ಓಂ ಶ್ರೀ ದೇವಾಂಗ ಪರಬ್ರಹ್ಮನೇ ನಮಃ
ದೇವಾಂಗ ಲೋಕಕ್ಕೆ ಸುಸ್ವಾಗತ.
ಮಾಹಿತಿಗಳಿಂದ ಸೃಷ್ಟಿಯಾದ ಲೋಕವೇ ದೇವಾಂಗ ಲೋಕ
ದೇವಾಂಗ ಲೋಕಕ್ಕೆ ಸುಸ್ವಾಗತ.
ಮಾಹಿತಿಗಳಿಂದ ಸೃಷ್ಟಿಯಾದ ಲೋಕವೇ ದೇವಾಂಗ ಲೋಕ
"ದೇವಾಂಗ: ಪ್ರಥಮ: ಸೃಷ್ಟಿ : ಶಂಕರಸ್ಯ ಮಹಾತ್ಮನ;
ವಿದ್ಯಾಧರೋ ದ್ವಾಪರದೌ; ಮದ್ಯೇ ಬೂತ್ ಪುಷ್ಪದಂತಕ;
ಅಂತ್ಯೆವತಾರೋ, ಬೇತಾಳ, ಕತಾವರರುಚಿ ಸ್ತತಾ;
ಚಿತ್ರಯೋಗೀ, ದೇವಶಾಲಿ, ದೇವದಾಸೋಭಾವಂ ಸ್ತುತಂ:"

ತ್ರೈಲೋಕ್ಯದವರ ಮಾನ ರಕ್ಷಣೆಗೆ ವಸ್ತ್ರವಿಲ್ಲದಿರಲು, ಮತ್ತು ಜ್ಞಾನ ದೀಕ್ಷೆಗೆ, ಸೂತ್ರವಿಲ್ಲದಿರಲು, ಸಕಲ ಅನನ್ಯ ಪ್ರಾರ್ಥನೆಯ ಮೇರೆಗೆ, ಶಿವನ ಚಿಚ್ಚಕ್ತಿಯಿಂದ ಅವತರಿಸಿ, ಪ್ರಪಥಮವಾಗಿ ವಸ್ತ್ರ - ಸೂತ್ರ ನಿರ್ಮಿಸಿ ಕೊಟ್ಟು ಕರುಣಿಸಿದ ಶ್ರೀ ದೇವಲ ( ದೇವಾಂಗ ) ಮಹರ್ಷಿಗಳ ವಂಶಜರೇ ದೇವಾಂಗರು.
ದೇವಾಂಗ ಅಂದರೆ (ದೇವರ ಒಂದು ಅಂಗ) ಎಂದು ಅರ್ಥ. ದೇವರ ಅಂಗದಿಂದ ಬಂದವರು ದೇವಾಂಗರು. ಅದು ಹೆಮ್ಮೆ ಪಡುವ ವಿಷಯ. ದೇವಾಂಗರು, ದೇವ ಬ್ರಾಹ್ಮಣರು. ಹಾಗಾದರೆ ನಾವು ಯಾರು?ನಮ್ಮ ದೇವಾಂಗದ ಮೂಲ ಗುರು ಯಾರು? ಅವರ ಮಹತ್ವ ಏನು? ನಮ್ಮ ಪೀಠ ಯಾವುದು? ನಮ್ಮ ಸಂಸ್ಕೃತಿ, ಆಚಾರ, ವಿಚಾರ, ಸಂಪ್ರದಾಯ, ಇತಿಹಾಸ ಏನು ? ಎಂದು ತಿಳಿದುಕೊಳ್ಳುವುದು ನಮ್ಮ ಆದ್ಯ ಕರ್ತವ್ಯ.
