ದೇವರ ದಾಸಿಮಯ್ಯನವರ ಹಿರಿಮೆ ಮತ್ತು ದೇವಾಂಗ ಮಹರ್ಷಿಯ ಕೊನೆಯ ಏಳನೇ ಅವತಾರವೇ ದೇವರ ದಾಸಿಮಯ್ಯನವರು
ಕೈಲಾಸದ ಶಿವನ ಒಲಗದಲ್ಲಿ ನಂದಿಗೆ ಯಾವ ಸ್ತಾನ - ಮಾನ ಗಳಿವೇ . ದೇವಾಂಗನಿಗೂ ಅದೇ ಸ್ತಾನ - ಮಾನ ಗಳಿವೆ. ಇಬ್ಬರೂ ಶಿವಗಣಾಧೀಶ್ವರು. ನಂದಿ ಶಿವನ ವಾಹನವಾದರೆ, ದೇವಾಂಗ ದಿವ್ಯಾ೦ಬರನಾಗಿ ಭೂಷಣನಾಗಿದ್ದಾನೆ. ನಂದಿ ಜಗತ್ತಿಗೆ ಅನ್ನದಾತ, ದೇವಾಂಗ ವಸ್ತ್ರದಾತ, ಒಬ್ಬನು ಜನತೆಗೆ ಅಂಗ ವರ್ಧಕ, ಒಬ್ಬನು ಅಂಗ ಪೋಷಕ , ಒಬ್ಬನು ರಸಕಾರ, ಇನ್ನೊಬ್ಬ ಅಲಾ೦ಕಾರಕ, ಒಬ್ಬನು ಪ್ರಾಣ ಪೋಷಕ,ಇನ್ನೊಬ್ಬ ಮಾನರಕ್ಷಕ.
ನಂದಿ ಶೀಲಾದಾ , ನೀಲ, ಲೋಹಿತ ... ಮುಂತಾಗಿ ಏಳು ಅವತಾರ ತಾಳಿ ಭೂಲೋಕಕ್ಕೆ ಬರುತ್ತಾನೆ. ದೇವಾಂಗನು ಸಹ ವಿದ್ಯಾಧರ, ಪುಷ್ಪದಂತ, ಬೇತಾಳ, ವರರುಚಿ ಚಿತ್ರಯೋಗಿ, ದೇವಶಾಲಿ, ಕೊನೆಯ ಅವತಾರವೇ ದೇವರ ದಾಸಿಮಯ್ಯ. ಏಳು ಅವತಾರ ಪುರುಷರಿಗೆ ಮೂಲ ಪುರುಷ "ದೇವಾಂಗ"ನಾದನು. ಅವನು ಸಾಕ್ಷತ್ ಜಗದೀಶ ಸ್ವರೂಪ, ಜಗದ್ರಕ್ಷಕನಾಗುತ್ತಾನೆ.
ದೇವಾಂಗನ ಸಪ್ತವತಾರದ ಬಗ್ಗೆ ಇನ್ನೊಂದು ಶ್ಲೋಕವು ಈ ರೀತಿ ಇದೆ.
ವಿದ್ಯಾದರಶ್ಚಿತ್ರಿ ಯೋಗಿ , ಸಾಧುಕೋ ಪುಷ್ಪದಂತಕಃ
ಬೇತಾಳ ವರರುಚಿದಾಸೋ ದೇವಾಂಗ ಸಪ್ತನಾಮಕಃ

ದೇವಾಂಗ ಮೂಲಸ್ಟಂಭ ದೇವಾಂಗ ಪುರಾಣವನ್ನಾಧರಿಸಿ ದೇವಾಂಗ ಚರಿತ್ರೆಯ ಸಂಕ್ಷಿಪ್ತ ಸಂಗ್ರಹ.
