಿತವಾಗಿ ಅಕಾಲಿಕವಾಗಿ ಮರಣವಾಯಿತು. ಮತ್ತೆ ವಟು ಶ್ರೀ ಜಂಬುನಾಥ ಸ್ವಾಮಿಗಳನ್ನು ಪೀಠಕ್ಕೆ ಆರಿಸಿದರು. ಕೆಲವೇ ದಿನಗಳಲ್ಲಿ ಅವರು ಸಹ ಪೀಠಾರೋಹಣ ಮುಂಚಿತವಾಗಿ ಅಕಾಲಿಕವಾಗಿ ದೈವಧೀನರಾದರು.
ಕಂಪ್ಲಿ ಮಠದ ಶ್ರೀ ಮುದ್ದುಸಂಗ ಸ್ವಾಮಿ ಗಳನ್ನೂ ಆರಿಸಿ ಅವರನ್ನು ಮಾಲ್ಯವಂತ ಪರ್ವತದಲ್ಲಿ ವೇದಭ್ಯಾಸಕ್ಕಾಗಿ ಶ್ರೀ ಎಂ. ಹಂಪಯ್ಯನವರ ನೇತ್ರತ್ವದಲ್ಲಿ ನಡೆಯಿತು ಅದರೆ ಅವರು ಸನ್ಯಾಸಾಶ್ರಮ ದೀಕ್ಷೆ ಸ್ವೀಕರಿಸಲು ಒಪ್ಪಲಾರದೇ ಹೋದರು. ಅಂದಿನಿಂದ ಸಮಾಜದ ಹಿರಿಯರು ಮೇಲಿನ ಮೇಲಿಂದ ಅವ್ಯಾಹತವಾಗಿ ಶತ ಪ್ರಯತ್ನ ಮಾಡಿದರು ಸಮಾಜದ ದುರ್ದೈವದಿಂದ ಅನೇಕ ಬಾರಿ ವಿಘ್ನ ಗಳೊಂದಿಗೆ ಪೀಠವು ಶೂನ್ಯ ವಾಗಿಯೇ ಉಳಿಯಿತು.
ಬೆಂಗಳೂರಿನ ದೇವಾಂಗ ಸಂಘದ ನೇತ್ರತ್ವದಲ್ಲಿ 1972 ರಲ್ಲಿ ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ದೇವಾಂಗ ಪ್ರಥಮ ಸಮ್ಮೇಳನ ನಡೆದು ಶ್ರೀ ಜಗದ್ಗುರು ಪೀಠಕ್ಕೆ ಆಧಿಪತಿ ಆಯ್ಕೆ ಮಾಡಿ ಪಟ್ಟಾಭಿಷೇಕ ಕಾರ್ಯಕ್ರಮ ಕೈಗೊಳ್ಳಲು ಬಾಗಲಕೋಟೆ ಶ್ರೀ ಸಕ್ರಿ ವೆಂಕಪ್ಪನವರ ನೇತ್ರತ್ವದಲ್ಲಿ ಸಮಿತಿ ರಚಿಸಲಾಯಿತು. ಇದೇ ಸಮಿತಿಯನ್ನು ಹುಬ್ಬಳ್ಳಿ ಸಮ್ಮೇಳನ ಹಿಂದಿನ ದಿನ ಪಳನೀ ಸ್ವಾಮಿಗಳ ನೇತ್ರತ್ವದಲ್ಲಿ ಒಂದು ಸಭೆ ನಡೆಸಿ ಮಾರನೆದಿನ ಶ್ರೀ ಎಫ್. ಎಂ. ಬರದ್ ವಾಡ ರವರು 1980ನ ಹುಬ್ಬಳ್ಳಿ ಯಲ್ಲಿ ಕರ್ನಾಟಕ ರಾಜ್ಯ ದ್ವಿತೀಯ ದೇವಾಂಗ ಸಮಾಜದ ಮಹಾ ಸಮ್ಮೇಳನದಲ್ಲಿ ಘೋಷಣೆ ಮಾಡಿದರು.
ದೇವಾಂಗ ಜಗದ್ಗುರು ಪಟ್ಟಾಭಿಷೇಕ ಸಮಿತಿ ಅಧ್ಯಕ್ಷರಾದ ಶ್ರೀ ಬಿ.ಜಿ.ವೀರಣ, ಪ್ರಾದಾನ ಕಾರ್ಯದರ್ಶಿ ದೇವಾಂಗ ಕುಲಭೂಷಣ ಎಣ್ಣೆಗೆರೆ ವೈ.ವಿ. ಶ್ರೀನಿವಾಸಮೂರ್ತಿ ಮತ್ತೆ ಶ್ರೀ ಜಗದ್ಗುರು ಪೀಠದ ಸಮಿತಿಗೆ ,ಡಿ. ಹನುಮಂತಪ್ಪ, ವೈ.ವಿ . ತಿಮ್ಮಯ್ಯ , ಎಫ್. ಎಂ. ಬರದ್ ವಾಡ , ಹುಬ್ಬಳ್ಳಿಯ ಮೋಹನ್ ರಾವ್ ಹೆಬ್ಳೀಕರ್ , ಶ್ರೀ ಸಿ.ಎಂ.ಧಾರವಾಡಕರ್ , ತಮಿಳುನಾಡಿನ ಕೆ.ರಾಜಗೋಪಾಲ ಚೆಟ್ಟಿಯಾರ್ ,ಶ್ರೀ ವೆಲ್ಲಂಗಿರಿ ,ಶ್ರೀ ಪಳನೀಸ್ವಾಮಿ ಮತ್ತು ಇನ್ನೂ ಅನೇಕ ಸಮಾಜದ ನಾಯಕರ ಪ್ರಯತ್ನ ಫಲವಾಗಿ ಒಂದು ಸಮಿತಿಯನ್ನು ಮತ್ತೆ ರಚಿಸಿ, ಈ ಸಮಿತಿಯನ್ನು ಕಾಯ್ದೆ ಬದ್ಧವಾಗಿ ನೋಂದಾಯಿಸಿ ಕಾರ್ಯಾರಂಭ ಮಾಡಿತು.
ಶ್ರೀ ಗುರು ಪೀಠಕ್ಕೆ ದೈವಿಕ ಶಕ್ತಿಯ ಚೈತನ್ಯ ತುಂಬುವ ವಂಥ ಗುರುಗಳನ್ನು ಆಯ್ಕೆ ಮಾಡಲೇಬೇಕು ಎಂದು ಪ್ರತಿಜ್ಞೆ ಮಾಡಿದ ಫಲವಾಗಿ ಮೂಲ ಪೀಠಸ್ಥರಾದ ಪರಮಪೂಜ್ಯ ಶ್ರೀ ಮುದ್ದುಸಂಗ ಮಹಾಮುನಿಗಳ ವಂಶಸ್ಥರಾದ ಕಂಪ್ಲಿ ಮಠದ ವೇ. ಶ್ರೀ ಶಂಕರಯ್ಯಸ್ವಾಮಿಗಳ ದ್ವಿತೀಯ ಸುಪುತ್ರರಾದ ಶ್ರೀ ನಿರಂಜನ ಸ್ವಾಮೀಜಿಯವರನ್ನು ಪೀಠಕ್ಕೆ ಆಯ್ಕೆ ಮಾಡಿ ವೇದಭ್ಯಾಸಕ್ಕಾಗಿ ಬೆಂಗಳೂರಿನ ರಾಜ ರಾಜೇಶ್ವರಿ ನಗರದ ಕೈಲಾಸಾಶ್ರಮದ ತಪಸ್ವಿಗಳೂ, ರಾಜಯೋಗಿಗಳೂ ಆದ ಪರಮಪೂಜ್ಯ ಶ್ರೀ ಶ್ರೀ ಶ್ರೀ ತಿರುಚ್ಚಿಸ್ವಾಮಿಗಳ ಕೃಪಾಶ್ರಯ ಪಡೆಯಲಾಯಿತು.
ಪರಮಪೂಜರು ನಮ್ಮ ಶ್ರೀ ಗಳಿಗೆ ಧರ್ಮ ಪರಂಪರೆಯ ಅನುಗುಣವಾಗಿ ಸನ್ಯಾಸ ದೀಕ್ಷೆ ಪ್ರದಾನ ಮಾಡಿದರು. ತದನಂತರ ಹಂಪಿ ಹೇಮಕೂಟ ಶ್ರೀ ಗಾಯತ್ರಿ ಪೀಠ ದೇವಾಂಗ ಮಠದ ಆವರಣ ಪರಿಸರವನ್ನು ಪುನರುಜ್ಜೀವನಗೊಳಿಸುವ ಕಾರ್ಯದಲ್ಲಿ ಶ್ರೀ ಪಳನೀ ಸ್ವಾಮಿಗಳು ಇವರ ಜೊತೆ ದೇವಾಂಗ ಕುಲ ರತ್ನ ಡಿ. ಹುನುಮಂತಪ್ಪ , ದೇವಾಂಗ ಕುಲಭೂಷಣ ಎಣ್ಣೆಗೆರೆ ವೈ.ವಿ. ಶ್ರೀನಿವಾಸಮೂರ್ತಿ, ಕರೆಗುಂಡಿ ಸಿ.ಅಣ್ಣಪ್ಪ ಮತ್ತು ಇತರ ಸಮಿತಿಯವರ ಶ್ರಮ ಅಪಾರ ಸದರಿ ಸಮಿತಿಯವರು 1984 ರಲ್ಲಿ ಪವಿತ್ರ ಶ್ರೀ ಗಾಯತ್ರೀ ಹೋಮ ,ಶ್ರೀ ಗಣಪತಿ ಹಾಗೂ ನಂದಿ ವಿಗ್ರಹಗಳ ಪ್ರಾಣಪ್ರತಿಷ್ಠೆ, ಶ್ರೀ ಮಠದಲ್ಲಿ ನಿತ್ಯವೂ ಪೂಜೆ ವ್ಯವಸ್ಥೆ ಮಾಡಿ, ಶಾಶ್ವತವಾಗಿ ನೀರು ಪೂರೈಕೆ ವ್ಯವಸ್ಥೆ ಯನ್ನು ಸರ್ಕಾರ ದ ವತಿಯಿಂದ ಮಾಡಿದ ಕೀರ್ತಿ ಬಿ.ಬಿ.ಬಣ್ಣದ ಅವರಿಗೆ ಸಲ್ಲುತ್ತದೆ.