ದೇವಾಂಗ ಸಮಾಜದ ಹಿತದೃಷ್ಟಿಯಿಂದ ಮತ್ತು ಎಲ್ಲರ ಮನೆ, ಮನೆಯಲ್ಲೂ ಈ ಮೂಲ ಪುರುಷನ ಮಹತ್ಕಾರ್ಯ ಹಾಗು ಅವರ ಮಾರ್ಗದರ್ಶನವನ್ನು ಅಳವಡಿಸಿ ಕೊಂಡರೆ ನಮ್ಮ ಜೀವನ ಸಾರ್ಥಕ. ದೇವಾಂಗ ಲೋಕದಲ್ಲಿ, ದೇವಾಂಗರ ಮೂಲ ಗುರು, ದೇವಾಂಗ ಪುರಾಣ, ಗಾಯತ್ರಿ ಪೀಠದ ಗುರು ಪರಂಪರೆ. ಮೂಲ ಪುರುಷನ ಏಳು ಅವತಾರಗಳು, ಕುಲಗುರು, ಆದ್ಯ ವಚನಕಾರ, ಸಂಸ್ಕೃತಿ, ಆಚಾರ, ವಿಚಾರ, ಇತಿಹಾಸ, ಸಂಪ್ರದಾಯ, ಜವಾಬ್ದಾರಿ, ಗೋತ್ರ, ಬೆಡಗು, ಮನೆತನ, ಎಲ್ಲವನ್ನುಈ ಲೋಕದಲ್ಲಿ ಕಾಣಬಹುದು.
ಹಾಗೇ ನಮ್ಮ ಜವಾಬ್ದಾರಿ ಏನು? ನಮ್ಮ ಕರ್ತವ್ಯ ಏನು? ಸಮಾಜಕ್ಕೆ ನಾವು ಏನು ಮಾಡಬೇಕು? ಅವರು ದಾರಿ ತೋರಿಸಿದ ಜೀವನ ಮತ್ತು ಮಾರ್ಗದರ್ಶನ ವನ್ನು ಕಾಪಾಡಿಕೊಳ್ಳುವುದು ಹೇಗೆ? ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಹೇಗೆ? ಎಂದು ಚಿಂತನೆ ಮಾಡಿ ಅದನ್ನು ಕಾರ್ಯರೂಪಕ್ಕೆ ತರುವ ಹೊಣೆ ದೇವಾಂಗರದ್ದಾಗಿದೆ.
ಮನುಷ್ಯ ಜನ್ಮ, ಮುಕ್ತಿ ಹೊಂದುವುದು ಮತ್ತು ಮಹಾಜನರ ಸತ್ಸಂಗ ಈ ಮೂರು ಸಿಗುವುದು ದೇವರ ಅನುಗ್ರಹ ಮಾತ್ರ ಸಾಧ್ಯ. ಆದ್ದರಿಂದ ದಾಸವರೇಣ್ಯರು ಹಾಡಿರುವ "ಮಾನವ ಜನ್ಮ ದೊಡ್ಡದು, ಇದನ್ನು ಹಾನಿ ಮಾಡಬೇಡಿ ಹುಚ್ಚಪ್ಪಗಳಿರಾ" ಎಂದಿರುವಂತೆ, ದೇವರ ದಾಸಿಮಯ್ಯನವರು ತಮ್ಮ ಆದ್ಯಾತ್ಮ ಸಿರಿವಂತಿಕೆಯಿಂದ ಮೆರೆದು, ಶಿವನ ಹೆಜ್ಜೆಯಲ್ಲಿ ಹೆಜ್ಜೆಯನಿಟ್ಟು, ತಮ್ಮ ಹೆಜ್ಜೆ ಪಾಡುಗಳನ್ನು ನಮಗಾಗಿ ಉಳಿಸಿಹೋಗಿದ್ದಾರೆ. ಇವುಗಳನ್ನು ಅನುಸರಿಸಿ ನಡೆದರೆ ಸಾಕು ನಮ್ಮ ಬಾಳು ಬೆಳಕಾಗುವುದು ಇಂತಹ ಮಹಾಪುರುಷನನನ್ನು ಪಡೆದ ಸಮಾಜವೇ ದನ್ಯ.