ದೇವಾಂಗ ಮಹರ್ಷಿಯ ಸಪ್ತವತಾರಗಳು (ಏಳು) ಅವತಾರಗಳು
ನೈಮಿಷಾರಣ್ಯದಲ್ಲಿ ತಪೋಧನರಾದ ಶ್ಹೌನಕ ಮೊದಲಾದ ಮುನಿಪುಂಗವರು ಬಹುಕಾಲ ನಡೆವ ದೀರ್ಘಸತ್ರ ಹಾಗೇ ಮಾಡುತಿದ್ದರು. ಇವರನ್ನು ಕಾಣಾ ಬಯಸಿ ವ್ಯಾಸ ಶಿಷ್ಯ,ಮಹಾತಪಸ್ವಿ ಸೂತ ಪುರಾಣಿಕ ಅಲ್ಲಿಗೆ ಬಂದನು. ಋಷಿಗಳು ಸ್ವಾಗತಿಸಿ, ಸತ್ಕರಿಸಿ, ಸೂತ್ರ ವಸ್ತ್ರಗಳ ಕರ್ತೃ ಮುಂತಾದ ವಿಷಯಗಳನ್ನು ವಿವರವಾಗಿ ತಿಳಿಸಬೇಕೆಂದು ಕೇಳಿದರು. ಸೂತ ಪುರಾಣಿಕ ಸಂತೋಷದಿಂದ ಷಣ್ಮುಖನಿಗೆ ಈಶ್ವರ ತಿಳಿಸಿದ ದೇವಾಂಗನ ಪುಣ್ಯಕತೆಯನ್ನು ಹೇಳಿದನು.
ದೇವಾಂಗ ಪರಬ್ರಹ್ಮ ಪ್ರಪಂಚವನ್ನು ಸೃಷ್ಟಿಸಬೇಕೆಂದು ಆಶಿಸಿ ಪರಶಿವೆ ಆದಿಶಕ್ತಿಯನ್ನು ಹುಟ್ಟಿಸಿದನು. ಆದಿಶಕ್ತಿಯ ರಜೋಗುಣದಿಂದ ಬ್ರಹ್ಮ, ಸತ್ವಗುಣದಿಂದ ವಿಷ್ಣು, ತಮೋಗುಣದಿಂದ ರುದ್ರ ಜನಿಸಿದರು. ಬ್ರಹ್ಮನಿಂದ ಸೃಷ್ಟಿಯಾದ ದೇವ ಮಾನವರೆಲ್ಲರೂ ಬೆತ್ತಲೆಯಲ್ಲಿದ್ದರು. ಈ ದುರವಸ್ಥೆಯನ್ನು ನೋಡಿದ ನಾರದ ಬ್ರಹ್ಮನನ್ನು ಕೇಳಿಕೊಂಡು ದೇವತೆಗಳ ಸಮೇತ ಕೈಲಾಸಪತಿ ಬಳಿಗೆ ಬಂದರು. ನೀಲಕಂಠ ಇವ್ರು ಬಂದ ವಿಷಯವನ್ನರಿತು ಉಗ್ರ ದಾನ್ಯದಲ್ಲಿ ತನ್ಮಯನಾದಾಗ, ಶಿವನ ಪಾಲನೇತ್ರದಿಂದ ಜ್ಯೋತಿ ಹುಟ್ಟಿ ಪುರುಷರೂಪ ತಾಳಿತು.ಜಟಾಧಾರಿ,ದಂಡಾಜಿನ ಕಮಂಡಲು ಧರಿಸಿ, ಮಹಾ ತೇಜಸ್ವಿ, ದರ್ಭಪಾಣಿ, ನಿರ್ಮಲ ಮೇಧಾವಿ,ಜಿತೇದ್ರಿಯ, ಯಾಜ್ನೋಪವೀತಧಾರಿ,ಸತ್ಯವಾದಿ,ಕುಶಲಿ ಕೀರ್ತಿ ಭೂಷಣನಾದ ಇವನಿಗೆ ಪರಮೇಶ್ವರ ದೇವಲನೆಂದು ಹೆಸರಿಟ್ಟನು.