ಶ್ರೀ ರಾಜ ರಾಜೇಶ್ವರಿ ಕೈಲಾಸಾಶ್ರಮದ ಪರಮ ಪೂಜ್ಯ ಸ್ವಾಮಿಗಳಾದ ಶ್ರೀ ಶ್ರೀ ತಿರುಚ್ಚಿಸ್ವಾಮಿಗಳು ಶ್ರೀ ಜಗದ್ಗುರು ಪಟ್ಟಾಭಿಷೇಕ ಮಹೋತ್ಸವದ ಕಾರ್ಯ ಪ್ರಾರಂಭಿಸಲಾಯಿತು.ಭರತ ಖಂಡದ ಸಮಸ್ತ ದೇವಾಂಗ ಜನಾಂಗದವರ ಸರ್ವತೋಮುಖ ಏಳಿಗೆಗಾಗಿ ಶತ ಶತ ಸಂವತ್ಸರಗಳಿಂದ ಶೂನ್ಯವಾಗಿದ್ದ ಶ್ರೀ ಗಾಯತ್ರೀ ಪೀಠಕ್ಕೆ ಶ್ರೀ ಮುದ್ದುಸಂಗ ಮಹಾಮುನಿಗಳ ತಪಸ್ಸಿನ ಫಲವಾಗಿ ಅವರ ಕೃಪಾಶೀರ್ವಾದದಿಂದಾಗಿ 1980ರಲ್ಲಿ ಏಪ್ರಿಲ್ ತಿಂಗಳಲ್ಲಿ 30 ನೇ ಸೋಮವಾರ ದಿವಸ ಶ್ರೀ ಶ್ರೀ ತಿರುಚ್ಚಿಸ್ವಾಮಿಗಳ ಮತ್ತು ಪಳನೀ ಸ್ವಾಮಿಗಳ ನೇತ್ರತ್ವದಲ್ಲಿ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಮುದ್ದುಸಂಗ ಮಹಾಮುನಿಗಳ ವಂಶ ಸಂಜಾತರಾದ ಶ್ರೀ ಮನು ದೇವಾಂಗ ಮಹರ್ಷಿ ಪರಂಪರಾ ಋಕ್ ಶಾಖಾ ನಾಗಾಭರಣ ಗೋತ್ರ ಸ್ವಸ್ತಿ ಶ್ರೀ ವಿಜಯ ಭ್ಯುದಯ ಶಾಲಿವಾಹನ ಶಕ ವರ್ಷಗಳು 1889ಕ್ಕೆ ಸರಿಯಾದ ಶ್ರೀ ಪ್ಲವಂಗ ನಾಮ ಸಂವತ್ಸರೇ ಉತ್ತರಾಯಣ ವಸಂತ ಋತು ವೈಶಾಖ ಮಾಸ ಬಹುಳ 24-5-1967 ಬುಧವಾರ ಕರ್ನಾಟಕ ರಾಜ್ಯ ಬಳ್ಳಾರಿ ಜಿಲ್ಲೆಯಲ್ಲಿ ಜನಿಸಿದ ಅಶ್ವಲಾಯನ ಸೂತ್ರ ಸದ್ಯೋಜಾತದವರಾದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ದಯಾನಂದಪುರಿ ಮಹಾಸ್ವಾಮಿಗಳಿಗೆ ಶುಭ ಸಿಂಹ ಲಗ್ನದ ಶುಭ ಮುಹೂರ್ತದಲ್ಲಿ ನಮ್ಮ ದೇವಾಂಗ ಸಮಾಜದ 6 ನೇ ಗುರುಗಳ" ಪಟ್ಟಾಭಿಷೇಕ ಮತ್ತು ಕಿರೀಟಧಾರಣೆ " ಮಹೋತ್ಸವವು ವಿಜಯನಗರ ಸಾಮ್ರಾಜ್ಯದ ಪಂಪಾಕ್ಷೇತ್ರ ಹಂಪಿ ಹೇಮಕೂಟ ಶ್ರೀ ಗಾಯತ್ರಿ ಪೀಠ ಮಹಾಸಂಸ್ಥಾನದಲ್ಲಿ ನಿರ್ಮಾಣ ಸಿದ್ದ ಭವ್ಯ ಮಂಟಪದಲ್ಲಿ ದೇಶದಾದ್ಯಂತ ದೇವಾಂಗ ಸಮಾಜದ ಕುಲ ಬಾಂಧವರ ಸಹಸ್ರ - ಸಹಸ್ರ ಸಂಖ್ಯೆಯಲ್ಲಿ ಆಭೂತಪೂರ್ವವಾದ ಸಮಾರಂಭ ಹಾಗು ಅಪೂರ್ವ ವೈಭವ ಪೂರ್ಣವಾದ ಮಹೋತ್ಸವ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆಯಲ್ಪಡುವಂತ ಸುವರ್ಣ ದಿನವಾಯಿತು.
ಅಂದಿನ ಧರ್ಮ ಸಭೆಯಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧೀಶ್ವರ ಜಗದ್ಗುರು ಶ್ರೀ ಶ್ರೀ ಬಾಲ ಗಂಗಾಧರನಾಥ ಸ್ವಾಮೀಜಿ, ಐರಣೆ ಕ್ಷೇತ್ರದ ಶ್ರೀ ಶ್ರೀ ಬಸವರಾಜ ದೇಶೀ ಕೇಂದ್ರ ಮಹಾ ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು, ದೇವಾಂಗ ಜಗದ್ಗುರು ಪಟ್ಟಾಭಿಷೇಕ ಸಮಿತಿಯ ಅಧ್ಯಕ್ಷರಾದ ಬಿ.ಜಿ.ವೀರಣ್ಣ, ಪ್ರಾಧನಕಾರ್ಯದರ್ಶಿ ದೇವಾಂಗ ಕುಲಭೂಷಣ ಎಣ್ಣೆಗೆರೆ ವೈ.ವಿ. ಶ್ರೀನಿವಾಸಮೂರ್ತಿ , ಡಿ. ಹುನುಮಂತಪ್ಪ ,ವೈ.ವಿ. ತಿಮ್ಮಯ್ಯ, ಹುಬ್ಬಳ್ಳಿಯ ಮೋಹನ್ ರಾವ್ ಹೆಬ್ಳೀಕರ್, ಶ್ರೀ ಸಿ.ಎಂ.ಧಾರವಾಡಕರ್, ಶ್ರೀ ಕೆ.ರಾಜಗೋಪಾಲ ಚೆಟ್ಟಿಯಾರ್, ಶ್ರೀ ವೆಲ್ಲಂಗಿರಿ, ಶ್ರೀ ಪಳನೀಸ್ವಾಮಿ ಮತ್ತು ಇನ್ನೂ ಅನೇಕ ಸಮಾಜದ ನಾಯಕರು ಉಪಸ್ಥಿತರಿದ್ದರು. ಹಂಪಿ ಹೇಮಕೂಟ ಶ್ರೀ ಗಾಯತ್ರಿ ಪೀಠಾಧೀಶ್ವರ ಶ್ರೀ ಶ್ರೀ ಶ್ರೀ ದಯಾನಂದಪುರಿ ಮಹಾ ಸ್ವಾಮಿಗಳಿಗೆ ಎಲ್ಲಾ ಸ್ವಾಮೀಜಿಗಳು ತುಂಬು ಹೃದಯದಿಂದ ಶುಭ ಹಾರೈಸಿದರು.

- ಕನ್ನಡದ ಆದ್ಯ ವಚನಕಾರ ವಚನ ಬ್ರಹ್ಮ ಶ್ರೀ ದೇವರ ದಾಸಿಮಯ್ಯನವರ ಜಯಂತಿ - ಚೈತ್ರ ಶುದ್ಧ ಪಂಚಮಿ
- ದೇವಾಂಗ ಶ್ರೀ ಕುಲದೇವತೆ ಚಂದ್ರ ಚೌಡೇಶ್ವರಿ ದೇವಿ ಬ್ರಹ್ಮ ರಥೋತ್ಸವ ಬೆಂಗಳೂರು - ಚೈತ್ರ ಶುದ್ಧ ಪೌರ್ಣಿಮ
- ದೇವಾಂಗ ವೇದಮಾತೆ ಶ್ರೀ ಗಾಯತ್ರೀ ಜಯಂತಿ - ವೈಶಾಖ ಶುದ್ಧ ಪಂಚಮಿ
- ದೇವಾಂಗ ಬೇತಾಳ ಜಯಂತಿ - ವೈಶಾಖ ಶುದ್ಧ ಪೌರ್ಣಿಮಾ
- ಕುಲದೇವತೆ ಶ್ರೀ ಚೌಡೇಶ್ವರಿ ಜಯಂತಿ - ಆಷಾಢ ಬಹುಳ ಅಮಾವಾಸ್ಯೆ
- ದೇವಾಂಗ ಚಿತ್ರಯೋಗಿ ಜಯಂತಿ - ಶ್ರಾವಣ ಶುದ್ಧ ದಶಮಿ
- ದೇವಾಂಗ ಋಗುಪಾಕರ್ಮ - ಶ್ರಾವಣ ಪೌರ್ಣಿಮೆ
- ದೇವಾಂಗ ಪುಪ್ಪದಂತ ಜಯಂತಿ - ಅಶ್ವಯುಜ ಶುದ್ಧ ಪಂಚಮಿ
- ದೇವಾಂಗ ದೇವಲ ಮಹರ್ಷಿ ಜಯಂತಿ – ಕಾರ್ತಿಕ ಶುದ್ಧ ದ್ವಾದಶಿ
- ದೇವಾಂಗ ವಿದ್ಯಾಧರ ಜಯಂತಿ – ಕಾರ್ತಿಕ ಶುದ್ಧ ಪೂರ್ಣಿಮಾ
- ದೇವಾಂಗ ವರರುಚಿ ಜಯಂತಿ – ಮಾರ್ಗಶಿರ ಶುದ್ಧ. ಏಕಾದಶಿ
- ದೇವಾಂಗ ದೇವಾಶಾಲಿ ಜಯಂತಿ – ಮಾಘ ಶುದ್ಧ. ಏಕಾದಶಿ
- ಶ್ರೀ ಶ್ರೀ ಶ್ರೀ ಮುದ್ದುಸಂಗ ಮಹಾಸ್ವಾಮಿಗಳ ಜಯಂತಿ – ಮಾರ್ಗಶಿರ ಶುದ್ಧ ತ್ರಯೋದಶಿ
- ಕುಲದೈವ ಬಾದಮಿ ಬನಶಕರಿ ಜಾತ್ರೆ – ಬನದ ಹುಣ್ಣಿಮೆ
- ಶ್ರೀ ಶ್ರೀ ಶ್ರೀ ದಯಾನಂದಪುರಿಮಹಾಸ್ವಾಮಿಗಳ ಪಟ್ಟಾಭಿಷೇಕ – 30-04-1990
ವಿ. ನಾರಾಯಣರಾವ್ ರವರು ದಾಸಿಮಯ್ಯನವರ ವಚನಗಳಿಗೆ ಅರ್ಥ ಮತ್ತು ಭಾವಾರ್ಥಗಳನ್ನೂ ರಚಿಸಿದ್ದಾರೆ.
ಸಂಗ್ರಹ- ರಮೇಶ್ ಮಾಳರವರು
ದೇವಾಂಗ - ದೇವ ಬ್ರಾಹ್ಮಣರ ಸಂಪ್ರದಾಯ ಸಂಸ್ಕಾರಗಳು - ಹದಿನಾರು (ಷೋಡಶ)
ವಚನಕಾರ: ಜೇಡರ ದಾಸಿಮಯ್ಯ
ಅಂಕಿತ ನಾಮ: ರಾಮನಾಥ
ವಚನಗಳು: 176
ಹುಟ್ಟಿದ ಸ್ಥಳ: ಮುದನೂರು
ಅಂಕಿತ ನಾಮ: ರಾಮನಾಥ
ವಚನಗಳು: 176
ಹುಟ್ಟಿದ ಸ್ಥಳ: ಮುದನೂರು
- ಮೂಲ ಪುರುಷ :
- ಕುಲದೇವತೆ :
- ಅದರ ಗ್ರಂಥ :
- ಪವಿತ್ರ ಗ್ರಂಥ :
- ಜಗದ್ಗುರು ಪೀಠ :
- ಪೀಠ ಸ್ಥಾನ :
- ಸಂಪ್ರದಾಯ :
- ವರ್ಣ :
- ಚಿನ್ನೆಗಳು :
- ಕುಲಕಸುಬು :
- ಸಂಸ್ಕಾರಗಳು :
ದೇವಾಂಗ - ದೇವಾಂಗ ಹಿಂದೂ ಧರ್ಮ ಒಂದು ಉಪ ಜಾತಿ ಆಗಿದೆ. ಅವರು ಭಾರತದಲ್ಲಿ ನೇಯ್ಗೆ ಜಾತಿಗಳ ಒಂದಾಗಿದೆ. ಮುಖ್ಯವಾಗಿ ಕರ್ನಾಟಕದ ದೇವಾಂಗ ವ್ಯವಹರಿಸುತ್ತದೆ.