ಶಿವನನ್ನು ದೇವಲ ಪರಿಪರಿಯಾಗಿ ಸ್ತುತಿಸಿ " ನನ್ನನ್ನೇಕೆ ನಿರ್ಮಿಸಿದೆ, ನನ್ನ ಜನ್ಮದಿಂದ ಲಾಭವೇನು. ನನ್ನ ಕಾರ್ಯವೇನು?" ಎಂಧು ಬಿನ್ನವಿಸಿದನು. ಲೋಕೋಪಕಾರಕ್ಕಾಗಿ ನಿನ್ನನ್ನು ನಿರ್ಮಿಸಿರುವೆ, ೬ ಜನ್ಮ ತಾಳಿ ಕೀರ್ತಿ ಗಳಿಸಿ ೭ನೆಯ ಜನ್ಮದಲಿ ನನ್ನಲ್ಲಿ ಮೋಕ್ಷ ಹಾಡುವೆ ನನ್ನಿಂದ ವೇದಗಳು ಹುಟ್ಟುವಾಗಲೆ ಒಡಹುಟ್ಟಿದ ತಂತುಗಳು ವಿಷ್ಣುವಿನ ಹೊಕ್ಕುಳಲ್ಲಿವೆ. ನೀನು ವಿಷ್ಣುವಿನಿಂದ ಅವನ್ನು ಪಡೆದು ಕುಶಲತೆಯಿಂದ ನೇಯ್ದು ಸಕಲರಿಗೂ ಕೊಟ್ಟು ಅವರ ಮನ, ಮರ್ಯಾದೆಗಳನ್ನೂ ಕಾಪಾಡು, ವಸ್ತ್ರಗಳನ್ನು ದೇವತೆಗಳಿಗೆ ಕೊಟ್ಟು ಅವರ ಅಂಗಗಳನ್ನು ಅಲಂಕರಿಸಿ ದೇವಾಂಗನೆಂಬ ಹೆಸರು ಪಡೆ. ಭರತ ಖ೦ಡದ ಸಗರ ದೇಶ ರಾಜಧಾನಿಯಾದ ಆಮೋದ ಪಟ್ಟಣದಲ್ಲಿ ರಾಜನಾಗಿ ನಿಂತು ರಾಜ್ಯ ಪರಿಪಾಲಿಸಿ ಪ್ರಪಂಚದಲ್ಲಿ ಯಶ್ಸಿವಿಯಾಗು. ನಿನ್ನ ವಂಶದವರು, ದಾನಿಗಳು, ಸತ್ಯ ಸಂಪನ್ನರು, ಪರೋಪಕಾರಿ, ಸದಾಚಾರಿ ದಿವ ಬ್ರಾಹ್ಮಣರಾಗಿರುವರು" ಎಂದನು. ದೇವಲ ಪಾರ್ವತಿ ಯನ್ನು ಪ್ರಾರ್ಥಿಸಿದಾಗ, ಸಮಯ ಬಂದಾಗ ಸ್ಮರಿಸಿದ ಕೂಡಲೆ ಸಹಾಯಕ್ಕೆ ಬರುವೆನೆಂದು ವಚನವಿತ್ತಳು.

ಚೌಡೇಶ್ವರಿ ದೇವಿ ವರ ಪ್ರಸಾದ
ಕಳಿಸಿ ಮಹಾ ತೇಜಸ್ವಿ ದೇವಲನು ಕ್ಷೀರ ಸಾಗರಕ್ಕೆ ಹೋಗಿ ಸುವರ್ಣಾಶ್ರಮಕ್ಕೆ ಬಂದು, ವಿಷ್ಣುವನ್ನು ಸ್ತುತಿಸಿ ನೇಮದಿಂದ ಮಾರಿದ ತಪಸ್ಸಿಗೆ ಮೆಚ್ಚಿದ ನಾರಾಯಣ ಕಾಣಿಸಿಕೊಂಡು, ಏನಾಗಬೇಕೆಂದು ಕೇಳಿದನು. ಆಗ ವಸ್ತ್ರಗಳನ್ನು ನಿರ್ಮಿಸಲು ನಿನ್ನ ನಾಭೀಕಮಲದಲ್ಲಿರುವ ತಂತುಗಳು ಬೇಕೆಂದನು. ಪುರುಷೋತ್ತಮ ತಂತುಗಳನ್ನು ಕೊಟ್ಟು."ನಿನ್ನ ಕೆಲಸದಲ್ಲಿ ಮಾಯಾವಿ ದೈತರು ವಂಚಿಸುವರು. ಜಾಗುರೂಕನಾಗಿದ್ದು ಜಯಿಸು" ಎಂದು ತನ್ನಲ್ಲಿದ್ದ ಒಂದು ಚಕ್ರವನ್ನೂ ಕೊಟ್ಟನು.
ದೇವಲ ಜಂಬು ದ್ವೀಪಕ್ಕೆ ಬಂದು ಉಪ್ಪು ಸಮುದ್ರ ದಲ್ಲಿ ಮನೋಹರವಾದ ಕ್ರತಿಮಾಶ್ರಮವನ್ನು ಕೊಂಡು ಒಳ ಹೊಕ್ಕನು. ಅಲ್ಲಿದ್ದ ಕಪಿಲಾತ ಋಷಿ ದೇವಲ ಯಾರು,ಏಕೆ ಬಂದಿರುವೆ ಎಂದು ವಿಚಾರಿಸೆಕೊಂಡನು. ತಾನು ಶಿವನ ಮಾನಸ ಪುತ್ರ,ಹೆಸರು ದೇವಲ,ವಿಷ್ಣುವಿಂದ ತಂತು ಗಳನ್ನು ತಂದಿರುವೆ ಎಂದನು.ಆಶ್ರಮದಲ್ಲಿ ರಾತ್ರಿ ತಂಗಿದ್ದು ಬೆಳಗ್ಗೆ ಹೋಗಬಹುದು ಎಂದಾಗ ದೇವಲ ಅಲ್ಲಿಯೇ ಉಳಿದನು.ನಡುರಾತ್ರಿಯಲ್ಲಿ ಕಪಟ ಯೂನಿಯ ಶಿಷ್ಯರು ದೇವಲನನ್ನು ಕೊಲ್ಲಲು ಹವಣಿಸಿದಾಗ ದೇವಳ ವಿಷ್ಣು ಕೊಟ್ಟಿದ ಚಕ್ರವನ್ನು ಅವರ ಮೇಲೆ ಬಿಟ್ಟನು . ಅ ಚಕ್ರ ದೈತ್ಯ ಸೇನೆಯನ್ನುನಾಶ ಮಾಡತೊಡಗಿದನು. ದೈತ್ಯರು ದಿಕ್ಕಾಪಾಲಾದರು.
ಆದರೆ ದೈತ್ಯರಲ್ಲಿ ಬಲಶಾಲಿಗಳಾದ ವಜ್ರ ಮುಷ್ಟಿ,ಧೂಮವಕ್ರ ,ದೂಮ್ರಾಸ್ಯ, ಚಿತ್ರಸೇನ,ಪಂಚಸೇನರೆಂಬ ಐವರು ಬಾಣಗಳ ಮಳೆ ಸುರಿಸಿದಾಗ ಈ ಪಂಚ ದೈತ್ಯರು ಹಿಂದೆಂದೋ ವಿಷ್ಣುವಿಂದ ಪಡೆದಿದ್ದ ವರದ ಫಲವಾಗಿ ಈ ಚಕ್ರ ಅಸಮರ್ಥವಾದಾಗ ತಡೆಯಲಾರದೆ ಲೋಕ ಮಾತೆ ಪಾರ್ವತಿ ದೇವಿಯನ್ನು ಕಾಪಾಡೆಂದು ಸುತ್ತಿಸಿದಾಗ ಪ್ರಸನ್ನಳಾಗಿ ತಾನು ಕೊಟ್ಟಿದ್ದ ವರದಂತೆ, ಚಂಡಿಕಾಂಬೆ ,ಮಹಾಬಲೆ, ಚೌಡೇಶ್ವರಿ ರೂಪ ತಾಳಿ ರಾಕ್ಷಸರನ್ನು ಶೂಲಾಯುಧದಿಂದ ಕೊಂದಳು. ಐವರು ರಾಕ್ಷಸರು ಐದು ಬಣ್ಣಗಳ ರಕ್ತಗಳಲ್ಲಿ ತಾನು ತಂದಿದ್ದ ತಂತುಗಳನ್ನು ಅದ್ದಿ ದಿವಾಲಾ ಪಂಚ ವರ್ಣಗಳನ್ನು ತಯಾರಿಸಿದನು. ಜನರು ತಮ್ಮ ರಕ್ತವನ್ನು ಮೈ ಮೇಲೆ ಧರಿಸುವಂತೆ ಶಿವನಿಂದ ಈ ಐವರು ವಾರ ಪಡೆದಿದ್ದುದು ಕೈಗೊಂಡಿತು. ಚೂಡಾ ಸಂಬಂಧದ ಪ್ರಭಾಜಾಲಗಳಿಂದ ದೈತ್ಯರನ್ನು ದಮನಗೊಳಿಸಿದ್ದರಿಂದ ತ್ರಿಭುವನೇಶ್ವರಿ, ಚಂಡಿಕಾಂಬೆಗೆ ಚೌಡೇಶ್ವರಿ, ಎಂದು ಹೆಸರಾಯಿತು.