ಮೂಲ: - ದೇವಾಂಗ ಬ್ರಾಹ್ಮಣರ ಮೂಲವನ್ನು ಹೊಂದಿವೆ. ಅವರು ಪ್ರಾಕೃತ ಬ್ರಾಹ್ಮಣರು (ಹುಟ್ಟಿನಿಂದ ಬ್ರಾಹ್ಮಣರು ಎಂದು ಅರ್ಥ) ಗಳು. ಅವುಗಳಲ್ಲಿ ಬಹುತೇಕ ರೇಷ್ಮೆ ಮತ್ತು ಹತ್ತಿ ಬಟ್ಟೆ ನೇಕಾರರು.ಉಜ್ಜಯಿನಿಯ ಭೋಜ ರಾಜಾ (ಉತ್ತರ ಪ್ರದೇಶ, ಭಾರತ) ನಂತಹ ಪ್ರಸಿದ್ಧ ದೇವಾಂಗ ರಾಜರು ಇದ್ದರು. ಅನೇಕ ಹಂಪಿ, ಕರ್ನಾಟಕ ಕಂಡುಬರುವ ಯೋಧ ಕಲ್ಲುಗಳು ಪ್ರಕಾರ, ಸಹ ವಿಜಯನಗರ ಕಾಲದಲ್ಲಿ ಯೋಧರು ಇದ್ದರು. ತಮ್ಮ ಸ್ಥಳೀಯ ರಾಜ್ಯದ ಇಂದಿಗೂ ಅವರು ಪ್ರಮುಖ ಸಮುದಾಯ ರೂಪಿಸಲು ಅಲ್ಲಿ ಉಜ್ಜಯಿನಿಯ ಸಾಮ್ರಾಜ್ಯವಾಗಿತ್ತು. ಅವರ ಮುಖ್ಯ ದೇವತೆ ಚೌಡೇಶ್ವರಿ ಅವುಗಳು ದಕ್ಷಿಣ ಮಾದರಿ ಕ್ಷತ್ರಿಯರು ಮತ್ತು ಉತ್ತರ ರಜಪೂತ ಮತ್ತು ಠಾಕೂರ್ ಹೋಲಿಸಿದರೆ ಇತರ ಜಾತಿಗಳೊಂದಿಗೆ ವಿಶಿಷ್ಟವಾಗಿರುವಂತೆ,ದೇವಾಂಗ ಎರಡೂ, ಜಾತಿ ನಿಯಮಗಳ ಕಾರಣದಿಂದಾಗಿ ನೇಕಾರರು ಎಂದು ಹೇಳಲಾಗುತ್ತದೆ
ಭಾರತದ ವಿಶಿಷ್ಟ ಸಾಮಾಜಿಕ ಪರಿಸ್ಥಿತಿಗಳು.
1. ಮೂಲದ ಪುರಾಣ: -
ದೇವಾಂಗ ದೇವಲ ಮಹರ್ಷಿ ಎಂಬ ಋಷಿ ತಮ್ಮ ನೇಯ್ಗೆ ಸಂಪ್ರದಾಯದ ಉಗಮಸ್ಥಾನವೆಂದು. ದೇವಲ ಮಹರ್ಷಿ ನೇಯ್ಗೆಯ ಮೊದಲ ವ್ಯಕ್ತಿ.ಪರಶಿವನ ಹಣೆಗಣ್ಣಿನಿಂದ ಮಹರ್ಷಿ ಅವತರಿಸಿದರೆಂಬ ಪ್ರತೀತಿಯೂ ಇದ್ದ ಕಾರಣ 'ದೇವಾಂಗ' (ದೇವರ ಒಂದು ಅಂಗ) ಎಂದು ಕರೆಯಲ್ಪಡುತ್ತಾರೆ. ದೇವಾಂಗನು ವಿದ್ಯಾಧರ ,ಪುಷ್ಪದಂತ ಬೇತಾಳ, ವರರುಚಿ ,ಚಿತ್ರಯೋಗಿ, ದೇವಶಾಲಿ, ಕೊನೆಯ ಅವತಾರವೇ ದೇವರ ದಾಸಿಮಯ್ಯ. ಏಳು ಅವತಾರ ಪುರುಷರಿಗೆ ಮೂಲ ಪುರುಷ "ದೇವಾಂಗ"ನಾದನು. ಇಂದಿನ ದೇವಾಂಗ ಜನಾಂಗದ ಕುಲ ಗುರುವಾದರು ದೇವರ ದಾಸಿಮಯ್ಯ. ಚೌಡೇಶ್ವರಿ ತಾಯಿ ಈ ಸಮೂಹದ ಕುಲ ದೇವತೆ. ಈ ಮಹಾತ್ಮರು ಗಾಯತ್ರೀ ಮಂತ್ರದ ಉಪಾಸಕರಾಗಿ, ಅದರ ಮಹಿಮೆಯನ್ನು ಸಾರಿದರು. ಪ್ರತಿಯೊಬ್ಬ ಮಾನವನು, ಉತ್ತಮ ಸಂಸ್ಕೃತಿ, ಧರ್ಮ, ಆಚಾರವಾಗಿ ನಡೆಸಬೇಕೆಂಬ ಸಂದೇಶವನ್ನು ತಮ್ಮ ವಚನಗಳ ಮೂಲಕ ದಾಸಿಮಯ್ಯನವರು ಪ್ರಪಂಚಕ್ಕೆ ತಿಳಿಸಿ ಹೇಳಿದರು.
2. ಒಳಪಂಗಡಗಳು: - ದೇವಾಂಗ ಮೂಲತಃ ಎರಡು ಗುಂಪುಗಳು, ಗಂಧ ಮತ್ತು ನಾಮದೋರು ಎಂಧು ವಿಭಜಿಸಲಾಗಿದೆ. ಶೈವ ಮತ್ತು ವೈಷ್ಣವ ವಿಭಾಗಗಳ ಹಳೆಯ ದಿನಗಳಲ್ಲಿ ದೇವಾಂಗರ ನಡುವೆ ಇದ್ದವು. ಯೋಧ ಉಪ ಪಂಥದ ಪ್ರತಿಯೊಬ್ಬರಿಗೂ ತಮ್ಮ ಮನೆಗಳಲ್ಲಿ ಕತ್ತಿ ಹೊಂದಿರುತ್ತವೆ. ಅವನತಿಯ ನಂತರ ಅವರು ತಮಿಳುನಾಡು ಎಲ್ಲಾ ಭಾಗಗಳಲ್ಲಿ ನೆಲೆಸಿದರು. ಅವರಲ್ಲಿ ವೈದ್ಯರು, ಎಂಜಿನಿಯರ್ಗಳು ಮತ್ತು ಪ್ರಮುಖ ಸರ್ಕಾರಿ ಸ್ಥಾನಗಳು ಇವೆ. ತಮಿಳುನಾಡು ರಲ್ಲಿ ದೇವಾಂಗ ಸಾಕ್ಷರತೆ ಹೊಂದಿದೆ. ಮೂಲ: ಋಗ್ವೇದ ಇಂದಿಗೂ, ದೇವಾಂಗರು ಶೈವ ಅಥವಾ ವೈಷ್ಣವರು. ಯಾವುದೇ ದೇವಾಂಗ ಮದುವೆ, ವಧು ಮತ್ತು ವರನ ಅದೇ ಪಂಥಕ್ಕೆ (ಶೈವ ಅಥವಾ ವೈಷ್ಣವ) ಸೇರಿದ್ದರೆ ಮದುವೆ ಮಾಡಬಾರದು.
ಅಸೋಸಿಯೇಷನ್ಸ್: - ಅಂತಾರಾಷ್ಟ್ರೀಯ ದೇವಾಂಗ ಸಮುದಾಯ ಕರ್ನಾಟಕ ನಲ್ಲಿದೆ. ಉತ್ತರ ಅಮೆರಿಕದಲ್ಲಿ ಆಂಧ್ರ ಪ್ರದೇಶದ ಉತ್ತರ ಅಮೆರಿಕಾ (ADSONA) ಆಂಧ್ರ ದೇವಾಂಗ ಸಂಗಮ ರಚಿಸಿದ್ದವು. ದೇವಾಂಗ ಸಮಾಜ ಬೆಂಗಳೂರು ತನ್ನ ಕಚೇರಿಗಳನ್ನು ಹೊಂದಿದೆ. ಅದರ ಸದಸ್ಯರು ಕರ್ನಾಟಕ ಮತ್ತು ಕೇರಳದ ಕರಾವಳಿ ಪ್ರದೇಶಗಳ ಸಮುದಾಯದಿಂದ ಬಂದ ಮೂಲ.
ಮದುವೆ ಸಂಪ್ರದಾಯ:-
ದೇವಾಂಗರ ಮದುವೆಗಳು ಸಂಘ ಅಥವಾ ಮದುವೆ ಸಲಹೆಗಾರರು ಹೊಂದಿರುತ್ತವೆ ದೇವಾಂಗರ ಮದುವೆಗಳು ಎಲ್ಲರ ಒಪ್ಪಿಗೆ ಇಂದಲೇ ಹೆಚ್ಚಿನ ಮದುವೆಗಳು ಜೋಡಿಸಿರುತ್ತವೆ.ಸಾಮಾನ್ಯವಾಗಿ ಅವರ ಮಕ್ಕಳ ಭವಿಷ್ಯದ ಪಾಲುದಾರಿಕೆ ಯಾರು ಹುಡುಕಾಟ ವರ ಅಥವಾ ವಧುವಿನ ಪೋಷಕರು ಹೊಂದಿದೆ. ಪುರುಷ ಅಥವಾ ಸ್ತ್ರೀ ಸಾಮಾನ್ಯವಾಗಿ ಗುಣಗಳನ್ನು, ಶಿಕ್ಷಣ, ಉದ್ಯೋಗ ಇತ್ಯಾದಿ ಭವಿಷ್ಯದಲ್ಲಿ ಸಂಗಾತಿ ನೋಡಲು ಬಯಸುತ್ತೀರಿ ಎಂದು ಅಭಿಪ್ರಾಯವನ್ನು ನೀಡುತ್ತದೆ. ಪೋಷಕರು ಹುಡುಗಿ ಅಥವಾ ಹುಡುಗ ವಿವರಗಳ ಪಟ್ಟಿ ನೋಡಿ ಜಾತಕ ಹೊಂದಾಣಿಕೆಯು ಜ್ಯೋತಿಷಿ ಸಹಾಯದಿಂದ ಕೇಳಲಾಗುತ್ತದೆ.
ಹುಡುಗ ಮತ್ತು ಹುಡುಗಿ ತಮ್ಮ ಅಭಿಪ್ರಾಯಗಳನ್ನು ಒಪ್ಪಿದರು ಒಂದು ದಿನಾಂಕವನ್ನು ಗೊತ್ತುಮಾಡಿ ಹುಡುಗಿಯ ಮನೆಯಲ್ಲಿ ನಡೆದ ಒಂದು ಸಮಾರಂಭದಲ್ಲಿ, ಇದು ನಿಶ್ಚಿತಾರ್ಥ, ಫಾರ್ ನಿವಾರಿಸಲಾಗಿದೆ, ಹುಡುಗ ಮತ್ತು ಹುಡುಗಿ ಎರಡೂ ಸಂಬಂಧಿಗಳು ಇರುತ್ತಾರೆ . ಸ್ಥಳಾವಕಾಶದ ಮಿತಿಯ ಆಗ ಸಮಾರಂಭದಲ್ಲಿ ಹೋಟೆಲ್ ಅಥವಾ ಮದುವೆ ಸೇವೆಗಳು ನಡೆಯುತ್ತದೆ. ರಿಂಗ್ ನಿಶ್ಚಿತಾರ್ಥದ ನಂತರ ವಿನಿಮಯ. ಸಾಮಾನ್ಯವಾಗಿ ಹಿಂದೂಗಳ ಪೈಕಿ, ಮದುವೆ ದಿನಾಂಕ ನಿಶ್ಚಿತಾರ್ಥದ ದಿನ ನಿವಾರಿಸಲಾಗಿದೆ. ವಿವಾಹಗಳು ಸಾಮಾನ್ಯವಾಗಿ ಮದುವೆ ಸಭಾಂಗಣಗಳಲ್ಲಿ, ಅಥವಾ ಚೌಟರಿಗಳಲ್ಲಿ ಆಯೋಜಿಸಲಾಗುತ್ತದೆ. ಮದುವೆ ಎರಡು ಮೂರು ದಿನಗಳ ಕಾಲ ವಿಸ್ತಾರವಾದ ಸಮಾರಂಭಗಳಲ್ಲಿ ಇವೆ. (ಏರುತ್ತಿರುವ ವೆಚ್ಚಗಳ ಕಾರಣದಿಂದಾಗಿ, ಇದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಎರಡು ದಿನಗಳ ನಿರ್ಬಂಧಿಸಲಾಗಿದೆ.)
ಮೊದಲು ಮದುವೆ ದಿನ, ವರ ಮತ್ತ್ತುಅವರ ಬಂಧುಗಳು ಆಗಮಿಸುತ್ತಾರೆ. ದೇವರ ಆಶೀರ್ವಾದವನ್ನು ಪಡೆದು ನಂತರ ಆಚರಣೆಗಳನ್ನು ಪ್ರಾರಂಭವಾಗುತ್ತದೆ. ಆಚರಣೆಗಳನ್ನು ಮೊದಲು ವಧು ಮತ್ತು ವರರಿಗೆ ಕೈ ಮತ್ತು ಪಾದದ ಎಲ್ಲಾ ವಿವಾಹಿತ ಮಹಿಳೆಯರ ಮೂಲಕ ಎಣ್ಣೆ ಬೆರೆಸಿ ಅರಿಶಿನ ಜೊತೆ ಮಸಾಜ್ ಮಾಡಲಾಗುತ್ತದೆ. ಇದರಲ್ಲಿ ಸಮಾರಂಭವು ಆರಂಭವಾಗುತ್ತದೆ. ಈ ಸಂದರ್ಭಕ್ಕೆ ವಿಶೇಷವಾಗಿ ತಂದಿರುವ ಹೊಸ ಬಳೆಯನ್ನು ಎಲ್ಲಾ ಮಹಿಳೆಯರು ಧರಿಸಲಾಗುತ್ತದೆ. ಈ ಒಂದು ಸುಂದರ ಸ್ನಾನದ ನಂತರ, ಮತ್ತು ಇತರ ಆಚರಣೆಗಳು ಇಡೀ ರಾತ್ರಿ ಮುಂದುವರೆಯುತ್ತದೆ ನಂತರ ವಧುವಿನ ಪೋಷಕರು ಮರುದಿನ ಬೆಳಿಗ್ಗೆ, ವರನನ್ನು ಕಾಶೀಯಾತ್ರೆ ಎಂಬ ಆಚರಣೆಗಳಿಗಾಗಿ ಧೋತಿ ಮತ್ತು ಛತ್ರಿಯಿಂದ ದೇವಸ್ಥಾನಕ್ಕೆ ಹೋಗುವ ಒಂದು ಬೆಳ್ಳಿಯ ತಟ್ಟೆಯಲ್ಲಿ ಹುಡುಗಿಯ ತಂದೆತಾಯಿಗಳು ವರನ ಪಾದವನ್ನು ತೊಳೆದ ನಂತರ, ಹೋಮ ಮಾಡಿ ವರನು ವಧುವಿಗೆ ಮಾಂಗಲ್ಯ ಧಾರಣೆ ಮಾಡುತ್ತಾನೆ. ಹಾಗ ವೈವಾಹಿಕ ಜೀವನವನ್ನು ಪ್ರವೇಶಿಸುವ ಪರಾಕಾಷ್ಠೆ ಎಂದು ಗುರುತಿಸಲಾಗುತ್ತದ. ವಿವಾಹದ ಎಲ್ಲಾ ಆಹ್ವಾನಿತರು ಅವರನ್ನು ಹಾರೈಸುತ್ತಾರೆ ಮತ್ತೆ ಸಂಜೆ ಆರತಕ್ಷತೆಗೆ ಸ್ವಾಗತ ಕೋರಿ ಎಲ್ಲಾ ಆಹ್ವಾನಿತರು ಹೊಸ ಜೋಡಿಗಳಿಗೆ ಅಭಿನಂದಿಸಲಾಗುತ್ತದೆ.
Source - Wikipedia

- ದೇವರಾ ದಾಸಿಮಯ್ಯ - ಆದಿ ವಚನಕರ (ಕವಿ)
- ದಯಾನಂದ ಸ್ವಾಮೀಜಿ - ಶ್ರೀ ಗಾಯತ್ರಿ ಪೀತಾ ಮಹಾ ಸಂಸ್ತಾನ ಜಗದ್ಗುರು
- ಈಶ್ವರಾನಂದ ಸ್ವಾಮಿ - ಮುಡನೂರು ಮಹಾ ಸಂಸ್ತಾನಾ
- ಹೊನ್ನಾಪ್ಪ ಭಾಗವತಾರ್ - ಕನ್ನಡ ಚಿತ್ರರಂಗದ ಪ್ರವರ್ತಕ
- ಪಿ. ದೇವರಾಯಾ ಚೆಟ್ಟಿ - ಶ್ರೇಷ್ಠ ವಕೀಲ, ಕೈಗಾರಿಕೋದ್ಯಮಿ ಮತ್ತು ಪ್ರಮುಖ ರಾಜಕೀಯ ನಾಯಕ
- ಡಿ. ಆರ್. ನಾಗರಾಜ್ - ಸಾಹಿತ್ಯ ವಿಮರ್ಶಕ ಮತ್ತು ಚಿಂತಕ
- ಆರತಿ - ಕನ್ನಡ ನಟಿ ಮತ್ತು ಚಲನಚಿತ್ರ ನಿರ್ದೇಶಕ
- ಉಮಾಶ್ರೀ - ಕನ್ನಡ ಮತ್ತು ಸಂಸ್ಕೃತಿ ಸಚಿವ, ನಾಟಕ ಮತ್ತು ಚಲನಚಿತ್ರ ಕಲಾವಿದ, ಕರ್ನಾಟಕ ಸರ್ಕಾರ
- ರಾಜೇಶ್ ಕುಮಾರ್ - ತಮಿಳು ಬರಹಗಾರ ಪ್ರಸಿದ್ಧ ಕ್ರೈಮ್ ಕಾದಂಬರಿಕಾರ
- ಪಸುಪೂಲ್ತಿ ಕನ್ನಂಬಾ - ತೆಲುಗು ನಟ ಮತ್ತು ಹಿನ್ನೆಲೆ ಗಾಯಕಿ
- ಶ್ರೀನಿವಾಸ ಮೂರ್ತಿ - ಕನ್ನಡ ನಟ
- ಲೋಕನಾಥ್ - ಸಿನಿ ಕಲಾವಿದ
- ಆಂಜಿಡಿ ಚೆಟ್ಟಿಯಾರ್ - ಮಾರಿಷಸ್ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದವರು
- ಮಾದ ವೆಂಕಟೇಶ್ವರ ರಾವ್ - ತೆಲುಗು ನಟ * ಕೋತಾ ಯೆರ್ರಿಸ್ವಾಮಿ ಎಕ್ಸ್- ಆರ್ಮಿ ಅಧಿಕಾರಿ
- ಹಂಸಲೇಖಾ - ಸಂಗೀತ ನಿರ್ದೇಶಕ
- ಪ್ರೇಮ್ - ಸಿನಿ ಆಕ್ಟರ್, ನಿರ್ದೇಶಕ
- ಸುರೇಶ್ ಬಿ.ವಿ.ಎನ್ - ಸಂಗೀತ ನಿರ್ದೇಶಕ ಮತ್ತು ಗಾಯಕ. (2016)
- Devara Dasimayya - Adya Vachanakara (Poet)
- Dayananda Swamiji - Shree Gayathri Peeta Maha Samsthana Jagadguru
- Eswarananda Swami - Mudanuru Maha Samsthana Mata Adayakashru
- Honnappa Bhagavathar - Pioneer of Kannada Cinema
- P.TheagarayaChetty - Eminent lawyer,industrialist and a prominent political Leader
- D. R. Nagaraj - Literary critic and thinker
- Hamsalekha - Music director
- Aarathi - Kannada actress and film Director
- Umashree - Theater & film Artist, Minister of Kannada and Culture, Govt of Karnataka
- Rajesh Kumar - Tamil Writer Famous Crime Novelist
- Pasupuleti Kannamba - Telugu Actress and playback Singer
- Srinivasa Murthy - Kannada Actor
- Loknath - Cine Artist
- Angidi Chettiar - Who served as the Vice President of Mauritius
- Mada Venkateswara Rao - Telugu actor *KOTHA YERRISWAMY EX-ARMY OFFICER
- prem - Cine Actor, Director
- Suresh Bvn - Music Director and Singer. ( 2016 )
- ಆದಿ ವಚನಕರ (ಕವಿ)
- ಶ್ರೀ ಗಾಯತ್ರಿ ಪೀತಾ ಮಹಾ ಸಂಜ್ಞಾ ಜಗದ್ಗುರು
- ಮುಡನೂರು ಮಹಾ ಸಂಸ್ತಾನಾ ಮಾತಾ ಅದಾಯಕಶ್ರು
- ಕನ್ನಡ ಚಿತ್ರರಂಗದ ಪ್ರವರ್ತಕ
- ಶ್ರೇಷ್ಠ ವಕೀಲ, ಕೈಗಾರಿಕೋದ್ಯಮಿ ಮತ್ತು ಪ್ರಮುಖ ರಾಜಕೀಯ ನಾಯಕ
- ಸಾಹಿತ್ಯ ವಿಮರ್ಶಕ ಮತ್ತು ಚಿಂತಕ
- ಸಂಗೀತ ನಿರ್ದೇಶಕ
- ಕನ್ನಡ ನಟಿ ಮತ್ತು ಚಲನಚಿತ್ರ ನಿರ್ದೇಶಕ
- ಕನ್ನಡ ಮತ್ತು ಸಂಸ್ಕೃತಿ ಸಚಿವ, ನಾಟಕ ಮತ್ತು ಚಲನಚಿತ್ರ ಕಲಾವಿದ, ಕರ್ನಾಟಕ ಸರ್ಕಾರ
- ತಮಿಳು ಬರಹಗಾರ ಪ್ರಸಿದ್ಧ ಕ್ರೈಮ್ ಕಾದಂಬರಿಕಾರ
- ತೆಲುಗು ನಟ ಮತ್ತು ಹಿನ್ನೆಲೆ ಗಾಯಕಿ
- ಕನ್ನಡ ನಟ
- ಸಿನಿ ಕಲಾವಿದ
- ಮಾರಿಷಸ್ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದವರು
- ತೆಲುಗು ನಟ * ಕೋತಾ ಯೆರ್ರಿಸ್ವಾಮಿ ಎಕ್ಸ್-ಆರ್ಮಿ ಅಧಿಕಾರಿ
- ಸಿನಿ ಆಕ್ಟರ್, ನಿರ್ದೇಶಕ
- ಸಂಗೀತ ನಿರ್ದೇಶಕ ಮತ್ತು ಗಾಯಕ. (2016)
ಮುಕ್ಕುವರು ಭಂಗಿಯ ಸಕ್ಕರೆ ಇರಲ್ಕೆ
ಸ್ವಸ್ತ್ರೀ ಇದ್ದಂತೆ ಪರಸ್ತ್ರೀಯರಿಗೆ ಅಳುಪುವರು
ಸತ್ತ ನಾಯ ಭಕ್ಷಿಸುವ ಹಡಕಿಗರನೇನೆಂಬೆನಯ್ಯ ರಾಮನಾಥ ?
ಇತ್ತ ಬಾ ಎನ್ನದವನ, ಹತ್ತೆ ಹೊದ್ದಲು ಬೇಡ
ಇತ್ತ ಬಾ ಎಂಬ ಸದ್ಭಕ್ತನ ಮನೆಯ ಬಾಗಿಲು
ಹತ್ತಿಪ್ಪೆ ಕಾಣಾ ರಾಮನಾಥ |
ಭಕ್ತರ ಮಠವೆಂದು ಭಕ್ತ ಹೋದಡೆ
ಆ ಭಕ್ತ ಭಕ್ತಂಗೆ ಅಡಿ ಇಟ್ಟು ಇದಿರೆದ್ದು ನಡೆದು
ಹೊಡೆಗೆಡೆದು ಒಡಗೊಂದು ಬಂದು
ವಿಭೂತಿ ವೀಳೆಯವನಿಕ್ಕಿ ಪಾದಾರ್ಚನೆಯ ಮಾಡಿ
ಸಮಯವನರಿತು ಲಿಂಗಾರ್ಚನೆಯ ಮಾಡಿಸಿ
ಒಕ್ಕುದ ಕೊಂಡು ಓಲಾಡುತಿಪ್ಪುದೆ ಭಕ್ತಿ
ಹೀಗಲ್ಲದೆ ಬೆಬ್ಬನೆ ಬೆರೆತು, ಬಿಬ್ಬನೆ ಬೀಗಿ
ಅಹಂಕಾರಿಭರಿತನಾಗಿಪ್ಪವನ ಮನೆಯ
ಲಿಂಗಸನುಮತರು ಹೊಗರು ಕಾಣಾ ರಾಮನಾಥ !
ಗುರು ನಿರೂಪವ ಮಾಡರು
ಪರವಧುವ ನೆರವರು, ಪರಧನವನಳುಪುವರು
ಗುರುವಿಲ್ಲವವರಿಗೆ; ಪರವಿಲ್ಲವವರಿಗೆ,
ಇಂತಪ್ಪ ನರಕಿಗಳನೆನಗೊಮ್ಮೆ ತೋರದಿರಾ ರಾಮನಾಥ !