ವಸ್ರ ನಿರ್ಮಾಣ
ಅರಸನಾದ ದೇವಲನು ಬಟ್ಟೆಗಳನ್ನು ನೇಯಲು ಸಂಕಲ್ಪಿಸಿದನು. ಅದಕೋಸ್ಕರ ಮೇರುಗಿರಿಯಿಂದ ನೇಯ್ಗೆ ಸಾಮಗ್ರಿಗಳನ್ನು ತಂದನು.ಬರುವಾಗ ದಾರಿಯಲ್ಲಿ ವಾಮದೇವ ಮುನಿಯು ಕೋರಿಕೆಯಂತೆ ಕುಂಡಿಕನೆಂಬ ರಾಕ್ಷಸನನ್ನು ಕೊಂದನು. ವಿಶ್ವಕರ್ಮನ ಮಗ, ಕುಶಲಿಯಾದ ಮಯ ವಜ್ರದ ಕುಂಟೆ,ರತ್ನ ಖಚಿತ ಹಲಗೆ,ಮರಕತ, ಲಾಳಿ, ಗಣಿಕೆ, ವಿಚಿತ್ರ ರಾಟೆ, ಉಕ್ಕಿನ ಚೂರಿ ಮುಂತಾದ ಸಾಮಗ್ರಿಗಳನ್ನು ತಯಾರಿಸಿಕೊಟ್ಟನು. ದಾರಿಯಲ್ಲಿ ದೇವಲನ ಬಳಿಯಿದ್ದ ಹತ್ತಿ ಬೀಜಗಳನ್ನು ಕೆಳಗೆ ಬೀಳಲು ಅವನ್ನು ಒಂದು ಹುಂಜ ನುಂಗಿತು.ಬೀಜಗಳನ್ನು ಹಿಂದಿರುಗಿಸಿದರೆ ನೇಯ್ಗೆಯ ಅಗಲಕ್ಕೆ ಹುಂಜವೆಂದು ಹೆಸರಿಡುವೆನೆಂದನು.ದೇವಾಂಗ,ಹತ್ತಿ ಬೀಜಗಳನ್ನು ಬಿತ್ತಿದಾಗ ಶಿವನ ಕೃಪೆಯಿಂದ ಬೆಳೆದ ಗಿಡಗಳಲ್ಲಿ ಬಿಟ್ಟಹತ್ತಿ ಕಾಯಿಗಳಿಂದ ಹತ್ತಿಯನ್ನು ಬಿಡಿಸಿ ವಿಂಗಡಿಸಿ,ನೂಲನ್ನು ತಯಾರಿಸಿ,ನೇಯ್ದ ಬಟ್ಟೆ ಅಕ್ಷಯವಾಗುವಂತಹ ಕಂಕಣವನ್ನು ಚೌಡೇಶ್ವರಿಯಿಂದ ವರವಾಗಿ ಪಡೆದು ಶುಭ ಮುಹೂರ್ತದಲ್ಲಿ ವಸ್ತ್ರಗಳನ್ನು ನೇಯಲು ಆರಂಭಿಸಿದನು.
ವಸ್ತ್ರ ಪ್ರದಾನ
ಚಿತ್ರ ವಿಚಿತ್ರವಾದ ಬಣ್ಣ ಬಣ್ಣಗಳ ವಸ್ತ್ರಗಳನ್ನು ದೇವಾಂಗ ನೇಯ್ದು,ವಿಸ್ನುವಿಗೆ ರಮ್ಯ ಪೀತಾಂಬರ,ಲಕ್ಷ್ಮಿಗೆ ಶುಬ್ರಾಂಬರ,ಭೂದೇವಿಗೆ ರಕ್ತಾತಾಂಬರ,ಅಲ್ಲಿದ್ದ ಸಮಸ್ತರಿಗೂ ಅವರಿಗೆ ಬೇಕಾದ ವಸ್ತ್ರಗಳನ್ನು ಕೊಟ್ಟು ಸಂತಸಗೊಳಿಸಿದನು. ಆಮೇಲೆ ದೇವಾಂಗ ಸತ್ಯಲೋಕಕ್ಕೆ ಹೋಗಿ ಬ್ರಹ್ಮ್ಮನಿಗೆ ಕೆಂಪು ದುಕೂಲ ಸರಸ್ವತಿಗೆ ಧವಳಾಬರ, ಸಾವಿತ್ರಿಗೆ ಹಳದಿ ವಸ್ತ್ರ ಗಾಯತ್ರಿಗೆ ರಕ್ತ ವಸ್ತ್ರಗಳನ್ನು ಕೊಟ್ಟನು. ವಿಷ್ಣುವಿನ ಹೊಕ್ಕುಳಲ್ಲಿರುವ ಮಾನಿ ಅಭಿಮಾನಿ ಎಂಬೀರ್ವರು ಸ್ತ್ರೀಯರು ಭೂಲೋಕದಲ್ಲಿ ಹತ್ತಿಯ ಗಿಡಗಳಾಗಿ ಹುಟ್ಟಿ ಅಧಿಕ ಹತ್ತಿ ಬೆಲೆ ನೀಡುವರೆಂದು ಅರಿತನು. ಆಮೇಲೆ ಮೇರು, ಸಯ್ಯಾದ್ರಿ,ವಿಂದ್ಯ,ಪರ್ವತಗಳಲ್ಲು.ಸ್ವರ್ಗದಲ್ಲೂ ಸಕಲರಿಗೂ,ಮಯನಿಗೂ ನವಗ್ರಹ ದೇವತೆಗಳಿಗೂ ಉಚಿತ ವಸ್ತ್ರಗನ್ನು ಕೊಟ್ಟನು. ಪಾತಾಳ ಲೋಕಕ್ಕೆ ತೆರಳಿ,ವಾಸುಕಿ ತಕ್ಷಕ,ಚಿತ್ರ, ಸೇನರಿಗೂ ಆದಿಶೇಷನಿಗೂ ನಾಗಗಳಿಗೂ ವಸ್ತ್ರಗಳನಿತ್ತನು, ಈ ರೀತಿ ಮೂರು ಲೋಕಗಳಲ್ಲೂ ಎಲ್ಲಾರಿಗೂ ವಸ್ತ್ರಗಳನ್ನು ಕೊಟ್ಟು ಹೆಸರಾದನು.
ಶಿವನನ್ನು ಕಾಣಲು ಕೈಲಾಸವನ್ನು ಹೊಕ್ಕು ಮಹಾದೇವನನ್ನು ಸ್ತುತಿಸಿ,ಬಟ್ಟೆ ನೇಯ್ಧು ಉಳಿದ ದಾರಗಳನ್ನು ಏನು ಮಾಡಬೇಕೆಂದು ಕೇಳಿದಾಗ ವೇದಮಾತೆಯಾದ ಗಾಯತ್ರಿಯನ್ನು ಪ್ರಣವನಿಂದ ಸಮಗೊಳಿಸಿ ಉಪವೀತವನ್ನು ಮಂಗಳಸೂತ್ರವನ್ನು ತಯಾರಿಸಲು ಪರಮಾತ್ಮ ಹೇಳಿದನು. ಅದರಂತೆ ಯಗ್ನೋಪವೀತ ತಯಾರಿಸಿ,ಒಂದು ಸೂತ್ರಗಳನ್ನು ಕೊಟ್ಟನು.ಬ್ರಹ್ಮಚಾರಿಗೆ,ಎರಡುಸೂತ್ರ ಮದುವೆಯಾದವನಿಗೆ ಕೊಟ್ಟನು. ಸುಮಂಗಲಿಯರಿಗೆ,ಮಂಗಳಸೂತ್ರಗಳನ್ನುಕೊಟ್ಟನು.ಬ್ರಹ್ಮ,ವಿಷ್ಣು,ಶಿವಋಷಿಗಳೇ ಮುಂತಾದವರೆಲ್ಲರಿಗೂ ಗಾಯತ್ರಿ ರೂಪದ ಯಗ್ನೋಪವೀತವನ್ನು ಕೊಟ್ಟು,ಬ್ರಾಹ್ಮಣ ಶ್ರೇಷ್ಠರಿಗಿಂತಲೂ ದೇವಾಂಗ ಎಂದಿಗೂಉತ್ತಮ ಎನಿಸಿಕೊಂಡನು. ಶಿವ ಪಾರ್ವತಿ, ನಿಜಪ್ರತಿ ವೀಕ್ಷಿಸಿ ವಸ್ತ್ರಗಳನ್ನು ಕೊಟ್ಟನು. ದೇವಾಂಗನಿಗೆ ಮಹಾದೇವ ಪರಶು ಆಯುಧವನ್ನೂ ಶತ್ರುನಾಶಕ್ಕೆ ನಂದಿ ಧ್ವಜ ವನ್ನು ದಯಪಾಲಿಸಿದನು. ಶಿವನ ಅಪ್ಪಣೆಯಂತೆ ಸೂರ್ಯ ತನ್ನ ತಂಗಿ ದೇವದತ್ತೆಯನ್ನು ಕೊಟ್ಟು ವೈಭವದಿಂದ ಮದುವೆ ಮಾಡಿದನು.