ಒಡೆಯರನೊಡಗೊಡು ಬಂದು
ಕೈಗಡಿಗೆಯ ನೀರ ಕೈಯಲ್ಲಿ ಕೊಟ್ಟು
ಒಡೆಯರೇ ಕಾಲ ತೊಳಕೋ ಎಂಬವರ
ಮನೆಗೆ ಅಡಿ ಇಡಲಾಗದಯ್ಯ ಮೃಡಶರಣರು!
ಒಡಲಿಚ್ಛೆಗೆ ಬಡಮನವ ಮಾಡಿ,
ಹೊಕ್ಕುಂಬವರ ಎನಗೊಮ್ಮೆ ತೋರದಿರಾ ರಾಮನಾಥ !
ಅಡಗ ತಿಂಬರು ಕಣಕದಡಿಗೆ ಇರಲ್ಕೆ
ಸುರೆಯ ಕುಡಿವರು ಹಾಲಿರಲ್ಕೆ
ಶಿವಭಕ್ತರು ತಮ್ಮ ನಿಜ ಕೈಲಾಸಕ್ಕೆ ಹೋದರೆ
ಅವರರಸಿಯ ಪಾರ್ವತಿಯ ಸರಿ ಎಂದು ಕಾಣಬೇಕು
ಅಲ್ಲಿ ಅನುಸರಣೆಯ ಕೊಟ್ಟು ಬೆರೆಸಿ ಮಾತಾಡುವ ನರಕಿಗಳನೇನೆಂಬೆ
ರಾಮನಾಥ?
ಈಕೆ ಜೇಡರ ದಾಸಿಮಯ್ಯನ ಧರ್ಮಪತ್ನಿ. ಸ್ಥಳ ಮುದನೂರು. ಕಾಯಕ ಬಟ್ಟೆ ನೇಯುವುದು. ಪುರಾಣಗಳಲ್ಲಿ ದಾಸಿಮಯ್ಯನ ಜೊತೆ ಈಕೆಯ ಕಥೆ ಪ್ರಸಿದ್ಧವಾಗಿದೆ. ಈಕೆಯ ಎರಡು ವಚನಗಳು ದೊರೆತಿವೆ. ಅಂಕಿತ 'ದಾಸಯ್ಯ ಪ್ರಿಯ ರಾಮನಾಥ'. ಅವುಗಳಲ್ಲಿ ಬಸವ, ಅಲ್ಲಮ, ಚೆನ್ನಬಸವ, ಮರುಳ ಶಂಕರದೇವ, ಸಿದ್ಧರಾಮ, ಅಜಗಣ್ಣರನ್ನು ನೆನೆದಿದ್ದಾಳೆ. ಇದರಿಂದ ಬಸವಣ್ಣನವರ ಕಾಲದಲ್ಲಿ ಈಕೆ ಬದುಕಿದ್ದಳೆಂದು ತಿಳಿದುಬರುತ್ತದೆ.
ಜೇಡರ/ದೇವರ ದಾಸಿಮಯ್ಯ ಓರ್ವ ಆದ್ಯ ವಚನಕಾರ. ಆತನ ಉಪಲಬ್ಧ ವಚನಗಳಲ್ಲಿ ಉತ್ಕಟವಾದ ವೀರಶೈವ ನಿಷ್ಠೆ, ನಿಷ್ಠುರವಾದ ಸ್ಪಷ್ಟ ವಾಕ್ಯತೆ, ಮಾರ್ಮಿಕವಾದ ಸಂಕ್ಷಿಪ್ತ ಶೈಲಿ, ಔಚಿತ್ಯಪೂರ್ಣವಾದ ದೃಷ್ಟಾಂತಗಳ ಸಂಪತ್ತಿಯ ಗುಣಗಳು ಎದ್ದು ಕಾಣುತ್ತವೆ.
ಆದ್ಯ ವಚನಕಾರರ ಜೇಡರ ದಾಸಿಮಯ್ಯBy Manjuanth Reddy on ಮಾರ್ಚ್ 28, 2012ಭಕ್ತಿಯಿಲ್ಲದ ಬಡವ ನಾನಯ್ಯಾ
ಕಕ್ಕಯ್ಯನ ಮನೆಯಲ್ಲೂ ಬೇಡಿದೆ
ಚೆನ್ನಯ್ಯನ ಮನೆಯಲ್ಲೂ ಬೇಡಿದೆ
ದಾಸಯ್ಯನ ಮನೆಯಲ್ಲೂ ಬೇಡಿದೆ
ಎಲ್ಲ ಪುರಾತನರು ನೆರೆದು ಭಕ್ತಿಭಿಕ್ಷವನ್ನಿಕ್ಕಿದಡೆ
ಎನ್ನ ಪಾತ್ರೆ ತುಂಬಿತ್ತು, ಕೂಡಲ ಸಂಗಮದೇವಾ
ಬಸವಣ್ಣನವರು ಈ ವಚನದಲ್ಲಿ ತಮ್ಮ ಸಮಕಾಲೀನ ಹಿರಿಯ ಶರಣರನ್ನು ಮನಸಾರೆ ಸ್ತುತಿಸಿದ್ದಾರೆ. ಅವರಲ್ಲಿ ಜೇಡರ ದಾಸಿಮಯ್ಯನು ಒಬ್ಬ ಶ್ರೇಷ್ಠ ಅನುಭಾವಿ ಹಾಗೂ ಹಿರಿಯ ವಚನಕಾರನಾಗಿದ್ದಾನೆ. ದಾಸಿಮಯ್ಯ ದಾಸಯ್ಯ ದಾಸಿಮಾರ್ಯ, ದೇವರ ದಾಸಿಮಯ್ಯ ಮುಂತಾದ ಹೆಸರುಗಳಿಂದ ಅವನನ್ನು ಕರೆದಿದ್ದಾರೆ. ದಾಸಿಮಯ್ಯನು ಬಸವಣ್ಣನವರ ಮೇಲೆ ವಿಶೇಷ ಪರಿಣಾಮ ಬೀರಿದ ಶರಣನು.
ಶರಣರ ಹೃದಯದಂತಿದ್ದ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ವಿನಿಮಯ ನಡೆಸುತ್ತಿದ್ದರು. ಕೆಳವರ್ಗದವರನ್ನು ಆರ್ಥಿಕ ಸಾಮಾಜಿಕ ಶೈಕ್ಷಣಿಕವಾಗಿ ಮೇಲೆತ್ತಲು ಸಮಾಜದ ಒಳಿತಿಗಾಗಿ ಮೂಢಾಚಾರ ಶುಷ್ಕಾಚಾರಗಳನ್ನು ತಡೆಯಲು ಕುಲ ಜಾತಿ ಕಸಬು ಮೊದಲಾದ ಬೇಧಭಾವ ಅಳಿಸಲು ಕಾರ್ಯ ತತ್ಪರರಾಗಿದ್ದರು. ಅವರ ವೈಚಾರಿಕ ಪ್ರಜ್ಞೆಯೇ ವಚನಗಳ ಮುಖಾಂತರ ಹೊರ ಹೊಮ್ಮಿತು. ಅಂಥ ವಚನಗಳನ್ನು ರಚಿಸಿದವರಲ್ಲಿ ಜೇಡರ ದಾಸಿಮಯ್ಯನು ಎತ್ತರದ ಸ್ಥಾನದಲ್ಲಿ ನಿಲ್ಲುತ್ತಾನೆ. ಅವನ ವಿಷಯ ಹಲವಾರು ಕಾವ್ಯಗಳಲ್ಲಿ ಬಂದಿದೆ.
ಸಪ್ತ ತೀರ್ಥಗಳ ನಿಸರ್ಗ ಸೌಂದರ್ಯದ ನಡುವಿರುವ ಮುದನೂರು ಕಲಬುರ್ಗಿ ಜಿಲ್ಲೆಯ ಒಂದು ಹಳ್ಳಿ ಅದು ದಾಸಿಮಯ್ಯನ ಜನ್ಮಸ್ಥಳವು. ಆ ಊರಲ್ಲಿ ರಾಮನಾಥ ದೇವಾಲಯವಿದ್ದು ರಾಮನಾಥನೇ ದಾಸಿಮಯ್ಯನ ಆರಾಧ್ಯ ದೈವವು ಅವನ ವಚನಾಂಕಿತ ರಾಮನಾಥ ಎಂದಿದೆ. ಅವನ ತಂದೆಯ ಹೆಸರು ರಾಮಯ್ಯ ತಾಯಿ ಶಂಕರಿ ಅವರ ಮನೆತನದ ಉದ್ಯೌಗ ನೇಕಾರಿಕೆ ನೇಯ್ಕೆ ಕಾಯಕದಲ್ಲಿದ್ದರೂ ದಾಸಿಮಯ್ಯನಿಗೆ ಆತ್ಮಜ್ಞಾನದ ಹಸಿವು ಬಹಳವಾಗಿತ್ತು ಅದಕ್ಕಾಗಿ ಶ್ರೀಶೈಲಕ್ಕೆ ಹೋಗುತ್ತಾನೆ. ಪಂಡಿತಾರಾಧ್ಯ ಶಿವಾಚಾರ್ಯರಿಂದ ಶಿವದೀಕ್ಷೆ ಪಡೆದು ಸಾಧನೆ ಮಾಡಿ ಶಿವಜ್ಞಾನ ಸಂಪನ್ನನಾಗುತ್ತಾನೆ.
ಶಿವಜ್ಞಾನ ಸಂಪನ್ನನಾದ ದಾಸಿಮಯ್ಯನು ಲೋಕ ಕಲ್ಯಾಣದ ಕೈಂಕರ್ಯ ತೊಟ್ಟು ಚಾಲುಕ್ಯ ರಾಜ್ಯದ ಪೊಟ್ಟಲ ಕೆರೆಯತ್ತ ಸಾಗುತ್ತಾನೆ ದಾರಿಯಲ್ಲಿ ಶಿವಾನುಭವ ಗೋಷ್ಠಿಗಳನ್ನು ಮಾಡುತ್ತ ಸಾವಿರಾರು ಜನರಿಗೆ ಶಿವದೀಕ್ಷೆ ನೀಡುತ್ತಾನೆ. ಹಿಂಸಾವೃತ್ತಿಯಲ್ಲಿ ತೊಡಗಿದ್ದ ಬೇಡ ಜನಾಂಗಕ್ಕೆ ಬುದ್ದಿ ಹೇಳಿ ಅವರ ಮನ ಪರಿವರ್ತಿಸಿ ದೀಕ್ಷೆ ನೀಡಿ ಸನ್ಮಾರ್ಗಕ್ಕೆ ಹಚ್ಚುತ್ತಾನೆ. ನಂದಿ ಗ್ರಾಮದಲ್ಲಿ ಎದುರಾದ ವೈದಿಕರೊಡನೇ ವಾದ ವಿವಾದ ಮಾಡಿ ಜಯಸುತ್ತಾನೆ ಗೌಡಗೆರೆಗೆ ಬಂದು ಅಲ್ಲಿ ಅಸಂಖ್ಯಾತ ರೈತ ಜನಕ್ಕೆ ಜ್ಞಾನ ಬೋಧೆ ಮಾಡುತ್ತಾನೆ.
ಪೊಟ್ಟಲಕೆರೆಗೆ ಬಂದು ಅಲ್ಲಿಯ ಎಲ್ಲ ಜೈನ ಪಂಡಿತರನ್ನು ವಾದದಲ್ಲಿ ಸೋಲಿಸುತ್ತಾನೆ. ಅವರಿಗೆಲ್ಲ ಶಿವದೀಕ್ಷೆ ನೀಡುತ್ತಾನೆ. ಅಲ್ಲಿಯ ರಾಜ 2ನೇ ಜಯಸಿಂಹ ಮತ್ತು ರಾಣಿ ಸುಗ್ಗಲೆ ಇವನಿಂದ ಶಿವದೀಕ್ಷೆ ಪಡೆಯುತ್ತಾರೆ. ನಂತರ ದಾಸಿಮಯ್ಯನು ತನ್ನ ಊರಾದ ಮುದನೂರಿಗೆ ಬಂದು ನೇಯ್ಗೆ ಕಾಯಕ ಮಾಡಿಕೊಂಡು ಜನರಿಗೆ ಶಿವಾನುಭವ ನೀಡುತ್ತಾ ಜೀವನ ಸಾಗಿಸುತ್ತಾನೆ.
ಶರಣರು ದಂಪತ್ಯ ಜೀವನಕ್ಕೆ ಹೆಚ್ಚಿನ ಮಹತ್ವ ಕೊಟ್ಟಿದ್ದಾರೆ. ಮೋಳಿಗೆಯ ಮಾರಯ್ಯ ಮಹಾದೇವಿ ಹಡಪದ ಅಪ್ಪಣ್ಣ ಲಿಂಗಮ್ಮ ಬಸವಣ್ಣ ನೀಲಾಂಬಿಕೆ ಆಯ್ದಕ್ಕಿ ಮಾರಯ್ಯ ಲಕ್ಕಮ್ಮ ಹರಳಯ್ಯ ಕಲ್ಯಾಣಮ್ಮ ಮೊದಲಾದವರು ಆದರ್ಶ ಶರಣ ದಂಪತಿಗಳಾಗಿದ್ದಾರೆ. ಪ್ರಾಯಕ್ಕೆ ಬಂದಿದ್ದ ದಾಸೀಮಯ್ಯನು ಮದುವೆಯಾಗುವ ಇಚ್ಛೆ ಉಳ್ಳವನಾಗಿ ಹೆಣ್ಣಿನ ಅನ್ವೇಷಣೆಯಲ್ಲಿ ತೊಡಗುತ್ತಾನೆ.
ಮಳಲಕ್ಕಿ ಪಾಯಸ :-ದಾಸಿಮಯ್ಯನು ಕಬ್ಬಿನ ಜಲ್ಲೆ ಮಳಲಕ್ಕಿಯಿಂದ ನೀರು ಮತ್ತು ಸೌದೆ ಉಪಯೋಗಿಸದೆ ಪಾಯಸ ಮಾಡಿಕೊಡುವಂಥ ಜಾಣ ಕನ್ಯೆಯನ್ನು ವಿವಾಹವಾಗುವ ಶರತ್ತಿನ ಮೇಲೆ ಕೈಯಲ್ಲಿ ಕಬ್ಬಿನ ಜಲ್ಲೆ ಹಾಗೂ ಮಳಲು ಮಿಶ್ರಿತ ಅಕ್ಕಿ ಗಂಟನ್ನು ಹಿಡಿದು ಕೊಂಡು ಕನ್ಯಾನ್ವೇಷಣೆಗೆ ಹೊರಡುತ್ತಾನೆ. ಹನ್ನೆರಡು ವರ್ಷ ಕಳೆದರೂ ಅಂಥ ಕನ್ಯೆ ಸಿಗುವುದಿಲ್ಲ. ಕಡೆಗೆ ಗೊಬ್ಬೂರಿಗೆ ಬಂದು ಮಲ್ಲನಾಥ ಶಿವಯೋಗಿ ದಂಪತಿಗಳಿಗೆ ತನ್ನ ಅಭಿಲಾಷೆಯನ್ನು ತಿಳಿಸುತ್ತಾನೆ. ಅವನ ಶರತ್ತು ಕೇಳಿ ಅಂಥ ಕನ್ಯೆ ನಿನಗೆ ಈ ಜನ್ಮದಲ್ಲಿ ಸಿಗಲಾರಳು ಎನ್ನುತ್ತಿರುವಾಗಲೇ ಅವರ ಮಾತನ್ನು ಆಲಿಸಿದ ಅವರ ಮಗಳು ದುಗ್ಗಳೆ ಅದೇಕೆ ಸಿಗಲಾರಳು? ಮಳಲಕ್ಕಿ ಪಾಯಸ ನಾಡು ಮಾಡಿಕೊಡುವೆನೆಂದು ದಾಸಿಮಯ್ಯನ ಸವಾಲು ಸ್ವೀಕರಿಸುತ್ತಾಳೆ. ದುಗ್ಗಳೆಯು ಕಬ್ಬುಗಳನ್ನು ತರಿಸಿ ಬುಡದ ಭಾಗ ಹಾಗೂ ತುದಿ ಭಾಗಗಳನ್ನು ಬೇರೆ ಬೇರೆ ಮಾಡಿ ಸಿಹಿರಸ ಹಾಗೂ ಸಪ್ಪೆರಸಗಳನ್ನು ಬೇರೆ ಬೇರೆ ಪಾತ್ರೆಗಳಲ್ಲಿ ಸಂಗ್ರಹಿಸುತ್ತಾಳೆ. ಕಬ್ಬಿನ ಸಿಪ್ಪೆ ಒಣಗಿಸಿ ಬೆಂಕಿ ಹೊತ್ತಿಸಿ ಸಪ್ಪೆ ಸರದ ಪಾತ್ರೆಯಲ್ಲಿ ಮರಳು ಮಿಶ್ರಿತ ಅಕ್ಕಿ ಹಾಕಿ ಕುದಿಸಲು ಪಾಕ ಸಿದ್ಧವಾಗುತ್ತದೆ. ಅದನ್ನು ಜಾಲಾಡಿ ತಳದಲ್ಲಿ ಮರಳು ಉಳಿಯುವಂತೆ ಮಾಡಿ ಮೇಲಿನ ಪಾಕನ್ನು ಸಿಹಿ ರಸದ ಪಾತ್ರೆಯಲ್ಲಿ ಕೂಡಿಸಿ ತಯಾರಾದ ಪಾಯಸವನ್ನು ದಾಸಿಮಯ್ಯನಿಗೆ ಕೊಡುತ್ತಾಳೆ. ಹೀಗೆ ನೀರು ಮುಟ್ಟದೆ ಸೌದೆ ಉಪಯೋಗಿಸದೆ ಮಳಲಕ್ಕಿ ಪಾಯಸ ತಯಾರಿಸಿಕೊಟ್ಟ ಚಿಕ್ಕ ಹುಡುಗಿ ದುಗ್ಗಳೆಯ ಜಾಣತನಕ್ಕೆೆ ಎಲ್ಲರೂ ಬೆರಳು ಕಚ್ಚುತ್ತಾರೆ. ಅವಳನ್ನು ಕೊಂಡಾಡುತ್ತಾರೆ. ದಾಸಿಮಯ್ಯನು ದುಗ್ಗಳೆಯನ್ನು ವಿವಾಹವಾಗುತ್ತಾನೆ. ಅವರಿಬ್ಬರ ನೇಯ್ಗೆ ಕಾಯಕ ಮಾಡಿಕೊಂಡು ಅನ್ಯೌನ್ಯತೆಯಿಂದ ಜೀವನ ಸಾಗಿಸುತ್ತಾರೆ.
ಸತವನಿಧಿ ಪಡೆದ ಪ್ರಸಂಗ:- ನೇಯ್ಗೆ ಕಾಯಕದಲ್ಲಿ ಪರಿಣಿತನಾದ ದಾಸಯ್ಯನು ಹನ್ನೆರಡು ವರ್ಷ ಕಷ್ಟಪಟ್ಟು ಒಂದು ಸುಂದರವಾದ ಬಹುಬೆಲೆಯುಳ್ಳ ಹೊದೆಯುವ ವಸ್ತುವನ್ನು ನೇಯ್ದಿರುತ್ತಾನೆ. ಅದನ್ನು ಮಾರಲು ಸಂತೆಗೆ ಒಯ್ಯುತ್ತಾನೆ. ಬಹು ಬೆಲೆಯುಳ್ಳ ಆ ವಸ್ತ್ತ್ರವನ್ನು ಕೊಳ್ಳಲು ಯಾರೂ ಬರಲಿಲ್ಲ. ದಾಸಿಮಯ್ಯ ಮನೆಗೆ ಮರಳಿ ಬರುವಾಗ ಒಬ್ಬ ಜಂಗಮನು ಆ ದಿವ್ಯಾಂಬರವನ್ನು ಬೇಡುತ್ತಾನೆ. ದಾಸಿಮಯ್ಯ ಒಂದೂ ವಿಚಾರಿಸದೆ ಅದನ್ನು ಜಂಗಮನಿಗೆ ಕೊಟ್ಟು ಬಿಡುತ್ತಾನೆ. ಜಂಗಮನು ಆ ದಿವ್ಯಾಂಬರವನ್ನು ದಾಸಿಮಯ್ಯನ ಎದುರಿಗೆ ಹರಿದು ಚೂರು ಮಾಡಿ ಗಾಳಿಯಲ್ಲಿ ತೂರುತ್ತಾನೆ. ದಾಸಿಮಯ್ಯ ಸ್ವಲ್ಪವೂ ವಿಚಲಿತನಾಗಲಿಲ್ಲ ಅವನ ಜಂಗಮನನ್ನು ಮನೆಗೆ ಕರೆದುಕೊಂಡು ಹೋಗಿ ಸತ್ಕರಿಸುತ್ತಾನೆ. ದಂಪತಿಗಳ ಜಂಗಮ ನಿಷ್ಠೆಗೆ ಸಂಪ್ರೀತನಾಗಿ ಜಂಗಮನಾಗಿ ಬಂದ ಶಿವನು ತನ್ನ ನಿಜರೂಪ ತೋರಿ ಅವರಿಗೆ ತವನಿಧಿ (ಅಕ್ಷಯ ಪಾತ್ರೆ) ದಯಪಾಲಿಸಿ ಬಯಲಾಗುತ್ತಾನೆ . ತವನಿಧಿ ಪಡೆದುಕೊಂಡ ಆ ದಂಪತಿಗಳು ದೀನ ದಲಿತರಿಗೆ ಶರಣನಿಗೆ ದಾಸೋಹ ಮಾಡುತ್ತ ಕಾಲ ಕಳೆಯುತ್ತಿದ್ದರು.
ಸಂಸಾರ ಶ್ರೇಷ್ಠವೊ, ಸನ್ಯಾಸ ಶ್ರೇಷ್ಠವೊ: ಒಮ್ಮೆ ಇಬ್ಬರು ಸಾಧಕ ಚರಮೂರ್ತಿ ಯುವಕರಲ್ಲಿ ಸಂಸಾರ ಹಾಗೂ ಸನ್ಯಾಸ ಇವುಗಳಲ್ಲಿ ಯಾವುದು ಶ್ರೇಷ್ಠವೆಂಬ ವಿಷಯದಲ್ಲಿ ವಾದ ವಿವಾದ ನಡೆಯುತ್ತದೆ. ಇದರ ಪರಾಮರ್ಶೆಗೆ ಅವರಿಬ್ಬರು ಅನುಭಾವಿ ಶರಣ ದಾಸಿಮಯ್ಯನಲ್ಲಿಗೆ ಬರುತ್ತಾರೆ. ಅವರಿಗೆ ಆದಾರಾತಿಥ್ಯ ಮಾಡಿ ಕೂಡ್ರಿಸಿದ ದಾಸಯ್ಯನು ಎಳೆ ಬಿಸಿಲಿನಲ್ಲಿ ಕುಳಿತು ಕಾಯಕ ನಿರತನಾಗಿ ದುಗ್ಗಳೆಗೆ ದೀಪ ಹಚ್ಚಿ ತರಲು ಹೇಳುತ್ತಾನೆ. ದುಗ್ಗಳೆ ದೀಪ ಹಚ್ಚಿ ತಂದು ಬಿಸಿಲಲ್ಲಿ ಕುಳಿತ ದಾಮಯ್ಯನ ಮುಂದಿಡುತ್ತಾಳೆ ತಲೆಗೆ ಹೊದ್ದುಕೊಳ್ಳಲು ವಸ್ತ್ತ್ರ ತೆಗೆದುಕೊಡಲು ಹೇಳುತ್ತಾನೆ. ಅವನ ಹೆಗಲ ಮೇಲೆಯೇ ಇದ್ದ ವಸ್ತ್ತ್ರವನ್ನು ದುಗ್ಗಳೆ ತೆಗೆದು ಅವನ ತಲೆಯ ಮೇಲಿರಿಸುತ್ತಾಳೆ. ಕುಡಿಯಲು ತಂದಿಟ್ಟ ತಂಗಳು ಅಂಬಲಿ ಬಾಯಿ ಸುಟ್ಟಿತು ಆರಿಸಿಕೊಡು ಎಂದು ಹೇಳಲು ದುಗ್ಗಳೆ ಅಂಬಲಿಗೆ ಗಾಳಿ ಹಾಕುತ್ತಾಳೆ ಇದನ್ನೆಲ್ಲ ನೋಡುತ್ತ ಕುಳಿತಿದ್ದ ಆ ಸಾಧಕ ಯುವಕರು ಮುಸಿಮುಸಿ ನಗುತ್ತಿರುತ್ತಾರೆ. ಆಗ ದಾಸಿಮಯ್ಯನು ಸಾಧಕರೆ ಇದಿರು ನುಡಿಯದೆ ಸಂಸಾರದ ಒಳ ಅರಿವನ್ನು ಅರಿತು ಸೇವೆ ಮಾಡಿಕೊಂಡಿರಬಲ್ಲ ನಮ್ಮ ದುಗ್ಗಳೆಯಂಥ ಸತಿ ಇದ್ದರೆ ಸಂಸಾರ ಲೇಸು ಇಲ್ಲದಿದ್ದರೆ ಸನ್ಯಾಸ ಲೇಸು ಎಂದು ಹೇಳುತ್ತಾನೆ. ‘ಸತಿ ಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ’ ದಾಸಿಮಯ್ಯನ ನುಡಿ.