ಕೈಲಾಸದಿಂದ ಆಮೋದ ಪಟ್ಟಣಕ್ಕೆ ಬರುವ ದಾರಿಯಲ್ಲಿ ದೇವಲೋಕದ ಅಪ್ಸರ ಕನ್ಯೆ,ವಿಮೋಹಿನಿ ರಂಬೆ ಇವನ ರೂಪು ಲಾವಣ್ಯಗಳಿಗೆ ಬೆರಗಾಗಿ ತನ್ನಲ್ಲಿ ಸುರತ ಕ್ರೀಡೆ ಅನುಭವಿಸುವಂತೆ ಬೇಡಿದಳು.ಅವಳ ಕೋರಿಕೆಯನ್ನು ತಿರಸ್ಕರಿಸಿದಾಗ ದೇವಾಂಗನಿಗೆ, ನೀನೂ ನಿನ್ನ ವಂಶಜರೂ ೫,೦೦೦ ವರುಷಗಳು ಶೂದ್ರತನ ಹೊಂದುವಿರಿ.ಆಮೇಲೆ ಬ್ರಹ್ಮನ ವರವಾಗುವುದೆಂದು ಶಾಪ ಕೊಟ್ಟಳು.ದೇವದತ್ತೆಯೊಡನೆ ದೇವಾಂಗ ರಾಜಶ್ರೀ ಅನೇಕ ವರುಷಗಳು ಸುಭಿಕ್ಷದಿಂದ ರಾಜ್ಯಪಾಲನೆ ಮಾಡಿದನು. ದೇವದತ್ತೆ ಹೊಟ್ಟಿಯಲ್ಲಿ ದಿವ್ಯಾಂಗ,ವಿಮಲಾಂಗ,ಧವಳಾಂಗ ಎಂಬ ಮೂವರು ಮಕ್ಕಳು,ಚಂದ್ರರೇಖೆ ಯಲ್ಲಿ ಸುದರ್ಮನೆಂಬ ಮಗನೂ ಜನಿಸಿದರು.ದಂಡೆತ್ತಿ ಬಂಡ ಕಾರುಶ ರಾಜ ಶೂರಸೇನನನ್ನು ಕೊಂಧು ತನ್ನ ಮಗ ಸುಧರ್ಮ ನನ್ನ ಆ ದೇಶಕ್ಕೆ ರಾಜನಾಗಿ ಪಟ್ಟ ಕಟ್ಟಿದನು.