ಬಂದುದನರಿದು ಬಳಸುವಳು
ಬಂದುದ ಪರಿಣಾಮಿಸುವಳು
ಬಂಧು ಬಳಗದ ಮರೆಸುವಳು
ದುಗ್ಗಳೆಯ ತಂದು ಬದುಕಿದೆನು ಕಾಣಾ ರಾಮನಾಥಾ ಆದರ್ಶ ಸತಿ ದುಗ್ಗಳೆಯನ್ನು ಮನಸಾರೆ ಹೊಗಳುತ್ತಾನೆ.
ದಾಸಿಮಯ್ಯನು 176 ವಚನಗಳನ್ನು ರಚಿಸಿದ್ದಾನೆ. ಅವುಗಳಲ್ಲಿ ರೂಪಾಲಂಕಾರ ವಿಶೇಷವಾಗಿದ್ದು ಸರಳತೆ ಸಂಕ್ಷಿಪ್ತ
Gadag Irappa
Irappa Soratur:
ದೇವರ ಮತ್ತು ಜೇಡರ ಎಂಬುದಕ್ಕಿಂತ ದಾಸಿಮಯ್ಯ ಮುಖ್ಯವಾಗಲಿ.ಯುಗಾದಿ ಹಬ್ಬದ ನಂತರದ ಐದನೇ ದಿನದಂದು ಪ್ರತೀ ವರ್ಷ ಆದ್ಯ ವಚನಕಾರ ದೇವರ ದಾಸಿಮಯ್ಯರ ಜಯಂತಿಯನ್ನು ನೇಕಾರ ಸಮುದಾಯಗಳು ಆಚರಿಸಿಕೊಂಡು ಬರುತ್ತಿವೆ. ರಾಜ್ಯ ಸರ್ಕಾರ ಕೂಡ ನೇಕಾರ ದಾಸಿಮಯ್ಯರ ಸಾಹಿತ್ಯ ಕೊಡುಗೆಯನ್ನು ಸ್ಮರಿಸಿ ಇಡೀ ನೇಕಾರ ಸಮುದಾಯದವರ ಆಶೋತ್ತರಗಳಿಗೆ ಪೂರಕವಾಗಿ ಸಾಂದರ್ಭಿಕ ರಜೆಯನ್ನು ಘೋಷಿಸಿದೆ. ಅಲ್ಲದೆ ಅವರ ಸಾಹಿತ್ಯ ಕುರಿತ ಉನ್ನತ ಅಧ್ಯಯನಕ್ಕಾಗಿ ಹಂಪೆಯ ಕನ್ನಡ ವಿಶ್ವವಿದ್ಯಾನಿಲಯದಲ್ಲಿ ದಾಸಿಮಯ್ಯ ಅಧ್ಯಯನ ಪೀಠವನ್ನೂ ರಚಿಸಿದೆ. ರಾಜ್ಯ ಸರ್ಕಾರ ದಾಸಿಮಯ್ಯರ ಕುರಿತಂತೆ ಪೂರ್ವಾಪರಗಳನ್ನು ಕುರಿತು ಇತಿಹಾಸ ತಜ್ಞರು, ಸಂಶೋಧಕರು, ಪ್ರಾಜ್ಞರನ್ನು ಒಳಗೊಂಡಂತೆ ಇತರೆ ವಿದ್ವಾಂಸರಿಂದ ಮಾಹಿತಿಗಳನ್ನು ಕ್ರೋಢೀಕರಿಸಿಯೇ ಈ ಎಲ್ಲ ಕ್ರಮಗಳನ್ನು ಕೈಗೊಂಡಿರುವುದು ಸರ್ವವೇದ್ಯವಾದ ಸಂಗತಿ.
ಕನ್ನಡ ಸಾಹಿತ್ಯದಲ್ಲಿ ಜೇಡರ ದಾಸಿಮಯ್ಯ, ದೇವರ ದಾಸಿಮಯ್ಯ, ಮುದನೂರು ದಾಸಿಮಯ್ಯ, ತವನಿಧಿಯ ದಾಸಿಮಯ್ಯ ಮತ್ತು ಶಂಕರ ದಾಸಿಮಯ್ಯ ಎಂಬಿತ್ಯಾದಿ ಹೆಸರಗಳನ್ನು ಕಾಣುತ್ತೇವೆ. ಇವುಗಳ ಕುರಿತು ವಿದ್ವಾಂಸರೂ ಸಹ ಸಾಕಷ್ಟು ಚರ್ಚೆ ನಡೆಸಿದ್ದಾರೆ. ಈ ಎಲ್ಲ ಹೆಸರುಗಳಲ್ಲಿರುವರು ಇಬ್ಬರು ಮಾತ್ರ. ಒಬ್ಬ ಶಂಕರ ದಾಸಿಮಯ್ಯನಾದರೆ, ಇನ್ನೋರ್ವ ಜೇಡರ ದಾಸಿಮಯ್ಯ.. ಶಂಕರ ದಾಸಿಮಯ್ಯನವರಿಗೆ ನವಿಲೆಯ ದಾಸಿಮಯ್ಯರೆಂದೂ ಕರೆಯುತ್ತಾರೆ. ಜೇಡರ ದಾಸಿಮಯ್ಯನವರಿಗೆ ದೇವರ ದಾಸಿಮಯ್ಯ, ಮುದನೂರಿನ ದಾಸಿಮಯ್ಯ, ತವನಿಧಿಯ ದಾಸಿಮಯ್ಯರೆಂದು ಕರೆಯುತ್ತಾರೆ. ಈ ಈರ್ವರ ಬಗ್ಗೆ ಹಲವಾರು ಕಾವ್ಯಗಳು ಉಲ್ಲೇಖಿಸಿರುತ್ತವೆ. ಇವರು ಬೇರೆ ಬೇರೆ ಎಂಬುದು ನಿರ್ವಿವಾದ.
ಅಲ್ಲದೆ ದಾಸಿಮಯ್ಯ ಜೇಡನೋ, ದೇವನೋ, ಆದ್ಯ ವಚನಕಾರನೋ, ಅನಂತರದವನೋ, ದಾಸಿಮಯ್ಯ ಅನುಸರಿಸುತ್ತಿದ್ದದು ಶಿವನ ಕುಲವೋ, ದಾಸ ಕುಲವೋ, ಆತನ ವಚನಗಳಲ್ಲಿ ವ್ಯಕ್ತವಾಗಿರುವುದು ಶೈವವೋ, ವೀರಶೈವವೋ, ಅತ ಪ್ರತಿಪಾದಿಸಿದ್ದು ಶಕ್ತಿವಿಶಿಷ್ಟಾದ್ವೈತವೋ, ಶಂಕರರ ಅದ್ವೈತವೋ, ಅವನು ಜಂಗಮನಿಗೆ ಅರ್ಪಿಸಿದ್ದು ತೊಟ್ಟ ವಸ್ತ್ರವೋ, ನೇಯ್ದ ವಸ್ತ್ರವೋ ಎಂಬ ಹಲವಾರು ಸಂಶಯಗಳನ್ನು ವಿದ್ವಾಂಸರು ಇಂದಿಗೂ ವ್ಯಕ್ತಪಡಿಸುತ್ತಲೇ ಇದ್ದಾರೆ. ಆಧುನಿಕ ಶರಣ ಸಾಹಿತ್ಯ ಸಂಶೋದಕರು ಪುರಾಣ ಮತ್ತು ವಚನಗಳಲ್ಲಿ ದಾಸಿಮಯ್ಯರ ವ್ಯಕ್ತಿತ್ವವನ್ನು ರೂಪಿಸುವುದಕ್ಕೆ ಬಳಸಿದ್ದಾರೆಯೇ ಹೊರತು ವಚನಗಳಲ್ಲಿ ಪುರಾಣದ, ಪುರಾಣಗಳಲ್ಲಿ ವಚನಗಳ ಅಂಶವನ್ನು ಆಧಾರವಾಗಿ ತೆಗೆದುಕೊಂಡಿರುವುದರಿಂದ ದೇವರ ಮತ್ತು ಜೇಡರ ದಾಸಿಮಯ್ಯ ವ್ಯಕ್ತಿತ್ವದ ಬಗ್ಗೆ ಗೊಂದಲಗಳನ್ನು ಮುಂದುವರೆಸಿದ್ದಾರೆ.
ಪುರಾಣಗಳಲ್ಲೇ ಅತ್ಯಂತ ಪುರಾತನವಾದ ದೇವಾಂಗ ಪುರಾಣದಲ್ಲಿ ದೇವಲ ಮಹರ್ಷಿಯ ಸಪ್ತಾವತಾರದಲ್ಲಿ ಕೊನೆಯದೆಂದು ಹೇಳಲಾಗಿರುವ ದೇವದಾಸ ಅವತಾರವೇ ದೇವರ ದಾಸಿಮಯ್ಯ. ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಇಬ್ಬರೂ ಬೇರೆ ಬೇರೆ ಅಲ್ಲ, ಅವರಿಬ್ಬರೂ ಒಬ್ಬರೇ ಎಂಬುದಕ್ಕೆ ಅನೇಕ ನಿದರ್ಶನಗಳಿವೆ. ಭೀಮಕವಿಯು(1369) ಬರೆದ ಬಸವ ಪುರಾಣ 51ನೇ ಸಂದಿ ಪದ್ಯ 13ರಲ್ಲಿ ದೇವರ ದಾಸಿಮಯ್ಯನು ಜಯಸಿಂಹರಾಯನ ಹೆಂಡತಿ ರಾಣಿ ಸುಗ್ಗಲೆಗೆ ದೀಕ್ಷೆ ನೀಡಿದ್ದ. ರಾಜ ಜಯಸಿಂಹನ ಕಾಲ 1018-1042 ಇದ್ದು, ಜೇಡರ ದಾಸಿಮಯ್ಯ ಮತ್ತು ದೇವರ ದಾಸಿಮಯ್ಯ ಬೇರೆ ಬೇರೆ ಅಲ್ಲ ಎಂದು ಎಲ್ಲ ಆಯಾಮಗಳನ್ನು ಪರಿಶೋಧಿಸಿ ನಿರ್ಧರಿಸಿದ್ದಾರೆ. ಪಾಶ್ಚಾತ್ಯ ಸಂಶೋಧಕ ಡಾ. ಪ್ಲೀಟರ್ ಕೂಡ ಇದನ್ನೇ ಸಮರ್ಥಿಸಿದ್ದಾರೆ.
ಈ ಅಂಶವನ್ನೇ ಪುಷ್ಟೀಕರಿಸುವ ನಿಟ್ಟಿನಲ್ಲಿ ಕವಿ ಚಕ್ರವರ್ತಿಯ 'ಸುರಂಗ ಕೃತ'ವನ್ನು ಡಾ. ಆರ್.ಸಿ. ಹಿರೇಮಠ್ ಸಂಪಾದಿಸದ್ದು 1966ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯವು ಪ್ರಕಟಿಸಿದೆ. ಈ ಗ್ರಂಥದ ಪುಟ 48, 49ರಲ್ಲಿ ಕ್ರಿಸ್ತಶಕೆ 1040ರಲ್ಲಿ ದೇವರ ದಾಸಿಮಯ್ಯನು ವಚನಗಳನ್ನು ಬರೆದಿದ್ದನು ಎಂದು ವಿವರಿಸಿದ್ದಾರೆ.
ಸಾಹಿತ್ಯ ಸಂಶೋಧನೆ ಮತ್ತು ಸಮಾಲೋಚನಾ ಗ್ರಂಥದ ಹತ್ತನೇ ಶತಮಾನದ ಸಾಹಿತ್ಯದ ಪುಟ 35, 36, 37ರಲ್ಲಿ ದೇವರ ದಾಸಿಮಯ್ಯನ ಕಾಲ, ಶಾಸನಗಳ ಆಧಾರ ಮತ್ತು ಇವುಗಳ ಬಗ್ಗೆ ಕೂಲಂಕುಷವಾಗಿ ಪರಿಶೋಧನೆಯನ್ನು ಮಾಡಿರುವ ಗೋವಿಂದ ಪೈಗಳವರ ವಿಚಾರಗಳು, ಕನ್ನಡ ಸಾಹಿತ್ಯದ ಪ್ರಾಚೀನ ಕಾಲದ ಇತಿಹಾಸ ಪ್ರಸಿದ್ಧ ಕವಿಗಳಾದ ಹರಿಹರ (ಶಕೆ 1215)-ದಾಸಿಮಯ್ಯನ ರಗಳೆ, ಮಹಾಕವಿ ರಾಘವಾಂಕ-ದೇವಾಂಗ ದಾಸಿಮಯ್ಯ ಪುರಾಣ (15ನೇ ಶತಮಾನ), ಅಪ್ಪಯ್ಯ ಕವಿಯ 18ನೇ ಶತಮಾನದ ದೇವಾಂಗ ಪುರಾಣ, ವಿರೂಪಾಕ್ಷ ದೇಶಿಕರ 19ನೇ ಶತಮಾನದ ದೇವರ ದಾಸಿಮಯ್ಯ ಪುರಾಣ ಹಾಗೂ ಮಹಾಂತ ದೇಶಿಕರ ಶಿವಶರಣ ವಿಳಾಸದೊಳಗಿನ ದೇವರ ದಾಸಿಮಯ್ಯ, ಇವೆಲ್ಲವೂ ದೇವರ ದಾಸಿಮಯ್ಯ ಆದ್ಯ ವಚನಕಾರ ಹಾಗೂ ಅವರು 10-11ನೇ ಶತಮಾನಕ್ಕೆ ಸೇರಿದ್ದವರು ಎಂಬುದನ್ನು ರುಜುವಾತು ಪಡಿಸುತ್ತವೆ.
ಡಿ.ಎಲ್. ನರಸಿಂಹಾಚಾರ್ ಸಂಪಾದಿಸಿರುವ ರಾಘವಾಂಕ ಕವಿಯ 'ಸಿದ್ಧರಾಮ ಚರಿತ್ರೆ' ಸಂಗ್ರಹ ಪೀಠಿಕೆಯ 8-9ನೇ ಪುಟ, ಮೈಸೂರು ವಿಶ್ವವಿದ್ಯಾಲಯ 1962ರಲ್ಲಿ ಪ್ರಕಟಸಿದ ಗ್ರಂಥ ಸೂಚಿಯ ಪುಟ 175ರಲ್ಲಿ ರಾಘವಾಂಕ ವಿರಚಿತ ದೇವಾಂಗ ದಾಸಿಮಯ್ಯ ಪುರಾಣದ 149 ತಾಳೆಗರಿ ಪತ್ರಗಳು ಇದ್ದುದಾಗಿ ತಿಳಿಸಿದ್ದಾರೆ. ಇದೇ ಗ್ರಂಥದ ವಿರೂಪಾಕ್ಷ ದೇಶಿಕರು ಬರೆದ ದೇವರ ದಾಸಿಮಯ್ಯ ಪುರಾಣ (ಭಾಮಿನಿ ಷಟ್ಪದಿಯಲ್ಲಿ) ಪುಟ 181 ಪತ್ರಗಳಿರುವ ದಾಖಲೆ, ಕನ್ನಡ ನಾಡಿನ ಚರಿತ್ರೆ-2ರ ಕರ್ನಾಟಕದ ಧರ್ಮಗಳು ಕೃತಿಯ ಪುಟ 45, 46ರಲ್ಲಿ ದಾಸಿಮಯ್ಯರು ಬಸವಣ್ಣನವರಿಗಿಂತ ಒಂದು ಶತಮಾನ ಹಿಂದಿನವನು ಎಂಬುದನ್ನು ಪಾಶ್ಚಿಮಾತ್ಯ ಸಂಶೋಧಕ ಡಾ. ಪ್ಲೀಟರ್ ಪುಷ್ಟೀಕರಿಸಿದ್ದಾರೆ.
ಅಲ್ಲದೆ, ಇಕ್ಕಟ್ಟು, ಬಿಕ್ಕಟ್ಟು, ಮರುಚಿಂತನೆ, ದೇವಾಂಗ ಸಂಸ್ಕೃತಿ (ನಾಡೋಜ-ಪ್ರೊ. ಕೆ.ಜಿ. ನಾಗರಾಜಪ್ಪ ಕೃತಿಗಳು) ದೇವರ ದಾಸಿಮಯ್ಯನ ವಚನಗಳು-ಡಾ. ಎಲ್. ಬಸವರಾಜು, ದಾಸಿಮಾರ್ಯ ಪ್ರಶಸ್ತಿ-ಡಾ.ಜ.ಚ.ನಿ, ದೇವರ ದಾಸಿಮಯ್ಯನ ವಚನಗಳು-ಡಾ. ಫ.ಗು.ಹಳಕಟ್ಟಿ, ದೇವರ ದಾಸಿಮಯ್ಯನವರ ವಚನ ದರ್ಪಣ-ಸಂಪಾದಕ ರಮೇಶ್ ಮಾಳಾ, ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆ- (ಡಿಸೆಂಬರ್ 2005ರ ಸಂಚಿಕೆ ಪುಟ 57 ರಿಂದ 64) ಡಾ. ಶಾಮಸುಂದರ ಕೋಚಿ ಇವೆಲ್ಲವೂ ದೇವರ ಮತ್ತು ಜೇಡರ ಬಗೆಗಿನ ಕುರಿತ ವಿವಾದಗಳಿಗೆ ಸತ್ಯ
Irappa Soratur: ಜೇಡರ ಬಗೆಗಿನ ಕುರಿತ ವಿವಾದಗಳಿಗೆ ಸತ್ಯದ ಬೆಳಕು ಚೆಲ್ಲುವ ಗ್ರಂಥಗಳಾಗಿವೆ.
ಇಷ್ಟೆಲ್ಲ ಇತಿಹಾಸ, ಸಂಶೋಧನೆ, ದಾಖಲೆಗಳು ಕನ್ನಡ ಸಾರಸ್ವತ ಲೋಕದಲ್ಲಿ ದಿನಂಪ್ರತಿ ಬಳಕೆ ಆಗುತ್ತಿರುವ ನಡುವೆ ಸಂಶೋಧಕರು ಎಂಬ ಹೆಸರಿನಲ್ಲಿ ಕೆಲವರು ಅನಗತ್ಯ ಗೊಂದಲಗಳನ್ನು ಸೃಷ್ಟಿಸುತ್ತಾ ಇಡೀ ನೇಕಾರ ಸಮುದಾಯದವರ ಭಾವನೆಗಳಿಗೆ ಕಿಚ್ಚು ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಡಾ. ಎಂ. ಚಿದಾನಂದಮೂರ್ತಿ ಮತ್ತು ಡಾ. ಎಸ್. ವಿದ್ಯಾಶಂಕರ್ ಇವರುಗಳು ಹಿರಿಯ ಸಂಶೋಧಕರು ಎಂಬುದು ನಿರ್ವಿವಾದ. ಆದರೆ ಇವರಿಬ್ಬರು ತಮ್ಮ ಹಿರಿತನಕ್ಕೆ ತಕ್ಕಂತೆ ಗೊಂದಲಗಳನ್ನು ಬಿಡಿಸುವ ಬದಲು ಮತ್ತಷ್ಟು ಗೊಂದಲಗಳನ್ನು ಸೃಷ್ಟಿಸುತ್ತಿರುವುದು ವಿಷಾದನೀಯ. ಇಲ್ಲದ ವಸ್ತುವನ್ನು ಕತ್ತಲಲ್ಲಿ ಹುಡುಕುವಂತಾಗಿದೆ ಎಂಬ ಅಭಿಪ್ರಾಯಗಳು ಸರಿಯಲ್ಲ. ನೇಕಾರ ಸಂತ, ಆದ್ಯ ವಚನಕಾರ ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯರು ಇಬ್ಬರೂ ಒಬ್ಬರೇ ಆಗಿದ್ದು ಅವರು ತಮ್ಮ ವಚನಗಳ ಮೂಲಕ ಜಗತ್ತಿನ ಅಂಧಕಾರವನ್ನು ಹೋಗಲಾಡಿಸುವ ಮೂಲಕ ಸರ್ವ ಜನರ ಹೃನ್ಮನಗಳಲ್ಲಿ ಬೆಳಕಾಗಿ ಕಾಣಿಸುತ್ತಿರುವಾಗ ಕತ್ತಲಲ್ಲಿ ಹುಡುಕುವ ಅಸಂಗತತೆ ನೇಕಾರ ಸಮುದಾಯದರಿಗಿಲ್ಲ. 1065-66ರಲ್ಲಿ ಡಾ. ಎಂ.ಚಿದಾನಂದಮೂರ್ತಿ ದೇವರ ದಾಸಿಮಯ್ಯರೇ ವಚನಕಾರ ಎಂದು ಒಪ್ಪಿಕೊಂಡು ತದನಂತರ ತಮ್ಮ ನಿಲುವಿನಲ್ಲಿ ಬದಲಾವಣೆ ಮಾಡಿಕೊಂಡಿದ್ದನ್ನು ಇಡೀ ಕನ್ನಡ ಸಾರಸ್ವತ ಲೋಕ ಒಪ್ಪಿಕೊಳ್ಳಬೇಕೆಂದೇನೂ ಇಲ್ಲ.
ಬ್ರಹ್ಮಶಿವ, ಭೀಮಕವಿ, ಹರಿಹರ, ರಾಘವಾಂಕ, ವಿರೂಪಾಕ್ಷ ದೇಶಿಕ, ಮುಂತಾದವರು ಅನೇಕ ಶತ ಶತಮಾನಗಳ ಹಿಂದಿನ ಕವಿಗಳು, ಆನಂತರದಲ್ಲಿ ಬಂದ ಅಪ್ಪಯ್ಯ ಕವಿ, ಡಾ. ಗೋವಿಂದ ಪೈಗಳು, ಡಾ. ಎಲ್. ಬಸವರಾಜು ಅವರು ಡಾ, ಜಚನಿ ಸೇರಿದಂತೆ ಮೊದಲಾದವರು ದೇವರ ದಾಸಿಮಯ್ಯ ಆದ್ಯ ವಚನಕಾರ, ಬಸವ ಪೂರ್ವಕಾಲದವನೆಂದು ಸಾರಿದ್ದಾರೆ. ವರ್ತಮಾನ ಕಾಲದಲ್ಲಿ ಅನೇಕ ಸಾಹಿತಿಗಳು, ಸಂಶೋಧಕ ಬರಹಗಾರರು ಈ ಕುರಿತು ನೂರಾರು ಗ್ರಂಥಗಳನ್ನು ರಚಿಸಿದ್ದಾರೆ. ಈ ಎಲ್ಲದವುಗಳ ಹಿನ್ನೆಲೆಯಲ್ಲಿ ಜೇಡರ ಮತ್ತು ದೇವರ ಎಂಬ ಗೊಂದಲಗಳಿಗೆ ಮಂಗಳ ಹಾಡಿ ದಾಸಿಮಯ್ಯ ಮುಖ್ಯ ಎಂಬ ತಮ್ಮ ಹೃದಯ ವೈಶಾಲ್ಯತೆಯನ್ನು ತೋರಿಸುವ ಔಚಿತ್ಯ ಮತ್ತು ಬದ್ಧತೆಯನ್ನು ಸಂಶೋಧಕರಾದ ಡಾ. ಎಂ. ಚಿದಾನಂದಮೂರ್ತಿ ಮತ್ತು ಡಾ. ಎಸ್. ವಿದ್ಯಾಶಂಕರ ಪ್ರದರ್ಶಿಸಬೇಕಿದೆ.
- ಲಿಂಗರಾಜು ಡಿ. ನೊಣವಿನಕೆರೆ