ಲೋಕದಲ್ಲಿ ಎಲ್ಲರಿಗೂ ಬಟ್ಟೆಗಳನ್ನು ದೇವಾಂಗ ಕೊಟ್ಟರೂ ತಮಗಿಲ್ಲವೆಂಧು ಅಸೂಯೆಯಿಂದ ದೇವತೆಗಳನ್ನು ಕೊಲ್ಲಬೇಕೆಂದು ವ್ಯಾಘ್ರವಕ್ತ್ರ ದೈತ್ಯರೊಂದಿಗೆ ಮೇಲೆ ಬಿದ್ದನು. ದೇವತೆಗಳು ನಿಸ್ಸಹಾಯರಾಗಿ ಶಿವನನ್ನು ಪ್ರಾರ್ಥಸಿದ್ದರಿಂದ ದೇವಾಂಗನನ್ನು ಯುದ್ಧಕ್ಕೆ ನೇಮಿಸಿದನು.ವ್ಯಾಘ್ರವಕ್ತ್ರನನ್ನು ಕೊಂದನು . ಆಗ ದೇವಾಂಗ ರಾಜನ ಮೇಲೆ ಯುದ್ಧ ಮಾಡುತ್ತ ಹೇಮಕೂಟ ಶೃಂಗವನ್ನು ಮೇಲೆಸೆದರೂ ಏನೂ ಆಗಲಿಲ್ಲ. ಮಾಯೆಯಿಂದ ಎಲ್ಲರನ್ನು ಪೀಡಿಸಿದನು .ನಂಧಿ ದ್ವಜವನ್ನು ದೈತ್ಯರಲ್ಲಿ ಹಾಕಿದಾಗ ಗೂಳಿಗಳು ದೈತ್ಯ ರನ್ನು ಸದೆ ಬಡಿದವು. ವಜ್ರ ದಂಷ್ಟ್ಯನ ಪ್ರೇರಣೆ ಯಂತೆ ವಿದ್ಯು ವಿದ್ಯುತ್ಕ್ಷೇಶ ತಾನು ಇಂದ್ರನ ದೂತನೆಂದು ಮೋಸಮಾಡಿ ನಂದಿ ದ್ವಜವನ್ನು ಅಪಹರಿಸಿ ತಂದನು. ಇದನ್ನು ಪ್ರಯೋಗಿಸಿ ದೇವಾಂಗಣನ್ನು ವೀರ ಮಾಹೇಂದ್ರ ಪಟ್ಟಣಕ್ಕೆ ಕರೆತಂದು ತನ್ನ ಮಗಳು ಪದ್ಮಿನಿ ಯನ್ನು ಕೊಟ್ಟು ಮಾಡುವೆ ಮಾಡಿದನು. ಅವಳಿಂದ ಶಾಲಾ, ಹಲ,ಬಲ,ಮಕ್ಕಳಾದರು. ಇವರಿಗೆ ನೇಯ್ಗೆ ಕಲಿಸಿ ರಾಕ್ಷಸರಿಗೆ ಬಟ್ಟೆಗಳನ್ನು ಕೊಡಿಸಿದನು.ನಂದಿ ದ್ವಜವನ್ನು ತೆಗೆದುಕೊಂಡು ದಏವಂಗ ಹಿಂದಿರುಗೆದನು.
ದೇವಾಂಗ ರಾಜ ಒಂದು ಡೇನ ಶಿವನ ದರ್ಶನ ಪಡೆದಾಗ, ನಂದಿ ದ್ವಜವನ್ನು ಅಸುರರ ಪಾಲು ಮಾಡಿ ದೇವತೆಗಳನ್ನು ಭಾದೆ ಪಡಿಸಿದ್ದರಿಂದ, ನೀನು ವಿದ್ಯಾಧರ, ಪುಷ್ಪದಂತ,ಬೇತಾಳ,ವರರುಚಿ,ಚಿತ್ರಯೋಗಿ, ದೇವಶಾಲಿ ,ದೇವದಾಸ ಎಂಬ ಏಳು ಅವತಾರಗಳಲ್ಲಿ ಭೂಲೋಕದಲ್ಲಿ ಹುಟ್ಟೆ೦ದು ದೇವಾಂಗ ನಿಗೆ ಶಂಕರ ಶಪಿಸಿದನು. ಶಾಪಗ್ರಸ್ತನಾದ ದೇವಾಂಗ ಆಮೋದಪುರಕ್ಕೆ ಬಂದನು.ದೇವಾಂಗ ರಾಜನ ದೇಹ ಲಿಂಗವಾಗಿ ರಾಮಲಿಂಗೇಶ್ವರವೆಂದು ಹೆಸರಾಯಿತು.ದೇವಾಂಗ ಪುತ್ರ ದಿವ್ಯಾಂಗ ರಾಮಲಿಂಗೇಶ್ವರನನ್ನು ಪೂಜಿಸುತ್ತ ರಾಜ್ಯ ಪಾಲಿಸುತ್ತಿದ್ದನು.ದೇವಾಂಗ ಜನಾಂಗದವರೆಲ್ಲರ ಭಕ್ತಿ ಪಾತ್ರ,ಪೂಜನೀಯ ಕುಲದೇವತೆ ಈ ರಾಮಲಿಂಗ.